»   » ನಟ ಅರ್ನಾಲ್ಡ್ ಅವರನ್ನು ಅಟ್ಟಿಸಿಕೊಂಡು ಬಂದ ಆಫ್ರಿಕನ್ ಆನೆ

ನಟ ಅರ್ನಾಲ್ಡ್ ಅವರನ್ನು ಅಟ್ಟಿಸಿಕೊಂಡು ಬಂದ ಆಫ್ರಿಕನ್ ಆನೆ

Written by: ಸೋನು ಗೌಡ
Subscribe to Filmibeat Kannada

'ಟರ್ಮಿನೇಟರ್' ಚಿತ್ರದ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ಅವರನ್ನು ಆಫ್ರಿಕಾದ ಕಾಡಾನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ನಡೆದಿದ್ದು, ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.

ಸ್ಫೋರ್ಟ್ ಫೆಸ್ಟಿವಲ್ ನ ಪ್ರಚಾರಕ್ಕಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದ ನಟ ಅರ್ನಾಲ್ಡ್ ಅವರು ಬಿಡುವಿನ ವೇಳೆಯಲ್ಲಿ ಸಫಾರಿಗೆ ತೆರಳಿದ್ದರು. ಸಫಾರಿಯಲ್ಲಿ ಪ್ರಾಣಿಗಳನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ದೈತ್ಯ ಕಾಡಾನೆಯೊಂದು ಅರ್ನಾಲ್ಡ್ ಅವರಿದ್ದ ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ರೋಮಾಂಚನಕಾರಿ ಘಟನೆ ನಡೆದಿದೆ.

Wild African Elephant charges Actor Arnold Schwarzenegger

ಈ ರೋಚಕ ವಿಚಾರವನ್ನು ಖುದ್ದು ನಟ ಅರ್ನಾಲ್ಡ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ....

ಆಫ್ರಿಕಾದ ಸಫಾರಿ ವಾಹನದಲ್ಲಿ ಕುಳಿತಿದ್ದ ನಟ ಅರ್ನಾಲ್ಡ್ ಅವರು ಆನೆಯನ್ನು ಕಂಡ ಕೂಡಲೇ ವಿಡಿಯೋ ಮಾಡಲು ಆರಂಭಿಸಿದರು. ಸ್ವಲ್ಪ ಹೊತ್ತು ಸುಮ್ಮನಿದ್ದ ಆನೆ ಪಕ್ಕಕ್ಕೆ ಸರಿದು ಹೋಗಿ ಮತ್ತೆ ಸಡನ್ ಆಗಿ ಹಿಂತಿರುಗಿ ಬಂದು ಅರ್ನಾಲ್ಡ್ ಇದ್ದ ಜೀಪನ್ನು ಅಟ್ಟಿಸಿಕೊಂಡು ಬರಲು ಆರಂಭಿಸಿತು.

Wild African Elephant charges Actor Arnold Schwarzenegger

ಆನೆ ಜೀಪನ್ನು ಬೆನ್ನಟ್ಟುತ್ತಿದೆ ಅಂತ ತಿಳಿದ ತಕ್ಷಣ ಜೀಪ್ ಡ್ರೈವರ್ ಗಾಡಿಯನ್ನು ವೇಗವಾಗಿ ಓಡಿಸಿ ಅಲ್ಲಿಂದ ಪಾರಾಗಿದ್ದಾರೆ. 'ಈ ರೋಚಕ ಅನುಭವ ಹಾಗೂ ದೈತ್ಯ ಪ್ರಾಣಿಗಳನ್ನು ಹತ್ತಿರದಿಂದ ನೋಡಿ ನಿಜಕ್ಕೂ ವಿಸ್ಮಯಗೊಂಡೆ' ಎಂದು ನಟ ಅರ್ನಾಲ್ಡ್ ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

English summary
Hollywood Actor Arnold Schwarzenegger while on a safari in South Africa, gets up close and personal with a Wild African Elephant .
Please Wait while comments are loading...

Kannada Photos

Go to : More Photos