twitter
    For Quick Alerts
    ALLOW NOTIFICATIONS  
    For Daily Alerts

    ಭಾರತ ಮೂಲದ ತಂತ್ರಜ್ಞನಿಗೆ ಆಸ್ಕರ್ ಪ್ರಶಸ್ತಿ

    By ಜೇಮ್ಸ್ ಮಾರ್ಟಿನ್
    |

    ಆಸ್ಕರ್ ವಿಜೇತರಾದ ಭಾನು ಅಥೈಯಾ, ಸತ್ಯಜಿತ್ ರೇ, ರೆಸೂಲ್ ಪೂಕುಟ್ಟಿ, ಎ.ಆರ್ ರೆಹಮಾನ್ ಹಾಗೂ ಗುಲ್ಜಾರ್ ಅವರ ಸಾಲಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಜನಿಸಿದ ಮುಂಬೈ ಮೂಲದ ಕಂಪ್ಯೂಟರ್ ಇಂಜಿನಿಯರ್ ರಾಹುಲ್ ಥಕ್ಕರ್ ಸೇರ್ಪಡೆಗೊಂಡಿದ್ದಾರೆ.

    ಫೆಬ್ರವರಿ 13ರಂದು ಬೆವರ್ಲಿ ವಿಲ್ ಶೈರ್ ನಲ್ಲಿ ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಹುಲ್ ಅವರು ತಾಂತ್ರಿಕ ಕೌಶಲ್ಯ ವಿಭಾಗದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ.

    ಡ್ರೀಮ್ ವರ್ಕ್ಸ್ ಅನಿಮೇಷನ್ ಮೀಡಿಯಾ ರಿವ್ಯೂ ಸಿಸ್ಟಮ್ ಗಾಗಿ ವಿನ್ಯಾಸಗಾರರಾಗಿ ಕಾರ್ಯನಿರ್ವಹಿಸಿದ ರಾಹುಲ್ ಥಕ್ಕರ್ ಅವರು ರಿಚರ್ಡ್ ಚುಹಾಂಗ್ ಅವರ ಜೊತೆ ಪ್ರಶಸ್ತಿ ಹಂಚಿಕೊಳ್ಳಲಿದ್ದಾರೆ. [ಆಸ್ಕರ್ ಪ್ರಶಸ್ತಿ ನಾಮಿನೇಷನ್ 2016 ಪಟ್ಟಿ]

    Indian origin Rahul Thakkar wins Oscar for design

    ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಹಾಗೂ ಸೈನ್ಸ್ ಇತ್ತೀಚೆಗೆ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಧನೆ ಮಾಡಿ 33 ವ್ಯಕ್ತಿಗಳ ಹೆಸರನ್ನು ಪ್ರಕಟಿಸಿತ್ತು. 2015ರಿಂದ ತಾಂತ್ರಿಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 88ನೇ ಆಸ್ಕರ್ ನಾಮಾಂಕಿತರ ಹೆಸರು ಜನವರಿಯಲ್ಲಿ ಪ್ರಕಟವಾಗಿತ್ತು.

    ಲಿಯಾನಾರ್ಡೋ ಡಿ ಕಾಪ್ರಿಯೋ ಅಭಿನಯದ ದಿ ರೆವೆನಂಟ್ ಈ ಬಾರಿ ಅತಿಹೆಚ್ಚು ನಾಮಾಂಕಿತಗೊಂಡಿದೆ. ದಿ ರೆವೆನೆಂಟ್ 12 ವಿಭಾಗದಲ್ಲಿ ರೇಸ್ ನಲ್ಲಿದ್ದರೆ ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ 10 ವಿಭಾಗದಲ್ಲಿ ಸ್ಪರ್ಧೆಯಲ್ಲಿದೆ.

    English summary
    Indian origin UK born, Computer engineer Rahul Thakkar, who has worked on a DreamWorks media review system has won an Oscar for technical achievement.
    Thursday, January 21, 2016, 19:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X