»   » ಅಮೀರ್ ಖಾನ್ ಚಿತ್ರದ ರೀಮೇಕ್ ನಲ್ಲಿ ಉಪೇಂದ್ರ?

ಅಮೀರ್ ಖಾನ್ ಚಿತ್ರದ ರೀಮೇಕ್ ನಲ್ಲಿ ಉಪೇಂದ್ರ?

Posted by:
Subscribe to Filmibeat Kannada

'ಉಪ್ಪಿ-2' ಚಿತ್ರದ ನಂತರ ಅಭಿನಯದಲ್ಲೇ ಬಿಜಿಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಡುವ ಬಗ್ಗೆ ಕನ್ಫರ್ಮ್ ಮಾಡಿದ್ದರು. ಅದು ಅವರ 50 ನೇ ಚಿತ್ರವನ್ನು ಅವರೇ ಆಕ್ಷನ್ ಕಟ್ ಹೇಳುವುದು. ಇದಾದ ನಂತರ ಸೂಪರ್ ಸ್ಟಾರ್ ಉಪೇಂದ್ರ ಗೆ ಮಂಜು ಮಾಂಡವ್ಯ ಮತ್ತು ಶಶಾಂಕ್ ಆಕ್ಷನ್ ಕಟ್ ಹೇಳಲು ರೆಡಿ ಇದ್ದಾರೆ. ಹೀಗಿರುವಾಗಲೇ ರಿಯಲ್ ಸ್ಟಾರ್ ಉಪೇಂದ್ರ ಬಾಲಿವುಡ್ ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಲೇಟೆಸ್ಟ್ ಸುದ್ದಿಯೊಂದು ಹರಿದಾಡುತ್ತಿದೆ.[ಎಲ್ಲಾ ಬರೀ ರೂಮರ್ರು, ಪುಸ್ತಕದ ಬದನೇಕಾಯಿ ಎಂದ ಉಪೇಂದ್ರ.!]

ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗಷ್ಟೇ ತಮ್ಮ ಚಿತ್ರಗಳ ಬಗ್ಗೆ ಕೇಳಿಬರುತ್ತಿದ್ದ ಎಲ್ಲಾ ರೂಮರ್ಸ್ ಗಳಿಗೂ ಉತ್ತರ ಕೊಟ್ಟಿದ್ದರೂ. ಜೊತೆಗೆ ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ದಬಾಂಗ್' ರೀಮೇಕ್ ಚಿತ್ರಕ್ಕೆ ನೋ ಸಹ ಎಂದಿದ್ದರು. ಆದ್ರೆ ಈಗ ಮತ್ತೊಂದು ಬಾಲಿವುಡ್ ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಲೇಟೆಸ್ಟ್ ಸುದ್ದಿ ಹರಿದಾಡುತ್ತಿದೆ. ಅದರ ಫುಲ್ ಡೀಟೇಲ್ಸ್ ಇಲ್ಲಿದೆ ಓದಿ..

ಉಪ್ಪಿ ನಟಿಸಲಿರುವ ಬಾಲಿವುಡ್ ರಿಮೇಕ್ ಚಿತ್ರ..

ಉಪ್ಪಿ ನಟಿಸಲಿರುವ ಬಾಲಿವುಡ್ ರಿಮೇಕ್ ಚಿತ್ರ..

ಬಾಲಿವುಡ್ ಮಿಸ್ಟರ್ ಪರ್ ಫೆಕ್ಟ್ ಅಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವೊಂದು ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಆ ಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿದ್ದ ಪಾತ್ರವನ್ನು ಉಪೇಂದ್ರ ಅವರು ನಿರ್ವಹಿಸಲಿದ್ದಾರಂತೆ.['ದಬಾಂಗ್' ರೀಮೇಕ್ ಗೆ 'ನೋ' ಎಂದ ಉಪೇಂದ್ರ!]

ಯಾವುದು ಆ ಸಿನಿಮಾ?

ಯಾವುದು ಆ ಸಿನಿಮಾ?

2009 ರಲ್ಲಿ ಬಿಡುಗಡೆ ಆದ ರಾಜ್ ಕುಮಾರ್ ಹಿರಾನಿ ನಿರ್ದೇಶನದ '3 ಇಡಿಯಟ್ಸ್' ಚಿತ್ರವೇ ಕನ್ನಡಕ್ಕೇ ರೀಮೇಕ್ ಆಗುತ್ತಿರುವ ಚಿತ್ರ. ಇದರಲ್ಲಿ ಉಪೇಂದ್ರ, ಅಮೀರ್ ಖಾನ್ ಪಾತ್ರವನ್ನು ನಿಭಾಯಿಸುತ್ತಾರಂತೆ.

'3 ಇಡಿಯಟ್ಸ್' ಕನ್ನಡಕ್ಕೆ ರೀಮೇಕ್ ಮಾಡುತ್ತಿರುವುದು ಯಾರು?

'3 ಇಡಿಯಟ್ಸ್' ಕನ್ನಡಕ್ಕೆ ರೀಮೇಕ್ ಮಾಡುತ್ತಿರುವುದು ಯಾರು?

ರೀಮೇಕ್ ಚಿತ್ರಗಳ ಮೂಲಕವೇ ಫೇಮಸ್ ಆಗಿರುವ ಕನ್ನಡದ ನಿರ್ದೇಶಕ ಕೆ.ಮಾದೇಶ್ ಅವರು '3 ಇಡಿಯಟ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರಂತೆ.

ಉಪೇಂದ್ರ ಗೆ ಡಿಂಪಲ್ ಕ್ವೀನ್ ಜೋಡಿ

ಉಪೇಂದ್ರ ಗೆ ಡಿಂಪಲ್ ಕ್ವೀನ್ ಜೋಡಿ

ವರದಿಗಳ ಪ್ರಕಾರ ಅಮೀರ್ ಖಾನ್ ಪಾತ್ರ ನಿರ್ವಹಿಸುವ ಉಪೇಂದ್ರ ಅವರಿಗೆ, '3 ಇಡಿಯಟ್ಸ್'ನ ಕರೀನಾ ಕಪೂರ್ ಸ್ಥಾನವನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ತುಂಬುವ ಮೂಲಕ ಕಾಂಬಿನೇಷನ್ ಆಗುತ್ತಾರೆ ಎಂದು ತಿಳಿದುಬಂದಿದೆ. ಇನ್ನೂ ಇತರೆ ಪಾತ್ರಗಳು ಫೈನಲ್ ಆಗಿಲ್ಲವಂತೆ.

ಸಾಧು ಕೋಕಿಲ ಸಂಗೀತ

ಸಾಧು ಕೋಕಿಲ ಸಂಗೀತ

'3 ಇಡಿಯಟ್ಸ್' ಕನ್ನಡ ರಿಮೇಕ್ ಚಿತ್ರಕ್ಕೆ ಸಾಧು ಕೋಕಿಲ ಅವರ ಸಂಗೀತ ಸಂಯೋಜನೆ ಕನ್ಫರ್ಮ್ ಆಗಿದ್ದು, ರಾಜೇಶ್ ಕಟ್ಟಾ ಛಾಯಾಗ್ರಹಣ ಚಿತ್ರಕ್ಕಿದೆಯಂತೆ.

ಚಿತ್ರೀಕರಣ ಯಾವಾಗ?

ಚಿತ್ರೀಕರಣ ಯಾವಾಗ?

ವಿಶೇಷ ಅಂದ್ರೆ ಸಿನಿಮಾ ಚಿತ್ರೀಕರಣಕ್ಕೆ ಫೆಬ್ರವರಿ 27 ರಿಂದ ಚಾಲನೆ ಸಿಗಲಿದೆಯಂತೆ.

ಸದ್ಯಕ್ಕೆ ರಿಯಲ್ ಸ್ಟಾರ್ ಫುಲ್ ಬಿಜಿ

ಸದ್ಯಕ್ಕೆ ರಿಯಲ್ ಸ್ಟಾರ್ ಫುಲ್ ಬಿಜಿ

ಇತ್ತೀಚೆಗಷ್ಟೆ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ', ಚಿತ್ರೀಕರಣ ಮುಗಿಸಿದ್ದು, 'ಕಣ್ಣೇಶ್ವರ', 'ಉಪ್ಪಿ ರುಪೀ' ಉಪೇಂದ್ರ ಅವರ ಕೈಯಲ್ಲಿವೆ.

English summary
Blockbuster Bollywood movie 3 Idiots is likely to be remade in Kannada, which will be directed by K Madesh. Upendra, will play the role of Rancho, which was originally essayed by Aamir Khan.
Please Wait while comments are loading...

Kannada Photos

Go to : More Photos