twitter
    For Quick Alerts
    ALLOW NOTIFICATIONS  
    For Daily Alerts

    2016 ರ ಬೆಸ್ಟ್ ಹಾಲಿವುಡ್‌ ಸಿನಿಮಾಗಳಿವು..!

    ಹಾಲಿವುಡ್‌ ಸಿನಿಮಾಗಳಲ್ಲಿ 2016 ರ ಬೆಸ್ಟ್‌ ಸಿನಿಮಾ ಯಾವುದು? ನಾನು ಯಾವುದಾದ್ರು ಬೆಸ್ಟ್‌ ಸಿನಿಮಾ ನೋಡದೇ ಮಿಸ್ ಮಾಡಿಕೊಂಡಿದ್ದೀನಾ? ಅಂತ ಅಲೋಚನೆ ಮಾಡ್ತಿದ್ರೆ.. ಇಲ್ಲಿ ನೋಡಿ.

    By Suneel
    |

    2016 ಕ್ಕೆ ಬಾಯ್‌ ಹೇಳೋ ಮುನ್ನ ಸಿನಿಮಾ ಕ್ಷೇತ್ರದಲ್ಲಿ ಈ ವರ್ಷದ ಟಾಪ್‌ ಬ್ಲಾಕ್‌ಬಾಸ್ಟರ್ ಸಿನಿಮಾಗಳು ಯಾವುವು ಎಂದು ತಿಳಿಯುವುದು ಸಿನಿ ಪ್ರಿಯರ ಕ್ರೇಜ್. ಸಿನಿ ಪ್ರಿಯರು ಅಂದಮೇಲೆ ಸ್ಯಾಂಡಲ್‌ ವುಡ್ ಮಾತ್ರವಲ್ಲದೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳನ್ನು ನೋಡೋದು ಸಾಮಾನ್ಯ ಅಲ್ವಾ?[ಬಾಲಿವುಡ್ ನ 'ಲಂಚ್ ಬಾಕ್ಸ್' ನಿರ್ದೇಶಕ ಹಾಲಿವುಡ್‌ ನಲ್ಲಿ ಆಕ್ಷನ್ ಕಟ್.!]

    ಹಾಲಿವುಡ್‌ ಸಿನಿಮಾಗಳಲ್ಲಿ 2016 ರ ಬೆಸ್ಟ್‌ ಸಿನಿಮಾ ಯಾವುದು? ನಾನು ಯಾವುದಾದ್ರು ಬೆಸ್ಟ್‌ ಸಿನಿಮಾ ನೋಡದೇ ಮಿಸ್ ಮಾಡಿಕೊಂಡಿದ್ದೀನಾ? ಅಂತ ಅಲೋಚನೆ ಮಾಡ್ತಿದ್ರೆ.. ಇಲ್ಲಿ ನೋಡಿ. 2016 ರ ಬೆಸ್ಟ್‌ ಹಾಲಿವುಡ್ ಸಿನಿಮಾಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೀವಿ.[ಚೂರು ಯಾಮಾರಿದ್ರೆ, ಹಾಲಿವುಡ್ ನಲ್ಲಿ 'ಮಾಸ್ತಿಗುಡಿ' ಮಾದರಿ ದುರಂತ.!]

    ಅರೈವಲ್

    ಅರೈವಲ್

    ಸ್ಮಾರ್ಟ್ ಆಗಿ ಏಲಿಯನ್‌ ಸಂಪರ್ಕ ಬೆಸೆಯುವ ಕಥೆ ಆಧಾರಿತ ಸಿನಿಮಾ ಅರೈವಲ್. ಈ ಸಿನಿಮಾವನ್ನು ಡೆನಿಸ್ ವಿಲ್ಲೆನುವೆ ನಿರ್ದೇಶಿಸಿದ್ದಾರೆ. ಪ್ರೇಕ್ಷಕರಿಗೆ ನಿಧಾನವಾಗಿ ರೋಮಾಂಚನಕಾರಿ ಅನುಭವ ನೀಡುವ ಥ್ರಿಲ್ಲರ್ ಸಿನಿಮಾ 'ಅರೈವಲ್‌'.

    'ಅರೈವಲ್' ಸೈಂಟಿಫಿಕ್‌ ಏಲಿಯನ್‌ ಸಿನಿಮಾಗಳಿಗಿಂತ, ಸಿನಿಮಾದಲ್ಲಿನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಹೆಚ್ಚು ಸೆಳೆಯುತ್ತದೆ.

    ಫೆನ್ಸೆಸ್

    ಫೆನ್ಸೆಸ್

    'ಫೆನ್ಸೆಸ್' ಸಿನಿಮಾ ಪುಲಿಟ್ಜರ್ ಪ್ರಶಸ್ತಿ ವಿಜೇತ 'ಅಗಸ್ಟ್‌ ವಿಲ್ಸನ್' ರವರ ಡ್ರಾಮಾ ಆಧಾರಿತ ಸಿನಿಮಾ. ಸಿನಿಮಾದಲ್ಲಿ ಆಫ್ರಿಕನ್ ಅಮೆರಿಕನ್ ತಂದೆಯೊಬ್ಬರು 1950 ರಲ್ಲಿ ತನ್ನ ಕುಟುಂಬವನ್ನು ಒಂದುಗೂಡಿಸಲು ಶ್ರಮಿಸುವ ವ್ಯಥೆಯ ಕಥೆಯನ್ನು ಅತ್ಯುತ್ತಮವಾಗಿ ನಿರೂಪಿಸಲಾಗಿದೆ.

    ಫೆನ್ಸೆಸ್, ಸಿನಿಮಾದ ನಿರ್ದೇಶಕ ಡೆನ್ಝೆಲ್ ವಾಷಿಂಗ್ಟನ್ ದೊಡ್ಡ ನಗರವೊಂದರಲ್ಲಿ ಹಿರಿಯ ವ್ಯಕ್ತಿಯ ಜೀವನ ಹೇಗಿರುತ್ತದೆ ಎಂಬ ಚಿತ್ರಣವನ್ನು ಕಟ್ಟಿಕೊಡುವ ಮಾಸ್ಟರ್‌ ಪೀಸ್ ಚಿತ್ರ ಇದಾಗಿದೆ. ಡೆನ್ಝೆಲ್ ಸ್ವತಃ ತನ್ನ ಅಭಿನಯ ಮತ್ತು ನಿರ್ದೇಶನದ ಮೂಲಕ ಫೆನ್ಸೆಸ್ ಡ್ರಾಮಾದಲ್ಲಿರುವ ಪುಟಗಳಿಗೆ ಮರು ಜೀವ ತುಂಬಿದ್ದಾರೆ. ಈ ಫೀಲ್‌ ಸಿಗೋದು ಸಿನಿಮಾ ನೋಡಿದಾಗ ಮಾತ್ರ.

    ಜಾಕಿ

    ಜಾಕಿ

    ಪಾಬ್ಲೊ ಲಾರೈನ್ ರವರ ಜಾಕಿ ಒಂದು ಜೀವನ ಚರಿತ್ರೆ ಎಂಬುದಕ್ಕಿಂತ ಒಂದು ಕಲಾತ್ಮಕ ಸಿನಿಮಾ ಎಂದೇಳಬಹುದಾದ ಹಾಲಿವುಡ್ ಚಿತ್ರ. ಜಾಕಿ ಕೆನಡಿ, ತನ್ನ ಪತಿ ಜಾನ್ ಎಫ್‌ ಕೆನಡಿ ಮರಣದ ನಂತರ ಹೇಗೆ ಎಲ್ಲವನ್ನು ಕಳೆದುಕೊಂಡಂತೆ ಪ್ರತಿಕ್ರಿಯಿಸುತ್ತಾಳೆ, ನಂತರದಲ್ಲಿ ತಾನೇ ಹೇಗೆ ಎರಡು ಮಕ್ಕಳನ್ನು ನಿಭಾಯಿಸುತ್ತಾಳೆ ಎಂಬುದರ ಮೇಲೆ ಬೆಳಕು ಚೆಲ್ಲುವ ಕಥಾ ಹಂದರವನ್ನು ಸಿನಿಮಾ ಹೊಂದಿದೆ.

    ಈ ಸಿನಿಮಾ 2016 ರ ಡಿಸೆಂಬರ್ 2 ರಂದು ಬಿಡುಗಡೆಗೊಂಡಿತ್ತು. ಪಾಬ್ಲೊ ಲಾರೈನ್ ನಿರ್ದೇಶನದ ಈ ಚಿತ್ರ 1.6 ಮಿಲಿಯನ್ ಡಾಲರ್ ಗಳಿಸಿತ್ತು. ಅಲ್ಲದೇ ಗೋಲ್ಡೆನ್ ಲಯನ್, ಗ್ರ್ಯಾಂಡ್ ಜೂರಿ ಪ್ರಶಸ್ತಿಗಳಿಗೆ ನಾಮಿನೇಟ್ ಆಗಿತ್ತು.

    ಲಾ ಲಾ ಲ್ಯಾಂಡ್

    ಲಾ ಲಾ ಲ್ಯಾಂಡ್

    'ಲಾ ಲಾ ಲ್ಯಾಂಡ್', ಡೇಮಿಯನ್ ಛಾಝೆಲ್ಲೆ ನಿರ್ದೇಶಿಸಿರುವ ವನ್ನಾಬೆ ನಟಿ 'ಮಿಯಾ' ಮತ್ತು ಜಾಝ್ ಸಂಗೀತಗಾರ 'ಸೆಬಾಸ್ಟಿಯನ್' ಕಥೆ ಆಧಾರಿತ ಸಿನಿಮಾ. 'ಸೆಬಾಸ್ಟಿಯನ್‌' ತನ್ನ ಕನಸನ್ನು ನನಸು ಮಾಡಿಕೊಳ್ಳಲು ದಿನನಿತ್ಯ ತನ್ನ ನಗರದಲ್ಲಿ ಕಷ್ಟದ ಜೀವನ ಹೇಗೆ ನಡೆಸುತ್ತಿದ್ದ, ತನ್ನ ಗುರಿಗಳನ್ನು ಹೇಗೆ ತಾನೆ ನಾಶ ಮಾಡಿಕೊಂಡ ಎಂಬುದನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ.

    ಈ ಸಿನಿಮಾ 2016 ನವೆಂಬರ್ 9 ರಂದು ಬಿಡುಗಡೆ ಅಗಿತ್ತು. ಹಾಗೆ ಗಲ್ಲ ಪೆಟ್ಟಿಗೆಗೆ 30 ದಶಲಕ್ಷ ಡಾಲರ್ ಬಾಜಿಕೊಟ್ಟಿತ್ತು.

    ಮ್ಯಾನ್ಛೆಸ್ಟರ್ ಬೈ ದ ಸಿ

    ಮ್ಯಾನ್ಛೆಸ್ಟರ್ ಬೈ ದ ಸಿ

    2016 ರಲ್ಲಿ ಹಾಲಿವುಡ್‌ ನಲ್ಲಿ ಮೂಡಿಬಂದ ಮಾನವೀಯತೆಯ ಮೇಲೆ ಸೂಕ್ಷ್ಮವಾಗಿ ಬೆಳಕು ಚೆಲ್ಲುವ ಮತ್ತು ಕಾಮಿಡಿ ಸಿನಿಮಾ ಎಂದರೆ 'ಮ್ಯಾನ್ಛೆಸ್ಟರ್ ಬೈ ದ ಸಿ'. ಸಿನಿಮಾ ಕ್ಷೇತ್ರದಲ್ಲಿನ ಜನರ ಟ್ರಾಜಿಡಿ ಕಥೆಯ ಸಿನಿಮಾವಿದು.

    ಕೆನ್ನೆಥ್ ಲೊನೆರ್ಗನ್ ನಿರ್ದೇಶನದ ಈ ಚಿತ್ರ ಬಾಕ್ಸ್‌ ಆಫೀಸ್‌ಗೆ 15.2 ದಶಲಕ್ಷ ಡಾಲರ್ ಹಣ ಬಾಜಿಕೊಟ್ಟಿತ್ತು.

    ಮೂನ್‌ಲೈಟ್

    ಮೂನ್‌ಲೈಟ್

    'ಮೂನ್‌ಲೈಟ್' ಒಂದು ಕನಸಿನ ಚಿತ್ರ. ನಮ್ಮೊಳಗೆ ನಾವೇ ತಕ್ಷಣ ಆಲೋಚಿಸುವ ವ್ಯಾಮೋಹಕ ಸಂಗತಿಗಳ ಆಧಾರಿತ ಸಿನಿಮಾ. 2016 ರಲ್ಲಿ ಹಾಲಿವುಡ್‌ ಮಾಸ್ಟರ್ ಪೀಸ್‌ ಸಿನಿಮಾಗಳ ಸಾಲಿಗೆ ಸೇರಿದ ಚಿತ್ರಗಳಲ್ಲಿ 'ಮೂನ್‌ಲೈಟ್' ಸಹ ಒಂದು. 3 ಹೀರೋಗಳು ಅಭಿನಯಿಸಿರುವ ಈ ಚಿತ್ರ ಸಾಮಾಜಿಕ ಮತ್ತು ರಾಜಕೀಯ ಪ್ರಾಮುಖ್ಯತೆಗಳ ಮೇಲೆ ಬೆಳಕು ಚೆಲ್ಲುವ ವಾಸ್ತವಿಕ ಸಂಗತಿಗಳ ಆಧಾರಿತ ಸಿನಿಮಾವಾಗಿದೆ.

    ಮೂನ್‌ಲೈಟ್ ಸಿನಿಮಾವನ್ನು 'ಬ್ಯಾರಿ ಜೆಂಕಿನ್ಸ್ ' ಆಕ್ಷನ್‌ ಕಟ್ ಹೇಳಿದ್ದರು.

    English summary
    Here is the list of the top Hollywood movies in 2016 by Kannada Filmibeat. Go through the list.
    Sunday, December 25, 2016, 10:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X