»   » ಕ್ಯಾನ್ಸರ್ ಮೆಟ್ಟಿ ನಿಂತ ಸೆಲೆಬ್ರಿಟಿಗಳಿಗೆ ಸೆಲ್ಯೂಟ್

ಕ್ಯಾನ್ಸರ್ ಮೆಟ್ಟಿ ನಿಂತ ಸೆಲೆಬ್ರಿಟಿಗಳಿಗೆ ಸೆಲ್ಯೂಟ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ವಿಶ್ವ ಕ್ಯಾನ್ಸರ್ ದಿನವಾದ ಇಂದು ಕ್ಯಾನ್ಸರ್ ನಂಥ ಮಾರಕದೊಡನೆ ಸೆಣಸಾಟ ನಡೆಸಿ ಸ್ಥಿರ ಜೀವನ ಕಂಡುಕೊಂಡಿರುವ ಸೆಲೆಬ್ರಿಟಿಗಳಿಗೆ ಒಂದು ಸೆಲ್ಯೂಟ್. ಮದ್ಯ ಮತ್ತು ಸಿಗರೇಟು ಸೇವನೆ, ಅನಿಯಮಿತ ಆಹಾರ ಕ್ರಮ, ತಡವಾಗಿ ಮದುವೆಯಾಗುವುದು ಹೀಗೆ ಅನೇಕ ಕಾರಣಗಳಿಂದ ಕ್ಯಾನ್ಸರ್ ರೋಗ ಪೀಡನೆ ಆರಂಭವಾಗುತ್ತದೆಯಂತೆ.

"ನಿಮ್ಮ ಫ್ಯಾಮಿಲಿಯಲ್ಲಿ ಯಾರಾದರು ಹಿರಿಯರಿಗೆ ಸ್ತನ ಕ್ಯಾನ್ಸರ್ ಇದ್ದರೆ ಹತ್ತರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಕುಟುಂಬದಲ್ಲಿ ಯಾರಿಗೂ ಸ್ತನ ಕ್ಯಾನ್ಸರ್ ಇಲ್ಲದಿದ್ದರೆ ಇಪ್ಪತ್ತರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರ" ಎಂದು ಜಗತ್ತಿನ ಮಹಿಳೆಯರಿಗೆ ನೀತಿ ಪಾಠ ಹೇಳಿದ ಹಾಲಿವುಡ್ ನಟಿ ಏಂಜೆಲಿನಾ ಜೋಲಿ ಅವರು ಸ್ತನಗಳನ್ನೇ ತೆಗೆಸಿಕೊಂಡು ಮಾದರಿ ಮಹಿಳೆಯಾಗಿ ಬದುಕುತ್ತಿದ್ದಾರೆ.

ಏಂಜಲಿನಾ ಜೋಲಿ, ಮೈಕಲ್ ಡಗ್ಲಾಸ್, ಬಾರ್ಬರಾ ಮೋರಿ ಬಾಲಿವುಡ್ ನಲ್ಲಿ ಲೀಸಾ ರೇ, ಮನೀಷಾ ಕೊಯಿರಾಲ, ಕ್ರೀಡಾ ಲೋಕದಲ್ಲಿ ಲ್ಯಾನ್ಸ್ ಆರ್ಮಸ್ಟ್ರಾಂಗ್, ಯುವರಾಜ್ ಹೀಗೆ ಕ್ಯಾನ್ಸರ್ ಪೀಡನೆಗೆ ಒಳಪಟ್ಟು ಗುಣಮುಖರಾಗಿ ಸಹಜ ಜೀವನ ನಡೆಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿ ತುಂಬಿದ್ದಾರೆ. ಇಂಥ ಕೆಲವು ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳತ್ತ ಕಣ್ಣೋಟ ಇಲ್ಲಿದೆ...

ಏಂಜಲೀನಾ ಜೋಲಿ

ಏಂಜಲೀನಾ ಜೋಲಿ

ಸಿನಿಮಾ ತಾರೆಯೊಬ್ಬಳ ಪ್ರಮುಖ ಆಕರ್ಷಣೆ ಎಂದರೆ ಅವರ ಎದೆಯ ಭಾಗ. ಈಗ ಅದೇ ಇಲ್ಲದಿದ್ದರೆ ಹೇಗೆ? ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿದರೆ ಅವರ ಮುಂದಿನ ಭವಿಷ್ಯವೇನು? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆದರೆ ಏಂಜಲೀನಾ ಜೋಲಿ ಇದ್ಯಾವುದಕ್ಕೂ ಕೇರ್ ಮಾಡಲಿಲ್ಲ. ಸ್ತನಛೇದನ ಶಸ್ತ್ರಚಿಕಿತ್ಸೆಗೆ ಒಳಗಾದರು.[ಈ ಬಗ್ಗೆ ವಿವರ ಇಲ್ಲಿ ಓದಿ]

ಮೈಕಲ್ ಡಗ್ಲಾಸ್

ಮೈಕಲ್ ಡಗ್ಲಾಸ್

ಗಾರ್ಡಿಯನ್ ಗೆ ನೀಡಿದ ಸಂದರ್ಶನವೊಂದರಲ್ಲಿ ಸ್ಪುರದ್ರೂಪಿ ನಟ ಮೈಕಲ್ ಡಗ್ಲಾಸ್ ತನಗೆ ಗಂಟಲಿನ ಕ್ಯಾನ್ಸರ್ ಇರುವುದನ್ನು ಬಹಿರಂಗ ಪಡಿಸಿದ್ದರು. ಮದ್ಯ, ಧೂಮಪಾನದಿಂದ ಬಂದಿದೆ ಎಂದುಕೊಂಡರೆ ಓರಲ್ ಸೆಕ್ಸ್ ನಿಂದ ಬಂದ ಪಿಡುಗು ಸ್ಟೇಜ್ 4ರಲ್ಲಿ ಇದ್ದೇನೆ ಎಂದಿದ್ದರು. ಈಗ ಕ್ಯಾನ್ಸರ್ ಮುಕ್ತರಾಗಿ ಬದುಕಿದ್ದಾರೆ.

ಕೈಲಿ ಮಿನೊಗ್

ಕೈಲಿ ಮಿನೊಗ್

ಆಸ್ಟ್ರೇಲಿಯಾದ ಪಾಪ್ ದೇವತೆಗೆ 2005ರಲ್ಲಿ ಸ್ತನ ಕ್ಯಾನ್ಸರ್ ಸೋಂಕು ಇರುವುದು ಪತ್ತೆಯಾಗಿತ್ತು. ಕಿಮೋಥೆರಪಿ ಮೂಲಕ ಸಂಪೂರ್ಣವಾಗಿ ಕ್ಯಾನ್ಸರ್ ಗೆಡ್ಡೆ ಕರಗಿಸಿ ಈಗ ಎಲ್ಲರಂತೆ ಬದುಕಿದ್ದಾರೆ.

ಕ್ರಿಸ್ಟಿನಾ ಆಪಲ್ ಗೇಟ್

ಕ್ರಿಸ್ಟಿನಾ ಆಪಲ್ ಗೇಟ್

2008ರಲ್ಲಿ ಎರಡು ಬಾರಿ ಸ್ತನ ಛೇದನ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಹಾಲಿವುಡ್ ತಾರೆ ಕ್ರಿಸ್ಟಿನಾ ಸ್ತನ ಕ್ಯಾನ್ಸರ್ ವಿರುದ್ಧ ಅಭಿಯಾನ ಆರಂಭಿಸಿ ಜಾಗೃತಿ ಮೂಡಿಸಿದ್ದಾರೆ.

ಸಿಂಥಿಯಾ ನಿಕ್ಸನ್

ಸಿಂಥಿಯಾ ನಿಕ್ಸನ್

ಸೆಕ್ಸ್ ಅಂಡ್ ದಿ ಸಿಟಿ ಟೆಲಿ ಸೀರಿಯಲ್ ತಾರೆ ಕೂಡಾ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ರೇಡಿಯೇಷನ್ ಹಾಗೂ ಲಂಪೆಕ್ಟೊಮಿ ಮೂಲಕ ಕ್ಯಾನ್ಸರ್ ನಿರ್ಮೂಲನೆ ಮಾಡಿಕೊಂಡರು.

ಮನೀಷಾ ಕೊಯಿರಾಲ

ಮನೀಷಾ ಕೊಯಿರಾಲ

42ನೇ ವಯಸ್ಸಿನಲ್ಲಿ ಅಂಡಾಶಯ ಕ್ಯಾನ್ಸರ್ (ovarian) ಪೀಡೆಗೆ ತುತ್ತಾದ ಮುದ್ದಾದ ನಟಿ ಮನೀಷಾ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಸರ್ಕಾರೇತರ ಸಂಸ್ಥೆ ಜೊತೆ ಕೈಜೋಡಿಸಿ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಶೆರ್ಲಿ ಕ್ರೋ

ಶೆರ್ಲಿ ಕ್ರೋ

2006ರಲ್ಲಿ ಸ್ತನ ಕ್ಯಾನ್ಸರ್ ಗೆ ಒಳಪಟ್ಟ ಶೆರ್ಲಿ ಧೈರ್ಯ ಮಾಡಿ ರೋಗದೊಡನೆ ಸೆಣಸಿ ಈಗ ಎಲ್ಲರಂತೆ ಬಾಳುತ್ತಿದ್ದಾರೆ.

ರಾರ್ಬಟ್ ಡಿ ನಿರೋ

ರಾರ್ಬಟ್ ಡಿ ನಿರೋ

ಅಮೆರಿಕದ ನಟ, ಚಿತ್ರ ನಿರ್ಮಾಣಗಾರ ರಾರ್ಬಟ್ ಡಿ ನಿರೋ ಅವರಿಗೆ 2003ರಲ್ಲಿ ವೃಷಣ ಕ್ಯಾನ್ಸರ್ ಪೀಡೆ ಅನುಭವಿಸಿದ್ದರು. ನಂತರ ಶಸ್ತ್ರಚಿಕಿತ್ಸೆಗೊಳಪಟ್ಟು ಈಗ ರೋಗಮುಕ್ತರಾಗಿದ್ದಾರೆ.

ಮಮ್ತಾಜ್

ಮಮ್ತಾಜ್

ಆ ಕಾಲದ ಹಿಂದಿ ನಟಿ ಮಮ್ತಾಜ್ ಅವರಿಗೆ 54ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಈಗ ಗುಣಮುಖರಾಗಿದ್ದಾರೆ.

ಜೆಕ್ಲಿನ್ ಸ್ಮಿತ್

ಜೆಕ್ಲಿನ್ ಸ್ಮಿತ್

ಚಾರ್ಲಿಸ್ ಏಂಜಲ್ ಸ್ಟಾರ್ ಜೇಕ್ಲಿನ್ ಸ್ಮಿತ್ 2003ರಲ್ಲಿ ಸ್ತನ ಕ್ಯಾನ್ಸರ್ ಗೆ ಒಳಪಟ್ಟಿದ್ದರು. ನಂತರ ಮಮ್ಮೊಗ್ರಾಮ್ (mammogram) ಮೂಲಕ ರೋಗಕ್ಕೆ ಎದುರಾಗಿ ನಿಂತರು.

ಬಾರ್ಬರಾ ಮೋರಿ

ಬಾರ್ಬರಾ ಮೋರಿ

ಸ್ಪಾನೀಷ್ ನಟಿ, ಬಾಲಿವುಡ್ ನಲ್ಲೂ ಕಾಣಿಸಿಕೊಂಡ ಬಾರ್ಬರಾ ಮೋದಿ ಕೂಡಾ 29ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಗೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡರು. ಈಗ ಸ್ತನ ಕ್ಯಾನ್ಸರ್ ವಿರುದ್ಧ ಸಮರ ಸಾರಿದ್ದಾರೆ.

ಆಂಜಿ ಎವರ್ ಹಾರ್ಟ್

ಆಂಜಿ ಎವರ್ ಹಾರ್ಟ್

ಮಾಜಿ ಸೂಪರ್ ಮಾಡೆಲ್ ಗೆ 2013ರಲ್ಲಿ ಗಂಟಲ ಕ್ಯಾನ್ಸರ್ ಪೀಡೆ ತಗುಲಿತ್ತು. ಸರ್ಜರಿ ಮೂಲಕ ರೋಗ ಮುಕ್ತರಾದರು.

ಲೀಸಾ ರೇ

ಲೀಸಾ ರೇ

ನಟಿ, ಮಾಡೆಲ್, ನಿರೂಪಕಿ ಲೀಸಾ ರೇ ಅವರಿಗೆ 2009ರಲ್ಲಿ Myeloma ಕಾಣಿಸಿಕೊಂಡಿತ್ತು. ಅದರೆ, ಮರುವರ್ಷವೇ ಸಂಪೂರ್ಣ ರೋಗ ಮುಕ್ತರಾದರು.

ಅನುರಾಗ್ ಬಸು

ಅನುರಾಗ್ ಬಸು

ನಿರ್ದೇಶಕ ಅನುರಾಗ್ ಬಸು ಅವರಿಗೆ 2004ರಲ್ಲಿ promyelocytic ಲ್ಯೂಕೆಮಿಯಾ(ಒಂದು ಬಗೆ ರಕ್ತ ಕ್ಯಾನ್ಸರ್) ಕಾಣಿಸಿಕೊಂಡಿತ್ತು. ಇನ್ನು ಮೂರು ತಿಂಗಳು ಮಾತ್ರ ನಿಮ್ಮ ಆಯಸ್ಸು ಎಂದು ವೈದ್ಯರು ಹೇಳಿದ್ದರು. ಅದರೆ, ರೋಗಮುಕ್ತರಾಗಿ ಗಟ್ಟುಮುಟ್ಟಿಯಾಗಿ ಬದುಕಿದ್ದಾರೆ.

English summary
Today is World Cancer Day. Cancer is a deadly disease which can break you down. However, there are some famous Hollywood celebrities who suffered from cancer, and fought the battle with a positive and proactive approach.
Please Wait while comments are loading...

Kannada Photos

Go to : More Photos