»   » ಮಗಳು-ಪ್ರಿಯತಮೆಯ ಜಗಳದಿಂದ ಹೈರಾಣಾದ ಕಮಲ್ ಹಾಸನ್

ಮಗಳು-ಪ್ರಿಯತಮೆಯ ಜಗಳದಿಂದ ಹೈರಾಣಾದ ಕಮಲ್ ಹಾಸನ್

Written by: Suni
Subscribe to Filmibeat Kannada

ಉಳಗನಾಯಗನ್ ಕಮಲ್ ಹಾಸನ್ ಅವರಿಗೆ ಇದೀಗ ಹೊಸ ಸಮಸ್ಯೆ ಉದ್ಭವ ಆಗಿದೆ. ಅತ್ತ ಮಗಳನ್ನು ಓಲೈಸೋದಾ, ಅಥವಾ ಇತ್ತ ಪ್ರಿಯತಮೆಗೆ ಸಮಾಧಾನ ಮಾಡೋದಾ?. ಅಂತ ಕಮಲ್ ಹಾಸನ್ ಅವರು ಫಜೀತಿಗೆ ಸಿಲುಕಿದ್ದಾರೆ.

ಅಂದಹಾಗೆ ಇದೇ ಮೊದಲ ಬಾರಿಗೆ ನಟಿ ಶ್ರುತಿ ಹಾಸನ್ ಮತ್ತು ನಟ ಕಮಲ್ ಹಾಸನ್ ಅವರು (ಅಪ್ಪ-ಮಗಳು) ಸಭಾಶ್ ನಾಯ್ಡು ಚಿತ್ರದ ಮೂಲಕ ಒಂದಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಕಮಲ್ ಅವರ ಆತ್ಮೀಯ ಗೆಳತಿ ಗೌತಮಿ ತಡಿಮಾಲಾ ಹಾಗೂ ಶ್ರುತಿ ಹಾಸನ್ ಅವರ ಜಟಾಪಟಿಯಿಂದಾಗಿ ಶೂಟಿಂಗ್ ಸೆಟ್ ನಲ್ಲಿ ಭಾರಿ ಅಲ್ಲೋಲ-ಕಲ್ಲೋಲ ಉಂಟಾಗಿದೆ.[ಶ್ರುತಿ ಹಾಸನ್ ಉಡುಪು ನೋಡಿರೋ ಅಯ್ಯಯ್ಯೋ]

ಇತ್ತೀಚೆಗಷ್ಟೇ ಇವರಿಬ್ಬರು ಕಿತ್ತಾಡಿಕೊಂಡ ಪರಿಣಾಮ ಅಂದು ಇಡೀ ದಿನದ ಶೂಟಿಂಗ್ ಕ್ಯಾನ್ಸಲ್ ಮಾಡಲಾಗಿದೆ ಎನ್ನುತ್ತಿವೆ ಕಮಲ್ ಹಾಸನ್ ಆಪ್ತ ವಲಯಗಳು. ಅಷ್ಟಕ್ಕೂ 'ಶಭಾಶ್ ನಾಯ್ಡು' ಚಿತ್ರದ ಸೆಟ್ ನಲ್ಲಿ ನಡೆದಿದ್ದೇನು?, ಕಮಲ್ ಮಗಳು ಶ್ರುತಿಗೂ, ಆತ್ಮೀಯ ಪಾರ್ಟ್ ನರ್ ಗೌತಮಿ ಅವರಿಗೂ ಯಾಕೆ ಆಗಿ ಬರೋಲ್ಲ, ಎನ್ನುವುದರ ಬಗ್ಗೆ ಮಾಹಿತಿ ತಿಳಿಯಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ...

ಕಾಸ್ಟ್ಯೂಮ್ ಗಾಗಿ ಕೋಳಿ ಜಗಳ

ಕಾಸ್ಟ್ಯೂಮ್ ಗಾಗಿ ಕೋಳಿ ಜಗಳ

ನಟಿ ಶ್ರುತಿ ಹಾಸನ್ ಮತ್ತು ಕಮಲ್ ಹಾಸನ್ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಸಭಾಶ್ ನಾಯ್ಡು' ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಇದೇ ಗೌತಮಿ ಅವರು. ಕಮಲ್ ಹಾಸನ್ ಅವರು ಸಾರಿಕಾ ಅವರಿಗೆ ಡೈವೋರ್ಸ್ ಕೊಟ್ಟ ಮೇಲೆ ಗೌತಮಿ ಅವರ ಮೇಲೆ ತುಂಬಾ ಆತ್ಮೀಯತೆಯಿಂದ ಇದ್ದರು.[ಆಸ್ಪತ್ರೆಯಿಂದ ಮನೆಗೆ ಮರಳಿದ ಕಮಲ್, ಅಭಿಮಾನಿಗಳ ಹರ್ಷೋದ್ಘಾರ]

ಶ್ರುತಿಗೆ ಇಷ್ಟವಿಲ್ಲ

ಶ್ರುತಿಗೆ ಇಷ್ಟವಿಲ್ಲ

ಆದರೆ ಗೌತಮಿ ಅವರು ಡಿಸೈನ್ ಮಾಡಿರುವ ಕಾಸ್ಟ್ಯೂಮ್ ಹಾಕಿಕೊಳ್ಳಲು ನಟಿಶ್ರುತಿ ಹಾಸನ್ ಅವರಿಗೆ ಒಂಚೂರು ಇಷ್ಟವಿರಲಿಲ್ಲವಂತೆ. ಈ ವಿಚಾರವನ್ನು ಶ್ರುತಿ ಅವರು ಮೊದಲೇ ತಿಳಿಸಿದ್ದರು. ಆದರೆ ಸೆಟ್ ನಲ್ಲಿ ಗೌತಮಿ ಅವರು ಡಿಸೈನ್ ಮಾಡಿದ ಬಟ್ಟೆ ಹಾಕಿಕೊಳ್ಳಲು ಹೇಳಲಾಗಿದೆ.[ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕಮಲ್ ಹಾಸನ್]

ಕೋಪಗೊಂಡ ಶ್ರುತಿ ಹಾಸನ್

ಕೋಪಗೊಂಡ ಶ್ರುತಿ ಹಾಸನ್

ಆದರೆ ಇದಕ್ಕೆ ಗರಂ ಆದ ನಟಿ ಶ್ರುತಿ ಹಾಸನ್ ಅವರು ಶೂಟಿಂಗ್ ಸೆಟ್ ನಲ್ಲೇ, ಕಾಲು ಕೆರೆದು ಜಗಳಕ್ಕೆ ಮುಂದಾದರಂತೆ.[ಶ್ರುತಿ ಹಾಸನ್ ಡಾನ್ಸ್ ಪ್ರಾಕ್ಟೀಸ್ ವಿಡಿಯೋ ಬಹಿರಂಗ]

ಕಮಲ್ ಏನೂ ಹೇಳಂಗಿಲ್ಲ

ಕಮಲ್ ಏನೂ ಹೇಳಂಗಿಲ್ಲ

ಅಂತೂ ಇವರಿಬ್ಬರ ಜಗಳದಿಂದ ಕಮಲ್ ಅವರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಅತ್ತ ನುಂಗಲೂ ಆಗದೇ, ಇತ್ತ ಉಗುಳಲೂ ಆಗದ ಸನ್ನಿವೇಶ. ಇವರಿಬ್ಬರ ಜಗಳದ ಬಗ್ಗೆ ಗೊತ್ತಿದ್ದರೂ ಕೂಡ ಅವರ ಮಧ್ಯೆ ಕಮಲ್ ಪ್ರವೇಶ ಮಾಡುತ್ತಿಲ್ಲ. ಯಾಕೆಂದರೆ ಅವರಿಗೆ ಮಗಳೆಂದರೆ ಪಂಚಪ್ರಾಣ, ಹಾಗಾಗಿ ಇಬ್ಬರೂ ಬಗ್ಗೆಯೂ ತುಟಿಪಿಟಕ್ ಅನ್ನದೇ, ದೂರವೇ ಉಳಿದಿದ್ದಾರೆ.

ಶ್ರುತಿ ವಕ್ತಾರರ ನಿರಾಕರಣೆ

ಶ್ರುತಿ ವಕ್ತಾರರ ನಿರಾಕರಣೆ

ಅಂದಹಾಗೆ ಶ್ರುತಿ ಹಾಸನ್ ಮತ್ತು ಗೌತಮಿ ಅವರ ಜಗಳವನ್ನು ಶ್ರುತಿ ಹಾಸನ್ ಅವರ ವಕ್ತಾರರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಇಲ್ಲ ಶ್ರುತಿ ಅವರು ಜಗಳ ಆಡಿಲ್ಲ. ಕಾಸ್ಟ್ಯೂಮ್ ಟೆಸ್ಟ್ ನಲ್ಲಿ ಕೊಂಚ ಬದಲಾವಣೆ ಮಾಡಬೇಕಿತ್ತು, ನಂತರ ಗೌತಮಿ ಅವರೇ ಬೇರೆ ಕಾಸ್ಟ್ಯೂಮ್ ತರಿಸಿದ್ದಾರೆ. ಇವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುತ್ತಿವೆ ಶ್ರುತಿ ಮೂಲಗಳು.

ನಮಗ್ಯಾಕೆ ಬಿಡಿ

ನಮಗ್ಯಾಕೆ ಬಿಡಿ

ಒಟ್ನಲ್ಲಿ ಯಾರು ಹೇಳಿದ್ದನ್ನು, ನಂಬಬೇಕು-ಬಿಡಬೇಕು ಅನ್ನೋದು ಸದ್ಯದ ಸಂಗತಿ. ಅಂತೂ ಎಲ್ಲಾ ಕಡೆ ಇವರಿಬ್ಬರ ಬಗ್ಗೆ ಅಂತೆ-ಕಂತೆಗಳ ಸುದ್ದಿ ಹರಿದಾಡುತ್ತಿರೋದು ಮಾತ್ರ ಸತ್ಯ. ಮೊನ್ನೆ-ಮೊನ್ನೆ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಮಲ್ ಇದೀಗ ಗುಣಮುಖರಾಗಿದ್ದು, 'ಶಭಾಶ್ ನಾಯ್ಡು' ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ವೈಜಾಗ್ ನಲ್ಲಿ ಸದ್ಯದಲ್ಲೇ ಶುರುವಾಗಲಿದೆ.

'ದೃಶ್ಯಂ'ನಲ್ಲಿ ಒಂದಾಗಿದ್ದ ಕಮಲ್-ಗೌತಮಿ

'ದೃಶ್ಯಂ'ನಲ್ಲಿ ಒಂದಾಗಿದ್ದ ಕಮಲ್-ಗೌತಮಿ

ತಮಿಳಿನ 'ದೃಶ್ಯಂ' ಚಿತ್ರದಲ್ಲಿ ನಟ ಕಮಲ್ ಹಾಸನ್ ಮತ್ತು ಗೌತಮಿ ಅವರು ಒಂದಾಗಿ ಕಾಣಿಸಿಕೊಂಡಿದ್ದರು.

English summary
There have been baseless rumours doing the rounds about Actress Shruti Haasan's apparent disagreements with Gautami who is the stylist in Tamil Movie 'Sabash Naidu'.
Please Wait while comments are loading...

Kannada Photos

Go to : More Photos