»   » 'ಪೆಳ್ಳಿಚೂಪುಲು' ರಿಮೇಕ್: ಶ್ರದ್ದಾ-ವಧು, ಗುರುನಂದನ್-ವರ !

'ಪೆಳ್ಳಿಚೂಪುಲು' ರಿಮೇಕ್: ಶ್ರದ್ದಾ-ವಧು, ಗುರುನಂದನ್-ವರ !

Posted by:
Subscribe to Filmibeat Kannada

ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ 'ಪೆಳ್ಳಿ ಚೂಪುಲು' ಈಗ ಕನ್ನಡಕ್ಕೆ ರಿಮೇಕ್ ಆಗಲಿದೆಯಂತೆ. ಹೀಗಂತ ಸುದ್ದಿಯೊಂದು ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ.

2016 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ 'ಪೆಳ್ಳಿ ಚೂಪುಲು' ಚಿತ್ರವನ್ನ ತೆಲುಗಿನಲ್ಲಿ ತರುಣ್ ಭಾಸ್ಕರ್ ದಾಸ್ಯಮ್ ನಿರ್ದೇಶನ ಮಾಡಿದ್ದರು. ವಿಜಯ್ ದೇವರಕೊಂಡ ಮತ್ತು ರಿತು ವರ್ಮಾ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ಇಂತಹ ರೋಮ್ಯಾಂಟಿಕ್ ಕಾಮಿಡಿ ಚಿತ್ರವನ್ನೀಗ ಸ್ಯಾಂಡಲ್ ವುಡ್ ಗೆ ತರುವ ಪ್ರಯತ್ನ ಮಾಡಿದ್ದು, ಈಗಾಗಲೇ ಚಿತ್ರದ ನಿರ್ದೇಶಕ, ನಾಯಕ, ನಾಯಕಿ ಎಲ್ಲವೂ ಅಂತಿಮವಾಗಿದೆಯಂತೆ. ಮುಂದೆ ಓದಿ...

ಕನ್ನಡಕ್ಕೆ ತೆಲುಗಿನ 'ಪೆಳ್ಳಿಚೂಪುಲು'

ಕನ್ನಡಕ್ಕೆ ತೆಲುಗಿನ 'ಪೆಳ್ಳಿಚೂಪುಲು'

'ಪೆಳ್ಳಿಚೂಪುಲು' ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಆಗಿದ್ದು, 'ಸ್ವಯಂವರ'ದ ಕಾನ್ಸಪ್ಟ್ ಹೊಂದಿದೆ. ವಿಜಯ್ ದೇವರಕೊಂಡ ಮತ್ತು ರಿತು ವರ್ಮಾ ನಟಿಸಿದ್ದ ಈ ಚಿತ್ರ ಟಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಸಾಧಿಸಿತ್ತು.

ಫಸ್ಟ್ ರ್ಯಾಂಕ್ ಗುರುನಂದನ್ ವರ

ಫಸ್ಟ್ ರ್ಯಾಂಕ್ ಗುರುನಂದನ್ ವರ

ತೆಲುಗಿನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದ ಪಾತ್ರದಲ್ಲಿ, 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ ಬಣ್ಣ ಹಚ್ಚಲಿದ್ದಾರಂತೆ.

ಶ್ರದ್ದಾ ಶ್ರೀನಾಥ್ ವಧು

ಶ್ರದ್ದಾ ಶ್ರೀನಾಥ್ ವಧು

ರಿತು ವರ್ಮಾ ಮಾಡಿದ್ದ ಪಾತ್ರವನ್ನ, ಕನ್ನಡದಲ್ಲಿ 'ಯು ಟರ್ನ್' ಖ್ಯಾತಿ ಶ್ರದ್ದಾ ಶ್ರೀನಾಥ್ ಮಾಡಲಿದ್ದಾರಂತೆ

ಮುರುಳಿ ಮಾಸ್ಟರ್ ಸಾರಥ್ಯ

ಮುರುಳಿ ಮಾಸ್ಟರ್ ಸಾರಥ್ಯ

ಮೂಲಗಳ ಪ್ರಕಾರ, ಈ ಚಿತ್ರವನ್ನ ಕನ್ನಡದಲ್ಲಿ ನೃತ್ಯ ಸಂಯೋಜಕ ಮುರುಳಿ ಮಾಸ್ಟರ್ ನಿರ್ದೇಶನ ಮಾಡಲಿದ್ದಾರಂತೆ.

ಕನ್ನಡದಲ್ಲಿ ನಿರ್ಮಾಣ ಯಾರು?

ಕನ್ನಡದಲ್ಲಿ ನಿರ್ಮಾಣ ಯಾರು?

ಹರ್ಷ ಎಂಟರ್ ಪ್ರೈಸಸ್ ಬ್ಯಾನರ್ ಅಡಿ ಸಂಜೀವ್ ಕನ್ನಡದ ರಿಮೇಕ್ ರೈಟ್ ಖರೀಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ನಿರ್ದೇಶಕ ಮುರುಳಿ ಹಾಗೂ ನಿರ್ಮಾಪಕ ಸಂಜೀವ್ ಮಾತುಕತೆ ನಡೆಸಿದ್ದು, ಕಲಾವಿದರನ್ನ ಅಂತಿಮಗೊಳಿಸಿದ್ದಾರಂತೆ.

ಹಿಂದಿಯಲ್ಲಿ ಸಲ್ಮಾನ್ ಖಾನ್!

ಹಿಂದಿಯಲ್ಲಿ ಸಲ್ಮಾನ್ ಖಾನ್!

'ಪೆಳ್ಳಿ ಚೂಪುಲು' ಚಿತ್ರದ ತಮಿಳು ರಿಮೇಕ್ ರೈಟ್ಸ್ ವಾಸುದೇವ್ ಅವರು ಖರೀದಿಸಿದ್ದು, ಹಿಂದಿಯಲ್ಲಿ ಕರಣ್ ಜೋಹರ್ ಹಾಗೂ ಸಲ್ಮಾನ್ ಖಾನ್ ಮಾಡುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಗುರುನಂದನ್-ಶ್ರದ್ದಾ ಕಾಂಬಿನೇಷನ್

ಗುರುನಂದನ್-ಶ್ರದ್ದಾ ಕಾಂಬಿನೇಷನ್

ಸದ್ಯ, ಶ್ರದ್ದಾ ಶ್ರಿನಾಥ್ 'ಉರ್ವಿ' ಮತ್ತು 'ಆಪರೇಷನ್ ಅಲಮೇಲಮ್ಮ' ಸಿನಿಮಾಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದಲ್ಲದೇ, ತಮಿಳು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇನ್ನೂ ಗುರುನಂದನ್ 'ಸ್ಮೈಲ್ ಪ್ಲೀಸ್', 'ಎಂಟಿವಿ ಸುಬ್ಬುಲಕ್ಷ್ಮಿ' ಚಿತ್ರದ ಜೊತೆಗೆ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಪೆಳ್ಳಿ ಚೂಪುಲು ಚಿತ್ರದ ರಿಮೇಕ್ ಮೂಲಕ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರಂತೆ.

English summary
The Kannada remake rights of Telugu blockbuster Pelli Choopulu has been acquired by Sanjeev Khasnis of Harsha Entertainers. Read the details here..
Please Wait while comments are loading...

Kannada Photos

Go to : More Photos