»   » ರಾಧಿಕಾ ಪಂಡಿತ್ ಬರ್ತಡೆ ಪಾರ್ಟಿಯಲ್ಲಿ ಯಶು!

ರಾಧಿಕಾ ಪಂಡಿತ್ ಬರ್ತಡೆ ಪಾರ್ಟಿಯಲ್ಲಿ ಯಶು!

Written by: ಹರಾ
Subscribe to Filmibeat Kannada

'ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ' ರಾಧಿಕಾ ಪಂಡಿತ್ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನ ಗ್ರ್ಯಾಂಡಾಗಿ ಆಚರಿಸಿಕೊಂಡರು. ಇಡೀ ದಿನ ತಮ್ಮ ಅಭಿಮಾನಿಗಳಿಗಾಗೇ ಮೀಸಲಿಟ್ಟಿದ್ದ ರಾಧಿಕಾ ಪಂಡಿತ್, ಫ್ಯಾಮಿಲಿ ಮತ್ತು ಫ್ರೆಂಡ್ಸ್ ಗಾಗಿ ರಾತ್ರಿ ಮನೆಯಲ್ಲಿ ಪಾರ್ಟಿ ಅರೇಂಜ್ ಮಾಡಿದ್ರು.

ಆ ಪಾರ್ಟಿಗೆ ವಿಶೇಷ ಆಹ್ವಾನಿತರಾಗಿ ಹೋಗಿದ್ದು ಯಾರು ಗೊತ್ತಾ..? ಬೇರಾರು ಅಲ್ಲ, 'ಮಿಸ್ಟರ್ ರಾಮಾಚಾರಿ' ರಾಕಿಂಗ್ ಸ್ಟಾರ್ ಯಶ್.


radhika pandit-yash

ಹೊಸ ವರ್ಷವನ್ನ ಯಶ್ ಜೊತೆ ಗೋವಾದಲ್ಲಿ ಬರಮಾಡಿಕೊಂಡ ರಾಧಿಕಾ, ತಮ್ಮ ಹುಟುಹಬ್ಬವನ್ನ ಕೂಡ ಯಶ್ ಜೊತೆಗೆ ಸೆಲೆಬ್ರೇಟ್ ಮಾಡಿದ್ದಾರೆ. ಇದು ಹೊಸ ಅಭ್ಯಾಸ ಏನಲ್ಲ. ಕಳೆದ ಕೆಲ ವರ್ಷಗಳಿಂದ ರಾಧಿಕಾ ಪಂಡಿತ್ ತಮ್ಮ ಬರ್ತಡೆಯನ್ನ ಸೆಲೆಬ್ರೇಟ್ ಮಾಡುತ್ತಿರುವುದು ಇದೇ 'ಯಶು' ಜೊತೆಯಲ್ಲೇ! [ಗೋವಾದಲ್ಲಿ ಯಶ್-ರಾಧಿಕಾ ಪಂಡಿತ್ ಮಾಡಿದ್ದೇನು?]


ರಾಧಿಕಾ ಬರ್ತಡೆ ಪಾರ್ಟಿಯಲ್ಲಿ ಎಂಜಾಯ್ ಮಾಡಿ, ಹಳೇ ಫ್ರೆಂಡ್ಸ್ ಗಳನ್ನೆಲ್ಲಾ ಮೀಟ್ ಮಾಡಿ, ಬರ್ತಡೆ ಗರ್ಲ್ ಗೆ ಸ್ಪೆಷಲ್ ಗಿಫ್ಟ್ ಕೂಡ ಕೊಟ್ಟಿದ್ದಾರಂತೆ ಯಶ್. ಇದರಿಂದ ರಾಧಿಕಾ ಮೇಡಂ ಕೂಡ 'ದಿಲ್' ಖುಷ್ ಆಗಿದ್ದಾರಂತೆ.


ಯಶ್ ಮತ್ತು ರಾಧಿಕಾ ಪಂಡಿತ್ ಬಗ್ಗೆ ಗಾಸಿಪ್ ಗಳು ಹೊಸದೇನಲ್ಲ. ಅದನ್ನ ನಾವು ಕೇಳೋ ಹಾಗಿಲ್ಲ. ಅವರೂ ಹೇಳೋ ಹಾಗಿಲ್ಲ. ನೋಡಿ ಸುಮ್ಮನಾಗಬೇಕು ಅಷ್ಟೆ.

English summary
Kannada Actress Radhika Pandit celebrated her birthday with Rocking Star Yash. According to the sources, the Actress had arranged a special party for family and friends last night (March 7th) in which the Actor Yash also took part.
Please Wait while comments are loading...

Kannada Photos

Go to : More Photos