»   » ಉಪ್ಪಿ ಅಪ್ಪು ಚಿತ್ರಕ್ಕೆ ಆಕ್ಷನ್-ಕಟ್ ಹೇಳ್ತಾರಂತೆ ಹೌದಾ?

ಉಪ್ಪಿ ಅಪ್ಪು ಚಿತ್ರಕ್ಕೆ ಆಕ್ಷನ್-ಕಟ್ ಹೇಳ್ತಾರಂತೆ ಹೌದಾ?

Written by: ಸೋನು ಗೌಡ
Subscribe to Filmibeat Kannada

ಓ ಮೈ ಗಾಡ್ ರಿಯಲ್ ಸ್ಟಾರ್ ಉಪೇಂದ್ರ ದೊಡ್ಮನೆ ಹುಡುಗ ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರಕ್ಕೆ ಆಕ್ಷನ್-ಕಟ್ ಹೇಳ್ತಾರಂತೆ!!.

ಹೀಗಂತ ನಾವು ಹೇಳ್ತಾ ಇಲ್ಲ ಬದ್ಲಾಗಿ ಉಪ್ಪಿ ಅಭಿಮಾನಿ ಬಳಗದವರು ಮಾಡಿರುವ ಪೋಸ್ಟರ್ ಒಂದು ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಂದಹಾಗೆ ಪೋಸ್ಟರ್ ನಲ್ಲಿ ಅಂತಹ ವಿಚಾರ ಏನಿದೆ ಅಂತೀರಾ?, ಉಪೇಂದ್ರ ಅವರ ಅಭಿಮಾನಿಗಳು ಮಾಡಿರುವ ಪೋಸ್ಟರ್ ನಲ್ಲಿ ಉಪೇಂದ್ರ ಪ್ರೊಡಕ್ಷನ್ ಜೊತೆಗೆ ಪವರ್ ಸ್ಟಾರ್ ಪುನೀತ್ ಅಭಿನಯ ಹಾಗೂ ಕಥೆ-ಚಿತ್ರಕಥೆ-ಸಂಭಾಷಣೆ ಉಪೇಂದ್ರ ಅಂತ ಬರೆದಿರುವ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.['ಉಪ್ಪಿಟ್ಟು' ರುಚಿಗೆ ಪಾಕಿಸ್ತಾನಿ ಕ್ಲೀನ್ ಬೌಲ್ಡ್ ಗುರು.!]

ಇದು ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ನಮಗಂತೂ ಗೊತ್ತಿಲ್ಲ. ಆದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜ್ ಕುಟುಂಬಕ್ಕೆ ಮತ್ತೊಮ್ಮೆ ಆಕ್ಷನ್-ಕಟ್ ಹೇಳ್ತಾರೆ ಅಂದ್ರೆ ಇದಕ್ಕಿಂತ ಸಿಹಿ ಸುದ್ದಿ ಇನ್ನೇನಿದೆ ಅಲ್ವಾ.

ಇದಕ್ಕಿಂತ ಮೊದಲು 'ಬುದ್ದಿವಂತ' ನಾಯಕ ಉಪೇಂದ್ರ ಅವರು ಬ್ಲಾಕ್ ಬಸ್ಟರ್ ಹಿಟ್ 'ಓಂ' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೊಡ್ಮನೆ ಹುಡುಗ ಶಿವಣ್ಣನಿಗೆ ಚಿತ್ರರಂಗದಲ್ಲಿ ಒಳ್ಳೆ ಇಮೇಜ್ ತಂದುಕೊಟ್ಟಿತ್ತು.[ಚಿರಂಜೀವಿಗೆ ಆಕ್ಷನ್ ಕಟ್ ಹೇಳ್ತಾರಾ ಉಪೇಂದ್ರ?]

ಇದೀಗ ಅಭಿಮಾನಿಗಳೇ ಸೇರಿಕೊಂಡು ಮಾಡಿರುವ ಪೋಸ್ಟರ್ ನ ಪ್ರಕಾರ ರಿಯಲ್ ಸ್ಟಾರ್ ಉಪೇಂದ್ರ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಾರೆ ಎಂದು ಇಡೀ ಗಾಂಧಿನಗರದಲ್ಲಿ ಸುದ್ದಿಯಾಗಿದೆ.

Upendra

ಈಗಾಗಲೇ ಪುನೀತ್ ರಾಜ್ ಕುಮಾರ್ ಅವರು 'ದೊಡ್ಮನೆ ಹುಡುಗ', 'ಚಕ್ರವ್ಯೂಹ', 'ರಾಜಕುಮಾರ' ಮುಂತಾದ ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.

ಅಂತೂ ಈ ಎಲ್ಲಾ ಪ್ರಾಜೆಕ್ಟ್ ಗಳನ್ನು ಮುಗಿಸಿಕೊಂಡು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಕೈ ಜೋಡಿಸಬಹುದು ಅಂತ ನಮ್ಮ ಅನಿಸಿಕೆ.[ಉಪೇಂದ್ರ ಅವರ ಮುಂದಿನ ಚಿತ್ರ ಯಾವುದು ಗೊತ್ತಾ?]

ಅದೇನೇ ಇರಲಿ ಈ ಸುದ್ದಿ ನಿಜವಾದರೆ ಗಾಂಧಿನಗರದ ಮಂದಿಗೆ ಮತ್ತೊಮ್ಮೆ ಧಮಾಕೇದರ್ ದಿನಗಳು ಬರೋದು ಗ್ಯಾರಂಟಿ. ಒಟ್ನಲ್ಲಿ ಗಾಸಿಪ್ ಆಫೀಶಿಯಲ್ ಆಗಿ ಕನ್ ಫರ್ಮ್ ಆಗೋವರೆಗೂ ಅಭಿಮಾನಿಗಳು ಕಾಯಲೇಬೇಕು.

English summary
There is very interesting update to the fans of Upendra and Puneeth Rajkumar. According to the talks, Real Star Upendra will direct a movie to Powerstar. Lets say its a fan made poster, but it has wordings showing Upendra Productions.
Please Wait while comments are loading...

Kannada Photos

Go to : More Photos