twitter
    For Quick Alerts
    ALLOW NOTIFICATIONS  
    For Daily Alerts

    ಸಂಪ್ರದಾಯವನ್ನ ಧಿಕ್ಕರಿಸಿ ಬಂದ ಕಿಲಾಡಿ 'ಸಂಜು ಬಸಯ್ಯ'ನ ಬದುಕೇ ರೋಚಕ!

    By Bharath Kumar
    |

    'ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬ ಗಾದೆ ಮಾತಿಗೆ ಹೋಲುವಂತಹ ಹುಡುಗ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ 'ಸಂಜು ಬಸಯ್ಯ'. ವಯಸ್ಸು ಕೇವಲ 16. ಆದ್ರೆ, ವಯಸ್ಸಿಗೆ ಮೀರಿದಂತಹ ಪ್ರತಿಭೆಗೆ ವಾರಸ್ದಾರ. ತನ್ನ ಅಭಿನಯ ಕಲೆಯಿಂದ ಇಡೀ ಕರ್ನಾಟಕದ ಮನೆಮಾತನಾಗಿರುವ ಪ್ರೀತಿಯ 'ಕುಳ್ ಮಿಂಡ್ರಿ'. ವಿಶೇಷ ಅಂದ್ರೆ, 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನಲ್ಲಿರುವ ಅತ್ಯಂತ ಕಿರಿಯ ಕಲಾವಿದ ಈ ಸಂಜು ಬಸಯ್ಯ.

    ಸಂಜು ಬಸಯ್ಯ 'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬಂದ್ರೆನೇ ಖುಷಿ. ಇನ್ನೂ ಬಸಯ್ಯನ ಮ್ಯಾನರಿಸಂ, ಡೈಲಾಗ್ ಹೊಡೆದ್ರೆ ಅದು ವೀಕ್ಷಕರಿಗೆ ಕಿಕ್ಕೋ ಕಿಕ್ಕೂ....

    ಅಂದ್ಹಾಗೆ, ಪ್ರತಿವಾರವೂ ನಿಮ್ಮನ್ನೆಲ್ಲರನ್ನ ನಕ್ಕು ನಗಿಸುವ ಬಸಯ್ಯನನ್ನ ಮಾತ್ರ ನೋಡಿದ್ದೀರಾ. ಆದ್ರೆ, ಈ ಸಂಜು ಬಸಯ್ಯ ನಡೆದು ಬಂದ ಹಾದಿ ಒಂದು ರೋಚಕ ಕಥೆ. ಕಷ್ಟ-ಸಂಕಷ್ಟಗಳನ್ನ ಎದುರಿಸಿ, ಶಾಸ್ತ್ರ-ಸಂಪ್ರದಾಯಗಳನ್ನ ಧಿಕ್ಕರಿಸಿ, ತನ್ನ ಸಾಧನೆಗೆ ಅಡ್ಡಿಯಾದವರಿಗೆಲ್ಲ ಸವಾಲೆಸೆದು ಬಂದು, ಇಂದು ಕರ್ನಾಟಕ ಜನರ ಮನಸ್ಸು ಗೆದ್ದಿದ್ದಾರೆ.

    'ಕಾಮಿಡಿ ಕಿಲಾಡಿಗಳು' ಖ್ಯಾತಿಯ 'ಸಂಜು ಬಸಯ್ಯ'ನ ಕುರಿತು, ನಿಮ್ಮ ಫಿಲ್ಮಿ ಬೀಟ್ ನಡೆಸಿರುವ ಸಂದರ್ಶನ ಮುಂದೆ ಓದಿ......

    ಬೆಳಗಾವಿಯ ಮುರುಗೋಡು ಪ್ರತಿಭೆ!

    ಬೆಳಗಾವಿಯ ಮುರುಗೋಡು ಪ್ರತಿಭೆ!

    ಸಂಜು ಬಸಯ್ಯ ಮೂಲತಃ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲ್ಲೋಕಿನ ಮುರುಗೋಡು ಗ್ರಾಮದ ಪ್ರತಿಭೆ. ಹುಟ್ಟಿ ಬೆಳೆದಿದ್ದೆಲ್ಲ ಅಜ್ಜಿಯ ಊರಿನಲ್ಲಿ. ಬಾಲ್ಯದ ಬಹುಪಾಲು ಜೀವನ ಅಜ್ಜಿಯ ಜೊತೆಯಲ್ಲೇ. 3ನೇ ಕ್ಲಾಸ್ ಓದುವಾಗ ಅಜ್ಜಿ ಮನೆಯಿಂದ ತಂದೆ ಮನೆಗೆ ಬಂದರು.

    ಚಿಕ್ಕವಯಸ್ಸಿನಿಂದಲೂ ಅಭಿನಯದ ಗೀಳು!

    ಚಿಕ್ಕವಯಸ್ಸಿನಿಂದಲೂ ಅಭಿನಯದ ಗೀಳು!

    ಸಂಜು ಅವರ ತಂದೆ ಬಸಯ್ಯ. ಮೂಲತಃ ಇವರು ಡ್ರಾಮಾ ಕಲಾವಿದರು. ಮದುವೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಬಾರಿಸುವುದು ಇವರ ಕಾಯಕ. ಹಾಗಾಗಿ, ತಂದೆಯಂತೆ ಮಗನಿಗೂ ಅಭಿನಯ, ಹಾಡುವ ಆಸಕ್ತಿ ಬೆಳೆಯಿತು. ತಂದೆಯ ಜೊತೆಯಲ್ಲಿ ಹೋಗಿ, ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಅಥವಾ ಹಾಡನ್ನ ಹೇಳುವ ಮೂಲಕ ಮತ್ತಷ್ಟು ಆಸಕ್ತಿ ಬೆಳೆಯಿತು.

    'ಮೆಣಸಿನಕಾಯಿ ಬಸಿಯಾ' ಅಂತಾನೇ ಫೇಮಸ್!

    'ಮೆಣಸಿನಕಾಯಿ ಬಸಿಯಾ' ಅಂತಾನೇ ಫೇಮಸ್!

    ಸಂಜು ಸುಮಾರು 8 ರಿಂದ 10 ವರ್ಷದಿಂದ ಅಭಿನಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್ಕೆಸ್ಟ್ರಗಳಲ್ಲಿ, ಡ್ರಾಮಾಗಳಲ್ಲಿ ನಟಿಸುತ್ತಿದ್ದರು. ಗೋಕಾಕ್ ಅವರ ಜೊತೆಯಲ್ಲಿ ಜೋಗಳಬಂಧಿ ಕಾಮಿಡಿ ಮಾಡ್ತಿದ್ದರಂತೆ. ಅಲ್ಲಿ 'ಮೆಣಸಿನಕಾಯಿ ಬಸಿಯಾ' ಅಂತ ಪಾತ್ರ ಮಾಡ್ತಿದ್ದಾಗ, ಆ ಹೆಸರು ಬಂದಿದ್ದಂತೆ. ಆದ್ರೆ, ಕಾಮಿಡಿ ಕಿಲಾಡಿಗಳಿಗೆ ಬಂದ್ಮೇಲೆ ಮೆಣಸಿನಕಾಯಿ ತೆಗೆದು ಸಂಜು ಬಸಯ್ಯ ಆದ್ರಂತೆ.

    'ಕಾಮಿಡಿ ಕಿಲಾಡಿಗಳು' ಆಡಿಷನ್ ಹೇಗೆ?

    'ಕಾಮಿಡಿ ಕಿಲಾಡಿಗಳು' ಆಡಿಷನ್ ಹೇಗೆ?

    ದಾವಣೆಗೆರೆಯಲ್ಲಿ ಕಾಮಿಡಿ ಕಿಲಾಡಿಗಳು ಆಡಿಷನ್ ಇದೆ ಎಂಬುದು ವಾಟ್ಸಪ್ ಮೂಲಕ ಗೊತ್ತಾಯಿತು. ಆಗ ಆರ್ಕೆಸ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ಕೈ ನೋಡೋಣ ಅಂತ ಹೇಳಿ, ಬೆಳಿಗ್ಗೆ ನಿದ್ದೇ ಕಣ್ಣಲ್ಲಿ ಬಂದು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಆಡಿಷನ್ ಕೊಟ್ಟಿದ್ದರಂತೆ. ಅದೃಷ್ಟವಶಾತ್ ಸಂಜು ಬಸಯ್ಯ ಆಯ್ಕೆಯಾಗಿದ್ದರಂತೆ.

    ಶಿಕ್ಷಣದ ಮೇಲೆ ಆಸಕ್ತಿ ಕಮ್ಮಿ!

    ಶಿಕ್ಷಣದ ಮೇಲೆ ಆಸಕ್ತಿ ಕಮ್ಮಿ!

    ಅಂದ್ಹಾಗೆ, ಸಂಜು ಬಸಯ್ಯನಿಗೆ ಶಿಕ್ಷಣದ ಮೇಲೆ ಮೊದಲಿನಿಂದಲೂ ಆಸಕ್ತಿ ಕಮ್ಮಿ. ಕಲಾವಿದನಾಗಬೇಕೆಂಬ ಛಲ ಬಸಯ್ಯನನ್ನ ಗಟ್ಟಿಯಾಗಿ ಹಿಡಿದಿಟ್ಟಿದೆ. ಸದ್ಯ, 9ನೇ ತರಗತಿ ಓದುತ್ತಿದ್ದಾರೆ. 10ನೇ ತರಗತಿ ಆದ್ಮೇಲೆ ಓದು ಮುಂದುವರಿಸಲು ಇಆಸಕ್ತಿಯಿಲ್ಲವಾದರೂ, ನೋಡೋಣ ಎನ್ನುತ್ತಾರೆ.

    ಅಭಿನಯ ಬಿಟ್ಟರೇ ಬೇರೆ ಯಾವುದರಲ್ಲಿ ಆಸಕ್ತಿ!

    ಅಭಿನಯ ಬಿಟ್ಟರೇ ಬೇರೆ ಯಾವುದರಲ್ಲಿ ಆಸಕ್ತಿ!

    ಸಂಜು ಬಸಯ್ಯನಿಗೆ ಆಕ್ಟಿಂಗ್ ಮಾಡಬೇಕೆನ್ನುವುದು ಮೊದಲ ಆದ್ಯತೆ. ಆದ್ರ ಜೊತೆಗೆ, ಹಾಡು ಹೇಳುವುದು, ಮಿಮಿಕ್ರಿ ಮಾಡುವುದು, ಕೀ-ಬೋರ್ಡ್ ನುಡಿಸುವುದು, ಸೈಡ್ರಮ್ ಬಾರಿಸುವುದು, ದವ್ಲತ್ ಬಾರಿಸುವ ಕಲೆಯನ್ನ ಹೊಂದಿದ್ದಾರೆ.

    'ಕಾಮಿಡಿ ಕಿಲಾಡಿಗಳು' ಹೇಗಿತ್ತು!

    'ಕಾಮಿಡಿ ಕಿಲಾಡಿಗಳು' ಹೇಗಿತ್ತು!

    ''ಆರಂಭದಲ್ಲಿ ಭಯವಿತ್ತು. ಮೊದಲು ನೂರಾರು ಜನರ ಮಧ್ಯೆ ಅಭಿನಯಿಸುತ್ತಿದ್ದೆ, ಆದ್ರೆ, ಇಲ್ಲಿ ಇಡೀ ಕರ್ನಾಟಕ ಜನರನ್ನ ನಗಿಸಬೇಕು. ಈ ಭಯದಿಂದ ಡೈಲಾಗ್ ಗಳು ಕೂಡ ಮರೆಯುತ್ತಿದ್ದೆ, ಹಾಗಾಗಿ, ಡೇಂಜರ್ ಜೋನ್ ಗೆ ಹೋದೆ. ಸತತವಾಗಿ ಡೇಂಜರ್ ಜೋನ್ ಗೆ ಹೋದಾಗ, ನನಗೆ ನಾನೇ ಚಾಲೆಂಜ್ ಹಾಕ್ಕೊಂಡೆ, ಕೇರ್ ಲೆಸ್ ಮಾಡಬಾರದು ಎಂಬ ನಿರ್ಧಾರಕ್ಕೆ ಬಂದೆ. ಆಮೇಲೆ ನಾನು ಧೈರ್ಯವಾಗಿ ಅಭಿನಯಿಸುವುದಕ್ಕೆ ಶುರು ಮಾಡಿದೆ. ಅದ್ರ ಪ್ರತಿಫಲ ಫಿನಾಲೆ ಬಂದೆ'' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

    ಕಾಮಿಡಿ ಮಾಡುವುದು ಕಷ್ಟ ಎನ್ನುತ್ತಾರೆ ನಿಜಾನಾ?

    ಕಾಮಿಡಿ ಮಾಡುವುದು ಕಷ್ಟ ಎನ್ನುತ್ತಾರೆ ನಿಜಾನಾ?

    ''ಕಾಮಿಡಿ ಮಾಡುವುದು ಬಹಳ ಕಷ್ಟ, ಜನರನ್ನ ನಗಿಸುವುದು ಕೂಡ ಕಷ್ಟದ ಕೆಲಸ. ಡ್ರಾಮಾ ಆಗಿದ್ದರೇ ಸಾವಿರ ಜನರ ಮುಂದೆ ಮಾಡಬಹುದು. ಇಲ್ಲಿ ಕೋಟ್ಯಾಂತರ ಜನರನ್ನ ನಗಿಸುವುದು ತುಂಬಾ ಚಾಲೆಂಜ್ ಆಗಿರುತ್ತೆ.''-ಸಂಜು ಬಸಯ್ಯ

    ಕಾಮಿಡಿ ವೇದಿಕೆಯಲ್ಲಿ ಮತ್ತೆ ಮತ್ತೆ ಕಾಡುವ ಪಾತ್ರಗಳು ಯಾವುದು?

    ಕಾಮಿಡಿ ವೇದಿಕೆಯಲ್ಲಿ ಮತ್ತೆ ಮತ್ತೆ ಕಾಡುವ ಪಾತ್ರಗಳು ಯಾವುದು?

    ಕರ್ನಾಟಕದ ಕುಳ್ಳ ದ್ವಾರಕೀಶ್ ಅವರ ಎದುರಿಗೆ ವಿಷ್ಣುವರ್ಧನ್ ಅವರ ಪಾತ್ರ ಮಾಡಿದ್ದು ಮರೆಯಲಾಗದ ಅನುಭವ. ಅದರ ಜೊತೆಗೆ ಚಿಕ್ಕಾಕ್ಕೋ ಚಿಕ್ಕಮ್ಮ ಚೈನೀಸ್ ಸ್ವಾಮಿ, ಮತ್ತು ನಾಟಕದ ಕುರಿತು ಮಾಡಿದ್ದ ಸ್ಕ್ರಿಪ್ಟ್ ತುಂಬಾ ಇಷ್ಟವಂತೆ.

    ಸಂಪ್ರದಾಯವನ್ನ ಮೀರಿ ಬೆಳೆದ ಪ್ರತಿಭೆ!

    ಸಂಪ್ರದಾಯವನ್ನ ಮೀರಿ ಬೆಳೆದ ಪ್ರತಿಭೆ!

    ಅಂದ್ಹಾಗೆ, ಸಂಜು ಬಸಯ್ಯ ಅವರದ್ದು ಬಡ ಕುಟುಂಬ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ತಂದೆ-ತಾಯಿ ಸದಾ ಜಗಳವಾಡುತ್ತಿದ್ದರು. ಅದನ್ನ ನೋಡಿ ಅದೇಷ್ಟೋ ಸಲ ಸಂಜು ಅತ್ತಿದ್ದಾರಂತೆ. ಸಂಜು ಈ ಕ್ಷೇತ್ರಕ್ಕೆ ಬರುವುದು ಮನೆಯವರಿಗೂ ಇಷ್ಟವಿಲ್ಲ. ಯಾಕಂದ್ರೆ, ಸಂಜು ಬಸಯ್ಯ ಅವರು ಜಂಗಮರು. ಶಾಸ್ತ್ರ, ಸಂಪ್ರದಾಯಗಳು, ಕಟ್ಟುಪಾಡುಗಳ ನಂಬಿಕೆಯಲ್ಲಿ ಬದುಕುತ್ತಿದ್ದವರು. ಆದ್ರೆ, ಇವೆಲ್ಲವನ್ನು ಮೀರಿ ನಾನು ಸಾಧಿಸಬೇಕು ಎಂದು ಈ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ ಸಂಜು ಬಸಯ್ಯ.

    ವಿರೋಧಿಸಿದ್ದವರಿಗೆ ಸವಾಲೆಸೆದು ಬಂದಿದ್ದ ಸಂಜು!

    ವಿರೋಧಿಸಿದ್ದವರಿಗೆ ಸವಾಲೆಸೆದು ಬಂದಿದ್ದ ಸಂಜು!

    ಸಂಜು ಬಸಯ್ಯ ಅವರಿಗೆ ಅವರ ತಂದೆ, ತಾಯಿ, ಅಣ್ಣ, ಅಜ್ಜಿ ಬಿಟ್ರೆ, ಬೇರೆ ಯಾರ ಬೆಂಬಲವೂ ಇರಲಿಲ್ಲ. ಅಂದು ಸಂಜು ತೆಗೆದುಕೊಂಡಿದ್ದ ನಿರ್ಧಾರವನ್ನ ಎಲ್ಲರೂ ವಿರೋಧಿಸಿದ್ದರು. ಅವರ ಬಳಿ ಸವಾಲು ಹಾಕಿ ಸಂಜು ಹೊರಬಂದಿದ್ದರಂತೆ. ಇದೇ ಕ್ಷೇತ್ರದಲ್ಲಿ ಸಾಧಿಸಿ ತೋರಿಸುತ್ತೇನೆ ಎಂದು ಕಣ್ಣೀರು ಹಾಕಿದ್ದರಂತೆ. ಇಂದು ಅವರ ಸಾಧನೆಯನ್ನ ಕಂಡು, ಅದೇ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರಂತೆ.

    ಕಾಮಿಡಿ ಕಿಲಾಡಿಗಳಲ್ಲಿ ನಿಮ್ಮ ಪ್ರಕಾರ ಯಾರು ಬೆಸ್ಟ್ ಫರ್ಫಾಮರ್ಸ್?

    ಕಾಮಿಡಿ ಕಿಲಾಡಿಗಳಲ್ಲಿ ನಿಮ್ಮ ಪ್ರಕಾರ ಯಾರು ಬೆಸ್ಟ್ ಫರ್ಫಾಮರ್ಸ್?

    ಕಾಮಿಡಿ ಕಿಲಾಡಿಗಳಲ್ಲಿ ಎಲ್ಲರೂ ಅವರದ್ದೇ ಆದ ಪ್ರತಿಭೆಯಿಂದ ಬೆಸ್ಟ್ ಎನಿಸಿಕೊಂಡಿದ್ದಾರೆ. ಆದ್ರೆ, ಶಿವರಾಜ್ ಕೆ.ಆರ್.ಪೇಟೆ ಮತ್ತು ನಯನ ಅವರ ದಿ ಬೆಸ್ಟ್ ಅಂತ ಹೇಳಬಹುದು. ಮತ್ತು ಇಷ್ಟು ಜನ ದೊಡ್ಡವರ ಜೊತೆ ನಾನು ಕಾಂಪಿಟ್ ಮಾಡಿದ್ದು ನನಗೆ ಹೆಮ್ಮೆ ಇದೆ ಎನ್ನುತ್ತಾರೆ ಸಂಜು ಬಸಯ್ಯ

    ಮುಂದಿನ ಯೋಜನೆ ಏನು?

    ಮುಂದಿನ ಯೋಜನೆ ಏನು?

    ಕಾಮಿಡಿ ಕಲಾಡಿಗಳು ಕಾರ್ಯಕ್ರಮದಿಂದ ಸಾಕಷ್ಟು ಕಲಿತಿರುವ ಸಂಜು ಬಸಯ್ಯ, ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಅಭಿನಯಿಸುವ ಆಸೆ ಹೊಂದಿದ್ದಾರೆ. ಸದಾ ತೆರೆಮೇಲೆ ಕಾಣಿಸಿಕೊಳ್ಳಬೇಕು ಎಂಬ ಗುರಿ ಅವರಿಗಿದೆ.

    ಆಲ್ ದಿ ಬೆಸ್ಟ್ ಸಂಜು ಬಸಯ್ಯ!

    ಆಲ್ ದಿ ಬೆಸ್ಟ್ ಸಂಜು ಬಸಯ್ಯ!

    ತನ್ನ ಗುರಿಯನ್ನ ಸಾಧಿಸಬೇಕೆಂಬ ಛಲದಿಂದ, ಎಲ್ಲವನ್ನ, ಎಲ್ಲರನ್ನ ಧಿಕ್ಕರಿಸಿ ನಿಂತ ಸಂಜು ಇಂದು ಕರ್ನಾಟಕ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಮುಂದಿನ ಜೀವನ ಕೂಡ ಸುಖಕರವಾಗಿರಲಿ ಎಂದು ನಾವು ಕೂಡ ಹಾರೈಸುತ್ತೇವೆ. ಆಲ್ ದಿ ಬೆಸ್ಟ್ ಸಂಜು ಬಸಯ್ಯ.....

    ಸಂದರ್ಶನ-ಭರತ್ ಕುಮಾರ್

    English summary
    Zee Kannada 'Comedy Kiladigalu' Grand Finale Contestant Sanju Basayya Interview. Watch here.
    Sunday, March 12, 2017, 12:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X