»   » ಬೆಳಗ್ಗೆ ಆರು ಗಂಟೆಗೆ 'ರನ್ನ' ಮೊದಲ ಶೋ

ಬೆಳಗ್ಗೆ ಆರು ಗಂಟೆಗೆ 'ರನ್ನ' ಮೊದಲ ಶೋ

Posted by:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ನಾಳೆ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಸರಿ ಸುಮಾರು 300 ಚಿತ್ರಮಂದಿರಗಳಲ್ಲಿ 'ರನ್ನ' ತೆರೆ ಕಾಣುತ್ತಿದೆ. ಈಗಾಗಲೇ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಬುಕ್ಕಿಂಗ್ ಶುರುವಾಗಿದೆ.

ಆನ್ ಲೈನ್ ಬುಕ್ಕಿಂಗ್ ನಲ್ಲಿ 'ರನ್ನ' ಟ್ರೆಂಡಿಂಗ್ ನಲ್ಲಿದೆ. ಇವೆಲ್ಲದರ ಜೊತೆಗೆ ಹೊಸ ದಾಖಲೆ ಬರೆಯೋಕೆ 'ರನ್ನ' ಸಜ್ಜಾಗಿದ್ದಾನೆ. ಅದೇನೆಂದರೆ, ರಾಜ್ಯಾದ್ಯಂತ 80-100 ಥಿಯೇಟರ್ ಗಳಲ್ಲಿ ಬೆಳಗ್ಗೆ 6 ಗಂಟೆಗೆ 'ರನ್ನ'ನ ದರ್ಶನವಾಗಲಿದೆ.'ರನ್ನ'ನ ಟಿಕೆಟ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನಲೆಯಲ್ಲಿ ಹತ್ತತ್ರ 100 ಚಿತ್ರಮಂದಿರಗಳ ಮಾಲೀಕರು ಬೆಳಗ್ಗೆ ಆರು ಗಂಟೆಗೆ ಮೊದಲ ಪ್ರದರ್ಶನ ನೀಡುವುದಕ್ಕೆ ನಿರ್ಧರಿಸಿದ್ದಾರಂತೆ. ಸ್ಯಾಂಡಲ್ ವುಡ್ ಮಟ್ಟಿಗೆ ಇದು ಹೊಸ ರೆಕಾರ್ಡ್. [ದಾಖಲೆ ಮೊತ್ತಕ್ಕೆ 'ರನ್ನ' ಪ್ರಸಾರ ಹಕ್ಕು ಮಾರಾಟ]


ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರ ಬೆಳಗ್ಗೆ 7.30ಕ್ಕೆ ಬೆಂಗಳೂರಿನ ಬಹುತೇಕ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿತ್ತು. ಅನೇಕ ಜಿಲ್ಲೆಗಳಲ್ಲಿ, ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಆರು ಗಂಟೆಗೆ ಮೊದಲ ಪ್ರದರ್ಶನ ಕಾಣ್ತು. [ಭೂಕಂಪ-ಸುನಾಮಿಯನ್ನ ಒಂದು ಮಾಡಿದ 'ಸಿಂಹ' ಸುದೀಪ್]


ಆದ್ರೆ, ಒಮ್ಮೆಲೆ ಬರೋಬ್ಬರಿ 80-100 ಚಿತ್ರಮಂದಿರಗಳಲ್ಲಿ ಬೆಳಗಿವ ಜಾವ ಆರು ಗಂಟೆಗೆ ಪ್ರದರ್ಶನವಾಗುತ್ತಿರುವ ಚಿತ್ರ 'ರನ್ನ'. ಈ ಬಗ್ಗೆ ನಿರ್ದೇಶಕ ನಂದಕಿಶೋರ್, ಅವರ ಸಹೋದರ ತರುಣ್ ಸುಧೀರ್, ಕಿಚ್ಚ ಸುದೀಪ್ ಮತ್ತು ಇಡೀ 'ರನ್ನ' ತಂಡಕ್ಕೆ ಹೆಮ್ಮೆ ಇದೆ. 'ರನ್ನ'ನ ಬರಮಾಡಿಕೊಳ್ಳೋಕೆ ನೀವು ರೆಡಿಯಾಗಿ.

English summary
Kiccha Sudeep starrer 'Ranna' is all set to release tomorrow. According to the reports, Around 80-100 theaters will screen the first show of 'Ranna' at 6am on June 4th.
Please Wait while comments are loading...

Kannada Photos

Go to : More Photos