»   » 'ರಾಕಿಂಗ್'ಗೆ ಸೈಡ್ ಗೆ ಹೋಗೋ' ಎಂದ 'ಜೆಡಿ' ಚಿತ್ರದ ಬಜೆಟ್ ಎಷ್ಟು.?

'ರಾಕಿಂಗ್'ಗೆ ಸೈಡ್ ಗೆ ಹೋಗೋ' ಎಂದ 'ಜೆಡಿ' ಚಿತ್ರದ ಬಜೆಟ್ ಎಷ್ಟು.?

Posted by:
Subscribe to Filmibeat Kannada

ನಿರ್ದೇಶಕ ಕಲಾ ಸಾಮ್ರಾಟ್ ಎಸ್.ನಾರಾಯಣ್ ಮತ್ತು ಜಗದೀಶ್ ಅಲಿಯಾಸ್ ಜೆಡಿ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ 'ಜೆಡಿ' ಚಿತ್ರ ಜೂನ್ 23ರಂದು ರಾಮನಗರದಲ್ಲಿ ಗ್ರ್ಯಾಂಡ್ ಆಗಿ ಮುಹೂರ್ತ ನೆರವೇರಿಸಿಕೊಂಡಿದೆ.

ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಜಗದೀಶ್ ಅಲಿಯಾಸ್ ಜೆಡಿ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ ನೀರಿನಂತೆ ದುಡ್ಡು ಸುರಿಯುತ್ತಿದ್ದಾರೆ. ಮಾತ್ರವಲ್ಲದೇ ಇದು ನಿರ್ದೇಶಕ ಎಸ್ ನಾರಾಯಣ್ ಅವರ 50ನೇ ಸಿನಿಮಾ ಆಗಿರುವುದರಿಂದ ಕೊಂಚ ನಿರೀಕ್ಷೆ ಜಾಸ್ತೀನೇ ಇದೆ.

What is the budget of Kannada Movie 'JD'

'ಜೆಡಿ' ಚಿತ್ರಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಮಾಪಕ ಕಮ್ ನಾಯಕ ಜಗದೀಶ್ ಅವರು ತಯಾರಾಗಿದ್ದಾರೆ. ಅಸಲಿಗೆ ಹೊಸಬ್ಬರ ಸಿನಿಮಾಗೆ ಇಷ್ಟೊಂದು ದುಡ್ಡು ಸುರಿದು ಸಿನಿಮಾ ಮಾಡಿದರೆ ಹಾಕಿದ ಹಣ ವಾಪಸ್ ಬರುತ್ತಾ ಅನ್ನೋದು ಸದ್ಯಕ್ಕಿರುವ ಪ್ರಶ್ನೆ.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಯಾವಾಗಲೂ ನಂ.1 ಆಗಿರಬೇಕೆಂದು ಬಯಸುವ ಜಗದೀಶ್ ಅವರು ತಮ್ಮ ಚೊಚ್ಚಲ ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ತರಲು ಯೋಜನೆ ಹಾಕಿಕೊಂಡಿದ್ದಾರೆ. ಹೇಳಿ ಕೇಳಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಟಾಂಗ್ ಕೊಟ್ಟು ಪೋಸ್ಟರ್ ಬೇರೆ ಡಿಸೈನ್ ಮಾಡಿರುವುದರಿಂದ ಆರಂಭದ ಹಂತದಲ್ಲೇ ಸಿನಿಮಾ ಸಖತ್ ಸುದ್ದಿ ಮಾಡುತ್ತಿದೆ.[ಸೈಡಿಗ್ ಹೋಗೋ ಯಶ್ ಅಂದ್ರಾ ಎಸ್ ನಾರಾಯಣ್?]

ಅಂದಹಾಗೆ 'ಜೆಡಿ' ಚಿತ್ರದಲ್ಲಿ ಒಟ್ಟು 32 ಪ್ರಮುಖ ಕಲಾವಿದರು ಪಾತ್ರ ವಹಿಸಲಿದ್ದು, ಕಲಾವಿದರಿಗಾಗಿಯೇ ಈಗಾಗಲೇ 25 ಕ್ಯಾರಾವಾನ್ ಗಳನ್ನು ತರಿಸುವ ಯೋಜನೆ ನಿರ್ಮಾಪಕ ಜಗದೀಶ್ ಅವರಿಗಿದೆ. ಆದರೆ 'ಆ' 32 ಮುಖ್ಯ ಕಲಾವಿದರು ಯಾರು ಅನ್ನೋದನ್ನು ನಿರ್ದೇಶಕ ಎಸ್ ನಾರಾಯಣ್ ಆಗಲಿ ನಿರ್ಮಾಪಕ ಜಗದೀಶ್ ಅವರಾಗಲಿ ಇನ್ನೂ ನಿರ್ಧರಿಸಿಲ್ಲ.

ಈಗಾಗಲೇ ಮುಹೂರ್ತ ನೆರವೇರಿದ್ದು, ಆಗಸ್ಟ್ ನಲ್ಲಿ 'ಜೆಡಿ' ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿತ್ರಕ್ಕೆ ಸತ್ಯ ಹೆಗಡೆ ಅವರು ಕ್ಯಾಮರಾ ಕೈ ಚಳಕ ತೊರಲಿದ್ದು, ಮಣಿಕಾಂತ್ ಕದ್ರಿ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

English summary
Kannada Director S Narayan's 50th film as a director, 'JD' was launched in Ramanagar recently (June 23rd). Jagadish alias JD is producing the film apart from acting as a hero in this film. 'The film is big budget one with the budget exceeding 25 crores.
Please Wait while comments are loading...

Kannada Photos

Go to : More Photos