ಭಾರಿ ಗಾಳಿಸುದ್ದಿ ಹೊಡೆತಕ್ಕೆ ಸಿಲುಕಿದ ಜನಶ್ರೀ ಚಾನಲ್

Written by: ಉದಯರವಿ

ಈ ರೀತಿಯ ಗಾಳಿಸುದ್ದಿಗಳು ಮಾಧ್ಯಮ ವಲಯದಲ್ಲಿ ಆಗಾಗ ಬೀಸುತ್ತಲೇ ಇರುತ್ತವೆ. ಕೆಲವೊಮ್ಮೆ ಈ ಗಾಳಿಸುದ್ದಿಗಳು ಬಿರುಗಾಳಿಯಂತೆ ಬದಲಾಗಿದ್ದೂ ಉಂಟು. ಈಗ ಅಂತಹದ್ದೇ ಒಂದು ಗಾಳಿಸುದ್ದಿ ಬಲವಾಗಿ ಬೀಸುತ್ತಿದೆ. ಅದು ಜನಶ್ರೀ ನ್ಯೂಸ್ ಚಾನಲ್ ಸಂಬಂಧಿಸಿದಂತೆ...

ವಿಭಿನ್ನ ಕಾರ್ಯಕ್ರಮಗಳ ಮೂಲಕ ತನ್ನದೇ ಆದ ಶೈಲಿಯಿಂದ ಜನಾನುರಾಗಿಯಾಗಿದೆ ಜನಶ್ರೀ ವಾಹಿನಿ. ಈಗ ಹಬ್ಬಿರುವ ಗಾಳಿಸುದ್ದಿ ಏನೆಂದರೆ, ಆರ್ಥಿಕ ಸಮಸ್ಯೆಗೆ ಸಿಲುಕಿರುವ ಜನಶ್ರೀ ವಾಹಿನಿ ತಿಂಗಳ ವೆಚ್ಚವನ್ನು ಸಂಪಾದಿಸುವುದೂ ಕಷ್ಟವಾಗಿದೆ ಎಂಬುದು.

ಈ ಹಿಂದೆಯೇ ವಾಹಿನಿಯನ್ನು ಮಾರಾಟ ಮಾಡಲು ರೆಡ್ಡಿ ಸಹೋದದರು ಪ್ರಯತ್ನಿಸಿದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ ಎಂಬ ಸುದ್ದಿಯೂ ಇದರ ಬೆನ್ನಿಗಿದೆ. ವಾಹಿನಿಯಿಂದ ಒಂದಷ್ಟು ರಾಜಕೀಯ ಮೈಲೇಜ್ ತೆಗೆದುಕೊಳ್ಳಬಹುದು ಎಂಬ ರೆಡ್ಡಿಗಳ ಲೆಕ್ಕಾಚಾರವೂ ಕಡೆಗೆ ತಲೆಕೆಳಗಾಯಿತು.

ಈಗ ವಾಹಿನಿಯು ಬೀಗ ಜಡಿಯುವತ್ತ ಮುಖ ಮಾಡಿದೆ ಎಂಬ ಸುದ್ದಿ ಬಲವಾಗಿ ಹಬ್ಬಿದೆ. ಇದರ ಸತ್ಯಾಸತ್ಯತೆಗಳು ಇನ್ನಷ್ಟೇ ಬಯಲಾಗಬೇಕು. ಇನ್ನೊಂದು ಕಡೆ ರೆಡ್ಡಿ ಸೋದರರ ಮಾಲೀಕತ್ವದ ವಾಹಿನಿಯಾದರೂ ಅವರ ನಿಲುವು ಒಲವುಗಳನ್ನು ಬದಿಗಿಟ್ಟು ವಾಹಿನಿಯನ್ನು ಜಾಣ್ಮೆಯಿಂದ ಮುನ್ನಡೆಸುತ್ತಿದ್ದಾರೆ ಅನುಭವಿ ಪತ್ರಕರ್ತ ಅನಂತ ಚಿನಿವಾರ್ ಅವರು ಸುವರ್ಣ ವಾಹಿನಿ ಕಡೆ ಮುಖ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.

ನಮ್ಮ ಕಣ್ಣಮುಂದೆ ಕಣ್ಣುಮುಚ್ಚಿದ ಹಲವಾರು ವಾಹಿನಿಗಳ ನಿದರ್ಶನವೂ ಇದೆ. ಉದಯ ಟಿವಿಗೆ ಪೈಪೋಟಿ ನೀಡಲು ಆರಂಭವಾದ ಸುಪ್ರಭಾತ ಹಾಗೂ ಏಶಿಯಾನೆಟ್ ಕಾವೇರಿ ವಾಹಿನಿಗಳು ಬೀಗ ಜಡಿದದ್ದು ಗೊತ್ತೇ ಇದೆ. ಈಗ ಇದೇ ಹಾದಿಯಲ್ಲಿ ಜನಶ್ರೀ ವಾಹಿನಿಯೂ ಸಾಗಿದೆಯೇ? ಗೊತ್ತಿಲ್ಲ. ಸದ್ಯಕ್ಕೆ ಈ ಗಾಸಿಪ್ ಸುದ್ದಿ ಸುಳ್ಳಾಗಲಿ ಎಂದು ಆಶಿಸೋಣ.

Read more about: janasri tv, tv, janardhana reddy, ಜನಶ್ರೀ ನ್ಯೂಸ್, ಟಿವಿ, ಜನಾರ್ದನ ರೆಡ್ಡಿ

English summary
The rumour mills are abuzz with news that popular 24/7 Kannada news TV channel Janasri is counting its last days. It is said that channels head Ananth Chinivar is set resign for his post. The myth and truth should know soon.
Please Wait while comments are loading...

Kannada Photos

Go to : More Photos