»   » ರೈನಾ ಜತೆ ಶ್ರುತಿ ಹಾಸನ್ 'ಲವ್' ಇನ್ನಿಂಗ್ಸ್?

ರೈನಾ ಜತೆ ಶ್ರುತಿ ಹಾಸನ್ 'ಲವ್' ಇನ್ನಿಂಗ್ಸ್?

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಮಲ್ ಹಾಸನ್ ಅವರ ಪುತ್ರಿ ಗಾಯಕಿ, ನಟಿ ಶ್ರುತಿ ಹಾಸನ್ ಸದಾ ಒಂದಿಲ್ಲೊಂದು ಗಾಸಿಪ್ ಗೆ ಸಿಲುಕಿಕೊಳ್ಳುವ ಶ್ರುತಿ ಹಾಸನ್ ಅವರು ಈಗ ಕ್ರಿಕೆಟರ್ ಒಬ್ಬರನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮುಂಬೈ ಮಿರರ್ ಮೊದಲಿಗೆ ಸುದ್ದಿ ಹಾಕಿತ್ತು. ಇದು ಕಾಡ್ಗಿಚ್ಚಿಗಿಂತ ವೇಗವಾಗಿ ಎಲ್ಲೆಡೆ ಹರಡಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಸುರೇಶ್ ರೈನಾ ನಿದ್ದೆಯನ್ನು ಕೆಡಸಿತ್ತು. ನನ್ನ ಹಾಗೂ ಶ್ರುತಿ ನಡುವೆ ಅಂಥ ಸಂಬಂಧವಿಲ್ಲ ಎಂದು ರೈನಾ ಸ್ಪಷ್ಟನೆ ನೀಡಿದ್ದಾನೆ. ಅದರೆ, ಸುದ್ದಿ ಹಬ್ಬಿದ್ದು ಹೇಗೆ ಮುಂದೆ ಓದಿ...

ಶ್ರುತಿ ಹಾಸನ್ ಹಾಗೂ ಟೀಂ ಇಂಡಿಯಾ ಆಲ್ ರೌಂಡರ್ ಸುರೇಶ್ ರೈನಾ ನಡುವೆ 'ಏನೋ ಇದೆ' ಎಂಬ ಸುದ್ದಿ ಹಬ್ಬಲು ಕಾರಣ ಇಂಡಿಯನ್ ಪ್ರಿಮಿಯರ್ ಲೀಗ್. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಸುರೇಶ್ ರೈನಾ ಜತೆ ತಂಡದ ಪರ ಪ್ರಚಾರ ನಡೆಸಲು ಬಂದ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಳು. [ರೈನಾ ಏನಂತಾ ಟ್ವೀಟ್ ಮಾಡಿದ್ರು]

ಚೆನ್ನೈ ಪರ ಪ್ರಚಾರಕ್ಕೆ ಶ್ರುತಿ ಬಂದಾಗಲೆಲ್ಲಾ ರೈನಾ ಭರ್ಜರಿ ಪ್ರದರ್ಶನ ನೀಡುತ್ತಿದ್ದದ್ದು ಕಾಕತಾಳೀಯವಾಗಿತ್ತು. ಹೀಗಾಗಿ ಗೆಳತಿ ಶ್ರುತಿ ಇರುವಿಕೆ ಅದೃಷ್ಟ ಇರುತ್ತದೆ ಎಂದು ರೈನಾ ಕೂಡಾ ನಂಬಿದ್ದಾರಂತೆ. ಇದೆಲ್ಲ ಕಳೆದ ವರ್ಷದ ಮಾತು. 2014ರಲ್ಲಿ ಶ್ರುತಿ ಕೂಡಾ ಶೂಟಿಂಗ್ ನಲ್ಲಿ ನಿರತರಾಗಿದ್ದರೂ ಆದರೂ ರೈನಾ ಚೆನ್ನಾಗೆ ಅಡುತ್ತಿದ್ದಾರೆ, ಬಾಂಗ್ಲಾದೇಶ ಟೂರ್ನಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ ಕೂಡಾ.

ಈ ಬಗ್ಗೆ ಚರ್ಚಿಸುವುದು ಇಷ್ಟವಿಲ್ಲವಂತೆ
  

ಈ ಬಗ್ಗೆ ಚರ್ಚಿಸುವುದು ಇಷ್ಟವಿಲ್ಲವಂತೆ

ಇಬ್ಬರ ನಡುವೆ ಪ್ರೀತಿ ಗಾಢವಾಗಿದ್ದು, ಸಾರ್ವಜನಿಕವಾಗಿ ಈ ಬಗ್ಗೆ ಚರ್ಚಿಸುವುದು ಇಬ್ಬರಿಗೂ ಇಷ್ಟವಿಲ್ಲ ಎಂದು ತಿಳಿದು ಬಂದಿದೆ. ಜೂನ್ ಮೊದಲ ವಾರ ಇಬ್ಬರು ಭೇಟಿಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಈ ನಡುವೆ ರೈನಾ ಹಾಗೂ ಶ್ರುತಿ ಕೇವಲ ಒಳ್ಳೆ ಸ್ನೇಹಿತರು ಮಾತ್ರ, ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಪುತ್ರಿ ಪೂರ್ಣಾ ಜತೆ ರೈನಾ ಡೇಟಿಂಗ್ ಮಾಡುತ್ತಿದ್ದಾನೆ ಎನ್ನಲಾಗಿದೆ.

  

ಪೊಲ್ಲಾಚಿಯಲ್ಲಿ ಶೂಟಿಂಗ್ ನಿರತ ಶ್ರುತಿ

ಪೊಲ್ಲಾಚಿಯಲ್ಲಿ ಶೂಟಿಂಗ್ ನಿರತ ಶ್ರುತಿ ಟ್ವೀಟ್ ಮಾಡಿ ಮುಂಬೈಗೆ ಹೋಗಿ ನನ್ನ ನೆಚ್ಚಿನ ಮಟನ್ ತಿನ್ನಬೇಕು ಎಂದಿದ್ದಾರೆ.

ಶ್ರುತಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಾಳಾ?
  

ಶ್ರುತಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಾಳಾ?

ಶ್ರುತಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ ಎಂಬ ಸುದ್ದಿ ಸತ್ತು ಸುಮಾರು ದಿನವಾಗಿದೆ. ಉತ್ತಮ ಗಾಯಕಿಯಾಗಿದ್ದ ಶ್ರುತಿ ಕಾಲಿಟ್ಟ ಕಡೆಯೆಲ್ಲ ಚಿತ್ರಗಳು ನಿರಾಶಾದಾಯಕ ಪ್ರದರ್ಶನ ತೋರಿದ್ದು ಆಕೆಗೂ ತಲೆ ನೋವಾಗಿತ್ತು, ಆದರೆ, ಅಲ್ಲೊಂದು ಗಬ್ಬರ್ ಸಿಂಗ್ ಇಲ್ಲೊಂದು ಬಲುಪು ಹೀಗೆ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡ ಪ್ರತಿಭಾವಂತೆ.

1992ರಲ್ಲೇ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ
  

1992ರಲ್ಲೇ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ

ದೇವರ್ ಮಗನ್ ಚಿತ್ರದ 'ಪೊಟ್ರಿ ಪಾಡಡಿ ಪೊನ್ನೆ ಹಾಡು ನೆನಪಿರಬೇಕಲ್ಲ. ಇಳಯರಾಜ ಸಂಗೀತ ಸಂಯೋಜನೆಯ ಗೀತೆಗೆ ದನಿ ನೀಡುವ ಮೂಲಕ 1992ರಲ್ಲೇ ಚಿತ್ರರಂಗಕ್ಕೆ ಅಧಿಕೃತವಾಗಿ ಶ್ರುತಿ ಎಂಟ್ರಿ ಕೊಟ್ಟವರು. ಅಪ್ಪ ಕಮಲ್ ಅಮ್ಮ ಸಾರಿಕಾ ಅವರ ನೆರಳಿಲ್ಲದೆ ಚಿತ್ರರಂಗದಲ್ಲಿ ಗಾಯಕಿಯಾಗಿ ಒಳ್ಳೆ ಹೆಸರು ಗಳಿಸಿದವರು.

ಶ್ರುತಿಗೆ ಲಕ್ ಇನ್ನೂ ಕುದುರಿಲ್ಲ
  

ಶ್ರುತಿಗೆ ಲಕ್ ಇನ್ನೂ ಕುದುರಿಲ್ಲ

ತೆಳ್ಳಗೆ ಬೆಳ್ಳಗೆ ಅಮ್ಮನ ಹೋಲಿಕೆ ಇರುವ ಶ್ರುತಿಗೆ ನಟನೆ ಹುಚ್ಚು ಹಿಡಿದಿದ್ದೆ ತಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದಳು. ಅನಗನಗ ಓ ಧೀರುಡು ಫ್ಯಾಂಟಸಿ ಸಿನಿಮಾಗೆ ಫಿಲಂಫೇರ್ ಬಂದರೂ ಚಿತ್ರ ಓಡಲಿಲ್ಲ. ಹಿಂದಿಯಲ್ಲಿ ಎರಡು ಚಿತ್ರದಲ್ಲಿ ನಟಿಸಿದರೂ 'ಲಕ್' ಕುದುರಲಿಲ್ಲ. ಹೀಗಾಗಿ ಪ್ರಚಾರಕ್ಕಾಗಿ ಆಗಾಗ ಆಕೆ ಮ್ಯಾನೇಜರ್ ಗಳು, ಅಭಿಮಾನಿಗಳು ಗಾಸಿಪ್ ಅಂಕಣಕ್ಕೆ ಆಕೆಯನ್ನು ದೂಡಲೇಬೇಕಾದ ಅನಿವಾರ್ಯತೆ ಇದ್ದೇ ಇದೆ.

ಶ್ರುತಿ ಈ ರೀತಿ ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
  

ಶ್ರುತಿ ಈ ರೀತಿ ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

ಕಡೆಗೆ ಸೂರ್ಯ ಜೊತೆ 7 ಆಮ್ ಅರಿವು ಚಿತ್ರದಲ್ಲಿ ನಟಿಸಿದರೂ ಏಳಿಗೆಯಾಗಲಿಲ್ಲ. ಗಬ್ಬರ್ ಸಿಂಗ್ ಓಡಿದರೂ ಪವನ್ ಕಲ್ಯಾಣ್ ನಿಂದಾಗಿ, 3 ಚಿತ್ರ ಸದ್ದು ಮಾಡಿದ್ದು ಕೊಲವೆರಿ ಡಿ ಹಾಡಿಗಾಗಿ..ಶ್ರುತಿ ಕಾಲಿಟ್ಟ ಕೂಡಲೇ ಚಿತ್ರ ಢಮಾರ್ ಆಗಲೇ ಬೇಕು ಎಂಬ ಸಿದ್ಧಾಂತವಿಲ್ಲ. ಶ್ರುತಿ ಇದ್ದರೆ ಮಾತ್ರ ರೈನಾ ಚೆನ್ನಾಗಿ ಆಡುತ್ತಾರೆ ಎಂಬುದರಲ್ಲಿ ಅರ್ಥವಿಲ್ಲ

ಈ ಹಿಂದೆ ಸಿದ್ದಾರ್ಥ್ ಜತೆ ಕೂಡಾ ಆಕೆ ಹೆಸರು ಕೇಳಿ ಬಂದಿತ್ತು. ಇಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರೆ ಅದೇ ಪ್ರೇಮ ಪ್ರೀತಿ ಎಂದು ಸುದ್ದಿ ಹಬ್ಬಿಸಲಾಗಿತ್ತು. ಹೀಗಾಗಿ ಶ್ರುತಿ ಸದ್ಯಕ್ಕೆ ಈ ರೀತಿ ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಕೆರಿಯರ್ ಬಗ್ಗೆ ಮಾತ್ರ ಚಿಂತಿಸಲು ನಿರ್ಧರಿಸಿದ್ದಾಳೆ ಎಂಬ ಸುದ್ದಿಯೂ ಇದೆ.

 

English summary
Shruti Haasan - daughter of Kamal Haasan, is in a relationship with Indian cricketer Suresh Raina, as reported in the Mumbai Mirror.
Please Wait while comments are loading...

Kannada Photos

Go to : More Photos