»   » ಜನಪ್ರಿಯ ಜೋಡಿಯಲ್ಲಿ ಬಿರುಕು, ಟ್ವಿಟ್ಟರಲ್ಲಿ ಹಾಸ್ಯದ ಹೊಳೆ

ಜನಪ್ರಿಯ ಜೋಡಿಯಲ್ಲಿ ಬಿರುಕು, ಟ್ವಿಟ್ಟರಲ್ಲಿ ಹಾಸ್ಯದ ಹೊಳೆ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ಡಿನ ಜನಪ್ರಿಯ ಜೋಡಿ, ಜಗದೇಕ ಆದರ್ಶ ದಂಪತಿ,ಪೋಷಕರಾಗಿರುವ ಏಂಜಲಿನಾ ಜೋಲಿ ಹಾಗೂ ನಟ ಬ್ರಾಡ್ ಪಿಟ್ ದೂರವಾಗುತ್ತಿರುವ ಸುದ್ದಿ ಎಲ್ಲರಿಗೂ ತಿಳಿದಿರುತ್ತದೆ.

ಆದರೆ, ಇದೇ ವಿಷಯವನ್ನು ಕೇಳಿ ಜೆನ್ನಿಫರ್ ಅನಿಸ್ಟನ್ ಸೇರಿದಂತೆ ಸೆಲೆಬ್ರಿಟಿಗಳು, ಸಾರ್ವಜನಿಕರು ಹೇಗೆಲ್ಲ ಪ್ರತಿಕ್ರಿಯಿಸಬಹುದು ಎಂಬುದನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ತೋರಿಸಿಕೊಟ್ಟಿದೆ.

ಏಂಜಲಿನಾ ಜೋಲಿ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಿರುವ ಸುದ್ದಿ ಏಂಜಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ಅಭಿಮಾನಿಗಳಿಗಂತೂ ಬೇಸರ ತರಿಸಿದೆ.ವಿಶ್ವದೆಲ್ಲೆಡೆಯಿಂದ ಅನಾಥ ಮಕ್ಕಳನ್ನು ಆಯ್ದು 6 ಮಕ್ಕಳ ಪೋಷಕರಾಗಿರುವ ಇವರ ಬಗ್ಗೆ ಎಲ್ಲರಲ್ಲೂ ಮೆಚ್ಚುಗೆ ಇದೆ.

ಆದರೆ. ಮಕ್ಕಳ ಜೊತೆ ಪಿಟ್ ನಡೆದುಕೊಳ್ಳುತ್ತಿರುವ ರೀತಿ ಸರಿ ಕಾಣುತ್ತಿಲ್ಲ ಎಂದು ಏಂಜಲೀನಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
41 ವರ್ಷದ ಏಂಜಲೀನಾ ಅವರು ಎಲ್ಲಾ ಮಕ್ಕಳನ್ನು ತಾನೇ ಸಾಕಿಕೊಳ್ಳುವುದಾಗಿ ಹೇಳಿದ್ದಾರೆ.

ಹತ್ತು ವರ್ಷಗಳ ಕಾಲ ಡೇಟಿಂಗ್ ಮಾಡಿ

ಸೆಪ್ಟೆಂಬರ್ 15ರಿಂದ ಇಬ್ಬರು ದೂರ ಇದ್ದೇವೆ ಎಂದು ಜೋಲಿ ಹೇಳಿದ್ದಾರೆ. ಹತ್ತು ವರ್ಷಗಳ ಕಾಲ ಡೇಟಿಂಗ್ ಮಾಡಿ 2014ರ ಆಗಸ್ಟ್ ದಂಪತಿಗಳಾಗಿದರು.

ಟ್ವಿಟ್ಟರಲ್ಲಿ ಹಾಸ್ಯದ ಹೊಳೆ

ಹಾಲಿವುಡ್ಡಿನ ಜನಪ್ರಿಯ ಜೋಡಿ, ಜಗದೇಕ ಆದರ್ಶ ದಂಪತಿ,ಪೋಷಕರಾಗಿರುವ ಏಂಜಲಿನಾ ಜೋಲಿ ಹಾಗೂ ನಟ ಬ್ರಾಡ್ ಪಿಟ್ ದೂರವಾಗುತ್ತಿರುವ ಸುದ್ದಿ ಎಲ್ಲರಿಗೂ ತಿಳಿದಿರುತ್ತದೆ

ಜೆನ್ನಿಫರ್ ಅನಿಸ್ಟನ್ ಪ್ರತಿಕ್ರಿಯೆಗಳ ಸುರಿಮಳೆ

ಜನಪ್ರಿಯ ಜೋಡಿಯಲ್ಲಿ ಬಿರುಕು ಬ್ರಾಡ್ ಪಿಟ್ ಜತೆ ಕೋಲಿ ವಿಚ್ಛೇದನ ಪಡೆಯುತ್ತಿರುವುದಕ್ಕೆ ಜೆನ್ನಿಫರ್ ಅನಿಸ್ಟನ್ ಪ್ರತಿಕ್ರಿಯೆ ಹೇಗಿರುತ್ತೆ?

ಲೇಡಿಸ್ ಅಂಡ್ ಜಂಟಲ್ ಮನ್ ಕೇಳಿ

ಲೇಡಿಸ್ ಅಂಡ್ ಜಂಟಲ್ ಮನ್ ಕೇಳಿ, ಬ್ರಾಂಜೆಲಿನಾ ಜೋಡಿ ಮುರಿದರೆ ಅನಿಸ್ಟನ್ ಹೇಗೆ ಪ್ರತಿಕ್ರಿಯಿಸುತ್ತಾರೆ

#JenniferAniston ಕೂಡಾ ಟ್ರೆಂಡಿಂಗ್

Brangelina ಜತೆಗೆ #JenniferAniston ಕೂಡಾ ಟ್ರೆಂಡಿಂಗ್ ನಲ್ಲಿದ್ದಾರೆ. ಏಂಜಲಿನಾ ಜೋಲಿ ಹಾಗೂ ನಟ ಬ್ರಾಡ್ ಪಿಟ್ ದೂರವಾಗುತ್ತಿರುವ ಸುದ್ದಿ ಹಾಸ್ಯದ ವಸ್ತುವಾಗಿದೆ

ಕಾಮಿಡಿ ಸರಣಿ ಫ್ರೆಂಡ್ಸ್ ಬಳಸಿ ಗೇಲಿ ಮಾಡಿದ್ರು

ಜನಪ್ರಿಯ ಜೋಡಿ ಮುರಿದು ಬೀಳುವ ಸುದ್ದಿಯನ್ನು ಕಾಮಿಡಿ ಟಿವಿ ಸರಣಿ ಫ್ರೆಂಡ್ಸ್ ಬಳಸಿ ಗೇಲಿ ಮಾಡಿದ್ರು

English summary
Twitter was at its meanest and most merciless when it reacted to Brad Pitt and Angelina Jolie's divorce. Here are some of the best 'Brangelivorce' jokes doing the rounds of Twitter.
Please Wait while comments are loading...

Kannada Photos

Go to : More Photos