twitter
    For Quick Alerts
    ALLOW NOTIFICATIONS  
    For Daily Alerts

    ಭಾರತದಲ್ಲಿ ಅಮೆರಿಕಕ್ಕಿಂತಲೂ ಮೊದಲೇ ಜಂಗಲ್ ಬುಕ್ ದರ್ಶನ

    By Mahesh
    |

    ಡಿಸ್ನಿ ನಿರ್ವಿುತ ರುಡ್ ಯಾರ್ಡ್ ಕ್ಲಿಪ್ಲಿಂಗ್ ಅವರ ಕಥೆ ಆಧಾರಿತ 'ಜಂಗಲ್​ಬುಕ್' ಚಿತ್ರ ಅಮೆರಿಕದಲ್ಲಿ ತೆರೆ ಕಾಣುವುದಕ್ಕೂ ಒಂದು ವಾರ ಮೊದಲೇ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಡಿಸ್ನಿ ಸ್ಟುಡಿಯೋಸ್ ಇಂಡಿಯಾ ಉಪಾಧ್ಯಕ್ಷೆ ಅಮೃತಾ ಪಾಂಡೆ ಹೇಳಿದ್ದಾರೆ. ಬಹುನಿರೀಕ್ಷಿತ ಚಿತ್ರ ಚಿತ್ರವು ಏಪ್ರೀಲ್ 8 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

    ಚಿತ್ರದಲ್ಲಿ ಮೋಗ್ಲಿ ಪಾತ್ರಧಾರಿಯಾಗಿ ಭಾರತ-ಅಮೆರಿಕ ಮೂಲದ ನೀಲ್ ಸೇಥಿ ಎಂಬ ಬಾಲಕ ನಟಿಸಿದ್ದಾನೆ. ಉನ್ನತ ತಂತ್ರಜ್ಞಾನ, ಸಿಜಿಐ ಮೂಲಕ ಕಾಡಿನ ವಾತಾವರಣ ಸೃಷ್ಟಿ, ಸಾಹಸಭರಿತ, ರೋಮಾಂಚನಕಾರಿ ಚಿತ್ರ ಮಕ್ಕಳನ್ನು ತಲುಪಿಸಲು ಡಿಸ್ನಿ ಎಲ್ಲ ರೀತಿಯಿಂದಲೂ ಸಜ್ಜಾಗಿದೆ.

    The Jungle Book to hit Indian screens a week before US

    ಟೇಲ್ಸ್ ಆಫ್ ಜಂಗಲ್​ಬುಕ್ ಚಿತ್ರದ ಪಾತ್ರಗಳಾದ ಮೋಗ್ಲಿ, ಬಾಲೂ, ಬಗೀರಾ, ಕಾ, ಶೇರ್ ಖಾನ್ ಭಾರತದ ಚಿತ್ರ ಪ್ರೇಮಿಗಳಿಗೆ ಹಳೆಯ ನೆನಪನ್ನು ಕೆದಕಲಿವೆ. ಕಿರುತೆರೆಯಲ್ಲಿ ಜಂಗಲ್ ಬುಕ್ ಕಥೆಯನ್ನು ನೋಡಿದ್ದ ಭಾರತದ ಪ್ರೇಕ್ಷಕರು ಈಗ ಬೆಳ್ಳಿ ತೆರೆಯಲ್ಲಿ ದೃಶ್ಯ ವೈಭವವನ್ನು ಕಾಣಬಹುದು.

    ಐರನ್ ಮ್ಯಾನ್ ಖ್ಯಾತಿಯ ನಿರ್ದೇಶಕ ಜಾನ್ ಫವ್ರೆಯೂ ಸಮರ್ಥ ನಿರ್ದೇಶನದ ಜೊತೆಗೆ ಬೆನ್ ಕಿಂಗ್ಸ್ಲೆ, ಬಿಲ್ ಮರೆ, ಸ್ಕಾರ್ಲೆಟ್ ಜಾನ್ಸನ್, ಇದ್ರಿಸ್ ಎಲ್ಬಾ, ಕ್ರಿಸ್ಟೋಫರ್ ವಾಲ್ಕೆನ್ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರದ ಪಾತ್ರಗಳಿಗೆ ಕಂಠದಾನ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಟ್ರೈಲರ್ ನೋಡಿ ಆನಂದಿಸಿ... (ಐಎಎನ್ಎಸ್)

    English summary
    Disney’s The Jungle Book, starring 12-year-old Indian-American Neel Sethi as Mowgli, has a special treat in store for Indian fans of the timeless tale. The film will come out in the Indian theatres on April 8, a week before it releases in the U.S.
    Wednesday, February 17, 2016, 19:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X