twitter
    For Quick Alerts
    ALLOW NOTIFICATIONS  
    For Daily Alerts

    ಕಿಂಗ್ ಖಾನ್ ಶಾರುಖ್ ನಮ್ಮ ಕುಡ್ಲದ ಹುಡುಗ !

    By Mahesh
    |

    ಬಾಲಿವುಡ್ ಜಗತ್ತಿನ ಕಿಂಗ್ ಖಾನ್ ಶಾರುಖ್ ಅವರು ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಜನ್ಮ ರಹಸ್ಯ ಬಹಿರಂಗಗೊಳಿಸಿದ್ದಾರೆ. ಶಾರುಖ್ ಅವರು ಹುಟ್ಟಿದ್ದು ದೆಹಲಿಯಲ್ಲಲ್ಲ, ಕರ್ನಾಟಕದ ಬಂದರು ನಗರಿ ಮಂಗಳೂರಿನಲ್ಲಂತೆ! ಈ ಬಗ್ಗೆ ಭಾರಿ ಚರ್ಚೆ ನಡೆದಿದೆ. ಈ ಮಧ್ಯೆ ವಿಕಿಪೀಡಿಯ ನವೆಂಬರ್ 2, 1965ರಂದು ಶಾರುಖ್ ಹುಟ್ಟಿದ್ದು ಮಂಗಳೂರಿನಲ್ಲಿ ಎಂದು ಬದಲಾಯಿಸಿದೆ.

    ಆದರೆ, ಈವರೆಗೂ ತಿಳಿದಿರುವಂತೆ ಆನ್ ಲೈನ್ ನಲ್ಲಿ ಲಭ್ಯವಿರುವ ಶಾರುಖ್ ಆತ್ಮ ಚರಿತ್ರೆ ಹೇಳುವಂತೆ ದೆಹಲಿಯ ತಲವಾರ್ ನರ್ಸಿಂಗ್ ಹೋಂ ನಲ್ಲಿ ಶಾರುಖ್ ಜನನವಾಗಿತ್ತು. ಈ ಮುಂಚೆ ವಿಕಿ ಪೀಡಿಯದಲ್ಲೂ ಹಾಗೆ ಬರೆಯಲಾಗಿತ್ತು. ಆದರೆ, ಇತ್ತೀಚೆಗೆ ಮಂಗಳೂರು ಎಂದು ಬದಲಾಗಿದೆ. ಸುದ್ದಿ ಹರಡುತ್ತಿದ್ದಂತೆ ಕರಾವಳಿ ಭಾಗದ ಅಭಿಮಾನಿಗಳು ಶಾರುಖ್ ನಮ್ಮ ಕುಡ್ಲ ಹುಡುಗ ಎಂದು ಸಂಭ್ರಮದಿಂದ ಕುಣಿದಾಡಿದ್ದಾರೆ, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಈ ಬಗ್ಗೆ ಚರ್ಚೆ, ವಿಷಯ ಹಂಚಿಕೆ ನಡೆದಿದೆ.

    ಶಾರುಖ್ ಮಂಗಳೂರಿನಲ್ಲಿ ಹುಟ್ಟಲು ಹೇಗೆ ಸಾಧ್ಯ, ಬೇಕಾದರೆ ಬೆಂಗಳೂರು ಇರಬಹುದು ಎಂದು ಗಾರ್ಡನ್ ಸಿಟಿ ಅಭಿಮಾನಿಗಳು ವಾದಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಶಾರುಖ್ ತಾಯಿ ಹೈದರಾಬಾದ್ ಮೂಲದವರು ನಂತರ ಕೆಲಕಾಲ ಬೆಂಗಳೂರಿನಲಿ ನೆಲೆಸಿದ್ದರು. ತಾಯಿ(ಹೈದರಾಬಾದಿ) ತಂದೆ (ಪಠಾಣ್), ಅಜ್ಜಿ(ಕಾಶ್ಮೀರಿ), ಅಜ್ಜ(ಅಫ್ಘಾನಿ) ಮತ್ತೊಬ್ಬ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿದ್ದ ಅಜ್ಜ Janjua Rajput ಪಂಗಡಕ್ಕೆ ಸೇರಿದವರು ಎಂಬುದು ವಿಶೇಷ. ಶಾರುಖ್ ಅವರು ತಮ್ಮ ಹುಟ್ಟೂರಿನ ರಹಸ್ಯ ಹೊರಕೆಡವಿದ್ದು ಯಾವಾಗ? ಮಂಗಳೂರಿಗೂ ಶಾರುಖ್ ಗೂ ಇರುವ ನಂಟೇನು? ಮುಂದೆ ಓದಿ...

    ಮಂಗಳೂರು ದುರಂತದ ಸಮಯ

    ಮಂಗಳೂರು ದುರಂತದ ಸಮಯ

    ಮೇ 22, 2010ರಂದು ದುಬೈನಿಂದ ಹೊರಟ AIX 812 ವಿಮಾನ ಬಜ್ಪೆ ಬಳಿ ದುರಂತಕ್ಕೀಡಾದಾಗ ಶಾರುಖ್ ಟ್ವೀಟ್ ಮಾಡಿದ್ದು ಈ ರೀತಿ
    It's awful when lives end so suddenly. Prayers for the families whose loved ones passed away in the plane crash

    Evil and tragedies were made by God because only in the face of them our nobler (sic) thoughts crop up. Realization of mortality makes us good

    I was brought up in Mangalore. My grandfather was the engineer in chief for the Mangalore port. All my childhood pics are taken there.

    ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ

    ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ

    ನನ್ನ ತಾಯಿ ಮನೆಯವರ ಪೈಕಿ ಅಜ್ಜ ಮಾತ್ರ ಉಳಿದಿದ್ದರು ನನ್ನ ತಾಯಿ ಹಾಗೂ ಅತ್ತೆಯರು ಎಲ್ಲರೂ ಮಂಗಳೂರು ನಲ್ಲಿ ನೆಲೆಸಿದ್ದಾಗ ನಾನು ಕುಟುಂಬದ ಮೊದಲ ಗಂಡು ಮಗುವಾಗಿ ಜನಿಸಿದೆ. ಐದು ವರ್ಷ ತನಕ ಮಂಗಳೂರಿನಲ್ಲಿ ಅಜ್ಜಿ, ಅತ್ತೆಯರು ಬೆಳೆಸಿದರು, ಕನ್ನಡ ಬಲ್ಲ ಮನೆಕೆಲಸದವರೇ ನನ್ನ ಚಿಕ್ಕಂದಿನ ಆಟ ಪಾಠದ ಸಾಥಿಗಳಾಗಿದ್ದರು. ಹೈದರಾಬಾದಿನ ತೋಲಿ ಚೌಕಿಯಲ್ಲಿ ನನ್ನ ಅಮ್ಮನ ಅಪ್ಪನ ಮನೆ ಈಗಲೂ ಇದೆ ಎಂದು ಶಾರುಖ್ ಹೇಳಿದ್ದಾರೆ.

    ಶಾರುಖ್ ಅಪ್ಪ ಹಾಗೂ ಅಮ್ಮನ ಪ್ರೇಮ ಕಥೆ ಕೂಡಾ ಸ್ವಾರಸ್ಯವಾಗಿದೆ. ಅದನ್ನು ಮುಂದೆ ಓದಿ...

    ಮಹಮ್ಮದ್ ಹಾಗೂ ಲತೀಫ್ ಫಾತೀಮಾ ಭೇಟಿ

    ಮಹಮ್ಮದ್ ಹಾಗೂ ಲತೀಫ್ ಫಾತೀಮಾ ಭೇಟಿ

    ಶಾರುಖ್ ಅಪ್ಪ ತಾಜ್ ಮಹಮ್ಮದ್ ಖಾನ್ ಬ್ರಿಟಿಷ್ ಇಂಡಿಯಾದ ಪೇಶಾವರ ಮೂಲದ ಪಠಾಣ, ಅವರ ತಂದೆ ಅಫ್ಘಾನ್ ಮೂಲದವರು.

    ಶಾರುಖ್ ತಾಯಿ ಲತೀಫ್ ಫಾತೀಮಾ ಅವರನ್ನು ಇಂಡಿಯನ್ ನ್ಯಾಷನಲ್ ಆರ್ಮಿಯ ಮೇಜರ್ ಜನರಲ್ ಶಾ ನವಾಜ್ ಖಾನ್ ದತ್ತು ತೆಗೆದುಕೊಂಡಿದ್ದರು. ಶಾರುಖ್ 15 ವರ್ಷ ಇದ್ದಾಗ ತಂದೆ ಕ್ಯಾನ್ಸರ್ ಗೆ ಬಲಿಯಾದರೆ, ತಾಯಿ 1990ರಲ್ಲಿ ಅಸುನೀಗಿದರು.ಶಾರುಖ್ ಅವರನ್ನು ಅಕ್ಕ ಶೆಹನಾಜ್ ಹಾಗೂ ಅಮ್ಮನ ಕಡೆ ಸಂಬಂಧಿಕರು ಬೆಳೆಸಿದರು. ತಾಜ್ ಮಹಮ್ಮದ್ ಹಾಗೂ ಲತೀಫ್ ಫಾತೀಮಾ ಭೇಟಿ ಆಗಿದ್ದು ದೆಹಲಿಯಲ್ಲಿ ಅದು ಅಪಘಾತದ ಸನ್ನಿವೇಶದಲ್ಲಂತೆ..
    ಶಾರುಖ್ ಅಮ್ಮನ ಕಥೆ

    ಶಾರುಖ್ ಅಮ್ಮನ ಕಥೆ

    ಶಾರುಖ್ ಅಮ್ಮನ ಅಪ್ಪನಿಗೆ ನಾಲ್ಕು ಮಕ್ಕಳು, ಶಾರುಖ್ ತಾಯಿ ದೊಡ್ಡವರು. ಒಮ್ಮೆ ದೆಹಲಿಗೆ ಭೇಟಿ ಕೊಟ್ಟಿದ್ದರು. ಆಗ ಇಂಡಿಯಾ ಗೇಟ್ ಬಳಿ ಕಂಬವೊಂದಿತ್ತು. ಕಾರಿನಲ್ಲಿ ಕುಳಿತು ಎಲ್ಲರೂ ಐಸ್ ಕ್ರೀಮ್ ತಿನ್ನುತ್ತಿದ್ದರು. ನಂತರ ಅಲ್ಲಿಂದ ಚಲಿಸುವಾಗ ಕಾರು ತಿರುಗಿಸಲು ಹೋಗಿ ಕಂಬಕ್ಕೆ ಗುದ್ದಿದೆ.

    ಇದೇ ಸಂದರ್ಭದಲ್ಲಿ ಜನರಲ್ ಶಹನವಾಜ್(ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ಯೋಧರಲ್ಲಿ ಒಬ್ಬರು, ಮಂಗಲ್, ದಿಲ್ಲೋನ್ ಹಾಗೂ ಶಹನಾವಜ್) ಅವರ ಕಸಿನ್ ಬ್ರದರ್ ಆಗಿದ್ದ ನನ್ನ ಅಪ್ಪ(ಪೇಶಾವರ ಪಠಾಣ್) ಅಲ್ಲೇ ವಾಯು ವಿಹಾರಕ್ಕೆ ಆಗಮಿಸಿದ್ದರು. ಕಾರು ತಿರುಗಿ ಕಂಬಕ್ಕೆ ಗುದ್ದಿ ಪಲ್ಟಿ ಹೊಡೆದಿದ್ದನ್ನು ನೋಡಿ ಅಲ್ಲಿಗೆ ಧಾವಿಸಿದ್ದಾರೆ.. ನಂತರ..

    ದೆಹಲಿ ಘಟನೆ

    ದೆಹಲಿ ಘಟನೆ

    ಕಾರಿನಲ್ಲಿದ್ದವರನ್ನು ಹೊರಕ್ಕೆ ಎಳೆದು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆ ನಂತರ ನನ್ನ ಅಜ್ಜ, ಅಮ್ಮನ ಮೂವರು ತಂಗಿಯರು ಹುಷಾರಾದರು. ಆದರೆ, ಅಮ್ಮನಿಗೆ ನೆನಪಿನ ಶಕ್ತಿ ಕಳೆದುಹೋಯಿತು. ರಕ್ತದ ಅವಶ್ಯಕತೆ ಹೆಚ್ಚಾಯಿತು.

    ಪುಣ್ಯಕ್ಕೆ ನನ್ನ ಅಪ್ಪನ ರಕ್ತದ ಗುಂಪು ಅದೇ ಆಗಿದ್ದರಿಂದ ಅಪ್ಪ ರಕ್ತ ನೀಡಿದ್ದಾರೆ. ದೆಹಲಿಯಲ್ಲಿ ಈ ಘಟನೆ ನಡೆಯುವಾಗ ಬೆಂಗಳೂರಿನಲ್ಲಿ ನೆಲೆಸಿದ್ದ ನನ್ನ ಅಮ್ಮನ ತಾಯಿಗೆ ವಿಷಯ ತಿಳಿಸಲು ಅಜ್ಜ ಹೆದರಿದ್ದಾರೆ. ಅಜ್ಜಿ ಆ ಸಮಯದಲ್ಲಿ ಗರ್ಭಿಣಿಯಾಗಿದ್ದರಂತೆ.

    ದೆಹಲಿಯಲ್ಲಿ ಕಾರು ಅಪಘಾತ, ಅಮ್ಮನಿಗೆ ನೆನಪಿನ ಶಕ್ತಿ ಹೋಗಿದ್ದು ಎಲ್ಲಾ ವಿಷಯವನ್ನು ಅಜ್ಜಿಗೆ ತಿಳಿಸುವಂತೆ ಪಠಾಣರಾದ ನನ್ನ ತಂದೆಗೆ ಅಜ್ಜ ಕೇಳಿಕೊಂಡಿದ್ದಾರೆ. ಅಪ್ಪ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದು ಅಜ್ಜನಿಗೆ ಮೆಚ್ಚುಗೆಯಾಗಿದೆ. ಮುಂದೆ ಓದಿ...

    ಮಂಗಳೂರಿಗೆ ಶಾರುಖ್

    ಮಂಗಳೂರಿಗೆ ಶಾರುಖ್

    ನಂತರ ದೆಹಲಿಯಿಂದ ಬೆಂಗಳೂರಿಗೆ ಅಮ್ಮನ ಕುಟುಂಬ ಬಂದ ಮೇಲೆ ಅಪ್ಪ ದಿನನಿತ್ಯ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರಂತೆ. ಈ ನಡುವೆ ಅಮ್ಮನನ್ನು ಇಷ್ಟಪಟ್ಟ ಅಪ್ಪ, ಮದುವೆಯಾಗುವುದಾಗಿ ಅಜ್ಜನಿಗೆ ಹೇಳಿದ್ದಾರೆ. ನನ್ನ ಅಪ್ಪನನ್ನು ಮೊದಲಿನಿಂದಲೂ ಬಲ್ಲವರಾದ್ದರಿಂದ ನನ್ನಪ್ಪನಿಗೆ ಅಜ್ಜ ಓಕೆ ಎಂದಿದ್ದಾರೆ. ನಂತರ ಮದುವೆಯಾಗಿದೆ.

    ಅಜ್ಜ, ಅಮ್ಮನ ಜೊತೆ ಕುಟುಂಬ ಮಂಗಳೂರಿಗೆ ಬಂದಿದೆ. ನಾನು ಅಲ್ಲೇ ಹುಟ್ಟಿ ಐದು ವರ್ಷ ತನಕ ಬೆಳೆದೆ..

    ನಂತರ ದೆಹಲಿಯ ರಾಜೇಂದ್ರ ನಗರ ಸೈಂಟ್ ಕೊಲಂಬಿಯಾ ಸ್ಕೂಲ್, ಹಂಸರಾಜ್ ಕಾಲೇಜ್, ಡಿಗ್ರಿ ಸಂಪಾದನೆ, ತಾಯಿ ಮರಣನಂತರ ಮುಂಬೈನಲ್ಲಿ ವಾಸ. 1991ರಲ್ಲಿ ಗೌರಿ ಚಿಬ್ಬೆರ್ ಜೊತೆ ಮದುವೆ ಈಗ ಆರ್ಯಾನ್, ಸುಹಾನ ಹಾಗೂ ಅಬ್ ರಾಮ್ ನನ್ನ ಮಕ್ಕಳು ಎಂದು ಶಾರುಖ್ ಹೇಳಿಕೊಂಡಿದ್ದಾರೆ.

    English summary
    Bollywood King Khan Shah Rukh in an interview to Times of India, has revealed that he was born in Mangalore and also spent his childhood there. Even Wikipedia has corrected by changing his birth place from New Delhi to Mangalore.
    Monday, August 5, 2013, 18:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X