twitter
    For Quick Alerts
    ALLOW NOTIFICATIONS  
    For Daily Alerts

    ಯಶಸ್ವಿ ಕನ್ನಡ ಚಿತ್ರದ ಕಥೆ ಎನ್ನಲು ನಿಮಗೆ ಅವಮಾನವೇ?

    |

    ನಮ್ಮಲ್ಲಿ ರಿಮೇಕ್ ಚಿತ್ರ ಮಾಡಿದರೂ ಅದನ್ನು ನಿಯತ್ತಾಗಿ ಅದು ರಿಮೇಕ್ ಚಿತ್ರ ಎಂದು ಒಪ್ಪಿಕೊಳ್ಳುವ ಗುಣವಿದೆ (ಕೆಲವೊಬ್ಬರು ಇದಕ್ಕೆ ಅಪವಾದ). ಒಂದು ವೇಳೆ ಚಿತ್ರತಂಡದವರು ಈ ಬಗ್ಗೆ ವಿಷಯ ಬಹಿರಂಗ ಪಡಿಸದಿದ್ದರೂ ಸಹೃದಯಿ ಕನ್ನಡಿಗರು ಭಾರೀ ಸಂಶೋದನೆ ನಡೆಸಿಯಾದರೂ ಸತ್ಯವನ್ನು ಮರೆಮಾಚುವುದಿಲ್ಲ.

    ಎ ಆರ್ ಮುರುಗದಾಸ್ ತಮಿಳು ಚಿತ್ರರಂಗದ ದೊಡ್ಡ ಹೆಸರು. ಇಂದು ಅವರ ಸ್ವಂತ ಬ್ಯಾನರಿನ ಮೂರನೇ 'ರಾಜ ರಾಣಿ' ಚಿತ್ರ ಬಿಡುಗಡೆಗೊಂಡಿದೆ. ಆರ್ಯನ್, ನಯನತಾರ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಕನ್ನಡ ಬ್ಲಾಕ್ ಬಸ್ಟರ್ ಚಿತ್ರವೊಂದರ ಕಥೆ ಮತ್ತು ಚಿತ್ರಕಥೆಯನ್ನೇ ಹೋಲುತ್ತದೆ ಎನ್ನುವುದು ಸದ್ಯದ ಸುದ್ದಿ.

    ಹೌದು, ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗರಡಿಯಲ್ಲಿ ಪಳಗಿರುವ ಅತ್ಲೀ ಕುಮಾರ್ ಅವರ ಚೊಚ್ಚಲ ನಿರ್ದೇಶನದ ರಾಜ ರಾಣಿ ಚಿತ್ರ 2007ರಲ್ಲಿ ಬಿಡುಗಡೆಯಾದ ಪ್ರಕಾಶ್ ನಿರ್ದೇಶನದ ಪುನೀತ್ ರಾಜಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ ಬ್ಲಾಕ್ ಬಸ್ಟರ್ 'ಮಿಲನ' ಚಿತ್ರವನ್ನೇ ಹೋಲುತ್ತದೆ ಎಂದರೆ ರಾಜ ರಾಣಿ ಚಿತ್ರ ತಂಡದವರು ಬೇಸರಿಸಿಕೊಳ್ಳಬಾರದು, ಬದಲಾಗಿ ಒಪ್ಪಿ ಕೊಳ್ಳಬೇಕು.

    ಶೇ.80ರಷ್ಟು 'ಮಿಲನ' ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಹೋಲುವ 'ರಾಜ ರಾಣಿ' ಚಿತ್ರಕ್ಕೆ ತಮಿಳುನಾಡಿನಲ್ಲಿ ಮತ್ತು ಕರ್ನಾಟಕದಲ್ಲೂ ಸಿನಿರಸಿಕರು ಉಘೇ.. ಉಘೇ..ಎಂದಿದ್ದಾರೆ. ಅನ್ನದೇ ಇರುತ್ತಾರೆಯೇ?

    'ರಾಜ ರಾಣಿ' ಚಿತ್ರಕ್ಕೂ 'ಮಿಲನ' ಚಿತ್ರಕ್ಕೂ ಇರುವ ಸಣ್ಣ difference ಗಳೇನು? ಮಿಲನ ಚಿತ್ರದ ನಿರ್ದೇಶಕ ಪ್ರಕಾಶ್ ಏನಂತಾರೆ ಈ ಬಗ್ಗೆ? ಸ್ಲೈಡಿನಲ್ಲಿ ನೋಡಿ..

    ಮಿಲನ

    ಮಿಲನ

    ಮಿಲನ ಚಿತ್ರದಲ್ಲಿ ಹೇಮಂತ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದ ದಿಲೀಪ್ ಅವರ ಪಾತ್ರ ಅಷ್ಟಾಗಿ ಇಲ್ಲ. ತಮಿಳಿನಲ್ಲಿ ಅದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಮಿಲನದಲ್ಲಿ ನಾಯಕಿ ತನ್ನ ಪ್ರಿಯಕರ ನಾಪತ್ತೆಯಾಗಿದ್ದಾನೆ ಎಂದು ಭಾವಿಸಿದ್ದರೆ, ತಮಿಳಿನಲ್ಲಿ ನಾಯಕಿ ಆತ ಸತ್ತು ಹೋಗಿದ್ದಾನೆಂದು ಭಾವಿಸಿರುತ್ತಾಳೆ.

    ರಾಜ ರಾಣಿ

    ರಾಜ ರಾಣಿ

    ಮಿಲನ ಚಿತ್ರದಲ್ಲಿ ಎರಡನೇ ನಾಯಕಿ (ಪೂಜಾಗಾಂಧಿ) ಪೊಲೀಸ್ ಒಬ್ಬರನ್ನು ಮದುವೆಯಾದರೆ, ತಮಿಳಿನಲ್ಲಿ ಆಕೆ ಸಾವನ್ನಪ್ಪುತ್ತಾಳೆ.

    ಮುರುಗದಾಸ್

    ಮುರುಗದಾಸ್

    ಮಿಲನ ಚಿತ್ರದಲ್ಲಿ ಡೈವೋರ್ಸ್ ಸನ್ನಿವೇಶಗಳಿದ್ದರೆ, ರಾಜ ರಾಣಿ ಚಿತ್ರದಲ್ಲಿ ಆಸ್ಪತ್ರೆಯ ಸನ್ನಿವೇಶಗಳಿವೆ. ನಾಯಕಿಗೆ ಮೂರ್ಛೆ ರೋಗದ ಕಾಯಿಲೆ ಇರುತ್ತದೆ. ನಾಯಕ ಆಕೆಯನ್ನು ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿ ಕೊಂಡಾಗ ಆಕೆ ಮನ ಪರಿವರ್ತನೆಯಾಗಿ ತನ್ನ ಪ್ರೀತಿಯ ಬಗ್ಗೆ ತಿಳಿಸುತ್ತಾಳೆ. ತಮಿಳಿನಲ್ಲಿ ನಾಯಕಿಯ ಪ್ರೇಮಪುರಾಣ ಮಧ್ಯಂತರವರೆಗೆ ಸಾಗುತ್ತದೆ. ನಾಯಕನ ಪ್ರೇಮ ಕಥೆ after interval..

    ಕ್ಲೈಮ್ಯಾಕ್ಸ್

    ಕ್ಲೈಮ್ಯಾಕ್ಸ್

    ಮಿಲನ ಚಿತ್ರದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನಾಯಕಿ ವಿದೇಶಕ್ಕೆ ತೆರಳಲು ಬಯಸಿದ್ದರೆ, ತಮಿಳಿನಲ್ಲಿ ಐಟಿ ಉದ್ಯೋಗದ ಮೇಲೆ ವಿದೇಶಕ್ಕೆ ಹೋಗಲು ಸಜ್ಜಾಗುತ್ತಾಳೆ. ಮಿಲನ ಮತ್ತು ರಾಜ ರಾಣಿ ಚಿತ್ರದ ಕ್ಲೈಮ್ಯಾಕ್ಸ್ ಎರಡೂ ಒಂದೇ..

    ನಿರ್ದೇಶಕ ಪ್ರಕಾಶ್ ಏನಂತಾರೆ?

    ನಿರ್ದೇಶಕ ಪ್ರಕಾಶ್ ಏನಂತಾರೆ?

    ನಿರ್ದೇಶಕ ಪ್ರಕಾಶ್ ಅವರನ್ನು ನಾವು ಈ ಬಗ್ಗೆ ಸಂಪರ್ಕಿಸಿದಾಗ ತಮಿಳಿನ ಚಿತ್ರ ಮಿಲನ ಚಿತ್ರವನ್ನು ಹೋಲುತ್ತದೆ ಎನ್ನುವ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಕಾಪಿ ರೈಟ್ಸ್ / ರಿಮೇಕ್ ರೈಟ್ಸ್ ಏನೂ ಮಾತುಕತೆಯೂ ನಡೆದಿಲ್ಲ ಎನ್ನುತ್ತಾರೆ. ಏನೇ ಆಗಲಿ ಮಿಲನ ಒಂದು ಅದ್ಭುತ ಚಿತ್ರ. ರಾಜ ರಾಣಿ ಚಿತ್ರ ತಂಡ ಈ ಬಗ್ಗೆ ಕನಿಷ್ಠ ಪಕ್ಷ courtesy ಕೊಡುವ ಕೆಲಸವನ್ನು ಮಾಡಬೇಕಿತ್ತು.

    English summary
    Tamil movie 'Raja Rani' in the banner of AR Muruga Das is inspired with Kannada block buster Milana. 
    Friday, September 27, 2013, 22:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X