»   » ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ

ಪ್ರಿಯಾಂಕ ಚೋಪ್ರಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ

Posted by:
Subscribe to Filmibeat Kannada

ಬಾಲಿವುಡ್ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ನಿಮಗೆಲ್ಲಾ ಗೊತ್ತಿರುವ ಹಾಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದ ನಟಿ. 'ಕ್ವಾಂಟಿಕೋ' ಟಿವಿ ಶೋ ನಲ್ಲಿ ಮಿಂಚುವುದರ ಮೂಲಕ ಹಾಲಿವುಡ್ ನಲ್ಲಿಯೂ ಹೆಚ್ಚು ಗಮನಸೆಳೆದಿದ್ದಾರೆ.[ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಮುಡಿಗೇರಿಸಿಕೊಂಡ ಪ್ರಿಯಾಂಕ ಚೋಪ್ರಾ]

ಅಂದಹಾಗೆ ಬಾಲಿವುಡ್ ದೇಶಿ ಗರ್ಲ್ ಪ್ರಿಯಾಂಕ ಚೋಪ್ರಾ ಬಗ್ಗೆ ಹೊಸ ಸುದ್ದಿಯೊಂದು ಬಂದಿದ್ದು, ಪ್ರಿಯಾಂಕ ಈಗ ಪ್ರಪಂಚದ ಎರಡನೇ ಮೋಸ್ಟ್ ಬ್ಯೂಟಿಫುಲ್ ವೂಮೆನ್ ಆಗಿದ್ದಾರೆ. ಹೌದಾ.. ಎಂದು ಬಾಯ ಮೇಲೆ ಬೆರಳು ಇಡುವುದಕ್ಕೂ ಮುನ್ನಾ ಈ ಲೇಖನ ಓದಿರಿ..

ಪ್ರಿಯಾಂಕ ಚೋಪ್ರಾ ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆ

ಪ್ರಿಯಾಂಕ ಚೋಪ್ರಾ ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆ

ಪ್ರಿಯಾಂಕ ಚೋಪ್ರಾ ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆ ಸ್ಥಾನ ಪಡೆದಿರುವುದು 'ಮಿಸ್ ವರ್ಲ್ಡ್' ಸ್ಪರ್ಧೆಯಲ್ಲಿ ಅಲ್ಲ. ಬಜ್ ನೆಟ್ ವೆಬ್ ಸೈಟ್ ನಡೆಸಿದ 'ವರ್ಲ್ಡ್ ಮೋಸ್ಟ್ ಬ್ಯೂಟಿಫುಲ್ ವೂಮೆನ್' ಪೋಲ್ ನಲ್ಲಿ ಪ್ರಿಯಾಂಕ ಅತಿಹೆಚ್ಚು ವೋಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.['ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ]

ಮೊದಲನೇ ಸ್ಥಾನದಲ್ಲಿ ಬೆಯಾನ್ಸ್

ಮೊದಲನೇ ಸ್ಥಾನದಲ್ಲಿ ಬೆಯಾನ್ಸ್

ಬಜ್ ನೆಟ್ ನಡೆಸಿದ 'ವರ್ಲ್ಡ್ ಮೋಸ್ಟ್ ಬ್ಯೂಟಿಫುಲ್ ವೂಮೆನ್' ಪೋಲ್ ನಲ್ಲಿ ಪ್ರಿಯಾಂಕ ಚೋಪ್ರಾ ಗಿಂತ ಅತಿ ಹೆಚ್ಚು ವೋಟ್ ಪಡೆದು, ಅಮೆರಿಕದ ಸಿಂಗರ್, ಗೀತೆ ರಚನೆಕಾರರು ಮತ್ತು ನಟಿ ಬೆಯಾನ್ಸ್ ಮೊದಲ ಸ್ಥಾನದಲ್ಲಿದ್ದಾರೆ.

ಹಾಲಿವುಡ್ ನಟಿಯರನ್ನು ಹಿಂದಿಕ್ಕಿದ ಪ್ರಿಯಾಂಕ

ಹಾಲಿವುಡ್ ನಟಿಯರನ್ನು ಹಿಂದಿಕ್ಕಿದ ಪ್ರಿಯಾಂಕ

ಹಾಲಿವುಡ್ ನ ಪ್ರತಿಷ್ಠಿತ ಅವಾರ್ಡ್ ಸಂಭ್ರಮಗಳಲೆಲ್ಲಾ ಕಾಣಿಸಿಕೊಳ್ಳುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಆಕರ್ಷಕ ನೋಟದಿಂದ, ಹಾಲಿವುಡ್ ನ ಖ್ಯಾತ ತಾರೆಯರಾದ ಏಂಜೆಲಿನಾ ಜೋಲೀ, ಎಮ್ಮಾ ವಾಟ್ಸನ್, ಬ್ಲೇಕ್ ಲೈವ್ಲಿ ಮತ್ತು ಮಿಷೆಲ್ ಒಬಾಮ ರನ್ನು ಬಜ್ ನೆಟ್ 'ವರ್ಲ್ಡ್ ಮೋಸ್ಟ್ ಬ್ಯೂಟಿಫುಲ್ ವೂಮೆನ್' ಪೋಲ್ ನಲ್ಲಿ ಹಿಂದಿಕ್ಕಿ ಎರಡನೇ ಸ್ಥಾನ ಪಡೆದಿದ್ದಾರೆ.

ಎರಡು ಬಾರಿ 'ಪೀಪಲ್ಸ್ ಚಾಯ್ಸ್ ಅವಾರ್ಡ್'

ಎರಡು ಬಾರಿ 'ಪೀಪಲ್ಸ್ ಚಾಯ್ಸ್ ಅವಾರ್ಡ್'

34 ವರ್ಷದ ನಟಿ ಪ್ರಿಯಾಂಕ ಚೋಪ್ರಾ ಅಮೆರಿಕದ 'ಕ್ವಾಂಟಿಕೋ' ಟಿವಿ ಶೋ ನಲ್ಲಿ ಅಭಿನಯಿಸುವ ಮುಖಾಂತರ ಅತಿಹೆಚ್ಚು ಜನರ ಪ್ರೀತಿ ಗಳಿಸಿದ್ದಾರೆ. ಆದ್ದರಿಂದಲೇ ಪ್ರಿಯಾಂಕ ಎರಡು ಬಾರಿ ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಪಡೆದಿದ್ದಾರೆ.

ಬಜ್ ನೆಟ್ ವೆಬ್ ಸೈಟ್

ಬಜ್ ನೆಟ್ ವೆಬ್ ಸೈಟ್

ಬಜ್ ನೆಟ್ ಅಮೆರಿಕ ಮೂಲದ ಫೋಟೋ, ನಿಯತಕಾಲಿಕೆ ಮತ್ತು ವಿಡಿಯೋ ಶೇರಿಂಗ್ ಸೋಶಿಯಲ್ ಮೀಡಿಯಾ ನೆಟ್‌ ವರ್ಕ್. ಇತ್ತೀಚೆಗೆ ಇದು 30 ವಿವಿಧ ಕ್ಷೇತ್ರಗಳ ಪ್ರಭಾವಿ ಮಹಿಳೆಯರನ್ನು ಒಳಗೊಂಡ 'ವರ್ಲ್ಡ್ ಮೋಸ್ಟ್ ಬ್ಯೂಟಿಫುಲ್ ವೂಮೆನ್' ಪೋಲ್ ನಡೆಸಿತ್ತು.

English summary
Bollywood Actress Priyanka Chopra is world’s second most beautiful woman, beats Angelina Jolie, Emma Stone
Please Wait while comments are loading...

Kannada Photos

Go to : More Photos