»   » ಶಿವಣ್ಣ-ದೀಪಣ್ಣ ಫ್ಯಾನ್ಸ್ ನಡುವಿನ ಟ್ವೀಟ್ ವಾರ್

ಶಿವಣ್ಣ-ದೀಪಣ್ಣ ಫ್ಯಾನ್ಸ್ ನಡುವಿನ ಟ್ವೀಟ್ ವಾರ್

Posted by:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಲಕ್ಕಿಸ್ಟಾರ್ ರಮ್ಯಾ ಅಭಿನಯಿಸಿರು ಆರ್ಯನ್ ಚಿತ್ರ ಬಿಡುಗಡೆ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಹಾಕಿದೆ. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಅವರ ವಾಯ್ಸ್ ಓವರ್ ವಿಷಯ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸ್ವಲ್ಪ ಓವರ್ ಆಗಿ ಬೆಳೆಯುತ್ತಿದೆ. ಆರ್ಯನ್ ಚಿತ್ರಕ್ಕೆ 'ದನಿ' ನೀಡಿದ್ದರ ಬಗ್ಗೆ ಕಿಚ್ಚ ಸುದೀಪ್ ಅವರು ನೀಡಿದ ಟ್ವೀಟ್ ಸ್ಪಷ್ಟನೆಗೆ ಶಿವರಾಜ್ ಕುಮಾರ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

ಈ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಡಬ್ಬಿಂಗ್ ಮಾಡಿರೋದು ಸಾಕಷ್ಟು ಸುದ್ದಿಯಾಗಿದೆ. ಆರ್ಯನ್ ಚಿತ್ರದ ಪಾತ್ರ ಪರಿಚಯವನ್ನು ಸುದೀಪ್ ಮಾಡುತ್ತಿದ್ದಾರೆ. ಈ ಮೂಲಕ ಶಿವಣ್ಣ ಹಾಗೂ ಸುದೀಪ್ ಒಂದಾಗುತ್ತಿದ್ದಾರೆ. ಇಬ್ಬರ ನಡುವೆ ವೈಮನಸ್ಯ ತಿಳಿಗೊಂಡಿದೆ ಇದು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಎಂಬ ಸುದ್ದಿ ಹಬ್ಬಿತ್ತು. [ಆರ್ಯನ್ ಚಿತ್ರದಲ್ಲಿ ಒಂದಾದ ಶಿವಣ್ಣ, ಕಿಚ್ಚ ಸುದೀಪ್]

ಆದರೆ, ಈ ಸಂದರ್ಭದಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುದೀಪ್ ಅವರು 'ನಾನು ದಿವಂಗತ ಡಿ.ರಾಜೇಂದ್ರಬಾಬು ಅವರ ಮೇಲಿನ ಗೌರವಕ್ಕಾಗಿ ಆರ್ಯನ್ ಚಿತ್ರಕ್ಕೆ ಡಬ್ ಮಾಡಿದ್ದೇನೆ ಅದು ಬಿಟ್ರೆ ಇನ್ಯಾವುದೇ ಕಾರಣವಿಲ್ಲ.. ಯಾವುದೇ ಕಮರ್ಶಿಯಲ್ ಉದ್ದೇಶಕ್ಕಾಗಲೀ.. ಇನ್ಯಾರದ್ದೋ ಕಾರಣಕ್ಕಾಗಲೀ ನಾನು ವಾಯ್ಸ್ ನೀಡಿಲ್ಲ' ಎಂದು ಟ್ವೀಟ್ ಮಾಡಿರುವುದು ಶಿವಣ್ಣನ ಅಭಿಮಾನಿಗಳನ್ನು ಕೆರಳಿಸಿದೆ. ಶಿವಣ್ಣ-ದೀಪಣ್ಣ ಫ್ಯಾನ್ಸ್ ನಡುವಿನ ಟ್ವೀಟ್ ವಾರ್ ಮುಂದುವರೆದಿದ್ದು, ಸುದೀಪ್ ಕೂಡಾ ಕೆಲವು ಟ್ವೀಟ್ ಗೆ ಉತ್ತರಿಸಿದ್ದಾರೆ. ಟ್ವೀಟ್ ಗಳತ್ತ ಒಂದು ನೋಟ ಇಲ್ಲಿದೆ... [ಆರ್ಯನ್ ವಿಡಿಯೋ; ರಮ್ಯಾ-ಶಿವರಾಜ್ ಸಕತ್ ಸ್ಟೆಪ್ಸ್]

ಕಿಚ್ಚ ಸುದೀಪ್ ಪಾತ್ರ ಪರಿಚಯಕ್ಕೆ ಧ್ವನಿ
  

ಕಿಚ್ಚ ಸುದೀಪ್ ಪಾತ್ರ ಪರಿಚಯಕ್ಕೆ ಧ್ವನಿ

ಕಿಚ್ಚ ಸುದೀಪ್ ಪಾತ್ರ ಪರಿಚಯಕ್ಕೆ ಧ್ವನಿ ನೀಡುತ್ತಿರುವುದು ಇದೇ ಮೊದಲೇನಲ್ಲ. ದರ್ಶನ್ ನಾಯಕರಾಗಿದ್ದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮತ್ತು'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಗಳಿಗೂ ಧ್ವನಿ ನೀಡಿದ್ದರು. ಸುದೀಪ್ ಧ್ವನಿ ನೀಡಿದ್ದ ಆ ಎರಡೂ ಸಿನಿಮಾಗಳೂ ಸೂಪರ್ ಹಿಟ್ ಆಗಿದ್ದವು. 'ಆರ್ಯನ್, ಚಿತ್ರ ಸಹ ಅದೇ ಹಾದಿಯಲ್ಲಿ ಸಾಗುತ್ತಾ ಎಂಬುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ.

  

ಕಿಚ್ಚ ಸುದೀಪ್ ಟ್ವೀಟ್ ವಿವಾದಕ್ಕೆ ಕಾರಣವಾಯ್ತು

ಕಿಚ್ಚ ಸುದೀಪ್ ಟ್ವೀಟ್ ವಿವಾದಕ್ಕೆ ಕಾರಣವಾಯ್ತು. ಆದರೆ, ನೋ ಸೆಕೆಂಡ್ ರೀಸನ್ ಎಂಬ ವಾಕ್ಯದ ಬಗ್ಗೆ ಬೇರೆ ಅರ್ಥ ಹುಡುಕಬೇಡಿ ಎಂದು ಸುದೀಪ್ ಮನವಿ ಮಾಡಿದ್ದು ಫ್ಯಾನ್ಸ್ ಕಿವಿಗೆ ಕೇಳಿಸದೇ ಹೋಯಿತು.

ಆರ್ಯನ್ ಎಲ್ಲಾ ರೀತಿಯಲ್ಲೂ ವಿಶೇಷ ಚಿತ್ರ
  

ಆರ್ಯನ್ ಎಲ್ಲಾ ರೀತಿಯಲ್ಲೂ ವಿಶೇಷ ಚಿತ್ರ

* ಖ್ಯಾತ ನಿರ್ದೇಶಕ ಡಿ.ರಾಜೇಂದ್ರಬಾಬು ನಿರ್ದೇಶಿಸಿದ ಕಟ್ಟಕಡೆಯ ಈ ಚಿತ್ರ ಇದಾಗಿದೆ.
* ಇದೇ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕ್ರೀಡಾ ತರಬೇತುದಾರನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದಲ್ಲಿ ಅವರದು ಅಥ್ಲೀಟ್ ಕೋಚ್ ಪಾತ್ರ.
* ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣದ ಬಳಿಕ ಗುರುದತ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರ ಹೆಸರಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.
* ಚುನಾವಣೆ ಸೋಲಿನ ನಂತರ ರಮ್ಯಾ ಅವರ ಕಮ್ ಬ್ಯಾಕ್ ಚಿತ್ರ ಇದಾಗಿದ್ದು, ಚಿತ್ರದ ಯಶಸ್ಸಿನ ಮೇಲೆ ಸಿನಿ ಭವಿಷ್ಯ ನಿಂತಿದೆ.
* ಕಿಚ್ಚ ಸುದೀಪ್ ವಾಯ್ಸ್ ಓವರ್ ನೀಡಿರುವ ಚಿತ್ರ ಇದಾಗಿದೆ.

  

'ಶಿವಣ್ಣ ಏನು ಸುದೀಪ್ ರಂತೆ ಊಸರವಳ್ಳಿಯಲ್ಲ'

'ಶಿವಣ್ಣ ಏನು ಸುದೀಪ್ ರಂತೆ ಊಸರವಳ್ಳಿಯಲ್ಲ' ಚಿತ್ರರಂಗದ ಅತ್ಯಂತ ಕೆಟ್ಟ ವ್ಯಕ್ತಿ ಎಂದು ಫ್ಯಾನ್ಸ್ ಟ್ವೀಟ್

  

ಸುದೀಪ್ ಸಿಲ್ಲಿ ವಿಷಯಕ್ಕೆ ಕಿತ್ತಾಡಲ್ಲ

ನಮ್ಮ ಅಣ್ಣ ಸುದೀಪ್ ಸಿಲ್ಲಿ ವಿಷಯಕ್ಕೆ ಕಿತ್ತಾಡಲ್ಲ ಎಂದು ಸುದೀಪ್ ಫ್ಯಾನ್ಸ್ ನಿಂದ ಪ್ರತ್ಯುತ್ತರ

ಶಿವಣ್ಣ ಕೂಡಾ ಸುದೀಪ್ ಚಿತ್ರಕ್ಕೆ ವಾಯ್ಸ್ ಓವರ್
  

ಶಿವಣ್ಣ ಕೂಡಾ ಸುದೀಪ್ ಚಿತ್ರಕ್ಕೆ ವಾಯ್ಸ್ ಓವರ್

ಕಿಚ್ಚ ಸುದೀಪ್ ಅಭಿನಯದ ನಂ.73 ಶಾಂತಿ ನಿವಾಸ ಚಿತ್ರದ ಆರಂಭದ ದೃಶ್ಯದಲ್ಲಿ ಟೈಟಲ್ ಕಾರ್ಡ್ ಜೊತೆ ಪಾತ್ರವರ್ಗ ಪರಿಚಯ ಮಾಡಿಕೊಟ್ಟಿದ್ದರು.

  

ದಯವಿಟ್ಟು ನನ್ನ ತಾಳ್ಮೆ ಕೆದಕಬೇಡಿ

ದಯವಿಟ್ಟು ನನ್ನ ತಾಳ್ಮೆ ಕೆದಕಬೇಡಿ. ಯಾಕೆ ಸುಮ್ಮನೆ ಕಡ್ಡಿಯನ್ನು ಗುಡ್ಡ ಮಾಡುತ್ತೀರಾ ಎಂದು ಸುದೀಪ್ ಟ್ವೀಟ್

ಡಬ್ಬಿಂಗ್ ವಿರೋಧಿ ಪ್ರತಿಭಟನೆಯಲ್ಲಿ ಕಿಡಿ
  

ಡಬ್ಬಿಂಗ್ ವಿರೋಧಿ ಪ್ರತಿಭಟನೆಯಲ್ಲಿ ಕಿಡಿ

ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರರಂಗದ ಪ್ರತಿಭಟನೆಯಲ್ಲಿ ಸುದೀಪ್ ಮತ್ತು ದರ್ಶನ್ ಹೀಗೆ ಬಂದು ಹಾಗೆ ಹೋಗಿದ್ದರು. ಅಲ್ಲದೇ, ಪ್ರತಿಭಟನೆಯ ವೇಳೆ ಮಾತನಾಡುತ್ತಿದ್ದ ಸುದೀಪ್ ಪ್ರತಿಭಟನೆಗೆ ಇನ್ನಷ್ಟು ಜನ ಸೇರಿಸಬಹುದಾಗಿತ್ತು ಎಂದಿದ್ದರು. ಅದೇ ವೇದಿಕೆಯಲ್ಲಿದ್ದ ಶಿವರಾಜ್ ಕುಮಾರ್ ಅವರು ನಂತರ ಮಾತನಾಡಿ ನೂರು ಜನ ಬಂದರೂ ಪ್ರತಿಭಟನೆಯೇ, ಸಾವಿರ ಜನ ಬಂದರೂ ಒಂದೇ ಒಬ್ಬೇ ಒಬ್ಬ ಇದ್ದರೂ ಇದು ಪ್ರತಿಭಟನೆಯೇ ಎಂದು ತಿರುಗೇಟು ನೀಡಿದ್ದರು.

  

ಸುದೀಪ್ ರಿಂದ ಮತ್ತೊಂದು ಸ್ಪಷ್ಟನೆ ಟ್ವೀಟ್

ಯಾವುದೇ ಕಮರ್ಶಿಯಲ್ ಉದ್ದೇಶಕ್ಕಾಗಲೀ.. ಇನ್ಯಾರದ್ದೋ ಕಾರಣಕ್ಕಾಗಲೀ ನಾನು ವಾಯ್ಸ್ ನೀಡಿಲ್ಲ ಎಂದು ಸುದೀಪ್ ರಿಂದ ಮತ್ತೊಂದು ಸ್ಪಷ್ಟನೆ ಟ್ವೀಟ್

  

ಶಿವರಾಜ್ ಅಭಿಮಾನಿ ಶ್ರೇಯಸ್ ಟ್ವೀಟ್

ಶಿವರಾಜ್ ಅಭಿಮಾನಿ ಶ್ರೇಯಸ್ ಟ್ವೀಟ್ ಮಾಡಿದ್ದು ಹೀಗೆ

  

ನೀವು ಇಬ್ಬರೂ ಒಂದಾಗಬೇಕು

ನೀವು ಇಬ್ಬರೂ ಒಂದಾಗಬೇಕು. ನಿಮ್ಮ ನಿಮ್ಮ ಆಹಂಕಾರ, ದ್ವೇಷಗಳನ್ನು ಮರೆತು ಕನ್ನಡ ಚಿತ್ರರಂಗಕ್ಕಾಗಿ ಒಂದಾಗಬೇಕು ಎಂದು ಅಭಿಮಾನಿ ಟ್ವೀಟ್

English summary
In a surprising move Kichcha Sudeep has given commentary for Shivarajkumar's upcoming 'Aryan' movie. Later Sudeep clarified he lended his voice as a tribute to late director D Rajendra Babu which irked Shivarajkumar fans who began bashing with tweets.
Please Wait while comments are loading...

Kannada Photos

Go to : More Photos