»   » 'ಕೃಷ್ಣ ಲೀಲಾ' ರೀಮೇಕ್ ಚಿತ್ರಕ್ಕೆ ತಮಿಳು ನಟ ಜೀವಾ?

'ಕೃಷ್ಣ ಲೀಲಾ' ರೀಮೇಕ್ ಚಿತ್ರಕ್ಕೆ ತಮಿಳು ನಟ ಜೀವಾ?

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ಕೃಷ್ಣ ಎಂದೇ ಪ್ರೀತಿಯಿಂದ ಕರೆಸಿಕೊಂಡಿರುವ ಅಜೇಯ್ ರಾವ್ ಅವರ 'ಕೃಷ್ಣ ಲೀಲಾ' ಚಿತ್ರದ ರೀಮೇಕ್ ರೈಟ್ಸ್ ಗೆ ತೆಲುಗು, ತಮಿಳಿನಿಂದ ಭಾರಿ ಬೇಡಿಕೆ ಬಂದಿದೆ. ತಮಿಳು ಚಿತ್ರಗಳ ನಿರ್ಮಾಪಕ ಆರ್ ಬಿ ಚೌದರಿ ಅವರು 'ಕೃಷ್ಣ ಲೀಲಾ' ಚಿತ್ರವನ್ನು ವೀಕ್ಷಿಸಿ ರೀಮೇಕ್ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆ.

ಕೃಷ್ಣ ಲೀಲಾ ಚಿತ್ರವನ್ನು ತಮಿಳು, ತೆಲುಗಿನಲ್ಲಿ ನಿರ್ಮಿಸಲು ಆರ್ ಬಿ ಚೌದರಿ ಉತ್ಸಾಹ ತೋರಿದ್ದು, ಈ ಚಿತ್ರಕ್ಕೆ ತಮ್ಮ ಪುತ್ರ ಜೀವಾ ಅವರನ್ನೇ ನಾಯಕ ನಟನನ್ನಾಗಿ ಮಾಡಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು. ನಟ ಜೀವಾ ಅವರ ಚಿತ್ರಗಳಿಗೆ ತಮಿಳು ಮತ್ತು ತೆಲುಗಿನಲ್ಲಿ ಒಳ್ಳೆಯ ಮಾರ್ಕೆಟ್ ಇದೆ. [ಕೃಷ್ಣ ಲೀಲಾ ಚಿತ್ರ ವಿಮರ್ಶೆ]


Krishna Leela

ಹೆಚ್ಚಾಗಿ ಆಕ್ಷನ್ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿರುವ ಜೀವಾ ಅವರ ವೃತ್ತಿಬದುಕಿನಲ್ಲಿ ಈ ಚಿತ್ರ ಭಿನ್ನವಾಗಿ ನಿಲ್ಲುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇನ್ನಷ್ಟೇ ಕನ್ಫರ್ಮ್ ಆಗಬೇಕಿದೆ. ಕೃಷ್ಣಲೀಲಾ ಚಿತ್ರದ ನಿರ್ದೇಶಕರಾದ ಶಶಾಂಕ್ ಅವರು ರೀಮೇಕ್ ರೈಟ್ಸ್ ಗೆ ಬೇಡಿಕೆ ಬಂದಿರುವ ಮಾತನ್ನು ಪುಷ್ಟೀಕರಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಮಲ್ಟಿಫ್ಲೆಕ್ಸ್ ಗಳನ್ನು ಚೌದರಿಯವರು ಈ ಚಿತ್ರವನ್ನು ವೀಕ್ಷಿಸಿದರಂತೆ. ತಾವೇ ರೀಮೇಕ್ ರೈಟ್ಸ್ ತೆಗೆದುಕೊಳ್ತೀನಿ ಎಂದಿದ್ದಾರೆ. ಆದರೆ ನಾಯಕ ನಟ ಯಾರು, ಪಾತ್ರವರ್ಗದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಬಗ್ಗೆ ಮಾತ್ರ ಹೇಳದಿದ್ದರೂ, ತಮ್ಮ ಪುತ್ರ ಜೀವಾ ಅವರನ್ನೇ ನಾಯಕ ನಟನನ್ನಾಗಿ ಮಾಡುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು.


Jiiva

ಅಜೇಯ್ ರಾವ್ ನಟಿಸಿ ನಿರ್ಮಿಸಿರುವ ಈ ಚಿತ್ರ ನೈಜ ಘಟನೆಯನ್ನು ಆಧಾರಿಸಿ ತೆರೆಗೆ ತರಲಾಗಿದೆ. ಅಜೇಯ್ ರಾವ್ ಅವರಿಗೆ ಕಿರುತೆರೆಯ 'ಅಶ್ವಿನಿ ನಕ್ಷತ್ರ' ಮಯೂರಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತದ ಹಾಡುಗಳು ಟಾಪ್ ಲಿಸ್ಟ್ ನಲ್ಲಿವೆ. (ಫಿಲ್ಮಿಬೀಟ್ ಕನ್ನಡ)
English summary
Sandalwood hit movie Krishna Leela to be remade in other languages. According to sources, producer RB Choudary, who is the father of Tamil actor Jiiva, has purchased the rights to remake it in the other south Indian languages.
Please Wait while comments are loading...

Kannada Photos

Go to : More Photos