»   » ಏಂಜಲೀನಾ-ಬ್ರಾಡ್ ವಿಚ್ಛೇದನದ ಅಸಲಿ ಕಾರಣ ಇದು

ಏಂಜಲೀನಾ-ಬ್ರಾಡ್ ವಿಚ್ಛೇದನದ ಅಸಲಿ ಕಾರಣ ಇದು

Written by: Sonu Gowda
Subscribe to Filmibeat Kannada

ಹಾಲಿವುಡ್ ನ ಆದರ್ಶ ದಂಪತಿಗಳೆಂದೇ ಖ್ಯಾತಿ ಗಳಿಸಿರುವ ನಟಿ ಏಂಜಲೀನಾ ಜೋಲಿ ಮತ್ತು ಖ್ಯಾತ ನಟ ಕಮ್ ನಿರ್ಮಾಪಕ ಬ್ರಾಡ್ ಪಿಟ್ ಅವರು ಬೇರೆ-ಬೇರೆ ಆಗುತ್ತಿರುವ ವಿಚಾರ ತಿಳಿದೇ ಇದೆ.

ತಮ್ಮ ಮೂವರು ಸ್ವಂತ ಮಕ್ಕಳು ಸೇರಿ ಮೂವರು ಅನಾಥ ಮಕ್ಕಳನ್ನು ಬಹಳ ಆಸ್ಥೆಯಿಂದ ನೋಡಿಕೊಳ್ಳುತ್ತಿರುವ ಏಂಜಲೀನಾ ದಂಪತಿ ಮಧ್ಯೆ, ಕೆಲವು ಸಮಯಗಳಿಂದ ವಿರಸ ಮೂಡಿತ್ತು. ಈ ವಿರಸಕ್ಕೆ ಪ್ರಮುಖ ಕಾರಣ ಮಕ್ಕಳಂತೆ.

ನಟ ಬ್ರಾಡ್ ಪಿಟ್ ಅವರು 6 ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಏನೂ ಅರಿಯದ ಪುಟ್ಟ ಕಂದಮ್ಮಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ, ಅವರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಅಂತ ನಟಿ ಏಂಜಲೀನಾ ಅವರು, ಸೋಮವಾರ (ಸೆಪ್ಟೆಂಬರ್ 19) ಕೋರ್ಟಿಗೆ ಸಲ್ಲಿಸಿದ ವಿಚ್ಛೇದನದ ಅರ್ಜಿಯಲ್ಲಿ ವಿವರವಾಗಿ ಬರೆದಿದ್ದರು.[ಜನಪ್ರಿಯ ಜೋಡಿಯಲ್ಲಿ ಬಿರುಕು, ಟ್ವಿಟ್ಟರಲ್ಲಿ ಹಾಸ್ಯದ ಹೊಳೆ]

ಮಾತ್ರವಲ್ಲದೇ ಮಕ್ಕಳ ಮೇಲೆ ದೌರ್ಜನ್ಯ ಮಾಡಿದ್ದನ್ನು ತೀವ್ರವಾಗಿ ಖಂಡಿಸಿರುವ ನಟಿ ಏಂಜಲೀನಾ ತಮ್ಮ ಪತಿ ಬ್ರಾಡ್ ಪಿಟ್ ಅವರನ್ನು ವಿಚಾರಣೆ ನಡೆಸಬೇಕು ಅಂತ ಕೂಡ ಕೋರ್ಟಿನಲ್ಲಿ ಕೇಳಿಕೊಂಡಿದ್ದರು. ಮುಂದೆ ಓದಿ....

ಬ್ರಾಡ್ ಪಿಟ್ ವಿರುದ್ಧ ತನಿಖೆ

ಬ್ರಾಡ್ ಪಿಟ್ ವಿರುದ್ಧ ತನಿಖೆ

ಇದೀಗ ಈ ವಿಚಾರವನ್ನು ಮುಂದಿಟ್ಟುಕೊಂಡ 'ಸಂಯುಕ್ತ ತನಿಖಾ ದಳ'(ಎಫ್ ಬಿ ಐ) ನಟ ಬ್ರಾಡ್ ಪಿಟ್ ವಿರುದ್ಧ ತನಿಖೆಯನ್ನು ಶುರು ಹಚ್ಚಿದೆ. ಈಗಾಗಲೇ ಬ್ರಾಡ್ ಪಿಟ್ ಅವರ ವಿರುದ್ಧ ತನಿಖೆ ಮುಂದುವರಿದಿದ್ದು, ಈ ಬಗ್ಗೆ ಮಾಧ್ಯಮಕ್ಕೆ ಹೆಚ್ಚಿನ ಮಾಹಿತಿ ಒದಗಿಸದೆ ಬಹಳ ಗೌಪ್ಯವಾಗಿ ತನಿಖೆ ನಡೆಸಲಾಗುತ್ತಿದೆ.[ಏಂಜಲಿನಾ ಜೋಲಿ ಎರಡೂ ಸ್ತನ ತೆಗೆಸಲು ಕಾರಣ?]

ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ

ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ

ಅಂದಹಾಗೆ ತಮಾಷೆ ಏನಪ್ಪಾ ಅಂದ್ರೆ, 'ಎಫ್ ಬಿ ಐ' ತನಿಖೆ ಶುರು ಮಾಡಿದರೂ ಕೂಡ ಲಾಸ್ ಏಂಜಲೀಸ್ ಪೊಲೀಸರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದೆನಿಸುತ್ತಿದೆ. ಏಕೆಂದರೆ ಏಂಜಲೀನಾ ತಮ್ಮ ಪತಿ ವಿರುದ್ಧ ಇಷ್ಟೆಲ್ಲಾ ಹೇಳಿಕೊಂಡರು, ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲವಂತೆ.[ಕ್ಯಾನ್ಸರ್ ಮೆಟ್ಟಿ ನಿಂತ ಸೆಲೆಬ್ರಿಟಿಗಳಿಗೆ ಸೆಲ್ಯೂಟ್]

ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದ ದಂಪತಿ

ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದ ದಂಪತಿ

41 ವರ್ಷದ ನಟಿ ಏಂಜಲೀನಾ ಮತ್ತು 52 ವರ್ಷದ ನಟ-ನಿರ್ಮಾಪಕ ಬ್ರಾಡ್ ಪಿಟ್ ಅವರ ಸಂಸಾರಕ್ಕೆ ಬೆಂಕಿ ಬಿದ್ದ ವಿಚಾರ, ಸಾಮಾಜಿಕ ಜಾಲತಾಣಗಳಲ್ಲಿ ವಿಧ-ವಿಧವಾಗಿ ಅಪಹಾಸ್ಯಕ್ಕೆ ಗುರಿಯಾಗಿದೆ.[ಬ್ರಾಡ್ ಜೊತೆ ಏಂಜಲೀನಾ ಜೋಲಿ ಡುಂ ಡುಂ ಡುಂ]

ಮಕ್ಕಳು ತನ್ನ ಸುಪರ್ದಿಗೆ ಬೇಕೆಂದ ಏಂಜಲೀನಾ

ಮಕ್ಕಳು ತನ್ನ ಸುಪರ್ದಿಗೆ ಬೇಕೆಂದ ಏಂಜಲೀನಾ

ತಮ್ಮಿಬ್ಬರ ನಡುವೆ ಸರಿಪಡಿಸಲಾಗದಂತಹ ಸಮಸ್ಯೆಗಳಿರುವುದರಿಂದ, ತಮ್ಮ 3 ಸ್ವಂತ ಮಕ್ಕಳು ಮತ್ತು 3 ದತ್ತು ಮಕ್ಕಳನ್ನು ತನ್ನ ಸುಪರ್ದಿಗೆ ನೀಡಬೇಕೆಂದು ನಟಿ ಏಂಜಲೀನಾ ಕೋರ್ಟಿನಲ್ಲಿ ವಿಜ್ಞಾಪನೆ ಮಾಡಿಕೊಂಡಿದ್ದಾರೆ.

English summary
Hollywood Actor-Producer Brad Pitt is being investigated after being accused of verbal and physical abuse against his children.
Please Wait while comments are loading...

Kannada Photos

Go to : More Photos