»   » ಮತ್ತೊಂದು ತಮಿಳು ರಿಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್?

ಮತ್ತೊಂದು ತಮಿಳು ರಿಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್?

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇದೀಗ ತಾನೆ ರಿಮೇಕ್ ಚಿತ್ರ 'ಅಂಜನಿಪುತ್ರ' ಆರಂಭಿಸಿದ್ದಾರೆ. ಹೀಗಿರುವಾಗಲೇ ಇನ್ನೊಂದು ರಿಮೇಕ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.[ಎ ಹರ್ಷ ಮತ್ತು ಪುನೀತ್ ಚಿತ್ರಕ್ಕೆ ರವಿಚಂದ್ರನ್ ಕ್ಲಾಪ್ ]

ಪುನೀತ್ 'ಅಂಜನಿಪುತ್ರ' ಪೂರ್ಣಗೊಂಡ ನಂತರ ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದಕ್ಕೆ, ಈಗಲೇ ಉತ್ತರ ಸಿಕ್ಕಿದೆ. ಇದರ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ.

ಮತ್ತೊಂದು ರಿಮೇಕ್ ಚಿತ್ರದಲ್ಲಿ ಪುನೀತ್

ಮತ್ತೊಂದು ರಿಮೇಕ್ ಚಿತ್ರದಲ್ಲಿ ಪುನೀತ್

ಪ್ರಸ್ತುತ ತಮಿಳಿನ 'ಪೂಜೈ' ರಿಮೇಕ್ ನಲ್ಲಿ ತೊಡಗಿಕೊಂಡಿರುವ ಪುನೀತ್ ಅವರು ಮತ್ತೊಂದು ತಮಿಳಿನ ಚಿತ್ರದ ಕನ್ನಡ ಅವತರಣಿಕೆಯಲ್ಲಿ ನಟಿಸಲಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ.[ಪುನೀತ್ ರಾಜ್ ಕುಮಾರ್-ಹರ್ಷ ಮಹಾಸಂಗಮದ ಇಂಟ್ರೆಸ್ಟಿಂಗ್ ಡೀಟೈಲ್ಸ್]

ರಿಮೇಕ್ ಆಗಲಿರುವ ತಮಿಳು ಚಿತ್ರ ಇದೆ..

ರಿಮೇಕ್ ಆಗಲಿರುವ ತಮಿಳು ಚಿತ್ರ ಇದೆ..

ತಮಿಳಿನ 'ವಿಸಾರಣೈ' ಚಿತ್ರವನ್ನು ನಿರ್ದೇಶಕ ವೆಟ್ರಿಮಾರನ್ ಅವರು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಈ ಚಿತ್ರದಲ್ಲಿ ಪುನೀತ್ ನಟಿಸಲಿದ್ದಾರಂತೆ.

'ವಿಸಾರಣೈ' ರಿಮೇಕ್ ಹಕ್ಕು

'ವಿಸಾರಣೈ' ರಿಮೇಕ್ ಹಕ್ಕು

ರಾಕ್ ಲೈನ್ ವೆಂಕಟೇಶ್ ಅವರು 'ವಿಸಾರಣೈ' ಚಿತ್ರದ ಎಲ್ಲಾ ಹಕ್ಕುಗಳನ್ನು ಪಡಿದಿದ್ದಾರೆ. ಈ ಸಿನಿಮಾ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ನಿರ್ಮಾಣ ಆಗುವ ಸಾಧ್ಯತೆಗಳು ಇವೆ.

'ಅಂಜನಿಪುತ್ರ' ಮುಗಿದ ನಂತರ 'ವಿಸಾರಣೈ'

'ಅಂಜನಿಪುತ್ರ' ಮುಗಿದ ನಂತರ 'ವಿಸಾರಣೈ'

ವೆಟ್ರಿಮಾರನ್ ಅವರು 9ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಆಗಮಿಸಿದ್ದ ವೇಳೆ ಚಿತ್ರದ ರಿಮೇಕ್ ಬಗ್ಗೆ ಮಾತನಾಡಿದ್ದು, ಎ ಹರ್ಷ ಅವರ 'ಅಂಜನಿಪುತ್ರ' ಮುಗಿದ ನಂತರ ರಿಮೇಕ್ ಚಿತ್ರ ಆರಂಭ ಆಗಲಿದೆಯಂತೆ.

ಇನ್ನೂ ಪುನೀತ್ ಓಕೆ ಎಂದಿಲ್ಲ

ಇನ್ನೂ ಪುನೀತ್ ಓಕೆ ಎಂದಿಲ್ಲ

ಪುನೀತ್ ರಾಜ್ ಕುಮಾರ್ ಇನ್ನೂ ಸಹ ಕಥೆ ಕೇಳಿ ಓಕೆ ಎನ್ನಬೇಕಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಜೂನ್ ನಂತರದಲ್ಲಿ ಚಿತ್ರೀಕರಣ ಶುರು ಆಗಲಿದೆಯಂತೆ.

English summary
Kannada Actor Puneeth Rajkumar will again to star in tamil remake movie, which is Vetrimaaran directorial 'Visaranai'.
Please Wait while comments are loading...

Kannada Photos

Go to : More Photos