»   » 'ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ

'ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ

Posted by:
Subscribe to Filmibeat Kannada

ಯಾವುದೇ ಪ್ರಶಸ್ತಿ ಸಮಾರಂಭಗಳಲ್ಲಿ ಸೆಲೆಬ್ರಿಟಿಗಳು ಕಣ್ಣು ಕುಕ್ಕುವ ವೇಷ- ಭೂಷಣ ಧರಿಸಿ ಮಿಂಚುವುದು ಸರ್ವೇ ಸಾಮಾನ್ಯ. ಈ ಪ್ರಶಸ್ತಿ ಸಮಾರಂಭಗಳಲ್ಲಿ ಮಿಂಚಿಂಗ್ ಅಂತ ಬಂದಾಗ ಹೆಚ್ಚಾಗಿ ಬಾಲಿವುಡ್ ನ ಜಿಂಕೆ ನಟಿ ಪ್ರಿಯಾಂಕ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಅವರೇ ನೆನಪಾಗುತ್ತಾರೆ.[ಟ್ರಂಪ್ ವಿರೋಧಿ ಮಹಿಳಾ ಪ್ರತಿಭಟನೆಗೆ ಪಿಗ್ಗಿ ಬೆಂಬಲ]

ಇತ್ತೀಚೆಗೆ ಹೆಚ್ಚಾಗಿ ಹಾಲಿವುಡ್ ಸಮಾರಂಭಗಳಲ್ಲಿ ಪಿಗ್ಗಿ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅದಕ್ಕೆ ಸಾಕ್ಷಿಯಾಗಿ ಪ್ರಿಯಾಂಕ ಚೋಪ್ರಾ ಕಳೆದ ತಿಂಗಳು (ಜನವರಿ) 'ಗೋಲ್ಡನ್ ಗ್ಲೋಬ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಚಿನ್ನದ ಕಾಂತೀಯ ರಾಲ್ಫ್ ಲಾರೆನ್ ಗೌನ್ ಮತ್ತು ಹೊಳೆಯುವ ವಿ ನೆಕ್‌ಲೈನ್ ಧರಿಸಿ ಪ್ರಶಸ್ತಿ ಹೆಸರನ್ನು ಪ್ರತಿನಿಧಿಸಿದ್ದರು. ಈಗ ಇಂದು (ಫೆ.27) ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿರುವ 89 ನೇ ಆಕಾಡೆಮಿ ಪ್ರಶಸ್ತಿ ಸಮಾರಂಭದಲ್ಲೂ ಎಲ್ಲರ ಚಿತ್ತ ಅವರತ್ತ ಇರುವ ಹಾಗೆ ಮಿಂಚಿದ್ದಾರೆ.

ಆಸ್ಕರ್ ಅಂಗಳದಲ್ಲಿ ಫಸ್ಟ್ ಲುಕ್

ಆಸ್ಕರ್ ಅಂಗಳದಲ್ಲಿ ಫಸ್ಟ್ ಲುಕ್

89 ನೇ ಆಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಪಿಗ್ಗಿ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.[ಪ್ರತಿಷ್ಠಿತ 'ಪೀಪಲ್ಸ್ ಚಾಯ್ಸ್ ಅವಾರ್ಡ್' ಮುಡಿಗೇರಿಸಿಕೊಂಡ ಪ್ರಿಯಾಂಕ ಚೋಪ್ರಾ]

ರೆಡ್ ಕಾರ್ಪೆಟ್ ನಲ್ಲಿ ಕೈಮುಗಿದ ಪಿಗ್ಗಿ

ರೆಡ್ ಕಾರ್ಪೆಟ್ ನಲ್ಲಿ ಕೈಮುಗಿದ ಪಿಗ್ಗಿ

ಬಿಳಿ ರಾಲ್ಫ್ ಮತ್ತು ರುಸ್ಸೋ ಗೌನ್ ಧರಿಸಿದ್ದ ಪ್ರಿಯಾಂಕ ಚೋಪ್ರಾ ರೆಡ್ ಕಾರ್ಪೆಟ್ ವೇದಿಕೆ ಮೇಲೆ ಹೋದಾಗ ಭಾರತೀಯ ಶೈಲಿಯಲ್ಲಿ ನಮಸ್ಕರಿಸಿದರು.

ಎಲ್ಲರ ಚಿತ್ತ ಪ್ರಿಯಾಂಕಳತ್ತ

ಎಲ್ಲರ ಚಿತ್ತ ಪ್ರಿಯಾಂಕಳತ್ತ

ಹಾಲಿವುಡ್ ಅಂಗಳದಲ್ಲಿ ಭಾರತೀಯ ಸೆಲೆಬ್ರಿಟಿ ಪ್ರಿಯಾಂಕ ಚೋಪ್ರಾ ಪ್ರಮುಖ ಆಕರ್ಷಣೆ ಆಗಿದ್ದರು. ಹರಳಿನ ಓಲೆ, ಹ್ಯಾಂಡ್ ಕಫ್ ಅಷ್ಟೇ ಆಭರಣಗಳನ್ನು ತೊಟ್ಟಿದ್ದ ಪ್ರಿಯಾಂಕ ಸಿಂಪಲ್ ಆಗಿದ್ರೂ, ಸ್ಪೆಷಲ್ ಆಗಿ ಕಾಣ್ತಾ ಇದ್ರು.

ಬಹುಕಾಂತೀಯ ನೋಟ...

ಬಹುಕಾಂತೀಯ ನೋಟ...

ಕಳೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಧರಿಸಿದ್ದ ಉಡುಗೆಗೆ ಜುಹೇರ್ ಮುರಾದ್ ವಸ್ತ್ರ ವಿನ್ಯಾಸ ಮಾಡಿದ್ದರು. ಆದರೆ ಈ ಬಾರಿಯ ಪಿಗ್ಗಿ ಉಡುಗೆ ಅದಕ್ಕಿಂತಲೂ ಹೆಚ್ಚು ಮನಮೋಹಕವಾಗಿದ್ದು, ಆಸ್ಕರ್ ಅಂಗಳದಲ್ಲಿ ಇದ್ದ ಪ್ರೇಕ್ಷಕರು ದೃಷ್ಟಿ ಬೇರೆಡೆ ಹೊರಳದಂತೆ ಆಕರ್ಷಕವಾಗಿತ್ತು.

ಡ್ವೇನ್ ಜಾನ್ಸನ್ ಜತೆ ಸೂಪರ್ ಗರ್ಲ್

ಡ್ವೇನ್ ಜಾನ್ಸನ್ ಜತೆ ಸೂಪರ್ ಗರ್ಲ್

ದಿ ರಾಕ್ ಎಂದೇ ಖ್ಯಾತವಾಗಿರುವ ಅಮೆರಿಕದ ನಟ, ನಿರ್ಮಾಪಕ ಡ್ವೇನ್ ಜಾನ್ಸನ್ ಜೊತೆ ಸೂಪರ್ ಗರ್ಲ್ ಪ್ರಿಯಾಂಕ ಚೋಪ್ರಾ ಮಾತನಾಡುತ್ತಿರುವುದು.

ರಾಲ್ಫ್ ಮತ್ತು ರುಸ್ಸೋ ವಸ್ತ್ರದಲ್ಲಿ..

ರಾಲ್ಫ್ ಮತ್ತು ರುಸ್ಸೋ ವಸ್ತ್ರದಲ್ಲಿ..

ಅಮೆರಿಕದ ನಟಿ ಹೈಲೀ ಸಹ ಬಿಳಿ ರಾಲ್ಫ್ ಮತ್ತು ರುಸ್ಸೋ ಉಡುಗೆಯಲ್ಲಿ ಆಸ್ಕರ್ ವೇದಿಕೆಯಲ್ಲಿ ಕಾಣಿಸಿಕೊಂಡರು. ಆದರೆ ಪ್ರಿಯಾಂಕ ಮತ್ತು ಹೈಲೀ ಉಡುಗೆಗಳು ವಿಭಿನ್ನ ಡಿಜೈನ್ ಹೊಂದಿವೆ.

ಎಮ್ಮಾ ಸ್ಟೋನ್

ಎಮ್ಮಾ ಸ್ಟೋನ್

ಹಾಲಿವುಡ್ ನಟಿ ಎಮ್ಮಾ ಸ್ಟೋನ್, 'ಲಾ ಲಾ ಲ್ಯಾಂಡ್' ಅಭಿನಯಕ್ಕೆ ಆಸ್ಕರ್ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ವಿನ್ನರ್ ಡ್ರೆಸ್ ನಲ್ಲಿ ಎಮ್ಮಾ ಸ್ಟೋನ್ ನೋಡಿ..

ಬ್ರೀ ಲಾರ್ಸನ್

ಬ್ರೀ ಲಾರ್ಸನ್

27 ವರ್ಷದ ನಟಿ ಬ್ರೀ ಲಾರ್ಸನ್ ಕಪ್ಪು ವೆಲ್ವೆಟ್ ಉಡುಗೆಯಲ್ಲಿ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಇವರು ಕಳೆದ ವರ್ಷ 'Room' ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದರು.['ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ]

ಸಲ್ಮಾ ಹಯೆಕ್

ಸಲ್ಮಾ ಹಯೆಕ್

ನಟಿ ಸಲ್ಮಾ ಹಯೆಕ್ ಕನಿಷ್ಠ ಮೇಕಪ್ ನಲ್ಲಿಯೂ ನ್ಯಾಚುರಲ್ ಆಗಿ ರೆಡ್ ಕಾರ್ಪೆಟ್ ನಲ್ಲಿ ಮಿಂಚಿದರು.

ಆಸ್ಕರ್ ರಾತ್ರಿಯಲ್ಲಿ Taraji P

ಆಸ್ಕರ್ ರಾತ್ರಿಯಲ್ಲಿ Taraji P

46 ವರ್ಷದ ನಟಿ ಮತ್ತು ಲೇಖಕಿ ಆದ Taraji P ರೆಡ್ ಕಾರ್ಪೆಟ್ ವೇದಿಕೆಗೆ ಆಗಮಿಸಿದ್ದರು. ಅತಿ ಹೆಚ್ಚು ಡೈಮೈಂಡ್ ಗಳಿರುವ ಆಭರಣವನ್ನು ಧರಿಸಿ ವಜ್ರದಂತೆ ಅವರು ಹೊಳೆಯುತ್ತಿದ್ದರು.

ವ್ಯಾಲೆಂಟಿನೋ ಡ್ರೆಸ್ ನಲ್ಲಿ ರುಥ್ ನೆಗ್ಗ

ವ್ಯಾಲೆಂಟಿನೋ ಡ್ರೆಸ್ ನಲ್ಲಿ ರುಥ್ ನೆಗ್ಗ

ಖ್ಯಾತ ಹಾಲಿವುಡ್ ಸೆಲೆಬ್ರಿಟಿ ರುಥ್ ನೆಗ್ಗ ರೆಡ್ ಕಾರ್ಪೆಟ್ ನಲ್ಲಿ ವ್ಯಾಲೆಂಟಿನೋ ಉಡುಗೆ ಜೊತೆಗೆ 'ನೀಲಿ ರಿಬ್ಬನ್' ಧರಿಸಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿರು.

English summary
Oscars 2017: Here’s the first look of Priyanka Chopra from the red carpet
Please Wait while comments are loading...

Kannada Photos

Go to : More Photos