»   » 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?

'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?

Posted by:
Subscribe to Filmibeat Kannada

ತಮ್ಮ ಪುತ್ರ ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಎನ್ನುವ ಕಾರಣಕ್ಕೋ ಏನೋ...ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 'ಜಾಗ್ವಾರ್' ಸಿನಿಮಾಗಾಗಿ ಉದಾರತೆ ಮೆರೆಯುತ್ತಿದ್ದಾರೆ.

ಕ್ವಾಲಿಟಿಗೆ ಕಾಂಪ್ರೊಮೈಸ್ ಆಗದ ನಿರ್ಮಾಪಕ ಕುಮಾರಸ್ವಾಮಿ 'ಜಾಗ್ವಾರ್' ಚಿತ್ರದ ಪ್ರತಿ ಫ್ರೇಮ್ ನಲ್ಲೂ ಅದ್ಧೂರಿತನ ತುಂಬುತ್ತಿದ್ದಾರೆ. ವಿದೇಶದ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ನಡೆದಿದ್ರೆ, ಬಲ್ಗೇರಿಯಾ ಬೀದಿಗಳಲ್ಲಿ ಸ್ಟಂಟ್ಸ್ ಸೀಕ್ವೆನ್ಸ್ ಶೂಟ್ ಆಗಿದೆ. ಬಾಕಿ ಚಿತ್ರೀಕರಣ ಮೈಸೂರಿನ ಪ್ರಖ್ಯಾತ ಇನ್ಫೋಸಿಸ್ ಕ್ಯಾಂಪಸ್ ನಲ್ಲಾಗಿದೆ. [ಎಕ್ಸ್ ಕ್ಲೂಸಿವ್ ಫೋಟೋ: 'ಜಾಗ್ವಾರ್' ಅಡ್ಡದಲ್ಲಿ ತಮನ್ನಾ ಜಿಂಗಿಚಕ್ಕ]


ಇವೆಲ್ಲದರ ಜೊತೆಗೆ 'ಜಾಗ್ವಾರ್'ಗೆ ಮಸಾಲೆ ತುಂಬಲು ಒಂದು ಐಟಂ ಸಾಂಗ್ ಚಿತ್ರೀಕರಣ ಕೂಡ ನಡೆದಿದೆ. ನಿಖಿಲ್ ಕುಮಾರ್ ಜೊತೆ ಐಟಂ ಸಾಂಗ್ ನಲ್ಲಿ ಟಪ್ಪಾಂಗುಚ್ಚಿ ಸ್ಟೆಪ್ ಹಾಕಲು ಅಂತಿಂಥ ಹೆಣ್ಣು ಬೇಡ, ಮಿಲ್ಕಿ ಬ್ಯೂಟಿ ಬರಲಿ ಅಂತ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾರನ್ನ ಕರೆಸಿದ್ದಾಗಿದೆ. ಮುಂದೆ ಓದಿ....


ಐಟಂ ಗರ್ಲ್ ತಮನ್ನಾ

ಐಟಂ ಗರ್ಲ್ ತಮನ್ನಾ

ಈಗಾಗಲೇ ಅನೇಕ ಐಟಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದಾಗಿದೆ. 'ಜಾಗ್ವಾರ್' ಚಿತ್ರದ ಹಾಡಿಗೂ ಕುಣಿದರೆ ಆಯ್ತು ಅಂತ ತಮನ್ನಾ ಏನೋ ಒಪ್ಪಿಕೊಂಡು ಬಿಟ್ಟರು. ಆದ್ರೆ, ಒಂದೇ ಒಂದು ಕಂಡೀಷನ್ ಮೇಲೆ....


ಏನು ಆ ಕಂಡೀಷನ್.!

ಏನು ಆ ಕಂಡೀಷನ್.!

'ಇಷ್ಟು' ಸಂಭಾವನೆ ಕೊಡುವುದಾದರೆ ಮಾತ್ರ 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುವುದಾಗಿ ತಮನ್ನಾ ಹೇಳಿದ್ರಂತೆ.! [ಗಾಸಿಪ್ ನಿಜ ಆಯ್ತಲ್ಲ: ಮಿಲ್ಕಿ ಬ್ಯೂಟಿ ತಮನ್ನಾ ಕನ್ನಡಕ್ಕೆ ಬಂದ್ರಲ್ಲ.!]


ಸಂಭಾವನೆ ಎಷ್ಟು?

ಸಂಭಾವನೆ ಎಷ್ಟು?

'ಜಾಗ್ವಾರ್' ಚಿತ್ರದ ಒಂದೇ ಒಂದು ಹಾಡಿಗೆ ತಮನ್ನಾ ಭಾಟಿಯಾ ಪಡೆದ ಸಂಭಾವನೆ ಎಷ್ಟು ಅಂತ ಕೇಳಿದ್ರೆ ನೀವೇ ನಿಮ್ಮ ಬಾಯಿ ಮೇಲೆ ಬೆರಳಿಡುತ್ತೀರಾ.! ['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]


ಒಂದು ಹಾಡಿಗೆ ಒಂದು ಕೋಟಿ.!

ಒಂದು ಹಾಡಿಗೆ ಒಂದು ಕೋಟಿ.!

'ಜಾಗ್ವಾರ್' ಚಿತ್ರದ ಐಟಂ ಸಾಂಗ್ ನಲ್ಲಿ ಸ್ಟೆಪ್ ಹಾಕಲು ನಟಿ ತಮನ್ನಾ ಭಾಟಿಯಾಗೆ ನೀಡಿರುವ ಸಂಭಾವನೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಅಂತ ವರದಿ ಆಗಿದೆ. [ಓಹೋ.! 'ಜಾಗ್ವಾರ್' ನಿರ್ಮಾಪಕರ ತಲೆಯಲ್ಲಿ ಇವ್ರೂ ಇದ್ದಾರೆ.!]


ಎಂಟು ದಿನಗಳ ಶೂಟಿಂಗ್

ಎಂಟು ದಿನಗಳ ಶೂಟಿಂಗ್

'ಜಾಗ್ವಾರ್' ಚಿತ್ರದಲ್ಲಿ ತಮನ್ನಾ ಇರುವ 'ಸಂಪಿಗೆ...' ಹಾಡಿನ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎಂಟು ದಿನಗಳ ಕಾಲ ನಡೆದಿದೆ. [ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]


ಸಿನಿಮಾಗೆ ಎಷ್ಟು ಸಂಭಾವನೆ ಪಡೆಯಬಹುದು?

ಸಿನಿಮಾಗೆ ಎಷ್ಟು ಸಂಭಾವನೆ ಪಡೆಯಬಹುದು?

ಎರಡು ವರ್ಷಗಳ ಹಿಂದೆ ಒಂದು ಸಿನಿಮಾಗೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ತಮನ್ನಾ, ಇದೀಗ ಚಿತ್ರಕ್ಕಾಗಿ 2.5-3 ಕೋಟಿ ಸಂಭಾವನೆ ಸ್ವೀಕರಿಸುತ್ತಿದ್ದಾರೆ.


ಕಾಸ್ಟ್ಲಿ ತಮನ್ನಾ

ಕಾಸ್ಟ್ಲಿ ತಮನ್ನಾ

ತಮನ್ನಾ ತುಂಬಾ ಕಾಸ್ಟ್ಲಿ ಆದರೂ ಮಗನ ಚಿತ್ರವಾದ್ದರಿಂದ ನಿರ್ಮಾಪಕ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ತಲೆ ಕೆಡಿಸಿಕೊಂಡಿಲ್ಲ.


ದಸರಾ ಹಬ್ಬಕ್ಕೆ 'ಜಾಗ್ವಾರ್' ಬಿಡುಗಡೆ

ದಸರಾ ಹಬ್ಬಕ್ಕೆ 'ಜಾಗ್ವಾರ್' ಬಿಡುಗಡೆ

ನಿಖಿಲ್ ಕುಮಾರ್, ದೀಪ್ತಿ ಸತಿ, ತಮನ್ನಾ, ರಮ್ಯಾ ಕೃಷ್ಣ, ಜಗಪತಿ ಬಾಬು, ಸಾಧು ಕೋಕಿಲ ಮುಂತಾದವರ ತಾರಾಗಣ ಇರುವ ರಾಜಮೌಳಿ ಶಿಷ್ಯ ಮಹಾದೇವ್ ಆಕ್ಷನ್ ಕಟ್ ಹೇಳಿರುವ 'ಜಾಗ್ವಾರ್' ಚಿತ್ರ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ ನಲ್ಲಿ ತೆರೆಕಾಣಲಿದೆ.


English summary
According to the latest buzz, Popular Actress Tamannaah Bhatia has received Rs.1 Crore as remuneration for shaking legs in an item song for Nikhil Kumar, son of EX CM H.D.Kumaraswamy starrer 'Jaguar'.
Please Wait while comments are loading...

Kannada Photos

Go to : More Photos