»   » ಅವಕಾಶ ಸಿಗದವರಲ್ಲ, ಇವರು `ಅವಕಾಶ' ಕೊಡದವರು!

ಅವಕಾಶ ಸಿಗದವರಲ್ಲ, ಇವರು `ಅವಕಾಶ' ಕೊಡದವರು!

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ ಕೆಲವು ನಟಿಯರು ತುಂಬಾ ಅಂದ್ರೆ ತುಂಬಾನೇ ಟ್ಯಾಲೆಂಟೆಡ್. ಆದ್ರೆ ಅವಕಾಶಗಳು ಮಾತ್ರ ಅಷ್ಟಕ್ಕಷ್ಟೇ. ಒಂದೆರೆಡು ಸಿನಿಮಾಗಳಲ್ಲಿ ಹೈಲೈಟ್ ಆಗ್ತಾರೆ. ಆಮೇಲೆ ಅವ್ರ ಮೇಲೆ ಲೈಟೇ ಬೀಳೋದಿಲ್ಲ. ಕುಲುಕುತ್ತ ಥಳುಕಿನ ಲೋಕಕ್ಕೆ ಬಂದವರು ಬಳುಕುತ್ತ ಮಾಯವಾಗಿರುತ್ತಾರೆ.

ಹಾಗೆ ನೋಡಿದ್ರೆ ಅಭಿನಯದಲ್ಲಿ ಅದ್ಭುತ ಅನ್ನಿಸಿಕೊಳ್ಳದ 'ಸಾಮಾನ್ಯ' ನಟಿಯರು ಮತ್ತೆ ಮತ್ತೆ ಹೊಸ ಹೊಸ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ತಾನೇ ಇರ್ತಾರೆ. ಆದ್ರೆ ಭವಿಷ್ಯದಲ್ಲಿ ಒಳ್ಳೆಯ ನಟಿಯಾಗ್ತಾರೆ ಅಂತ ಭರವಸೆ ಹುಟ್ಟಿಸಿದ ಹುಡುಗಿಯರು ಮಾತ್ರ ತೆರೆಮರೆಗೆ ಸರಿದು ಹೋಗ್ತಾರೆ. ಆದರೆ, ಇದೇನು ಚಿದಂಬರ ರಹಸ್ಯವಾಗೇನೂ ಉಳಿದಿಲ್ಲ. [ಕಳಚಿತು 'ಕಾಮುಕ' ನಿರ್ದೇಶಕರ ಮುಖವಾಡ]

ಇದ್ರ ಹಿಂದೊಂದು ಭಯಂಕರ ಸತ್ಯವಿದೆ. ಆ ಸತ್ಯ ವಿಚಿತ್ರ ಆದರೂ ಸತ್ಯ. ಇದು ಕನ್ನಡ ಸಿನಿಮಾ ರಂಗದಲ್ಲಿ ವೆರಿ ವೆರಿ `ಕಾಮ'ನ್? ಛೆ ಛೆ ಹಂಗೆಲ್ಲಾ ಏನೂ ಇಲ್ಲ. ಹಂಗಾದ್ರೆ ಉಳಿದವ್ರೆಲ್ಲಾ ಹಿಂಗೇನಾ ಅಂತ ಪ್ರಶ್ನೆ ಕೇಳೋರಿಗೆ ನಮ್ಹತ್ರ ಉತ್ತರ ಇಲ್ಲ. ಆದ್ರೆ ಯಾರ್ಯಾರೂ ಅಂತಹಾ ಅವಕಾಶ ಕೊಡದೇ ಅವಕಾಶ ಕಳಕೊಂಡವ್ರು ಅಂತಿರೋ ನಮ್ಮ ಗುಮಾನಿಯನ್ನ ನಿಮ್ಮ ಮುಂದಿಡ್ತಿದ್ದೀವಿ.. ಓದುತ್ತಾ ಸಾಗಿರಿ. [ನಗ್ನ ಚಿತ್ರ ಲೀಕ್ : ಐ ಡೋಂಕ್ ಕೇರ್ ಎಂದ ಆಪ್ಟೆ]

ಯಾರಿಗೂ ಕಡಿಮೆಯಿಲ್ಲದ ಸಿಂಧು ಲೋಕನಾಥ್

ಯಾರಿಗೂ ಕಡಿಮೆಯಿಲ್ಲದ ಸಿಂಧು ಲೋಕನಾಥ್

ಅಭಿನಯದಲ್ಲಿ ಯಾರಿಗೂ ಕಡಿಮೆಯಿಲ್ಲ. ಡ್ರಾಮಾ, ಲವ್ ಇನ್ ಮಂಡ್ಯದಂತಹಾ ಯಶಸ್ವೀ ಸಿನಿಮಾಗಳಲ್ಲಿ ನಟಿಸಿದ ಚೆಲುವೆ. ಆದ್ರೆ ಈಗ ಕೈಯ್ಯಲ್ಲಿ ಸಿನಿಮಾಗಳಿಲ್ಲ. ಆಫರ್ಗಳಿಲ್ಲ ಅಂತ ಸಿಂಪಲ್ಲಾಗಿ ಒಪ್ಪಿಕೊಳ್ಳೋ ಈ ಸುಂದರಿ ಸಿನಿಮಾದಲ್ಲಿ `ಸ್ವಲ್ಪಾನೂ ಅಡ್ಜೆಸ್ಟ್' ಮಾಡಿಕೊಳ್ಳೋ ಹುಡ್ಗಿಯಲ್ಲವಂತೆ ಸಿಂಧು ಲೋಕನಾಥ್.

ಅಡ್ಜೆಸ್ಟ್ ಮಾಡ್ಕೊಂಡ್ರೆ ಆಫರ್!

ಅಡ್ಜೆಸ್ಟ್ ಮಾಡ್ಕೊಂಡ್ರೆ ಆಫರ್!

ಸಿನಿಮಾಗೆ ಅವಕಾಶ ಕೊಡೋರಿಗೆ ತಾನೂ ಅವಕಾಶ ಕೊಟ್ರೆ ಆಫರ್ಗಳ ಭರಪೂರವೇ ಹರಿಯುತ್ತೆ. ಆದ್ರೆ ಸಿಂಧು ಹಾಗಲ್ಲ ಅದಕ್ಕೇ ಅವ್ರಿಗೆ ಟ್ಯಾಲೆಂಟ್ ಇದ್ರೂ ಅವಕಾಶ ಇಲ್ಲ ಅಂತಿವೆ ಗಾಂಧಿನಗರದ ಸಿಸಿಟಿವಿ ಸುದ್ದಿ..

ದೀಪಾ ಸನ್ನಿಧಿ ಕೂಡ ಸ್ಟ್ರಿಕ್ಟ್

ದೀಪಾ ಸನ್ನಿಧಿ ಕೂಡ ಸ್ಟ್ರಿಕ್ಟ್

ಮೊದಲ ಸಿನಿಮಾದಲ್ಲೇ ಸ್ಟಾರ್ಗಳಿಗೆ ಜೋಡಿಯಾದ ಚೆಲುವೆ ಈ ಚಿಕ್ಕಮಗಳೂರ ದೊಡ್ಡ ಮಲ್ಲಿಗೆ ದೀಪಾ ಸನ್ನಿಧಿ. ದೀಪಾ ಕೇಳೋ ಸಂಭಾವನೇನೇ ಜಾಸ್ತಿ. ಇನ್ನು `ಅವಕಾಶ' ಕೊಡೋದಂತೂ ದೂರದ ಮಾತು. ಅದಕ್ಕಾಗೀನೇ ದೀಪಾ ಸನ್ನಿಧಿಗೆ ಕನ್ನಡದಲ್ಲಿ ಅವಕಾಶ ಅಷ್ಟಕ್ಕಷ್ಟೇ.

ಎಲ್ಲವೂ ಇದ್ರೂ ಏನೂ ಇಲ್ಲ

ಎಲ್ಲವೂ ಇದ್ರೂ ಏನೂ ಇಲ್ಲ

ದೀಪಾ ಸನ್ನಿಧಿ ಈ ಹಿಂದೆ ಕೂಡ ಇಂತಹಾ ವಿಷ್ಯಗಳನ್ನ ದೂರವಿಟ್ಟಿದ್ರಂತೆ. ಕೇಳಿದಷ್ಟು ಕಾಸು ಕೊಡ್ತೀವಿ. ನೀವೂ ನಮ್ಗೆ ಅವಕಾಶ ಕೊಡ್ಬೇಕು ಅಂದವರನ್ನ ಸರಿಯಾಗಿ ಜಾಡಿಸಿ ಬಿಸಾಕಿದ್ದರಂತೆ ದೀಪಾ.

ದೊಡ್ಡವರು ಕೇಳ್ತಾರೆ `ಅವಕಾಶ'

ದೊಡ್ಡವರು ಕೇಳ್ತಾರೆ `ಅವಕಾಶ'

ಇದ್ರಿಂದಾಗಿ ತಮಿಳಿನಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳೋಕೆ ನೋಡ್ತಿರೋ ದೀಪಾ ಸನ್ನಿಧಿ ಬಗ್ಗೆ ಯಾರ ಜೊತೆಗೂ ಸರಿಯಾಗಿ ಮಾತನಾಡಲ್ಲ ಅನ್ನುವ ದೂರೊಂದಿತ್ತು. ಯಾರ್ಯಾರೋ `ಅವಕಾಶ' ಕೇಳ್ತಿದ್ದಿದ್ದರಿಂದ ಅಂತಹ ದೊಡ್ಡ ದೊಡ್ಡ ನಿರ್ಮಾಪಕರು ನಿರ್ದೇಶಕರ ಫೋನ್ ಕರೆಗಳನ್ನೂ ದೀಪಾ ಇವತ್ತಿಗೂ ರಿಸೀವ್ ಮಾಡೋದಿಲ್ವಂತೆ.

ಅದೊಂದು ಅನುಮಾನ

ಅದೊಂದು ಅನುಮಾನ

ಮೊದಲ ಸಿನಿಮಾದಲ್ಲೇ ದೊಡ್ಡ ಸ್ಟಾರ್ಗಳಿಗೆ ಜೋಡಿಯಾಗಿದ್ದಾರೆ ಅಂದ್ರೆ `ಅವಕಾಶ' ಕೊಟ್ಟಿದ್ರಿಂದಾನೆ ಅವ್ರ ಜೊತೆ ನಟಿಸೋ ಅವಕಾಶ ಸಿಕ್ಕಿರುತ್ತೆ. ಹಾಗಾಗಿ ಇವ್ರು ಸುಲಭವಾಗಿ ನಮ್ಗೂ ಸಿಕ್ತಾರೆ ಅಂತ ನಿರ್ಧರಿಸ್ತಾರೆ ನಿರ್ಮಾಪಕರು ಮತ್ತು ನಿರ್ದೇಶಕರು ಅನ್ನೋದು ಗಾಂಧಿನಗರದ ಪಂಡಿತರ ಪಡಸಾಲೆಯ ಮಾತು. [ಕಾಮುಕರ ವಿರುದ್ಧ ನಟ 'ಮೈನಾ' ಚೇತನ್ ಕಿಡಿ]

ಅದೆಷ್ಟು ಪ್ರತಿಭೆಗಳ ಪಲಾಯನವೋ

ಅದೆಷ್ಟು ಪ್ರತಿಭೆಗಳ ಪಲಾಯನವೋ

ಇಂತಹಾ ವಿಚಾರದಿಂದ ನೊಂದು ಪಲಾಯನವಾಗಿರೋ ಪ್ರತಿಭಾವಂತ ನಟಿಯರು ಹಲವರಿದ್ದಾರೆ. ಆದ್ರೆ ಯಾರಿಗೂ ಅದನ್ನ ಹೇಳಿಕೊಳ್ಳುವ ಧೈರ್ಯವಿಲ್ಲ. ಆದ್ರೆ ಸಿನಿಮಾರಂಗದಲ್ಲಿ ನಿಜಕ್ಕೂ ಹೀಗಾಗುತ್ತಾ ಅಂತ ಕೇಳೋರಿಗೆ ನಮ್ಹತ್ರಾನೂ ಉತ್ತರವಿಲ್ಲ.

English summary
Why talented actresses are not getting opportunities in Kannada film industry? Answer is very simple. The talented are not ready to compromise with anyone for getting any role. That's why actresses like Deepa Sannidhi, Sindhu Loknath are not getting big roles in Kannada movies.
Please Wait while comments are loading...

Kannada Photos

Go to : More Photos