twitter
    For Quick Alerts
    ALLOW NOTIFICATIONS  
    For Daily Alerts

    ಪ್ರಗತಿ, ಅದ್ವಿತಿ, ಅಶ್ವಿತಿ ಸುಳಿಯಲ್ಲಿ ಕಂಡ ಪ್ರತಿಭೆಗಳು

    By ಮಲೆನಾಡಿಗ
    |

    ಸುಳಿ ಚಿತ್ರದಲ್ಲಿ ಶಬಾನಾ ಪಾತ್ರಧಾರಿಯಾಗಿ, ಬುಡೇನ್ ಸಾಬ್(ಶ್ರೀನಾಥ್) ಮಗಳಾಗಿ ನಟಿಸಿರುವ ಪ್ರಗತಿ ಅವರು ತಮ್ಮ ಪಾತ್ರದ ಬಗ್ಗೆ ಹೇಳಿದ್ದು ಹೀಗೆ....

    ನಾನು ನಿರೂಪಕಿಯಾಗಿ ಆರ್ ಜೆಯಾಗಿ ಅನುಭವವುಳ್ಳವಳು ಮೊದಲ ಬಾರಿಗೆ ಸಿಕ್ಕಿರುವುದು ಮೂಕಿ ಪಾತ್ರ ಎಂದಾಗ ಕೊಂಚ ಗಾಬರಿಯಾಯಿತು. ಅಭಿನಯದ ವಿಷಯದಲ್ಲಿ ನಾವು ಕಲಿಯುವುದು ಸಾಕಷ್ಟಿದೆ ಎಂಬುದು ಆರಂಭದಲ್ಲೆ ಅರ್ಥವಾಯಿತು.

    15 ದಿನಗಳ ಕಾಲ ನೀನಾಸಂನ ಕಾರ್ಯಾಗಾರದಲ್ಲಿ ಪಾಲ್ಗೊಂಡೆ. ಅಲ್ಲಿ ಜೋಸೆಫ್, ಚೆನ್ನಕೇಶವ ಸರ್ ನಮಗೆ ಅಭಿನಯದ ಮೊದಲ ಪಾಠ ಹೇಳಿಕೊಟ್ಟರು.[ಸುಳಿ-ಭಾವನೆ, ಬದುಕು- ಬವಣೆ, ಬೆಸುಗೆ :ಶ್ರೀನಾಥ್]

    ಆದರೆ, ಮೂಕಿ ಪಾತ್ರಕ್ಕೆ ತಯಾರಿ ಸುಲಭವಾಗಿರಲಿಲ್ಲ. ಯಾವುದೇ ಕಿವುಡು ಮೂಗರ ಶಾಲೆಗೆ ತೆರಳಿ ಕಲಿಯುವಂತಿರಲಿಲ್ಲ. ಶಾಲೆಯಲ್ಲಿ ಕಲಿತರೂ ಅದನ್ನು ದೂರದ ಹಳ್ಳಿಯ ಮೂಕ ಹುಡುಗಿಯಂತೆ ವರ್ತಿಸುವ ಬಗೆಯಂತೆ ಪರಿವರ್ತಿಸಬೇಕಾಗಿತ್ತು. ನನ್ನದೇ ಆದ ರೀತಿಯನ್ನು ಅಭ್ಯಾಸ ಮಾಡಿಕೊಂಡೆ. ನನ್ನದೆ ಆದ ರೀತಿಯಲ್ಲಿ ಸಹ ನಟ ನಟಿಯರೊಡನೆ ಮಾತನಾಡತೊಡಗಿದೆ.

    ಮೊದಲ ದಿನದ ಶೂಟ್ ನಲ್ಲೇ ಸಾಕಷ್ಟು ಸೈಕಲ್ ಹೊಡೆದೆ. ನಾಚಿಕೊಳ್ಳುವ ಸೀನ್, ವಿಶ್ವನಾಥ್ ಸರ್ ಅವಳ ತಾಳ್ಮೆ ಪರೀಕ್ಷೆ ಮಾಡಿದೆ ಅನ್ನಿಸುತ್ತದೆ. ಆಗ ಶ್ರೀನಾಥ್ ಅವರು ನನಗೆ ನಟನೆಯ ಪಾಠ ಮಾಡಿದ್ದು ನನ್ನ ನೆರವಿಗೆ ಬಂದಿತು. ಅಲ್ಲಿಂದ ಮುಂದೆ ಸಲೀಸಾಗಿ ನಟನೆ ಸಾಗಿತು.

    Pragathi AS

    ಅಶ್ವಿತಿ: ನನಗೆ ಕ್ಯಾಮೆರಾ ಭಯ ಇರಲಿಲ್ಲ. ಆದರೆ, ನನ್ನ ಕನ್ನಡ ಸುಧಾರಿಸಬೇಕಿತ್ತು. ಅದಕ್ಕಾಗಿ ಪ್ರತಿನಿತ್ಯ ನನಗೂ ಅದ್ವಿತಿಗೂ ನ್ಯೂಸ್ ಪೇಪರ್ ಓದಿಕೊಂಡು ಬರುವ ಹೋಂ ವರ್ಕ್ ಕೊಟ್ಟಿದ್ರು. ಪ್ರಗತಿ ಹೇಳಿದ ಹಾಗೆ ನೀನಾಸಂ ವರ್ಕ್ ಶಾಪ್, ಶೂಟಿಂಗ್ ಸಮಯದಲ್ಲಿ ಶ್ರೀನಾಥ್ ಸರ್ ಹೆಲ್ಪ್ ನಮ್ಮಿಬ್ಬರ ಅಭಿನಯವನ್ನು ಸುಧಾರಿಸಿತು.

    ಅಕ್ಕ ತಂಗಿ ಥರಾ ನಟಿಸಿ ಎನ್ನುತ್ತಿದ್ದರು. ಆದರೆ, ಆ ಫೀಲಿಂಗ್ ಬರ್ತಾ ಇರಲಿಲ್ಲ. ಕೊನೆಗೆ ಶ್ರೀನಾಥ್ ಸರ್ ಅವರು ಹೇಳಿಕೊಟ್ಟ ಪಾಠ ನಮ್ಮ ನಡವಳಿಕೆ, ಅಪ್ಪ, ಅಕ್ಕ, ತಂಗಿ, ಊರು, ಮನೆ ಜೊತೆ ಇರಬೇಕಾದ ಪಾಠ ಕಲಿಸಿತು.

    Ashwithi

    ಎಲ್ಲಕ್ಕಿಂತ ಮುಖ್ಯವಾಗಿ ಅಂಥ ದೊಡ್ಡ ನಟರಿಂದ ನಾನು ಕಲಿತ್ತಿದ್ದು ತಾಳ್ಮೆ. ಎಂಥಾ ಪರಿಸ್ಥಿತಿ ಇದ್ದರೂ, ಶೂಟಿಂಗ್ ಸಮಯದಲ್ಲಿ ಪ್ರತಿಕೂಲ ಹವಾಮಾನವಿದ್ದರೂ ನಮ್ಮಂಥ ಯುವ ನಟ, ನಟಿಯರಿಗೆ ಅವರು ಚಿತ್ರದಲ್ಲಿ ಮಾತ್ರವಲ್ಲ, ಶೂಟಿಂಗ್ ಹೊರಗೂ ಶ್ರೀನಾಥ್ ದಂಪತಿ ಅಪ್ಪ-ಅಮ್ಮನ ಇಲ್ಲದ ಕೊರಗನ್ನು ನೀಗಿಸಿದರು.

    ಅದ್ವಿತಿ: ಮೊದಲಿಗೆ ಟ್ವಿನ್ಸ್ ಬೇಡ ಅಂದ್ರು, ಕನ್ನಡ ಸರಿ ಇಲ್ಲ ಅಂದ್ರು, ನಮಗೂ ಇದು ಚಾಲೆಂಜಿಂಗ್ ಆಗಿತ್ತು. ಮಾಡೆಲಿಂಗ್, ಒಂದು ಕಮರ್ಷಿಯಲ್ ಸಿನ್ಮಾ ನಟನೆ ನಂತರ ಈ ಚಿತ್ರಕ್ಕೆ ಆಯ್ಕೆಯಾಗಿದ್ದು ನಮ್ಮ ಪುಣ್ಯ.

    ನನಗೂ ಅಶ್ವತಿಗೂ ಬೇರೆ ಬೇರೆ ಲುಕ್ ಇತ್ತು. ಹಾಗಾಗಿ ಅವಳಿ ಪಾತ್ರಧಾರಿಗಳು ಅನ್ನಿಸಲಿಲ್ಲ. ಆದರೆ, ಅಕ್ಕ ತಂಗಿಯಂತೆ ನಟಿಸುವುದು ಮೊದಲಿಗೆ ಸಹಜವಾಗಿ ಬರುತ್ತಿರಲಿಲ್ಲ. ಇಬ್ಬರು ಜಗಳ ಆಡುವ ಸೀನ್ ಮಾತ್ರ ಚೆನ್ನಾಗಿ ಬರುತ್ತಿತ್ತು.

    Ashwithi Shetty and PH Vishwanath

    ವಿಶ್ವನಾಥ್ ಸರ್, ಅದ್ಭುತ ನಿರ್ದೇಶಕರು, ಅವರು ಯಾವಾಗಲೂ ಹೇಳುತ್ತಾ ಇರುತ್ತಿದ್ದರು. ನಾನು ತುಂಬಾ ಶಾರ್ಟ್ ಟೆಂಪರ್ ಆಗಿದ್ದೆ ಅಂತಾ, ನಮಗೆ ಆ ರೀತಿ ಅನ್ನಿಸಲೇ ಇಲ್ಲ. ಶ್ರೀನಾಥ್ ಸರ್ ಮಗಳಾಗಿ ನಟಿಸಿದ್ದು ನಮ್ಮ ಪುಣ್ಯ.

    ಪ್ರಗತಿ, ಅದ್ವಿತಿ, ಅಶ್ವತಿ ಸುಳಿಯಲ್ಲಿ ಕಂಡ ಪ್ರತಿಭೆಗಳು

    ಇನ್ನು ಮುಸ್ಲಿಮ್ ಹುಡುಗಿ ಪಾತ್ರಕ್ಕೆ ತಯಾರಿ ನಡೆಸಲು ಮುಸ್ಲಿಮ್ ಕುಟುಂಬದ ಜತೆ ಬೆರೆತು ಅವರಿಂದ ಹಾವ ಭಾವ, ದಿನ ನಿತ್ಯದ ಜೀವನ ಕ್ರಮದ ಪಾಠ ಕಲಿತೆ. ನನಗೆ ಮುಸ್ಲಿಂ ಕುಟುಂಬದ ಬಗ್ಗೆ ನೋಡಿ, ಕೇಳಿ ಗೊತ್ತಿತ್ತು ಅಷ್ಟೇ. ಕನಕಪುರದ ಬಳಿಯ ಆ ಕುಟುಂಬದವರು ಹೇಳಿಕೊಟ್ಟ ಪಾಠ ನನ್ನ ಶೂಟಿಂಗ್ ಸಮಯದಲ್ಲಿ ನೆರವಾಯಿತು. ಪಾತ್ರಕ್ಕೆ ಬೇಕಾಗಿದ್ದ ಮುಗ್ಧತೆ ಸಿಕ್ಕಿತು.

    English summary
    Filmibeat Kannada Chit Chat with Suli Film Artist Pragathi AS Adhvithi Shetty and Ashwithi Shetty.Suli Kannada Film directed by PH Vishwanth has Pranaya Raja Srinath in the lead role.
    Thursday, May 19, 2016, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X