»   » ಹಾಲಿವುಡ್ ಚಿತ್ರ ನಿರ್ದೇಶನಕ್ಕೆ ಆಪ್ತಮಿತ್ರ ವಾಸು

ಹಾಲಿವುಡ್ ಚಿತ್ರ ನಿರ್ದೇಶನಕ್ಕೆ ಆಪ್ತಮಿತ್ರ ವಾಸು

Posted by:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರ ನೀಡಿದ 'ಆಪ್ತಮಿತ್ರ' ಚಿತ್ರದ ನಿರ್ದೇಶಕ ಪಿ ವಾಸು ಹಾಲಿವುಡ್ ಕಡೆ ಪಯಣಿಸುತ್ತಿದ್ದಾರೆ. ಹಾಲಿವುಡ್ ನಿರ್ಮಾಪಕ ಮತ್ತು ಭಾರತೀಯ ಮೂಲದ ರಾಜ್ ತಿರುಚೆಲ್ವನ್ ನಿರ್ಮಿಸುತ್ತಿರುವ ಚಿತ್ರಕ್ಕೆ ವಾಸು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳನ್ನು ನಿರ್ದೇಶಿಸಿರುವ ವಾಸು ಸುಮಾರು ಅರವತ್ತು ಚಿತ್ರಗಳನ್ನು ಇದುವರೆಗೆ ನಿರ್ದೇಶಿಸಿದ್ದಾರೆ. ಆಪ್ತಮಿತ್ರ ಮತ್ತು ಚಂದ್ರಮುಖಿ ಚಿತ್ರಗಳು ವಾಸು ವೃತ್ತಿ ಜೀವನಕ್ಕೆ ಹೊಸ ಆಯಾಮವನ್ನು ನೀಡಿತ್ತು.

ಸೆಪ್ಟಂಬರ್ 15, 1954ರಲ್ಲಿ ಕೇರಳದಲ್ಲಿ ಜನಿಸಿದ ಪಿ ವಾಸು ಯಾನೆ ವಾಸುದೇವನ್ ಪೀತಾಂಬರಂ ತನ್ನ 19ನೇ ವರ್ಷದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಸಂತಾನ ಭಾರತಿ ಜೊತೆ ಸಹಾಯಕ ನಿರ್ದೇಶಕರಾಗಿ ದುಡಿದ ವಾಸು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು.

ಹಾಲಿವುಡ್ ನಲ್ಲಿ ಚಿತ್ರ ನಿರ್ದೇಶಿಸುತ್ತಿರುವ ವಾಸು ಅವರಿಗೆ ಬೆಸ್ಟ್ ಆಫ್ ಲಕ್ ಹೇಳುತ್ತಾ ಅವರು ಕನ್ನಡದಲ್ಲಿ ನಿರ್ದೇಶಿಸಿದ ಏಳು ಹಿಟ್ ಚಿತ್ರಗಳು ಸ್ಲೈಡಿನಲ್ಲಿ...

ಕಥಾನಾಯಕ

ಕಥಾನಾಯಕ

1985ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಡಾ.ವಿಷ್ಣುವರ್ಧನ್, ಸುಮಲತಾ ಪ್ರಮುಖ ಭೂಮಿಕೆಯಲ್ಲಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತ್ತು.

ಜಯಸಿಂಹ

ಜಯಸಿಂಹ

ವಾಸು ನಿರ್ದೇಶನದ ಮತ್ತೊಂದು ಹಿಟ್ ಚಿತ್ರ. ಡಾ.ವಿಷ್ಣು, ಮಹಾಲಕ್ಷ್ಮಿ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರ 1987ರಲ್ಲಿ ತೆರೆಕಂಡಿತ್ತು.

ಜೀವನಜ್ಯೋತಿ

ಜೀವನಜ್ಯೋತಿ

ಕನ್ನಡದಲ್ಲಿ ವಾಸು ನಿರ್ದೇಶನದ ಮೂರನೇ ಚಿತ್ರ. ಡಾ.ವಿಷ್ಣುವರ್ಧನ್, ಅಂಬಿಕಾ ಅಭಿನಯದ ಈ ಚಿತ್ರ 1987ರಲ್ಲಿ ಬಿಡುಗಡೆಯಾಗಿತ್ತು. ವಿಷ್ಣು ಮತ್ತು ವಾಸು ವೃತ್ತಿ ಜೀವನದ ಯಶಸ್ವಿ ಚಿತ್ರಗಳಲ್ಲೊಂದು.

ಹೃದಯವಂತ

ಹೃದಯವಂತ

2003ರಲ್ಲಿ ಬಿಡುಗಡೆಯಾದ ಮತ್ತೊಂದು ಹಿಟ್ ಚಿತ್ರ. ಡಾ.ವಿಷ್ಣುವರ್ಧನ್, ನಗ್ಮಾ ಮತ್ತು ಅನು ಪ್ರಭಾಕಾರ್ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರ,

ಆಪ್ತಮಿತ್ರ

ಆಪ್ತಮಿತ್ರ

ಸತತವಾಗಿ ಒಂದು ವರ್ಷ ಪ್ರದರ್ಶನ ಕಂಡ ಬ್ಲಾಕ್ ಬಸ್ಟರ್ ಚಿತ್ರ. 2004ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಡಾ.ವಿಷ್ಣುವರ್ಧನ್, ರಮೇಶ್, ಸೌಂದರ್ಯ, ಪ್ರೇಮಾ ಪ್ರಮುಖ ಭೂಮಿಕೆಯಲ್ಲಿದ್ದರು.

ಆಪ್ತರಕ್ಷಕ

ಆಪ್ತರಕ್ಷಕ

ಡಾ. ವಿಷ್ಣುವರ್ಧನ್ ಅಭಿನಯದ ಕೊನೆಯ ಈ ಚಿತ್ರ 2010ರಲ್ಲಿ ಬಿಡುಗಡೆಯಾಯಿತು. ಸಂಧ್ಯಾ, ವಿಮಲಾ ರಾಮನ್, ಕೋಮಲ್, ಅವಿನಾಶ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ಆರಕ್ಷಕ

ಆರಕ್ಷಕ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ಚಿತ್ರ 2012ರಲ್ಲಿ ತೆರೆಕಂಡಿತು. ಚಿತ್ರ ವಿಚಿತ್ರ ತಿರುವಿರುವ ಈ ಚಿತ್ರ ಯಶಸ್ವಿಯಾಗಿತ್ತು. ಸದಾ, ರಾಗಿಣಿ ದ್ವಿವೇದಿ ಪ್ರಮುಖ ತಾರಾಗಣದಲ್ಲಿದ್ದರು.

English summary
Apthamitra fame director P Vasu directing Hollywood movie. He is directing for well known Hollywood producer Raja Chelwan movie.
Please Wait while comments are loading...

Kannada Photos

Go to : More Photos