»   » ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?

ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?

Written by: ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ' ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಸೆಟ್ಟೇರುವ ಮುನ್ನವೇ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿಯೂ 'ಕುರುಕ್ಷೇತ್ರ' ಬೇಜಾನ್ ಹವಾ ಸೃಷ್ಟಿ ಮಾಡಿದೆ.

'ಬಾಹುಬಲಿ' ಚಿತ್ರಕ್ಕೆ ಸೆಡ್ಡು ಹೊಡೆಯುವ ಮಟ್ಟಕ್ಕೆ 'ಕುರುಕ್ಷೇತ್ರ' ತಯಾರು ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗಲೇ, 'ಕುರುಕ್ಷೇತ್ರ' ಸಿನಿಮಾದ ಬಗ್ಗೆ ಬಿಸಿ ಬಿಸಿ ಸುದ್ದಿಯೊಂದು ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಸುದ್ದಿ ಓದಿರಿ....

'ಕುರುಕ್ಷೇತ್ರ' ಸಿನಿಮಾದ ಬಗ್ಗೆ ಬಿಸಿ ಬಿಸಿ ಸುದ್ದಿ

'ಕುರುಕ್ಷೇತ್ರ' ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ರೆಬೆಲ್ ಸ್ಟಾರ್ ಅಂಬರೀಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೆಲ್ಲ ಒಟ್ಟಾಗಿ ಅಭಿನಯಿಸುತ್ತಾರೆ ಎಂಬ ಸುದ್ದಿ ಈ ಹಿಂದೆ ಬ್ರೇಕ್ ಆಗಿತ್ತು. ಆದ್ರೀಗ, ಈ ಸುದ್ದಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

'ಕುರುಕ್ಷೇತ್ರ' ಚಿತ್ರಕ್ಕೆ ಹೊಸ ಎಂಟ್ರಿ.?

ಇದೀಗ ಲೀಕ್ ಆಗಿರುವ ಸುದ್ದಿ ಪ್ರಕಾರ, 'ಕುರುಕ್ಷೇತ್ರ' ಸಿನಿಮಾದಲ್ಲಿ 'ಬಾಹುಬಲಿ' ಸಿನಿಮಾದ 'ಬಲ್ಲಾಳದೇವ' ಪಾತ್ರಧಾರಿ ರಾಣಾ ದಗ್ಗುಬಾಟಿ ಅಭಿನಯಿಸುತ್ತಾರಂತೆ.!

ಯಾವ ಪಾತ್ರ.?

'ಕುರುಕ್ಷೇತ್ರ' ಸಿನಿಮಾದಲ್ಲಿ ದುರ್ಯೋಧನ ಪಾತ್ರಧಾರಿ ದರ್ಶನ್ ಎದುರಾಳಿಯಾಗಿ 'ಭೀಮ' ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಲಿದ್ದಾರಂತೆ.!

ಸ್ಯಾಂಡಲ್ ವುಡ್ ಗೆ ಬರ್ತಾರಾ ರಾಣಾ.?

ಎ.ಎಮ್.ಆರ್.ರಮೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕನ್ನಡ 'ಆಸ್ಫೋಟ' ಸಿನಿಮಾದಲ್ಲಿ ನಟಿಸಲು ಟಾಲಿವುಡ್ ನಟ ರಾಣಾ ದಗ್ಗುಬಾಟಿ ಒಪ್ಪಿಕೊಂಡಿದ್ದಾರಂತೆ ಎಂಬ ಸುದ್ದಿ ಬ್ರೇಕ್ ಆಗುತ್ತಿದ್ದಂತೆಯೇ ಈಗ 'ಕುರುಕ್ಷೇತ್ರ' ಸಿನಿಮಾದಲ್ಲೂ ರಾಣಾ ಮಿಂಚಲಿದ್ದಾರೆ ಎಂಬ ಗುಸು ಗುಸು ಕೇಳಿಬಂದಿದೆ.

ಅಂತೆ-ಕಂತೆ

'ಕುರುಕ್ಷೇತ್ರ' ಸಿನಿಮಾದಲ್ಲಿ ರಾಣಾ ದಗ್ಗುಬಾಟಿ 'ಭೀಮ' ಪಾತ್ರ ಮಾಡುತ್ತಾರಂತೆ ಎಂಬ ಅಂತೆ-ಕಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಹಾಟ್ ಟಾಪಿಕ್' ಆಗಿದೆ. ಇದು ಸತ್ಯವೋ.. ಸುಳ್ಳೋ.. ಪಕ್ಕಾ ಆಗಿಲ್ಲ.

ಮುನಿರತ್ನ ಬಾಯಿಬಿಡುತ್ತಿಲ್ಲ.!

ಅಷ್ಟಕ್ಕೂ, 'ಭೀಮ' ಪಾತ್ರದಲ್ಲಿ ನಟಿಸಲು ರಾಣಾ ದಗ್ಗುಬಾಟಿ ರವರೊಂದಿಗೆ ನಿರ್ಮಾಪಕ ಮುನಿರತ್ನ ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ನಿರ್ದೇಶಕ ನಾಗಣ್ಣ ಕೂಡ ಮೌನ ಮುರಿದಿಲ್ಲ.

ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?

ಒಂದ್ವೇಳೆ 'ಕುರುಕ್ಷೇತ್ರ' ಸಿನಿಮಾದಲ್ಲಿ ರಾಣಾ ದಗ್ಗುಬಾಟಿ 'ಭೀಮ' ಪಾತ್ರದಲ್ಲಿ ಕಾಣಿಸಿಕೊಂಡರೆ.... ದರ್ಶನ್ ಹಾಗೂ ರಾಣಾ ನಡುವಿನ ಕಾಳಗದ ಸನ್ನಿವೇಶ ಸಿನಿ ಪ್ರಿಯರ ಕಣ್ಣಿಗೆ ಹಬ್ಬ ಆಗುವುದರಲ್ಲಿ ಸಂದೇಹವೇ ಇಲ್ಲ.

ಸ್ಯಾಂಡಲ್ ವುಡ್ ಸ್ಟಾರ್ ನಟರೆಲ್ಲಿ.?

ದರ್ಶನ್ ರವರ 50ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ಯಾರೆಲ್ಲ ಸ್ಯಾಂಡಲ್ ವುಡ್ ನಟರು ಅಭಿನಯಿಸುತ್ತಾರೆ ಎಂಬ ಕುರಿತು ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ.

WHAT OTHERS ARE READING
English summary
According to the latest Grapevine, Rana Daggubati to play 'Bheema' role in Challenging Star Darshan starrer 'Kurukshetra' produced by Muniratna and Directed by Naganna.
Please Wait while comments are loading...

Kannada Photos

Go to : More Photos