»   » 'ದೊಡ್ಮನೆ ಹುಡ್ಗ' ಪುನೀತ್ ಜೊತೆ ಲಕ್ಕಿ ಸ್ಟಾರ್ ರಮ್ಯಾ!

'ದೊಡ್ಮನೆ ಹುಡ್ಗ' ಪುನೀತ್ ಜೊತೆ ಲಕ್ಕಿ ಸ್ಟಾರ್ ರಮ್ಯಾ!

Written by: ಉದಯರವಿ
Subscribe to Filmibeat Kannada

ಗೋಲ್ಡನ್ ಗರ್ಲ್ ರಮ್ಯಾ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ರಾಜಕೀಯದಲ್ಲಿ ಬಿಜಿಯಾದ ಬಳಿಕ ಬಣ್ಣ ಹಚ್ಚಲು ಅವರಿಗೆ ಪುರುಸೋತ್ತೆಲ್ಲಿತ್ತು. ಈ ಸಲದ ಲೋಕಸಭೆ ಚುನಾವಣೆಯಲ್ಲಿ ವಿಜಯಲಕ್ಷ್ಮಿಅವರ ಕೈಹಿಡಿಯಲಿಲ್ಲ. ಈಗವರು ಬಣ್ಣದ ದುನಿಯಾಗೆ ಮತ್ತೆ ಮುಖ ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಆದರೆ ಗಾಂಧಿನಗರದಲ್ಲಿ ಮಾತ್ರ ಈ ಬಗ್ಗೆ ಸುದ್ದಿ ದಟ್ಟವಾಗಿ ಹಬ್ಬಿದೆ. [ಪವರ್ ಸ್ಟಾರ್ 'ರಣ ವಿಕ್ರಮ' ಥ್ರಿಲ್ಲಿಂಗ್ ಡೀಟೇಲ್ಸ್]

ಸದ್ಯಕ್ಕೆ ರಮ್ಯಾ ಅವರು 'ಆರ್ಯನ್' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊಗೆ ಅಭಿನಯಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಅವರು ಇನ್ಯಾವ ಚಿತ್ರದಲ್ಲೂ ತೊಡಗಿಕೊಂಡಂತಿಲ್ಲ. ಒಟ್ಟಾರೆಯಾಗಿ ರಮ್ಯಾ ಮತ್ತೆ ಬಣ್ಣ ಹಚ್ಚುತ್ತಿರುವುದು ಅವರ ಅಭಿಮಾನಿಗಳ ಪಾಲಿಗೆ ಸಂತಸದ ಸಂಗತಿ.

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ದೊಡ್ಮನೆ ಹುಡ್ಗ ಚಿತ್ರ ಜುಲೈನಲ್ಲಿ ಸೆಟ್ಟೇರಲಿದೆ. ಎಂ ಗೋವಿಂದು ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಜಾಕಿ ಹಾಗೂ ಅಣ್ಣಾಬಾಂಡ್ ಚಿತ್ರಗಳ ಬಳಿಕ ಸೂರಿ, ಪುನೀತ್ ಕಾಂಬಿನೇಷನಲ್ಲಿ ಬರುತ್ತಿರುವ ಮೂರನೇ ಚಿತ್ರ ದೊಡ್ಮನೆ ಹುಡ್ಗ.

ದೊಡ್ಮನೆ ಹುಡ್ಗ ಪುನೀತ್ ಜೊತೆ ರಮ್ಯಾ ಹೌದಾ?

ದೊಡ್ಮನೆ ಹುಡ್ಗ ಪುನೀತ್ ಜೊತೆ ರಮ್ಯಾ ಹೌದಾ?

'ದೊಡ್ಮನೆ ಹುಡ್ಗ'ನ ಜೊತೆ ಯಾರು ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಇದ್ದ ಕುತೂಹಲ ಇದೀಗ ಸ್ವಲ್ಪ ಮಟ್ಟಿಗೆ ತಣಿದಂತಾಗಿದೆ. ರಮ್ಯಾ ಮತ್ತು ಪುನೀತ್ ಜೋಡಿ ಎಂದರೆ ಅಭಿಮಾನಿಗಳ ಕಣ್ಣಿಗೆ ಹಬ್ಬ ಇದ್ದಂತೆ.

ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಚಿತ್ರ

ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಚಿತ್ರ

ಅಣ್ಣಾವ್ರ 86ನೇ ಹುಟ್ಟುಹಬ್ಬದ ದಿನ ದೊಡ್ಮನೆ ಹುಡ್ಗನ ಹಾಡುಗಳ ರೆಕಾರ್ಡಿಂಗ್ ಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸೂರಿ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದಿದ್ದನ್ನು ಸ್ಮರಿಸಬಹುದು.

ಎಂ ಗೋವಿಂದು ನಿರ್ಮಾಣದ ದೊಡ್ಡ ಚಿತ್ರ

ಎಂ ಗೋವಿಂದು ನಿರ್ಮಾಣದ ದೊಡ್ಡ ಚಿತ್ರ

ಈ ಹಿಂದೆ 'ವಿಷ್ಣುಸೇನೆ' ಹಾಗೂ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನು ನಿರ್ಮಿಸಿದ್ದ ಎಂ ಗೋವಿಂದು ಈ ಬಾರಿ 'ದೊಡ್ಮನೆ ಹುಡ್ಗನ' ನಿರ್ಮಾಪಕರು.

ಸದ್ಯಕ್ಕೆ ರಣ ವಿಕ್ರಮದಲ್ಲಿ ಪುನೀತ್ ಬಿಜಿ

ಸದ್ಯಕ್ಕೆ ರಣ ವಿಕ್ರಮದಲ್ಲಿ ಪುನೀತ್ ಬಿಜಿ

ಪುನೀತ್ ಜೊತೆಗಿನ ಪವನ್ ಒಡೆಯರ್ ಅವರ 'ರಣ ವಿಕ್ರಮ' ಚಿತ್ರ ಮುಗಿಯಬೇಕಿದೆ. ಈ ಚಿತ್ರವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ. ಅದಾದ ಬಳಿಕ ದೊಡ್ಮನೆ ಹುಡ್ಗ ಶುರು.

ದೊಡ್ಮನೆ ಹುಡ್ಗನ ನಿರೀಕ್ಷೆಗಳು ತ್ರಿಪಲ್

ದೊಡ್ಮನೆ ಹುಡ್ಗನ ನಿರೀಕ್ಷೆಗಳು ತ್ರಿಪಲ್

ಒಟ್ಟಾರೆಯಾಗಿ ದುನಿಯಾ ಸೂರಿ ಡೈರೆಕ್ಷನ್, ಪುನೀತ್ ಹೀರೋ ಎಂದರೆ ನಿರೀಕ್ಷೆಗಳು ಡಬಲ್. ಇದೀಗ ರಮ್ಯಾ ಹೆಸರು ಕೇಳಿಬಂದಿರುವುದು ಚಿತ್ರದ ಮೇಲಿನ ನಿರೀಕ್ಷೆಗಳನ್ನು ತ್ರಿಪಲ್ ಮಾಡಿದೆ.

ಏಳು ವರ್ಷಗಳ ಬಳಿಕ ಒಂದಾಗಲಿರುವ ಜೋಡಿ

ಏಳು ವರ್ಷಗಳ ಬಳಿಕ ಒಂದಾಗಲಿರುವ ಜೋಡಿ

ಪುನೀತ್ ಹಾಗೂ ರಮ್ಯಾ ಅವರು ಈ ಹಿಂದೆ ಅಭಿ, ಆಕಾಶ್, ಅರಸು ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ತೆರೆಯ ಮೇಲೆ ಇಬ್ಬರು ಹಿಟ್ ಜೋಡಿ ಎನ್ನಿಸಿಕೊಂಡಿದ್ದಾರೆ. ಈಗ ಏಳು ವರ್ಷಗಳ ಬಳಿಕ ಮತ್ತೆ ಒಂದಾಗಲಿದ್ದಾರೆ.

English summary
If sources are to be believed, then the makers of Sandalwood's forthcoming movie 'Dodmane Hudga' starring Power Star Puneet Rajkumar have decided to rope in Ramya to play the female lead in the film.
Please Wait while comments are loading...

Kannada Photos

Go to : More Photos