»   » ಯಪ್ಪಾ.. ಉಗುರುಗಳ ರಕ್ಷಣೆಗೆ ಹೀಗೂ ಮಾಡ್ತಾರಾ.?

ಯಪ್ಪಾ.. ಉಗುರುಗಳ ರಕ್ಷಣೆಗೆ ಹೀಗೂ ಮಾಡ್ತಾರಾ.?

Written by: Sony
Subscribe to Filmibeat Kannada

ಕೆಲವೊಂದು ನಟಿಯರಿಗೆ ಅದೇನಾದ್ರೂ ಮಾಡಿ ಆಗಾಗ ಮಾಧ್ಯಮಗಳಲ್ಲಿ ಸುದ್ದಿ ಮಾಡಬೇಕೆನ್ನುವ ಕೆಟ್ಟ ಚಪಲ ಇರುತ್ತೆ. ಇದನ್ನು ಹೆಚ್ಚಾಗಿ ಚಾಲ್ತಿಗೆ ತರೋದು ಹಾಲಿವುಡ್ ನಟಿಯರು, ಹಾಗೂ ಹಾಲಿವುಡ್ ಟಿವಿ ಸ್ಟಾರ್ ಗಳು.

ಈ ಹಾಲಿವುಡ್ ನಟಿಯರು ಹೆಚ್ಚಾಗಿ ಸೆಲ್ಫಿ ವಿಚಾರಕ್ಕೋ, ಅಥವಾ ತಮ್ಮ ಉಡುಗೆಗಳ ವಿಚಾರಕ್ಕೋ, ಸುದ್ದಿ ಮಾಡುತ್ತಾರೆ. ಆದರೆ ಹಾಲಿವುಡ್ ಟಿವಿ ಸ್ಟಾರ್ ಕೋಲೆ ಕರ್ದಾಶಿಯನ್ ಮಾತ್ರ ಕೊಂಚ ಡಿಫರೆಂಟ್ ಆಗಿ ಸುದ್ದಿ ಮಾಡಿದ್ದಾರೆ.[ಮಿಸ್ ವರ್ಲ್ಡ್ ಆಗಲು ಬಂದವಳು ಜೈಲು ಪಾಲಾದಾಗ.!]

ಹಾಲಿವುಡ್ ಟಿವಿ ರಿಯಾಲಿಟಿ ಶೋ ಖ್ಯಾತಿಯ ನಟಿ ಕೋಲೆ ಕರ್ದಾಶಿಯನ್ ಅವರು ಅದೇನೋ ಬಡಬಡಿಸಿ, ವಿಚಿತ್ರ ಟಿಪ್ಸ್ ಕೊಟ್ಟು ಸುದ್ದಿಗೆ ಬಂದಿದ್ದಾರೆ. ಅಂದಹಾಗೆ ಕೋಲೆ ಕರ್ದಾಶಿಯನ್ ಅವರು ಸುದ್ದಿ ಮಾಡಿದ್ದು, ತಮ್ಮ ಉಗುರುಗಳ ವಿಚಾರದಲ್ಲಿ. ಜೊತೆಗೆ ಕೋಲೆ ಅವರು ತಮ್ಮ ಸುಂದರ-ಸ್ಟೈಲಿಷ್ ಉಗುರಿನ ಸೀಕ್ರೆಟ್ ಕೂಡ ತೆರೆದಿಟ್ಟಿದ್ದಾರೆ. ಅದ್ರಲ್ಲೇನಿದೇ ಅಂತೀರಾ.? ಹಾಗಿದ್ರೆ ಮುಂದೆ ಓದಿ.....

ಕುದುರೆ ಕಾಲಿಗೆ ಹಚ್ಚುವ ಕ್ರೀಮ್

ಕುದುರೆ ಕಾಲಿಗೆ ಹಚ್ಚುವ ಕ್ರೀಮ್

ಕೋಲೆ ಅವರ ಉಗುರುಗಳು ಬಹಳ ಗಟ್ಟಿಯಾಗಿರಲು ಕಾರಣ ಕುದುರೆ ಕಾಲಿಗೆ ಹಚ್ಚುವ ವಿಶೇಷ ಕ್ರೀಮ್ ಅಂತೆ. 32 ವರ್ಷದ ಕೋಲೆ ಹೇಳುವ ಪ್ರಕಾರ ಮೆನಿಕ್ಯೂರ್ ನಿಮ್ಮ ಉಗುರುಗಳಿಗೆ ಜೀವ ಕೊಟ್ಟರೆ, ಕುದುರೆ ಕಾಲಿಗೆ ಹಚ್ಚುವ ಈ ವಿಶೇಷ ಕ್ರೀಮ್ ನಿಮ್ಮ ಉಗುರುಗಳು ಬೇಗ ಕಿತ್ತು ಹೋಗದ ಹಾಗೆ ರಕ್ಷಿಸುತ್ತದೆ ಎನ್ನುತ್ತಾರೆ.[ಕೊಕೇನ್ ಗಾಗಿ ತನ್ನ ದೇಹವನ್ನೇ ಮಾರಿಕೊಂಡ ಕಿರುತೆರೆ ನಟಿ]

ಅಭಿಮಾನಿಗಳಿಗೂ ಟಿಪ್ಸ್

ಅಭಿಮಾನಿಗಳಿಗೂ ಟಿಪ್ಸ್

ಇವರು ಕೂಡ ಬಳಸಿ ಪರಿಣಾಮಕಾರಿ ಎನಿಸಿದ್ದರಿಂದ, ಇದೀಗ ತಮ್ಮ ಅಭಿಮಾನಿಗಳಿಗೂ ಟಿಪ್ಸ್ ಕೊಡುತ್ತಿದ್ದಾರೆ. ಈ ಬ್ಯೂಟಿ ಟಿಪ್ಸ್ ಅನ್ನು ತಮ್ಮ ವೆಬ್ ಸೈಟ್ ನಲ್ಲಿ ಕೋಲೆ ಕರ್ದಾಶಿಯನ್ ಶೇರ್ ಮಾಡಿಕೊಂಡಿದ್ದಾರೆ.

ಉಗುರುಗಳಿಗೆ ಪರಿಣಾಮಕಾರಿ

ಉಗುರುಗಳಿಗೆ ಪರಿಣಾಮಕಾರಿ

ಪ್ರಮುಖವಾಗಿ ಈ ಕ್ರೀಮ್ ಅನ್ನು ಕುದುರೆ ಕಾಲಿಗೆ ಹಚ್ಚಲು ಬಳಕೆ ಮಾಡುತ್ತಾರೆ. ಆದರೆ ಇದು ನಮ್ಮ ವೀಕ್ ಆದ ಉಗುರನ್ನು, ಮತ್ತೆ ಗಟ್ಟಿಗೊಳಿಸಿ, ರಕ್ಷಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಎನ್ನುತ್ತಾರೆ ಕೋಲೆ.

ದಿನಕ್ಕೆರಡು ಬಾರಿ ಹಚ್ಚಬಹುದು

ದಿನಕ್ಕೆರಡು ಬಾರಿ ಹಚ್ಚಬಹುದು

ಈ ಕ್ರೀಮ್ ಅನ್ನು ದಿನಕ್ಕೆರಡು ಬಾರಿ ಹಚ್ಚಿಕೊಂಡರೆ ಸಾಕಂತೆ, ಆದರೆ ಕೋಲೆ ಅವರು ಮಾತ್ರ ದಿನದಲ್ಲಿ ಬಹಳ ಸಾರಿ ಹಚ್ಚಿಕೊಳ್ಳುತ್ತಾರಂತೆ. ಎಲ್ಲಿಗಾದರೂ ಹೋದರೂ ಅದನ್ನು ತಮ್ಮ ಜೊತೆಗೆ ಒಯ್ಯುತ್ತಾರಂತೆ.

English summary
Hollywood Reality TV personality Khloe Kardashian uses cream meant for horse hooves to strengthen her own nails.
Please Wait while comments are loading...

Kannada Photos

Go to : More Photos