»   » 'ವೋಗ್'ಗಾಗಿ ಪೂರ್ತಿ ನಗ್ನಳಾಗುತ್ತೇನೆ' ಎಂದಳಾ ಮಾಡೆಲ್

'ವೋಗ್'ಗಾಗಿ ಪೂರ್ತಿ ನಗ್ನಳಾಗುತ್ತೇನೆ' ಎಂದಳಾ ಮಾಡೆಲ್

Written by: ಸೋನು ಗೌಡ
Subscribe to Filmibeat Kannada

ಏಷ್ಯಾದ ಅತ್ಯಂತ ಸೆಕ್ಸಿಯೆಸ್ಟ್ ಮ್ಯಾಗಜೀನ್ FHM ನ ಸೂಪರ್ ಮಾಡೆಲ್ ಕಿಮ್ ಲೀ ಅವರು 'ವೋಗ್ ಮ್ಯಾಗಜೀನ್'ಗಾಗಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಳ್ಳಲು ರೆಡಿ ಎಂದು ಹೇಳುವ ಮೂಲಕ ಸುದ್ದಿ ಮಾಡಿದ್ದಾರೆ.

ಖ್ಯಾತ ಫ್ಯಾಶನ್ ಮ್ಯಾಗಜೀನ್ ವೋಗ್ ಗಾಗಿ ನಗ್ನಳಾಗಲು ಸಿದ್ಧಳಿದ್ದೇನೆ ಎಂದು ಖ್ಯಾತ ಆಂಗ್ಲ ಪತ್ರಿಕೆಯೊಂದಕ್ಕೆ ಸೂಪರ್ ಮಾಡೆಲ್ ಕಿಮ್ ಲೀ ಅವರು ತಮ್ಮ ಮನದಾಸೆಯನ್ನು ಬಿಚ್ಚಿಟ್ಟಿದ್ದಾರೆ.

ಇಲ್ಲಿಯವರೆಗೆ ಬಹುತೇಕ ಮ್ಯಾಗಜೀನ್ ಗಳಿಗಾಗಿ ಕೆಲಸ ಮಾಡಿದ್ದು, ಇದೀಗ 'ವೋಗ್' ಮ್ಯಾಗಜೀನ್ ಜೊತೆ ಕೆಲಸ ಮಾಡಲು ಬಹಳ ಕಾತರಳಾಗಿದ್ದೇನೆ' ಎಂದು ಕಿಮ್ ತಿಳಿಸಿದ್ದಾರೆ.

ತನ್ನ ಬೋಲ್ಡ್ ಲುಕ್ ಗಳಿಂದ ಖ್ಯಾತಿ ಹೊಂದಿರುವ ಮಾಡೆಲ್ ಕಿಮ್ ಲೀ ಅವರು ಈ ಮೊದಲು ಅನೇಕ ಬಾರಿ ಅರೆ ನಗ್ನಳಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಕಿಮ್ ಲೀ ಅವರು ಸಂಪೂರ್ಣ ಬೆತ್ತಲಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಅಂತೂ ಅರೆನಗ್ನ ದೇಹ ನೋಡಿ ಬೇಜಾರಾಗಿದ್ದ ಕಿಮ್ ಲೀ ಅಭಿಮಾನಿಗಳಿಗೆ ಮಾತ್ರ ಕಿಮ್ ಅವರು ಇಂತಹ ಹಾಟ್ ನ್ಯೂಸ್ ಕೊಡುವ ಮೂಲಕ ಇನ್ನಷ್ಟು ನಿರೀಕ್ಷೆ ಹೆಚ್ಚು ಮಾಡಿದ್ದಾರೆ.

'ವೋಗ್'ಗಾಗಿ ಪೂರ್ತಿ ನಗ್ನಳಾಗುತ್ತೇನೆ' ಎಂದಳಾ ಮಾಡೆಲ್

English summary
FHM Magazine fame Super Model Kim Lee goes without Cloth for Vogue Magazine.
Please Wait while comments are loading...
Best of 2016

Kannada Photos

Go to : More Photos