»   » 'ಜೇಮ್ಸ್ ಬಾಂಡ್' ಸರಣಿಗೆ ಡೇನಿಯಲ್ ಕ್ರೇಗ್ ಕೇಳಿದ ಸಂಭಾವನೆ ಇಷ್ಟೊಂದಾ?

'ಜೇಮ್ಸ್ ಬಾಂಡ್' ಸರಣಿಗೆ ಡೇನಿಯಲ್ ಕ್ರೇಗ್ ಕೇಳಿದ ಸಂಭಾವನೆ ಇಷ್ಟೊಂದಾ?

Written by: ಸೋನು ಗೌಡ
Subscribe to Filmibeat Kannada

ಹಾಲಿವುಡ್ ನಲ್ಲಿ 'ಜೇಮ್ಸ್ ಬಾಂಡ್-ಸೀರಿಸ್' ಸಿನಿಮಾಗಳು ಬಿಸಿ-ಬಿಸಿ ಕೇಕ್ ನಂತೆ ಖರ್ಚಾಗುತ್ತದೆ. 'ಜೇಮ್ಸ್ ಬಾಂಡ್' ಪ್ರತೀ ಸರಣಿ ಬಂದಾಗಲೂ ಅದು ಯಶಸ್ವಿ ಪ್ರದರ್ಶನ ಕಾಣುತ್ತದೆ. 'ಜೇಮ್ಸ್ ಬಾಂಡ್ ಏಜೆಂಟ್ 007' ಸರಣಿಯ ಎಲ್ಲಾ ಚಿತ್ರಗಳು ಸೂಪರ್-ಡೂಪರ್ ಹಿಟ್ ಆಗಿವೆ.

ಇದೀಗ ಮತ್ತೆ 'ಜೇಮ್ಸ್ ಬಾಂಡ್' ಸರಣಿ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ. ಇನ್ನು 'ಜೇಮ್ಸ್ ಬಾಂಡ್' ಪಾತ್ರದಲ್ಲಿ ಯಾವಾಗಲೂ ತೆರೆಯ ಮೇಲೆ ಮಿಂಚುವ ಏಕೈಕ ವ್ಯಕ್ತಿ, ಅದು ಡೇನಿಯಲ್ ಕ್ರೇಗ್ ಅವರು.['ಜೇಮ್ಸ್ ಬಾಂಡ್' ಚಿತ್ರಗಳ ಸರದಾರ ಗಯ್ ಹ್ಯಾಮಿಲ್ಟನ್ ಇನ್ನಿಲ್ಲ]

ಆದ್ದರಿಂದ ಈ ಬಾರಿ ಕೂಡ ಹೊಸ ಸರಣಿಯಲ್ಲಿ ಡೇನಿಯಲ್ ಕ್ರೇಗ್ ಮಿಂಚುವ ಸಾಧ್ಯತೆ ಇದೆ. ಮಾತ್ರವಲ್ಲದೇ ಈಗಾಗಲೇ ಡೇನಿಯಲ್ ಅವರ ಜೊತೆ ಮಾತು-ಕತೆ ಕೂಡ ನಡೆದಿದೆ. ಮಾತು-ಕತೆ ಏನೋ ನಡೆದಿದೆ, ಆದ್ರೆ ಈ ಬಾಂಡ್ ಪಾತ್ರ ಮಾಡಲು ಕ್ರೇಗ್ ಎಷ್ಟು ಸಂಭಾವನೆ ಕೇಳಿದ್ದಾರೆ ಗೊತ್ತಾ?, ತಿಳಿಯಲು ಮುಂದೆ ಓದಿ...

ಅಬ್ಬಬ್ಬಾ..ಇಷ್ಟೊಂದು ಸಂಭಾವನೆನಾ?

ಅಬ್ಬಬ್ಬಾ..ಇಷ್ಟೊಂದು ಸಂಭಾವನೆನಾ?

ಅಂದಹಾಗೆ ಬಾಂಡ್ ಪಾತ್ರ ನಿರ್ವಹಿಸಲು ಡೇನಿಯಲ್ ಆಫರ್ ಮಾಡಿದ ಸಂಭಾವನೆ ಕೇಳಿದ್ರೆ, ಒಂದ್ಸಾರಿ ತಲೆ ಗಿರ್ರ್ ಅನ್ನೋದು ಪಕ್ಕಾ. ಯಾಕೆಂದ್ರೆ ಡೇನಿಯಲ್ ಕ್ರೇಗ್ ಬರೋಬ್ಬರಿ 150 (996 ಕೋಟಿ ರೂಪಾಯಿ) ಮಿಲಿಯನ್ ಡಾಲರ್ ಸಂಭಾವನೆ ಕೇಳಿದ್ದಾರಂತೆ. [ಜೇಮ್ಸ್ ಬಾಂಡ್ 'ಸ್ಪೆಕ್ಟ್ರಾ' ಅಷ್ಟಕಷ್ಟೆ.? ವಿಮರ್ಶಕರ ಮಾತೇನು?]

ಕೇಳಿದಷ್ಟು ಸಂಭಾವನೆ ಕೊಡಲು ಸಿದ್ದವಾದ ಸಂಸ್ಥೆ

ಕೇಳಿದಷ್ಟು ಸಂಭಾವನೆ ಕೊಡಲು ಸಿದ್ದವಾದ ಸಂಸ್ಥೆ

ಇನ್ನು ಡೇನಿಯಲ್ ಕ್ರೇಗ್ ಅವರಿಗೆ ಸಾವಿರಾರು ಅಭಿಮಾನಿಗಳು ಇರೋದ್ರಿಂದ, ಬಾಂಡ್ ಪಾತ್ರದಲ್ಲಿ ಅವರನ್ನೇ ನೋಡಲು ಅಭಿಮಾನಿಗಳು ಇಚ್ಛಿಸುತ್ತಾರೆ. ಹಾಗಾಗಿ ಆ ಕಾರಣದಿಂದಾಗಿಯೂ ಕ್ರೇಗ್ ಆಫರ್ ಮಾಡಿದಷ್ಟು ಸಂಭಾವನೆ ನೀಡಲು ಚಿತ್ರತಂಡ ತಯಾರಾಗಿದೆಯಂತೆ.[24ನೇ ಜೇಮ್ಸ್ ಬಾಂಡ್ ಚಿತ್ರದ ಹೆಸರು SPECTRE]

ಡೇನಿಯಲ್ ಮತ್ತು ಚಿತ್ರತಂಡದ ಒಪ್ಪಂದ ಮುರಿದು ಬಿದ್ದಿತ್ತು

ಡೇನಿಯಲ್ ಮತ್ತು ಚಿತ್ರತಂಡದ ಒಪ್ಪಂದ ಮುರಿದು ಬಿದ್ದಿತ್ತು

ಈ ಕೆಲವು ಸಮಯಗಳ ಹಿಂದೆ ಸೋನಿ ಸಂಸ್ಥೆ ಹಾಗೂ ಡೇನಿಯಲ್ ಕ್ರೇಗ್ ನಡುವಿನ ಒಪ್ಪಂದ ಮುರಿದು ಬಿದ್ದಿತ್ತು. ತದನಂತರ ಬಾಂಡ್ ಸರಣಿಯಲ್ಲಿ ನಟಿಸದಿರಲು ಕ್ರೇಗ್ ಕೂಡ ನಿರ್ಧಾರ ತಳೆದಿದ್ದರು.[ಕ್ರೇಗ್ ಮತ್ತೆ ಸೂಪರ್ ಏಜೆಂಟ್ ಜೇಮ್ಸ್ ಬಾಂಡ್]

ಮತ್ತೆ ಡೇನಿಯಲ್ ಬರ್ತಾರಾ?

ಮತ್ತೆ ಡೇನಿಯಲ್ ಬರ್ತಾರಾ?

ಇನ್ನು ಸೋನಿ ಸ್ಟುಡಿಯೋ ಕೂಡ ಕ್ರೇಗ್ ಜಾಗಕ್ಕೆ ಬೇರೆ ನಟರನ್ನು ಕರೆ ತರಲು ಇಷ್ಟೂದ್ದ ಲಿಸ್ಟ್ ಕೂಡ ತಯಾರು ಮಾಡಿತ್ತು. ಆದರೆ ಕ್ರೇಗ್ ಬದಲು ಬೇರೆಯವರನ್ನು ಹಾಕಿ, ಆಮೇಲೆ ಎಲ್ಲಿ 'ಬಾಂಡ್' ಸರಣಿ ಇದರಿಂದ ಸೋತು ನೆಲಕಚ್ಚಬಹುದು, ಅನ್ನೋ ಭಯದಿಂದ ಮತ್ತೆ ಡೇನಿಯಲ್ ಮನ ಒಲಿಸಲು ಸಂಸ್ಥೆ ನಿರ್ಧರಿಸಿದೆ. ಇದಕ್ಕೆ ಕ್ರೇಗ್ ಏನಂತಾರೆ ಕಾದು ನೋಡಬೇಕಿದೆ.

English summary
According to Radar Online, 'James Bond' Actor Daniel Craig has been offered a staggering $150 million (Rs 996 crore) to return as Agent 007 for two more films.
Please Wait while comments are loading...

Kannada Photos

Go to : More Photos