»   » 4 ದಿನದ ಕಲೆಕ್ಷನ್: ರಜನಿ ಹಳೇ ದಾಖಲೆ ಮುರಿದ 'ಕಬಾಲಿ'

4 ದಿನದ ಕಲೆಕ್ಷನ್: ರಜನಿ ಹಳೇ ದಾಖಲೆ ಮುರಿದ 'ಕಬಾಲಿ'

Written by: Suni
Subscribe to Filmibeat Kannada

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಚಿತ್ರಕ್ಕೆ ಎಲ್ಲಾ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಬಾಕ್ಸಾಫೀಸ್ ಗಳಿಕೆಯಲ್ಲಿ ಮಾತ್ರ ಸ್ವಲ್ಪ ಸದ್ದು ಮಾಡಿದೆ. ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆ ಆಗಿದ್ದ 'ಕಬಾಲಿ' ಪ್ರೇಕ್ಷಕರ ನಿರೀಕ್ಷೆಯನ್ನು ಕೊಂಚ ಮಟ್ಟಿಗೆ ಹುಸಿ ಮಾಡಿತ್ತು.

ಅಂದಹಾಗೆ 'ಕಬಾಲಿ' ಬಿಡುಗಡೆ ಆದ ಎರಡೇ ದಿನದಲ್ಲಿ ವಿಶ್ವದಾದ್ಯಂತ ಸುಮಾರು 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಡೀ ವಿಶ್ವದಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದ್ದ 'ಕಬಾಲಿ', ಕಲೆಕ್ಷನ್ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಿರಲಿಲ್ಲ.[ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಪುಡಿಗಟ್ಟಿದ 'ಕಬಾಲಿ']

ನಿರ್ದೇಶಕ ಪಾ ರಂಜಿತ್ ಆಕ್ಷನ್-ಕಟ್ ಹೇಳಿದ್ದ 'ಕಬಾಲಿ' ಇದೀಗ ನಾಲ್ಕು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಅಬ್ಬರಿಸುತ್ತಿದೆ. ಸುಮಾರು 120 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ 'ಕಬಾಲಿ' ಬಾಕ್ಸಾಫೀಸ್ ನಲ್ಲಿ ಭಯಂಕರ ಕಲೆಕ್ಷನ್ ಮಾಡಿದೆ.

4 ದಿನದಲ್ಲಿ ಸೂಪರ್ ಸ್ಟಾರ್ ತಲೈವರ್ 'ಕಬಾಲಿ' ಮಾಡಿದ ದಾಖಲೆಯ ಕಲೆಕ್ಷನ್ಸ್ ರಿಪೋರ್ಟ್ ಮತ್ತು ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

ನಾಲ್ಕು ದಿನದ ಕಲೆಕ್ಷನ್

ನಾಲ್ಕು ದಿನದ ಕಲೆಕ್ಷನ್

ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಎಂಬ ಒಂದೇ ಒಂದು ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ 'ಕಬಾಲಿ' ಕೇವಲ 4 ದಿನದಲ್ಲಿ ಭರ್ತಿ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನುತ್ತಿವೆ ನಿರ್ಮಾಪಕ ಕಲೈಪುಲಿ ಮೂಲಗಳು.['ಕಬಾಲಿ' ಬಗ್ಗೆ ಹೊಸ ಸುದ್ದಿ ಓದುವ ಮುನ್ನ ಉಸಿರು ಬಿಗಿ ಹಿಡ್ಕೊಳ್ಳಿ.!]

ಬಿಡುಗಡೆಗೂ ಮುನ್ನ ದಾಖಲೆ ಮಾಡಿತ್ತು ಕಬಾಲಿ

ಬಿಡುಗಡೆಗೂ ಮುನ್ನ ದಾಖಲೆ ಮಾಡಿತ್ತು ಕಬಾಲಿ

ಅಂದಹಾಗೆ 'ಕಬಾಲಿ' ರಿಲೀಸ್ ಗೂ ಮುನ್ನ ದಾಖಲೆ ಮಟ್ಟದ ಕಲೆಕ್ಷನ್ ಮಾಡಿತ್ತು. ಆಡಿಯೋ, ಸ್ಯಾಟಲೈಟ್ ಹಕ್ಕು ಮತ್ತು ವಿವಿಧ ರಾಜ್ಯ-ದೇಶಗಳ ವಿತರಣಾ ಹಕ್ಕು, ಎಲ್ಲವೂ ಒಟ್ಟು ಸೇರಿ ಭರ್ತಿ 200 ಕೋಟಿ ರೂಪಾಯಿ ಕಲೆಕ್ಷನ್, ಬಿಡುಗಡೆಗೆ ಮುನ್ನವೇ ಆಗಿತ್ತು.[ಕಬಾಲಿ ದಾಖಲೆ: ರಿಲೀಸ್ ಗೂ ಮುನ್ನ 200 ಕೋಟಿ ಕಲೆಕ್ಷನ್.?]

ವಿದೇಶದಲ್ಲಿ ಕಬಾಲಿ ಗಳಿಕೆ ಎಷ್ಟು?

ವಿದೇಶದಲ್ಲಿ ಕಬಾಲಿ ಗಳಿಕೆ ಎಷ್ಟು?

ನಿರ್ಮಾಪಕ ಕಲೈಪುಲಿ ತನು ಹೇಳುವ ಪ್ರಕಾರ ವಿದೇಶಿ ಪ್ರದರ್ಶನದಿಂದ ಸುಮಾರು 90 ಕೋಟಿ ರೂಪಾಯಿ ಗಳಿಕೆ ಆಗಿದ್ದು, ಬರೀ ಅಮೆರಿಕದಿಂದಲೇ ಸುಮಾರು 28 ಕೋಟಿ ರೂಪಾಯಿ ಗಳಿಕೆಯಾಗಿದೆ ಎಂದಿದ್ದಾರೆ.['ಕಬಾಲಿ' ಖಾಲಿ ಖಾಲಿ: ಟಿಕೆಟ್ ಕೇಳೋರೇ ಇಲ್ಲ.!]

ಪೈಪೋಟಿಯ ನಡುವೆಯೂ ದಾಖಲೆ ಕಲೆಕ್ಷನ್

ಪೈಪೋಟಿಯ ನಡುವೆಯೂ ದಾಖಲೆ ಕಲೆಕ್ಷನ್

ಇತ್ತೀಚೆಗಷ್ಟೇ ಭಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಹಾಲಿವುಡ್ ನ 10 ಬಿಗ್ ಬಜೆಟ್ ಚಿತ್ರಗಳ ತೀವ್ರ ಪೈಪೋಟಿಯ ನಡುವೆಯೂ ಭಾರತದ ಚಿತ್ರ 'ಕಬಾಲಿ' ತೆರೆಕಂಡ ನಾಲ್ಕೇ ದಿನದಲ್ಲಿ ಸುಮಾರು 28 ಕೋಟಿ ರೂಪಾಯಿ ಗಳಿಕೆ ಮಾಡಿರೋದು ಇದೇ ಮೊದಲನೇ ಬಾರಿ ಎನ್ನಲಾಗುತ್ತಿದೆ.

ಚೆನ್ನೈ ಬಾಕ್ಸಾಫೀಸ್ ಕಲೆಕ್ಷನ್

ಚೆನ್ನೈ ಬಾಕ್ಸಾಫೀಸ್ ಕಲೆಕ್ಷನ್

ತಲೈವರ್ ಊರಾದ ಚೆನ್ನೈನಲ್ಲಿ ನಾಲ್ಕು ದಿನದಲ್ಲಿ 'ಕಬಾಲಿ' ಬರೋಬ್ಬರಿ 4.5 ಕೋಟಿ ರೂಪಾಯಿ ಕಮಾಯಿಸಿದೆ.

English summary
Super Star Rajinikanth starrer gangster drama "Kabali" has collected a record Rs 400 Crore on its 4 day. The movie is directed by Pa Ranjith.
Please Wait while comments are loading...

Kannada Photos

Go to : More Photos