»   » ಆಭರಣ ಜಾಹೀರಾತಿಗೆ ಬಟ್ಟೆ ಕಳಚಿದ ತಾರೆ

ಆಭರಣ ಜಾಹೀರಾತಿಗೆ ಬಟ್ಟೆ ಕಳಚಿದ ತಾರೆ

Written by: ರವಿಕಿಶೋರ್
Subscribe to Filmibeat Kannada
Actress Katie Holmes
ಈ ಸಾಹಸ ಇನ್ಯಾರು ಮಾಡಲಿಕ್ಕೆ ಸಾಧ್ಯ. ಖಂಡಿತ ನಮ್ಮ ಸ್ಯಾಂಡಲ್ ವುಡ್ ತಾರೆಗಳಂತೂ ಅಲ್ಲವೇ ಅಲ್ಲ ಬಿಡಿ. ಇನ್ನು ಬಾಲಿವುಡ್ ತಾರೆಗಳು ಈ ಸಾಹಸಕ್ಕೆ ಕೈ ಹಾಕುತ್ತಿದ್ದರೇನೋ ಆದರೆ ಛಾನ್ಸ್ ಹಾಲಿವುಡ್ ತಾರೆ ಕೇಟ್ ಹೋಮ್ಸ್ ಹೊಡೆದಿದ್ದಾರೆ.

ಹೊಸ ಬ್ರ್ಯಾಂಡ್ 'ಐರಿಶ್' ಚಿನ್ನಾಭರಣಕ್ಕಾಗಿ ಈಕೆ ಬಟ್ಟೆ ಕಳಚಿದ್ದಾರೆ. ಮೂವತ್ಕಾಲ್ಕರ ಹರೆಯದ ಈ ತಾರೆಯ ಟಾಪ್ ಲೆಸ್ ನ ಹಲವಾರು ಭಂಗಿಯ ಚಿತ್ರಗಳು ಈಗ ಜಗಜ್ಜಾಹೀರಾಗಿವೆ. ತರಹೇವಾರಿ ಚಿನ್ನಾಭರಣಗಳ ಜೊತೆಗೆ ತಮ್ಮ ಸೌಂದರ್ಯನ್ನೂ ತೆರೆದಿಟ್ಟಿದ್ದಾರೆ ಕೇಟ್.

'ಜಿಕ್ಯು' ಪತ್ರಿಕೆ ಇತ್ತೀಚೆಗಷ್ಟೇ ಕೇಟ್ ಅವರ 'ದಿ ಗಿಫ್ಟ್' ಚಿತ್ರದ ಬಗ್ಗೆ ಬರೆಯುತ್ತಾ "21ನೇ ಶತಮಾನದ ಸೆಕ್ಸಿಯಸ್ಟ್ ಸೀನ್" ಎಂದು ಬಣ್ಣಿಸಿತ್ತು. ಬ್ಯಾಟ್ ಮೆನ್ ಬಿಗಿನ್ಸ್, ಜಾಕ್ ಅಂಡ್ ಜಿಲ್, ಫಸ್ಟ್ ಡಾಟರ್ ಮುಂತಾದ ಚಿತ್ರಗಳಲ್ಲಿ ಕೇಟ್ ಹೋಮ್ಸ್ ಅಭಿನಯಿಸಿದ್ದಾರೆ.

ಮಾರ್ಚ್ 2011ರಲ್ಲಿ ಸ್ಟಾರ್ ಪತ್ರಿಕೆ ಮೇಲೆ ಕೇಟ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈಕೆಯ ಮಾದಕ ವ್ಯಸನದ ಬಗ್ಗೆ ಪತ್ರಿಕೆ ವಿಷದವಾಗಿ ಮುಖಪುಟ ಸುದ್ದಿ ಮಾಡಿತ್ತು. ಈ ಸಂಬಂಧ ಕೇಟ್ ಪತ್ರಿಕೆ ವಿರುದ್ಧ 50 ದಶಲಕ್ಷ ಡಾಲರ್ ಪರಿಹಾರಕ್ಕೆ ಆಗ್ರಹಿಸಿದ್ದರು. ಬಳಿಕ ಸ್ಟಾರ್ ಪತ್ರಿಕೆ ಬಹಿರಂಗ ಕ್ಷಮೆಯಾಚಿಸುವ ಮೂಲಕ ಕೇಸ್ ಖುಲಾಸೆಯಾಗಿತ್ತು. (ಏಜೆನ್ಸೀಸ್)

English summary
Actress Katie Holmes has posed topless for a new advertisement for a jewellery brand. The 34-year-old former 'Dawson's Creek' actress is the face of Han Stern's new jewellery collection.
Please Wait while comments are loading...

Kannada Photos

Go to : More Photos