»   » ಮದುವೆಗೂ ಮುನ್ನವೆ ಗರ್ಭಿಣಿಯಾದ ಜಾಕ್ಸನ್ ಪುತ್ರಿ

ಮದುವೆಗೂ ಮುನ್ನವೆ ಗರ್ಭಿಣಿಯಾದ ಜಾಕ್ಸನ್ ಪುತ್ರಿ

Written by: ಉದಯರವಿ
Subscribe to Filmibeat Kannada

ವಿಶ್ವವಿಖ್ಯಾತ ಪಾಪ್ ತಾರೆ ದಿವಂಗತ ಮೈಕೇಲ್ ಜಾಕ್ಸನ್ ಪುತ್ರಿ ಪಾರಿಸ್ ಮೈಕೇಲ್ ಕ್ಯಾಥಲಿನ್ ಜಾಕ್ಸನ್ ಇದ್ದಕ್ಕಿದ್ದಂತೆ ಸುದ್ದಿಗೆ ಆಹಾರವಾಗಿದ್ದಾರೆ. ಹದಿನಾರರ ಹರೆಯದ ಪಾರಿಸ್ ಜಾಕ್ಸನ್ ತನ್ನ ಬಾಯ್ ಫ್ರೆಂಡ್ ಜೊತೆ ಸುತ್ತಾಡಿದ್ದು ಇದೀಗ ಫಲ ನೀಡಿದಂತಿದೆ. ಇದೀಗ ಸುದ್ದಿ ಏನೆಂದರೆ ಆಕೆ ಈಗ ಗರ್ಭಿಣಿ ಎಂಬುದು.

ಆಕೆ ಗರ್ಭಿಣಿ ಎಂಬುದನ್ನು ಯಾವ ವೈದ್ಯರಾಗಲಿ, ಪ್ರಸೂತಿ ತಜ್ಞರಾಗಲಿ ಸ್ಪಷ್ಟಪಡಿಸಿಲ್ಲ. ಆಕೆಯ ಹೊಟ್ಟೆ ಮುಂದೆ ಬಂದಿರುವುದನ್ನು ನೋಡಿ ಕೆಲವರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಇದೇ ಸುದ್ದಿಯನ್ನು ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಡೈಲಿ ಸ್ಟಾರ್ ಪ್ರಕಟಿಸಿದ್ದು ಅನುಮಾನಗಳನ್ನು ಇನ್ನಷ್ಟು ಬಲಪಡಿಸಿದೆ.

Paris-Michael Katherine Jackson

ಇತ್ತೀಚೆಗೆ ಪಾರಿಸ್ ಜಾಕ್ಸನ್ ತನ್ನ ಬಾಯ್ ಫ್ರೆಂಡ್ ಜೊತೆ ಡೇಟಿಂಗ್ ಗೆ ಹೊರಟಾಗ ತಾವು ಕಣ್ಣಾರೆ ಕಂಡಿದ್ದೇವೆ ಎಂದೂ, ಆಕೆಯ ಬೇಬಿ ಬಂಪ್ ನೋಡುತ್ತಿದ್ದರೆ ಗರ್ಭಿಣಿಯಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಡೈಲಿ ಸ್ಟಾರ್ ಸುದ್ದಿ ಪ್ರಕಟಿಸಿದೆ.

ಇನ್ನು ಪಾರಿಸ್ ಜಾಕ್ಸನ್ ವಿಚಾರಕ್ಕೆ ಬಂದರೆ...ಆಕೆ ಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ಅವರ ಏಕೈಕ ಪುತ್ರಿ. ನಟಿಯಾಗಿ ತನ್ನನ್ನು ತಾನು ನಿರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ವಿವಿಧ ಟಿವಿ ಕಾರ್ಯಕ್ರಮಗಳಲ್ಲೂ ಅಭಿನಯಿಸುತ್ತಿದ್ದಾರೆ. ಇದೀಗ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಿದೆ.

ಹಾಲಿವುಡ್ ಚಿತ್ರಗಳಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಲಕ್ಷ್ಯದೊಂದಿಗೆ ಮುಂದಡಿ ಇಡುತ್ತಿದ್ದಾರೆ ಪಾರಿಸ್ ಜಾಕ್ಸನ್. ಈಕೆಗೆ ಒಮರ್ ಬಟ್ಟಿ, ಮೈಕೇಲ್ ಜಾಕ್ಸನ್ ಜೂನಿಯರ್, ಪ್ರಿನ್ಸ್ ಮೈಕೇಲ್ ಜಾಕ್ಸನ್ ಎಂಬ ಸಹೋದರು ಇದ್ದಾರೆ.

English summary
Late pop star Michael Jackson's daughter Paris-Michael Katherine Jackson sparked pregnancy rumours after she was spotted with a bulging baby bump.
Please Wait while comments are loading...

Kannada Photos

Go to : More Photos