»   » ಮತ್ತೆ ರಾಜಕೀಯಕ್ಕೆ ರಮ್ಯಾ! ಮೇಲ್ಮನೆಯಲ್ಲಿ ರಮ್ಯಾ ರಂಗು!?

ಮತ್ತೆ ರಾಜಕೀಯಕ್ಕೆ ರಮ್ಯಾ! ಮೇಲ್ಮನೆಯಲ್ಲಿ ರಮ್ಯಾ ರಂಗು!?

Written by: ಹರಾ
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇತ್ತೀಚೆಗಷ್ಟೇ ಬೆಂಗಳೂರಿನ ಟ್ರಿನಿಟಿ ಸರ್ಕಲ್ ನಲ್ಲಿರುವ ಮಾಲ್ ವೊಂದರಲ್ಲಿ ಕಾಣಿಸಿಕೊಂಡು ಸಖತ್ ಸುದ್ದಿ ಮಾಡಿದ್ದರು. ವರ್ಷಗಳ ನಂತ್ರ ಮತ್ತೆ ಸಿಲಿಕಾನ್ ಸಿಟಿ ಕಡೆ ಮುಖ ಮಾಡಿರುವ ರಮ್ಯಾ ಮೇಡಂ ಮರಳಿ ಹಳೇ ಫಾರ್ಮ್ ಗೆ ಅರ್ಥಾತ್ ಬಣ್ಣ ಹಚ್ಚುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು.

'ಸ್ಯಾಂಡಲ್ ವುಡ್ ಕ್ವೀನ್' ಮತ್ತೆ ಪೌಡರ್ರು ಪ್ಯಾಡು ಹಿಡಿದುಕೊಳ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ರಾಜಕೀಯದಲ್ಲಿ ಅವರು ಸಕ್ರಿಯರಾಗುವ ಸೂಚನೆ ಸಿಕ್ಕಿದೆ. ಮೂಲಗಳ ಪ್ರಕಾರ, ರಾಜಕೀಯ ಜೀವನದ ಜೋಕಾಲಿಯಲ್ಲಿ ಸೋಲು-ಗೆಲುವಿನ ಸಮಪಾಲು ಕಂಡಿರುವ ಮಾಜಿ ಸಂಸದೆ ರಮ್ಯಾ, ತಮ್ಮ ಪಾಲಿಟಿಕ್ಸ್ ಲೈಫ್ ನ ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗುತ್ತಿದ್ದಾರೆ. [ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಸುಸ್ವಾಗತ]

Ramya aka Divya Spandana to become MLC soon

ಇಂಟರೆಸ್ಟಿಂಗ್ ವಿಷಯ ಅಂದ್ರೆ, ರಮ್ಯಾ ಪುನರಾಗಮನಕ್ಕೆ ವೇದಿಕೆಯಾಗುತ್ತಿರುವುದು ವಿಧಾನ ಪರಿಷತ್. ನಂಬಿದ್ರೆ ನಂಬಿ, ಸದ್ಯದಲ್ಲೇ ರಮ್ಯಾ ಮೇಡಂ ಎಂ.ಎಲ್.ಸಿ ಆಗಲಿದ್ದಾರೆ. ಹಾಗನ್ನುತ್ತಿವೆ ರಮ್ಯಾ ರಾಜಕೀಯ ಮೂಲಗಳು.

ಡಿಸೆಂಬರ್ ನಲ್ಲಿ ಮೇಲ್ಮನೆಯ ಕೆಲ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಅವರುಗಳಿಂದ ತೆರವಾಗುವ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಮ್ಯಾ ರೀ ಎಂಟ್ರಿ ಕೊಡಲಿದ್ದಾರೆ ಅಂತ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ. [ರಮ್ಯಾ ಮೇಡಂ ಮತ್ತೆ ತೆರೆಮೇಲೆ ಮಿಂಚಿಂಗು..!]

ಈ ಸುದ್ದಿ ನಿಜವೇ ಆದರೆ, ಹಿರಿಯ ನಟಿ ಜಯಮಾಲಾ, ತಾರಾ ಅನುರಾಧಾ ಅವರ ಸಾಲಿಗೆ ರಮ್ಯಾ ಚಿತ್ರರಂಗದ ಕಡೆಯಿಂದ ಹೊಸ ಸೇರ್ಪಡೆ ಆಗಲಿದ್ದಾರೆ.

English summary
According to the sources, Sandalwood Queen, Congress Politician, Ex MP Ramya aka Divya Spandana to become MLC (Member of Legislative Council) soon.
Please Wait while comments are loading...

Kannada Photos

Go to : More Photos