'ಅಗ್ರಜ'ನ ಬೆಡ್ ರೂಂ ಸೀನ್ ಮೇಲೆ ಸಂಜನಾ ಗರಂ

Written by: ರವಿಕಿಶೋರ್
 

ವರಸನಾಯಕ ಜಗ್ಗೇಶ್ ಅಭಿನಯದ 'ಅಗ್ರಜ' ಚಿತ್ರ ಇಂದು (ಏ.18) ರಾಜ್ಯದಾದ್ಯಂತ ತೆರೆಕಂಡಿದೆ. ಚಿತ್ರದ ಮೇಕಿಂಗ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ 'ಗಂಡಹೆಂಡತಿ' ಖ್ಯಾತಿಯ ಸಂಜನಾ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಆದರೆ ಚಿತ್ರದಲ್ಲಿನ ಒಂದು ಸ್ನಾನದ ಸೀನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆತ್ತಲೆ ಬೆನ್ನು ತೋರಿಸುವ ಸ್ನಾನದ ಸನ್ನಿವೇಶದಲ್ಲಿ ಇರುವುದು ನಾನೇ ಎಂಬಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ. ಆದರೆ ಆ ಸನ್ನಿವೇಶದಲ್ಲಿ ಇರುವುದು ನಾನಲ್ಲ. ಚಿತ್ರದಲ್ಲಿ ತನ್ನನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ ಸಂಜನಾ. [ನಟಿ ಸಂಜನಾ ಬಗ್ಗೆ ನಿಮಗೆ ತಿಳಿದಿರದ ರಹಸ್ಯಗಳು]

A still from Agraja

'ಗಂಡಹೆಂಡತಿ' ಸಂಜನಾ ಎಂದು ಚಿತ್ರದಲ್ಲಿ ನನ್ನ ಹೆಸರನ್ನು ಬಳಸಲಾಗಿದೆ. ಒಂದು ನೆಗಟೀವ್ ಶೇಡ್ ಉಳ್ಳ ಹೆಣ್ಣಿನ ಪಾತ್ರಕ್ಕೆ ತಮ್ಮ ಹೆಸರನ್ನು ಬಳಸಿಕೊಳ್ಳಲಾಗಿದೆ. ಬೆಡ್ ರೂಮ್ ದೃಶ್ಯದಲ್ಲಿ ಬೇರೆ ಕಲಾವಿದರನ್ನು ಬಳಸಿದ್ದಾರೆ. ಆದರೆ ನಾನೇ ಎಂಬಂತೆ ತೋರಿಸಲಾಗಿದೆ. ಈ ಬಗ್ಗೆ ತಮಗೆ ಅಸಮಾಧಾನವಿದೆ ಎಂದಿದ್ದಾರೆ ಈ ಚಿತ್ರದಲ್ಲಿ ಒಂದು ಪಾತ್ರವನ್ನೂ ಪೋಷಿಸಿರುವ ಸಂಜನಾ.

ಚಿತ್ರದಲ್ಲಿ ಒಂದು ಪಾತ್ರಕ್ಕೆ ತಮ್ಮ ಹೆಸರನ್ನು ಬಳಸಿಕೊಂಡಿರುವುದನ್ನು ತೆಗೆಯಬೇಕು. ಜಾಲವೊಂದರಲ್ಲಿ ಸಿಕ್ಕಿಬೀಳುವ ತಾರೆಗೆ ನನ್ನ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಸಂಜನಾ ಹೇಳಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ 'ಗಂಡಹೆಂಡತಿ' ಸಂಜನಾ ಎಂದು ಬಳಸಿಕೊಳ್ಳುವ ಬಗ್ಗೆ ಮೊದಲು ನನಗೆ ತಿಳಿಸಿರಲಿಲ್ಲ ಎಂದು ಚಿತ್ರತಂಡದ ವಿರುದ್ಧ ಸಂಜನಾ ಗರಂ ಆಗಿದ್ದಾರೆ.

ಈ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಂದನ್ ಅವರು ಮಾತನಾಡುತ್ತಾ, "ಚಿತ್ರದ ಸನ್ನಿವೇಶದ ಬಗ್ಗೆ ಮೊದಲೆ ಸಂಜನಾ ಅವರಿಗೆ ವಿವರಿಸಿದ್ದೆವು. ಆ ಪಾತ್ರದ ಬಗ್ಗೆಯೂ ಹೇಳಿದ್ದೆವು. ಇದರಲ್ಲಿ ತಮ್ಮದೇನು ತಪ್ಪಿಲ್ಲ" ಎನ್ನುತ್ತಾರೆ. ಆದರೆ ಚಿತ್ರದಲ್ಲಿ ತಮ್ಮ ಹೆಸರನ್ನು ಕೈಬಿಡಿ ಎಂಬುದು ಸಂಜನಾ ವಾದ.

Read more about: sanjjanaa, jaggesh, darshan, controversy, ಸಂಜನಾ, ಜಗ್ಗೇಶ್, ದರ್ಶನ್, ವಿವಾದ

English summary
Actress Sanjjanaa Galrani has alleged that the makers of Agraja has projected her badly in few erotic scenes of the movie, and they have used some other girl to do a back shot and projected it as she. After watching the scene, Sanjjanaa has took her micro-blogging site Twitter to express her anger.
Please Wait while comments are loading...
Your Fashion Voice

Kannada Photos

Go to : More Photos