twitter
    For Quick Alerts
    ALLOW NOTIFICATIONS  
    For Daily Alerts

    ತಾರೆ ಲೇಡಿ ಗಾಗಾಗೆ ಒಂದು ಕೋಟಿ ಡಾಲರ್ ದಂಡ

    By Rajendra
    |

    ಬೊಂಬೆ ತಯಾರಿಕಾ ಕಂಪನಿಯೊಂದು ಕೋರ್ಟ್ ಮೂಲಕ ಪಾಪ್ ತಾರೆ ಲೇಡಿ ಗಾಗಾಗೆ ಒಂದು ಕೋಟಿ ಯುಎಸ್ ಡಾಲರ್ ದಂಡ ಹಾಕಿಸಿದೆ. ಈಕೆಯ ಚಹರೆಯನ್ನೇ ಹೋಲುವ ಗೊಂಬೆ ತಯಾರಿಕೆಗೆ ಗಾಗಾ ಜೊತೆ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಗೊಂಬೆ ಬಿಡುಗಡೆಗೆ ತುಂಬ ವಿಳಂಬ ಮಾಡುತ್ತಿದ್ದಾರೆ ಎಂದು ಕಂಪನಿ ಆರೋಪಿಸಿದೆ.

    ಇಪ್ಪತ್ತಾರರ ಹರೆಯದ ಗಾಗಾ ಮೇಲೆ ಎಂಜಿಎ ಎಂಟರ್ ಟೈನ್ ಮೆಂಟ್ ಕಂಪನಿ ಮಾಡಿರುವ ಆರೋಪದ ಸಾರಾಂಶ ಹೀಗಿದೆ. ಬರಲಿರುವ ಕ್ರಿಸ್ಮಸ್ ಹಬ್ಬಕ್ಕೆ ಸರಿಯಾಗಿ ಈ ಗೊಂಬೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.

    ಆದ ಕಾರಣ ಗೊಂಬೆಗಳಿಗೆ ಅಳವಡಿಸಿರುವ ವಾಯ್ಸ್ ಚಿಪ್ ಗಳನ್ನು ತೆಗೆಯುವಂತೆ ಗಾಗಾ ಮ್ಯಾನೇಜ್ ಮೆಂಟ್ ಹಾಗೂ ಲೈಸೆನ್ಸ್ ಕಂಪನಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ 11 ಗಂಟೆಗಳ ಕಾಲಾವಕಾಶವನ್ನೂ ನೀಡಲಾಗಿದೆ ಎಂದು ಎಂಜಿಎ ಎಂಟರ್ ಟೈನ್ ಮೆಂಟ್ ಕಂಪನಿ ತಿಳಿಸಿದೆ.

    2013ಕ್ಕೆ ಗಾಗಾರ ಹೊಸ ಆಲ್ಬಂ ಮಾರುಕಟ್ಟೆಗೆ ಬರುತ್ತಿದೆ. ಹಾಗಾಗಿ ಆಕೆ ಬೇಕೆಂದೇ ಗೊಂಬೆ ಬಿಡುಗಡೆಗೆ ತಕರಾರು ಮಾಡುತ್ತಿದ್ದಾರೆ ಎಂದು ಕಂಪನಿ ಆರೋಪಿಸಿದೆ. ಈ ಸಂಬಂಧ ಕಂಪನಿ ಮ್ಯಾನ್ ಹಟ್ಟನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಗಾಗಾಗೆ ಒಂದು ಕೋಟಿ ಡಾಲರ್ ದಂಡ ವಿಧಿಸಿದೆ.

    "ಗೊಂಬೆಗಳನ್ನು ನಿಗದಿತ ಸಮಯಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗಿದೆ ಆದರೆ ಗಾಗಾ ಮತ್ತವರ ತಂಡ ಪೂರ್ವನಿಯೋಜಿತ ಹಾಗೂ ಉದ್ದೇಶಪೂರ್ವಕವಾಗಿ ತಡಮಾಡುತ್ತಿದ್ದಾರೆ" ಎಂದು ಕಂಪನಿ ಆರೋಪಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಗಾಗಾ ಮತ್ತವರ ತಂಡ "ನಮ್ಮ ಲಾಯರ್ ಗಳು ಕೋರ್ಟ್ ಪತ್ರಗಳನ್ನು ಇನ್ನೂ ನೋಡಿಲ್ಲ. ಅವನ್ನು ನೋಡಿದ ಬಳಿಕ ಉತ್ತರಿಸುತ್ತೇವೆ" ಎಂದಿದ್ದಾರೆ.

    ಅಂದಹಾಗೆ ಲೇಡಿ ಗಾಗಾ ಗಂಡೋ ಹೆಣ್ಣೋ ಎಂಬ ಅನುಮಾನ ಕೆಲದಿನಗಳ ಹಿಂದೆ ಪಾಪ್ ಲೋಕದಲ್ಲಿ ಪಾಪ್‌ಕಾರ್ನ್‌ನಂತೆ ಚಿಟಪಟ ಸಿಡಿದಿತ್ತು. ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಇತ್ತೀಚೆಗೆ ಲಿಂಗ ಪರಿವರ್ತನೆಗೆ ಒಳಗಾಗಿರುವುದೇ ಈಕೆಯ ಮೇಲೆ ಈ ಡೌಟ್ ಬರಲು ಕಾರಣವಾಗಿತ್ತು. ಇಷ್ಟು ದಿನ ಹೆಣ್ಣಾಗಿದ್ದ ಈಕೆ ಲಿಂಗಪರಿವರ್ತನೆ ಮೂಲಕ ಗಂಡಾಗಿ ಬದಲಾಗಿದ್ದರು. (ಪಿಟಿಐ)

    English summary
    Pop sensation Lady Gaga is facing a USD 10 million lawsuit by a toy manufacturer which claims that she deliberately delayed the release of a doll made in her likeness.
    Monday, July 30, 2012, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X