twitter
    For Quick Alerts
    ALLOW NOTIFICATIONS  
    For Daily Alerts

    ಲಿಯೋ 40, ಸುರಸುಂದರಾಂಗನ ಈಡೇರದ ಕನಸು

    By ಜೇಮ್ಸ್ ಮಾರ್ಟಿನ್
    |

    ಲಿಯೋ ಎಂದು ಕರೆಸಿಕೊಳ್ಳುವ ಅಮೆರಿಕನ್ ನಟ ಲಿಯೋನಾರ್ಡೋ ಡಿ ಕಾಪ್ರಿಯೋ ಭಾರತೀಯ ಸಿನಿರಸಿಕರಿಗೂ ಅಚ್ಚುಮೆಚ್ಚಿನ ನಟ. ಮುದ್ದು ಮುಖದ ಲಿಯೋ ತನ್ನ ಈವರೆಗಿನ ವೃತ್ತಿ ಬದುಕಿನಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅದರೆ, ಲಿಯೋಗೆ ಇನ್ನೂ ಈಡೇರದ ಹೆಬ್ಬಯಕೆ ಒಂದು ಕಾಡುತ್ತಿದೆ. ಮಂಗಳವಾರ 40ರ ವಸಂತಕ್ಕೆ ಕಾಲಿರಿಸಿದ ಹಾಲಿವುಡ್ಡಿನ ಜನಪ್ರಿಯ ಹೀರೋ ಲಿಯೋಗೆ ಫಿಲ್ಮಿಬೀಟ್ ನ ಶುಭ ಹಾರೈಕೆಗಳು

    Life Begins at Forty ಎಂಬ ಮಾತಿದೆ. ಅದರಂತೆ ಲಿಯೋ ವೃತ್ತಿ ಬದುಕಿನಲ್ಲಿ ಈಗಾದರೂ ಆಸ್ಕರ್ ಪ್ರಶಸ್ತಿ ಲಭಿಸಲಿ ಎಂಬ ಆಶಯ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಟೈಟಾನಿಕ್ ನಲ್ಲಿ ಕಾಣಿಸಿಕೊಂಡ ಲಿಯೋಗೂ ಈಗಿನ ವುಲ್ಫ್ ಆಫ್ ವಾಲ್ ಸ್ಟ್ರೀಟ್ ಲಿಯೋಗೂ ಸಾಕಷ್ಟು ವ್ಯತ್ಯಾಸವಿದೆ. ಅದರೆ, ನೌವೆ ವೈವಿಧ್ಯಮಯ ಪಾತ್ರಗಳು ಬಂದು ಹೋಗಿವೆ.

    ಇಲ್ಲಿ ತನಕ ಐದಾರು ಬಾರಿ ಅಕಾಡೆಮಿ ಪ್ರಶಸ್ತಿ ಕದ ತಟ್ಟಿ ಬಂದರೂ ಆಸ್ಕರ್ ಪ್ರಶಸ್ತಿಯನ್ನು ಹೆಮ್ಮೆಯಿಂದ ಕೈಲಿ ಎತ್ತಿ ಹಿಡಿಯುವ ಅವಕಾಶ ಸಿಕ್ಕಿಲ್ಲ. ಅಕಾಡೆಮಿ ಪ್ರಶಸ್ತಿ ಪಡೆಯದ ನತದೃಷ್ಟ ನಾಯಕನಾಗಿ ಬೆಳೆದ ಲಿಯೋ ವುಲ್ಫ್ ಆಫ್ ವಾಲ್ ಸ್ಟ್ರೀಟ್ ದ ನಿರ್ಮಾಪಕರಾಗಿ ಕೂಡಾ ಆಸ್ಕರ್ ಗೆ ನಾಮಂಕಿತಗೊಂಡಿದ್ದರು.

    ಎವಿಯೇಟರ್, ಇನ್ಸಿಪ್ಶನ್ ನಂಥ ಚಿತ್ರಗಳಲ್ಲಿ ನಟಿಸಿರುವ ಲಿಯೋಗೆ 2 ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡಾ ಲಭಿಸಿದೆ. ಬಾಫ್ತಾ, ಎಂಟಿವಿ ಚಿತ್ರ ಪ್ರಶಸ್ತಿ, ಪೀಪಲ್ ಚಾಯ್ಸ್ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾನೆ. ಕೆಲವನ್ನು ಗೆದ್ದಿದ್ದಾನೆ ಕೂಡಾ. ಲಿಯೋನಾರ್ಡೋ ಡಿಕಾಪ್ರಿಯೋ ಆಸ್ಕರ್ ಗೆಲ್ಲುವಂಥ ಪಾತ್ರಗಳು ಯಾವುವು ಇಲ್ಲಿ ನೋಡಿರಿ

    What's Eating Gilbert Grape

    What's Eating Gilbert Grape

    ಹೃದಯತಲ್ಲಣಗೊಳಿಸುವಂಥ ಚಿತ್ರ What's Eating Gilbert Grapeನ ನಟನೆಗಾಗಿ ಲಿಯೋ ಮೊಟ್ಟ ಮೊದಲ ಬಾರಿಗೆ ಅಕಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ. ಮಾನಸಿಕ ಅಸ್ವಸ್ಥ ಬಾಲಕನಾಗಿ ಲಿಯೋ ನೀಡಿದ ಅಭಿನಯ ಆತನ ದೈತ್ಯ ಪ್ರತಿಭೆಯ ಅನಾವರಣಕ್ಕೆ ನಾಂದಿ ಹಾಡಿತ್ತು.

    ರೋಮಿಯೋ ಜೂಲಿಯಟ್

    ರೋಮಿಯೋ ಜೂಲಿಯಟ್

    ಲಿಯೋ ನೀಲಿ ಚಿತ್ರಗಳಲ್ಲಿ ನಟಿಸಬಲ್ಲ ಮುದ್ದು ಮುಖಕ ಯುವಕ ಎಂದು ಹೀಯಾಳಿಸಿದವರ ಮುಂದೆ ರೋಮಿಯೋ ಜ್ಯೂಲಿಯಟ್ ಚಿತ್ರದಲ್ಲಿ ಅಮರ ಪ್ರೇಮಿಯಾಗಿ ಕಾಣಿಸಿಕೊಂಡು ವಿಮರ್ಶಕರ, ಟೀಕಾಕಾರರ ಬಾಯಿ ಮುಚ್ಚಿಸಿದ.

    ವಿಲಿಯಂ ಷೇಕ್ಸ್ ಪಿಯರ್ ಅವರ ಕಥೆ ಆಧಾರಿತ ಚಿತ್ರದ ನಂತರ ರೋಮಿಯೋ ಪ್ರಣಯ ದೇವತೆಯಾಗಿ ಬೆಳೆದನೇ ಹೊರತೂ ಆಸ್ಕರ್ ಅಂಗಳಕ್ಕೆ ಜಿಗಿಯಲು ಸಾಧ್ಯವಾಗಲಿಲ್ಲ.

    ಟೈಟಾನಿಕ್

    ಟೈಟಾನಿಕ್

    ಟೈಟಾನಿಕ್ ಚಿತ್ರ ಹೆಸರು, ಗಳಿಕೆ ಎಲ್ಲವನ್ನು ತಂದುಕೊಟ್ಟಿತು. ಕೇಟ್ ವಿನ್ಸ್ ಲೆಟ್ ಜೊತೆ ಲಿಯೋ ಕೂಡಾ ರೋಮ್ಯಾಂಟಿಕ್ ಪಾತ್ರಕ್ಕಾಗಿ ಆಸ್ಕರ್ ಕದ ತಟ್ಟಿದ್ದ. ಅದರೆ, ಪ್ರಶಸ್ತಿಗಿಂತ ಜನಮನ್ನಣೆಯಲ್ಲೇ ತೃಪ್ತಿ ಪಡೆದುಕೊಂಡ.

    ದಿ ಎವಿಯೇಟರ್

    ದಿ ಎವಿಯೇಟರ್

    ಅಕಾಡೆಮಿ ಪ್ರಶಸ್ತಿ, ಗೋಲ್ಡನ್ ಗ್ಲೋಬ್ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಲಿಯೋ ಹೆಸರು ಸೂಚಿಸಲ್ಪಟ್ಟಿತು. ಹಾವರ್ಡ್ ಹ್ಯೂಸ್ ಅವರ ಆತ್ಮಕಥಾನಕವಾಗಿರುವ ದಿ ಎವಿಯೇಟರ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಲಿಯೋಗೆ ಆತ್ಮಕಥೆ ಆಧಾರಿತ ಚಿತ್ರಗಳ ಪಾತ್ರಧಾರಿಯಾಗಲು ಅನೇಕ ಅವಕಾಶಗಳು ಹುಡುಕಿಕೊಂಡು ಬಂದವು, ಆದರೆ, ಆಸ್ಕರ್ ಸಿಗಲಿಲ್ಲ.

    ಬ್ಲಡ್ ಡೈಮಂಡ್

    ಬ್ಲಡ್ ಡೈಮಂಡ್

    ಲಿಯೋ ಸಾಫ್ಟ್ ಪಾತ್ರಗಳನ್ನು ಬದಿಗೊತ್ತಿ ಹೊಸ ಬಗೆ ಪಾತ್ರದಲ್ಲಿ ಕಾಣಿಸಿಕೊಂಡ ಬ್ಲಡ್ ಡೈಮಂಡ್, ಅಮೆರಿಕನ್ ಜರ್ಮನ್ ರಾಜಕೀಯ ಯುದ್ಧ ಆಧಾರಿತ ಥ್ರಿಲ್ಲರ್ ಚಿತ್ರವಾಗಿದೆ. ಇದರಲ್ಲಿ ದುರಂತ ಅಂತ್ಯಕಾಣುವ ಲಿಯೋ ಪಾತ್ರದಂತೆ ಲಿಯೋಗೆ ಆಸ್ಕರ್ ಕೂಡಾ ಕೈತಪ್ಪಿತ್ತು.

    Inception

    Inception

    ಸೈ ಫೈ ಥ್ರಿಲ್ಲರ್ ಚಿತ್ರ ಮತ್ತೆ ಮತ್ತೆ ನೋಡಿ ಅರ್ಥ ಮಾಡಿಕೊಂಡರೆ ಮಹದಾನಂದ ನೋಡಬಲ್ಲದು, ಲಿಯೋ ಪಾತ್ರವೂ ಅಷ್ಟೇ ಅಚ್ಚುಕಟ್ಟಾದ ನಿರ್ವಹಣೆ ಹೊಂದಿದೆ. ಆಸ್ಕರ್ ನಾಮಾಂಕಣ ಕೂಡಾ ಪಡೆದುಕೊಂಡಿತ್ತು.

    J.Edgar

    J.Edgar

    J Edgar ಆತ್ಮಕಥೆ ಆಧಾರಿತ ಚಿತ್ರಕ್ಕೆ ಲಿಯೋ ಆಯ್ಕೆ ಮಾಡಿದಾಗ ಅನೇಕ ಮಂದಿ ವಿರೋಧಿಸಿದ್ದರು. ಅದರೆ, ಲಿಯೋ ಜನಮನ್ನಣೆ ಗಳಿಸಿ ಮತ್ತೊಮ್ಮೆ ವಿಮರ್ಶಕರ ಬಾಯಿಗೆ ಬೀಗ ಹಾಕಿದ. 36 ವರ್ಷದಿಂದ 77 ವರ್ಷ ವಯಸ್ಸಿನ ಪಾತ್ರಧಾರಿಯಾಗಿ ವಿವಿಧ ಮೇಕಪ್ ಗೆ ಒಳಪಟ್ಟು ವಿಭಿನ್ನ ಮ್ಯಾನರಿಸಂನಲ್ಲಿ ಕಾಣಿಸಿಕೊಂಡಿದ್ದ ಲಿಯೋ ಗೋಲ್ಡನ್ ಗ್ಲೋಬ್ ನಾಮಾಂಕಿತಗೊಂಡಿದ್ದ.

    ದಿ ಗ್ರೇಟ್ ಗಟ್ಸ್ ಬೇ

    ದಿ ಗ್ರೇಟ್ ಗಟ್ಸ್ ಬೇ

    ದಿ ಗ್ರೇಟ್ ಗಟ್ಸ್ ಬೇ, ಪ್ರೀತಿ ಪ್ರೇಮ ದೊಡ್ಡ ಉದ್ಯಮಿ, ಪಾರ್ಟಿ ಅನಿಮಲ್ ಪಾತ್ರಧಾರಿಯಾಗಿ ಲಿಯೋ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದ.

     ದಿ ವುಲ್ಪ್ ಆಫ್ ವಾಲ್ ಸ್ಟ್ರೀಟ್

    ದಿ ವುಲ್ಪ್ ಆಫ್ ವಾಲ್ ಸ್ಟ್ರೀಟ್

    ಷೇರುಪೇಟೆಯ ಅ,ಆ, ಇ,ಈ ತಿಳಿಯದವರಿಗೂ ಆಸಕ್ತಿ ಹುಟ್ಟುವಂತೆ ಮಾಡಿದ ಈ ಚಿತ್ರ ಅನೇಕ ಉದ್ಯಮಿಗಳ, ದಲ್ಲಾಳಿಗಳ ಹುಬ್ಬೇರಿಸಿತ್ತು. ಹಣ ಗಳಿಕೆ, ಸ್ವಂತ ಉದ್ಯಮಕ್ಕೆ ಹೊಸ ಭಾಷ್ಯ ಬರೆದ 'ವುಲ್ಫ್' ಲಿಯೋ ಈಗ ಚಿತ್ರದ ನಿರ್ಮಾಪಕನಾಗಿ ಅಸ್ಕರ್ ಪ್ರಶಸ್ತಿಗಾಗಿ ನಿರೀಕ್ಷೆ ಇಟ್ಟುಕೊಂಡಿದ್ದ.

    ಜಾಂಗೋ ಅನ್ ಚೈನ್ಡ್

    ಜಾಂಗೋ ಅನ್ ಚೈನ್ಡ್

    ಜಾಂಗೋ ಅನ್ ಚೈನ್ಡ್ ಈ ಚಿತ್ರದಲ್ಲಿ ನಾಯಕ ಪಾತ್ರಧಾರಿಯಲ್ಲವಾದರೂ ಪೋಷಕ ಪಾತ್ರದಲ್ಲಿ ಲಿಯೋ ಅದ್ಭುತವಾಗಿ ನಟಿಸಿದ್ದ. ನೆಗಟಿವ್ ಶೇಡ್ ಇದ್ದ ಪಾತ್ರದಲ್ಲಿ ಗಮನ ಸೆಳೆದಿದ್ದ.

    ಇದಲ್ಲದೆ, ಬಾಡಿ ಆಫ್ ಲೈಸ್, ದಿ ಡಿಪಾರ್ಟೆಡ್, ಶಟರ್ ಐಲ್ಯಾಂಡ್ ಚಿತ್ರಗಳಲ್ಲೂ ಲಿಯೋ ಉತ್ತಮ ನಟನೆ ನೀಡಿ ಜನರ ಮೆಚ್ಚುಗೆ ಗಳಿಸಿದ್ದಾನೆ.

    English summary
    Well known by his stage name as Leonardo DiCaprio or just Leo is an American actor and film producer. Leo is much more than just a man with a pretty face. He has proved his worth in the industry. From TV to movies, Leonardo has made a remarkable position in Hollywood with superhit movies to his credit.
    Tuesday, November 11, 2014, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X