»   » ಸೆಪ್ಟೆಂಬರ್ ನಲ್ಲಿ ವಿಶ್ವದಾದ್ಯಂತ 'ನೇಕೆಡ್ ಸೋಲ್ಜರ್'

ಸೆಪ್ಟೆಂಬರ್ ನಲ್ಲಿ ವಿಶ್ವದಾದ್ಯಂತ 'ನೇಕೆಡ್ ಸೋಲ್ಜರ್'

Posted by:
Subscribe to Filmibeat Kannada

Hollwood Film Naked Soldier
ಹಾಲಿವುಡ್ ನಲ್ಲಿ ಆಕ್ಷನ್ ಪ್ರಧಾನ ಚಿತ್ರಗಳನ್ನು ನಿರ್ಮಿಸುವಲ್ಲಿ ಜಗತ್ಫ್ರಸಿದ್ಧವಾದ ಸಂಸ್ಥೆ ಮೆಗಾ ವಿಜನ್ ಪಿಕ್ಚರ್ಸ್ ಸಂಸ್ಥೆ. ಈ ಹಿಂದೆ ಈ ಸಂಸ್ಥೆ ನಿರ್ಮಿಸಿದ 'ನೇಕೆಡ್ ಕಿಲ್ಲರ್' ಹಾಗೂ 'ನೇಕೆಡ್ ವೆಪನ್' ಚಿತ್ರಗಳು ಬಾಕ್ಸಾಫೀಸಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದವು.

ಈಗ ಇದೇ ಸಂಸ್ಥೆ ತಮ್ಮ ಹಿಂದಿನ ಚಿತ್ರಗಳ ಮುಂದುವರಿದ ಭಾಗವಾಗಿ 'ನೇಕೆಡ್ ಸೋಲ್ಜರ್' ಚಿತ್ರವನ್ನು ತೆರೆಗೆ ತರುತ್ತಿದೆ. ಈ ಚಿತ್ರದಲ್ಲಿ ಏಷ್ಯಾ ಯೂರೋಪಿಯನ್ ಮಾರ್ಷಲ್ ಆರ್ಟ್ಸ್ ಲೇಡಿ ಚಾಂಪಿಯನ್ ಜೆನ್ನಿಫರ್ ಟೀಸ್ ಅಭಿನಯಿಸಿದ್ದಾರೆ.

ಜೆನ್ನಿಫರ್ ತಮ್ಮ ಅಂದಚೆಂದಗಳ ಚಂದಮಾಮನ ಜೊತೆಗೆ ಆಕ್ಷನ್ ಸೀನ್ ಗಳಲ್ಲೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಾರ್ಲೆಸ್ ಏಂಜಿಲ್ಸ್, ಟಾಮ್ ರೈಡರ್, ಮ್ಯಾಟ್ರಿಕ್ಸ್ ಚಿತ್ರಗಳ ಮಾದರಿಯಲ್ಲಿ ಈ ಚಿತ್ರದ ಆಕ್ಷನ್ ಸೀನ್ ಗಳನ್ನು ತೆರೆಗೆ ತರಲಾಗಿದೆ.

ಇದಿಷ್ಟೇ ಅಲ್ಲದೆ ಬ್ಯಾಟ್ ಮೆನ್, ಮ್ಯಾಟ್ರಿಕ್ಸ್ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ ಇಮಾನ್ ಪವರ್ಸ್ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ಅತ್ಯದ್ಭುತವಾದ ಫೈಟ್ಸ್ ಕಂಪೋಜ್ ಮಾಡಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಆಕ್ಷನ್ ಪ್ರಧಾನ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಮಾರ್ಕೋ ಮ್ಯಾಕ್ ಆಕ್ಷನ್ ಕಟ್ ಹೇಳಿರುವುದು. ಭಾರತದಲ್ಲಿ ಈ ಹಾಲಿವುಡ್ ಚಿತ್ರ ಇಂಗ್ಲಿಷ್, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಜಗತ್ತಿನಾದ್ಯಂತ ಈ ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಕಾಣುತ್ತಿದೆ. (ಏಜೆನ್ಸೀಸ್)

English summary
Naked Soldier has been pushed back again and again to the point where it is a mystery to everyone when the film will come out. But that mystery might be close to being solved when current rumors pinpoint the release date as september.
Please Wait while comments are loading...

Kannada Photos

Go to : More Photos