»   » 'ಕಲ್ಪನಾ-2' ಚಿತ್ರದಲ್ಲಿ ಉಪೇಂದ್ರ ಜೊತೆ ರಾಧಿಕಾ ಪಂಡಿತ್?

'ಕಲ್ಪನಾ-2' ಚಿತ್ರದಲ್ಲಿ ಉಪೇಂದ್ರ ಜೊತೆ ರಾಧಿಕಾ ಪಂಡಿತ್?

Written by: ಹರಾ
Subscribe to Filmibeat Kannada

ನಟಿ ರಾಧಿಕಾ ಪಂಡಿತ್ ಈಗೇನ್ಮಾಡ್ತಿದ್ದಾರೆ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗೆ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ZOOಮ್' ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಇದರ ನಡುವೆ ನಟಿ ರಾಧಿಕಾ ಪಂಡಿತ್ ಗೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ಅದು ಯಾವ ಚಿತ್ರಕ್ಕೆ ಅಂದ್ರೆ, ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ 'ಕಾಂಚನಾ-2' ರೀಮೇಕ್ 'ಕಲ್ಪನಾ-2'.

kalpana-2

ಗಾಂಧಿನಗರದಲ್ಲಿ ಕೇಳಿ ಬಂದ ಸುದ್ದಿ ಪ್ರಕಾರ, 'ಕಲ್ಪನಾ-2' ಚಿತ್ರದ ನಾಯಕಿ ಪಾತ್ರಕ್ಕೆ ನಟಿ ರಾಧಿಕಾ ಪಂಡಿತ್ ರನ್ನ ಸಂಪರ್ಕಿಸಲಾಗಿದೆ. ಈಗಾಗಲೇ ಒಂದ್ ರೌಂಡ್ ಮಾತುಕತೆ ಕೂಡ ನಡೆದಿದೆ. ಸಿನಿಮಾದ ಬಗ್ಗೆ ಆಸಕ್ತಿ ತೋರಿಸಿರುವ ರಾಧಿಕಾ ಪಂಡಿತ್ ಇನ್ನೂ ಅಧಿಕೃತ ಒಪ್ಪಿಗೆ ನೀಡಿಲ್ಲ. [ಉಪೇಂದ್ರ ಅವರ ಮುಂದಿನ ಚಿತ್ರ ಯಾವುದು ಗೊತ್ತಾ?]

'ಕಲ್ಪನಾ-2' ಚಿತ್ರಕ್ಕೆ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ. 'ಕಾಂಚನಾ' ಚಿತ್ರದ ರೀಮೇಕ್ ಆಗಿದ್ದ 'ಕಲ್ಪನಾ' ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿತ್ತು. ಇದೀಗ 'ಕಲ್ಪನಾ-2' ಸರದಿ. ಪಾತ್ರವರ್ಗ ಕನ್ಫರ್ಮ್ ಆದ ತಕ್ಷಣ 'ಕಲ್ಪನಾ-2' ಶೂಟಿಂಗ್ ಶುರುವಾಗಲಿದೆ.

English summary
According to the Grapevine, Kannada Actress Radhika Pandit will play lead opposite Real Star Upendra in upcoming Kannada Movie 'Kalpana-2'. But the Actress has not confirmed yet.
Please Wait while comments are loading...

Kannada Photos

Go to : More Photos