twitter
    For Quick Alerts
    ALLOW NOTIFICATIONS  
    For Daily Alerts

    ಪತ್ರಕರ್ತ ವೀರೇಶ್ ನಿರ್ಮಾಪಕ ಆಗುವ ಕನಸು ಈಡೇರಿದ್ದು ಹೀಗೆ

    By ಸಂದರ್ಶನ: ಹರ್ಷಿತಾ ನಾಗರಾಜ್ / ಬಾಲರಾಜ್ ತಂತ್ರಿ
    |

    ಕನ್ನಡ ಚಿತ್ರೋದ್ಯಮಕ್ಕೆ ಪತ್ರಕರ್ತ ಕೆ ಎಂ ವೀರೇಶ್ ಅವರ ಹೆಸರು ಚಿರಪರಿಚಿತ. ಸಿನಿಮಾ ರಂಗಕ್ಕೆ ಸಂಬಂಧಪಟ್ಟ ಸುದ್ದಿ, ವಿಶ್ಲೇಷಣೆ, ವಿಮರ್ಶೆಗಾಗಿಯೇ 'ಚಿತ್ರಲೋಕ ಡಾಟ್ ಕಾಂ' ಎನ್ನುವ ವೆಬ್ಸೈಟ್ ಅನ್ನು ಆರಂಭಿಸಿದ ವೀರೇಶ್ ಈಗ 'ಆಕ್ಟರ್' ಎನ್ನುವ ಚಿತ್ರದ ಮೂಲಕ ಚೊಚ್ಚಲ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    'ಒನ್ ಇಂಡಿಯಾ' ಕಚೇರಿಗೆ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ನಾಯಕ ನವೀನ್ ಕೃಷ್ಣ ಜೊತೆ ವೀರೇಶ್ ಆಗಮಿಸಿದ್ದರು. ತಮ್ಮ ಸಿನಿಮಾದ ಬಗ್ಗೆ ಚಿತ್ರತಂಡ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದು ಹೀಗೆ..

    ಚಿತ್ರ ನಿರ್ಮಿಸ ಬೇಕು ಎನ್ನುವುದು ನನ್ನ ಬಹುದಿನದ ಕನಸು ಎಂದು ಮಾತು ಆರಂಭಿಸಿದ ವೀರೇಶ್, ನಮ್ಮ ಚಿತ್ರೋದ್ಯಮದ ಒಳಹೊರಗೆ ಗೊತ್ತಿರುವುದರಿಂದ ಹೆಚ್ಚಿನ ತೊಂದರೆಯಾಗದು ಎನ್ನುವ ಬಲವಾದ ನಂಬಿಕೆಯಿಂದ, ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೇ ಜೊತೆಗೆ ಬಜೆಟ್ ಕೈಮೀರದಂತೆ ಚಿತ್ರ ನಿರ್ಮಿಸುವುದು ನನ್ನ ಗುರಿಯಾಗಿತ್ತು, ಅದನ್ನು ಪೂರೈಸಿದ್ದೇನೆ.

    ಈ ಚಿತ್ರದ ನಿರ್ದೇಶಕ ದಯಾಳ್ ನನಗೆ ಹಳೆಯ ಪರಿಚಯ, ಬಹಳಷ್ಟು ಬಾರಿ ಅವರನ್ನು ಭೇಟಿಯಾಗಿದ್ದೆ. ಚಿತ್ರ ನಿರ್ಮಿಸಬೇಕು ಎನ್ನುವ ಆಸೆ ಬಲವಾಗಿ ಮೊಳಕೆಯೊಡೆದಾಗ, ದಯಾಳ್ ಅವರನ್ನು ಕಚೇರಿಗೆ ಕರೆಸಿ ನನ್ನ ಇಂಗಿತವನ್ನು ತಿಳಿಸಿದ್ದೆ.

    ಸರ್ ಒಂದು ಸೂಪರ್ ಕಥೆಯಿದೆ 'ಕಲಾವಿದನ ಜೀವನದ ಏರುಪೇರಿನ' ಬಗ್ಗೆ ಎಂದು ಒಂದು ಲೈನಿನಲ್ಲಿ ಕಥೆ ಹೇಳಿದ್ದರು. ಇಂಪ್ರೆಸ್ ಆದೆ ಆ ಮೂಮೆಂಟ್ ನಲ್ಲೇ ಚಿತ್ರ ನಿರ್ಮಿಸುತ್ತೇನೆಂದು ಕಮಿಟ್ ಆದೆ. ಮುಂದಿನ ಸ್ಲೈಡುಗಳಲ್ಲಿ ಸಂದರ್ಶನ ಮುಂದುವರಿಸಲಾಗಿದೆ..

    ವಾಟ್ಸಪ್ ಮೂಲಕ ದಯಾಳ್ ಕಥೆ ಕಳುಹಿಸಿದ್ದು

    ವಾಟ್ಸಪ್ ಮೂಲಕ ದಯಾಳ್ ಕಥೆ ಕಳುಹಿಸಿದ್ದು

    ಮನೆಗೆ ಹೋದ ನಂತರ ದಯಾಳ್ ಕಥೆಯ ಬಗ್ಗೆ ಇನ್ನಷ್ಟು ವಿವರವನ್ನು ವಾಟ್ಸಪ್ ಮೂಲಕ ಕಳುಹಿಸಿದರು. ಅದಾದ ಮೇಲೆ ನವೀನ್ ಕೃಷ್ಣ ಅವರನ್ನು ಕರೆಸಿ ಮಾತುಕತೆ ಮುಗಿಸಿದೆ, ಅಲ್ಲಿಗೆ ಚಿತ್ರ ನಿರ್ಮಾಣದ ನನ್ನ ಕನಸು ಒಂದು ಹಂತಕ್ಕೆ ಬಂತು ನಿಂತಿತು.

    ದಯಾಳ್ ಒಬ್ಬ ವೃತ್ತಿಪರ ನಿರ್ದೇಶಕ

    ದಯಾಳ್ ಒಬ್ಬ ವೃತ್ತಿಪರ ನಿರ್ದೇಶಕ

    ದಯಾಳ್ ಒಬ್ಬ ವೃತ್ತಿಪರ ನಿರ್ದೇಶಕ. ತನ್ನ ಚಿತ್ರಕ್ಕೆ ಏನು ಬೇಕು, ಏನೇನು ಖರ್ಚು ಮಾಡಬೇಕು, ಯಾವ ರೀತಿಯ ಸೆಟ್ ಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಕಂಟ್ರೋಲ್ ಇರುವ ದಯಾಳ್ ಅವರ ಕಮಿಟ್ಮೆಂಟ್ ಹೇಗೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ.

    ನನ್ನ ಕನಸಿನ ಚಿತ್ರ

    ನನ್ನ ಕನಸಿನ ಚಿತ್ರ

    ಚಿತ್ರದ ಹೀರೋ ಮತ್ತು ತಾಂತ್ರಿಕ ವರ್ಗ ಫೈನಲ್ ಆದ ನಂತರ, ದಯಾಳ್ ನನಗೆ ಕೊಟ್ಟ ಷೆಡ್ಯೂಲ್ ಮತ್ತು ಬಜೆಟ್ ಲಿಸ್ಟ್ ಪ್ರಕಾರವೇ ಇಡೀ ಚಿತ್ರದ ಶೂಟಿಂಗ್ ನಡೆದುಕೊಂಡು ಬಂತು. ಚಿತ್ರ ನಿರ್ಮಾಣದ ಬೆನ್ನೇರಿ ಅಂದು ಹೊರಟಿದ್ದ ವೇಳೆಯಲ್ಲಿ ದಯಾಳ್ ಮತ್ತು ನನ್ನ ನಡುವೆ ಏನು ಮಾತುಕತೆಯಾಗಿತ್ತೋ, ಅದೇ ರೀತಿಯಲ್ಲಿ ಚಿತ್ರ ಬಿಡುಗಡೆಯ ಹಂತಕ್ಕೆ ನನ್ನ ಕನಸಿನ ಚಿತ್ರವನ್ನು ತಂದು ನಿಲ್ಲಿಸಿದ್ದಾರೆ. ಅವರು ಹಾಕಿರುವ ಷೆಡ್ಯೂಲ್ ಪ್ರಕಾರ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ನಮ್ಮ ಚಿತ್ರ ಪ್ರದರ್ಶನಗೊಂಡಿತ್ತು, ಹಾಗೇ ಫೆಬ್ರವರಿ 19ರಂದು ಚಿತ್ರ ಬಿಡುಗಡೆಯಾಗುತ್ತಿದೆ ಕೂಡಾ.

    ಮನೆಗೆ ದಿನವೊಂದರ ಬಾಡಿಗೆ 75 ಸಾವಿರ ರೂಪಾಯಿ

    ಮನೆಗೆ ದಿನವೊಂದರ ಬಾಡಿಗೆ 75 ಸಾವಿರ ರೂಪಾಯಿ

    ದಯಾಳ್ ಎಲ್ಲಾದರೂ ಬಜೆಟ್ ಮೀರಿ ಹೋಗುತ್ತಿದ್ದಾರಾ ಎನ್ನುವ ನಮ್ಮ ಪ್ರಶ್ನೆಗೆ, ಇಡೀ ಚಿತ್ರ ನಡೆಯುವುದು ಒಂದು ಮನೆಯಲ್ಲಿ. ಅದಕ್ಕಾಗಿ ಬೆಂಗಳೂರಿನ ಶಿವಣ್ಣ ಅವರ ಮನೆ ಹತ್ತಿರದ ಬಂಗ್ಲೆಯನ್ನು ದಯಾಳ್ ಆಯ್ಕೆ ಮಾಡಿಕೊಂಡಾಗ ನನಗೆ ಶಾಕ್ ಆಯಿತು. ಯಾಕೆಂದರೆ ಆ ಮನೆಗೆ ದಿನವೊಂದರ ಬಾಡಿಗೆ 75 ಸಾವಿರ ರೂಪಾಯಿ. ಆಮೇಲೆ ದಯಾಳ್ ಲೆಕ್ಕಾಚಾರ ಸರಿಯಿದೆ, ಯಾಕಾಗಿ ದಯಾಳ್ ಅದೇ ಮನೆಬೇಕು ಎಂದು ಹಠಹಿಡಿದಿದ್ದರು ಎಂದು ನನಗೆ ಮನವರಿಕೆಯಾಯಿತು.

    ಇಡೀ ಚಿತ್ರಕ್ಕೆ ಏಳು ಜನ ಹೀರೋಗಳು

    ಇಡೀ ಚಿತ್ರಕ್ಕೆ ಏಳು ಜನ ಹೀರೋಗಳು

    ಇಡೀ ಚಿತ್ರಕ್ಕೆ ಏಳು ಜನ ಹೀರೋಗಳು. ಒಂದು ಹೀರೋ, ಚಿತ್ರದಲ್ಲಿ ಬರುವ ಇನ್ನೊಂದು ಕ್ಯಾರೆಕ್ಟರ್, ಫೋಟೋಗ್ರಾಫಿ, ಬಿಜಿಎಂ, ಸಂಗೀತ, ಎಡಿಟರ್ ಮತ್ತು ಚಿತ್ರದ ನಿರ್ದೇಶಕ. ಲಿಮಿಟೆಡ್ ಕ್ಯಾರೆಕ್ಟರ್ ಇಟ್ಟುಕೊಂಡು ದಯಾಳ್ ಉತ್ತಮ ಚಿತ್ರವನ್ನು ನೀಡಿದ್ದಾರೆ ಎನ್ನುವುದು ಚಿತ್ರದ ನಿರ್ಮಾಪಕ ವೀರೇಶ್ ಭರವಸೆಯ ಮಾತು.

    ಚಿತ್ರ ನೋಡಿ ಹರಸಿ

    ಚಿತ್ರ ನೋಡಿ ಹರಸಿ

    ಈ ಚಿತ್ರ ಬಿಡುಗಡೆಗೆ ಮುನ್ನವೇ ಭರವಸೆಯನ್ನು ಮೂಡಿಸಿದೆ. ಇದೇ ಟ್ರೂಪ್ ಇಟ್ಟುಕೊಂಡು ಇನ್ನೊಂದು ಚಿತ್ರವನ್ನು ನಿರ್ಮಿಸುತ್ತೇನೆಂದು ಹೇಳಿದ ವೀರೇಶ್ ಫೆಬ್ರವರಿ 19ರಂದು ಚಿತ್ರ ಬಿಡುಗಡೆಯಾಗಲಿದೆ, ಎಲ್ಲಾ ಕನ್ನಡಿಗರು ಚಿತ್ರ ನೋಡಿ ಹರಸಿ ಎಂದು ಮನವಿ ಮಾಡಿದ್ದಾರೆ.

    English summary
    An exclusive interview with journalist, editor of Chitraloka.com turned producer K M Veeresh.
    Friday, February 12, 2016, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X