twitter
    For Quick Alerts
    ALLOW NOTIFICATIONS  
    For Daily Alerts

    ರಿಕ್ಕಿ ಮುಂದಿನ ಪ್ಲಾನ್ ಏನು? ಡೈರೆಕ್ಷನಾ ಅಥವಾ ನಟನೆನಾ!

    By Suneetha
    |

    * ನಿಮ್ಮ ಪ್ರಥಮ ನಿರ್ದೆಶನದ 'ಉಳಿದವರು ಕಂಡಂತೆ' ಚಿತ್ರ ನಾಮೀನೇಟ್ ಆದಾಗ ಪ್ರಶಸ್ತಿ ಗೆಲ್ಲುತ್ತೆ ಅಂತಾ ನಿಮಗೆ ಭರವಸೆ ಇತ್ತಾ?
    - ಇಲ್ಲಾ!! ಭರವಸೆನೇ ಇರಲಿಲ್ಲಾ. ಯಾಕಂದ್ರೆ, ನಾರ್ಮಲ್ ಆಗಿ ಬ್ಲಾಕ್ ಬಾಸ್ಟರ್, ಸಕ್ಸಸ್ ಆಗಿರುವ ಸಿನೆಮಾಗಳಿಗೆ ಅವಾರ್ಡ್ ಕೊಡ್ತಾರೆ ಅಲ್ವಾ. ಆ ರೀತಿ ನೋಡಿದರೆ ನನಗಿಂತ ಜಾಸ್ತಿ ತುಂಬಾ ಸಕ್ಸಸ್ ಆದ ಸಿನೆಮಾಗಳು ಇತ್ತು. ಯಾವುದಾದ್ರೂ ಬೇರೆ ಸಿನೆಮಾಕ್ಕೆ ಹೋಗಬಹುದು ಅಂತ ಸುಮ್ಮನಾಗಿದ್ದೆ.

    ಆದ್ರೆ ಮ್ಯೂಸಿಕ್ ಗೆ ಬರುತ್ತೆ ಅಂತಾ ನಂಬಿಕೆ ಇತ್ತು. ಯಾಕಂದ್ರೆ 'ಘಾಟಿಯಾ ಇಳಿದು' ಸಾಂಗ್ ಈ ವರ್ಷದ ಬಿಗ್ಗೆಸ್ಟ್ ಹಿಟ್ ಅಲ್ವಾ ಹಾಗೆ. ಸೋ ಫೋನ್ ಬಂದಾಗ ತುಂಬಾನೇ ಖುಷಿ ಆಗಿತ್ತು. [ಉಳಿದವರು ಕಂಡಂತೆ ನಂತರ ಶೀತಲ್ ಶೆಟ್ಟಿ ಚಿತ್ರ #96]

    * ಇನ್ನು ಮುಂದಕ್ಕೆ ಇಂಡಸ್ಟ್ರಿಯಲ್ಲಿ ಡೈರೆಕ್ಟರ್ ಆಗಿ ಮುಂದುವರಿಯುತ್ತೀರಾ ಅಥವಾ ಹೀರೋ ಆಗಿನಾ?
    - ಅಂದ್ರೆ ನನ್ನ ಪ್ಲಾನ್ ಇದ್ದಿದ್ದು 2-3 ವರ್ಷ ಬಿಟ್ಟು, ಡೈರೆಕ್ಟ್ ಮಾಡುವಾ ಅಂತ, ಯಾಕಂದ್ರೆ ಕಥೆ ಬರಿಯೋಕೆ, ಅಮೇಲೆ ರಿಹರ್ಸಲ್ ಎಲ್ಲಾ ಮಾಡೋಕೆ ಎರಡು, ಮೂರು ವರ್ಷ ಬೇಕೇ ಬೇಕು.
    ಆದ್ರಿಂದ ಇನ್ನೊಂದು ಎರಡು ವರ್ಷ ಬಿಟ್ಟು, ಡೈರೆಕ್ಟ್ ಮಾಡೋಣ ಅಂತ.

    Filmfare winner Rakshit Shetty chit chat with Filmibeat Kannada Part 2

    ಕೆಲವೊಂದು ಸಲ ಹೇಳಕ್ಕಾಗಲ್ಲ. ನನಗೆ ತಲೆಯಲ್ಲಿ ಯಾವುದಾದ್ರೂ ವಿಷಯ ಅಥವಾ ಐಡಿಯಾ ಬಂದ್ರೆ, ಅದು ಯಾವಾಗ್ಲೂ ಕೊರೀತಾನೇ ಇರುತ್ತೆ. ಸಿನೆಮಾ ಯಾವುದಾದ್ರೂ ಮಾಡಲೇಬೇಕು ಅನ್ನಿಸುತ್ತೆ, ನಾನು ಆಕ್ಟರ್ ಆಗಿರೋದ್ರಿಂದ, ನನ್ನನ್ನೆ ನಾನು ತಲೆಯಲ್ಲಿಟ್ಟುಕೊಂಡು ನಾರ್ಮಲ್ ಆಗಿ ಬರೀತೀನಿ. ಆದ್ರಿಂದ ನಾನು ನನ್ನ ಕಥೆಯಲ್ಲೊಂದು ರೋಲ್ ಮಾಡಬಹುದಲ್ವಾ ಅಂತ. ಇನ್ನೂ ಕಾನ್ಸೆಪ್ಟ್ ಡೆವಲಪ್ ಆದ ಮೇಲೆ ಡೈರೆಕ್ಷನ್ ಕಡೆ, ಅಲ್ಲಿಯವರೆಗೂ ಹೀಗೆ ಆಕ್ಟರ್ ಆಗಿ ಇರೋದು.

    * 'ಉಳಿದವರು ಕಂಡಂತೆ' ಸಿನೆಮಾ ನೋಡಿದ ಕೆಲವು ಪ್ರೇಕ್ಷಕರು ಆ ಸಿನೆಮಾ ಅರ್ಥ ಆಗುವುದಿಲ್ಲಾ ಅಂದ್ರೂ, ಅದಿಕ್ಕೆ ನೀವೇನು ಹೇಳ್ತೀರಾ?
    - ಹ್ಮುಂ!! ಕಾಮನ್ ಸೆನ್ಸ್ ಇದ್ದವರಿಗೆ ಸಾಮಾನ್ಯವಾಗಿ ಅರ್ಥ ಆಗುತ್ತೆ. ಆದ್ರೆ ಎಲ್ಲರಿಗೂ ಅರ್ಥ ಆಗಬೇಕು ಅಂತ ನಾನು ಹೇಳ್ತಾ ಇಲ್ಲ. ಕಾಮನ್ ಆಗಿ ಆ ಸಿನೆಮಾ ಅರ್ಥ ಆಗಬೇಕು ಅಂದ್ರೆ ಎರಡು, ಮೂರು ಸಲ ನೋಡಲೇಬೇಕು.[ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]

    ಯಾಕಂದ್ರೆ 10 ವರ್ಷದ ಹಿಂದೆ ಮಾಡಿದ ಸಿನೆಮಾ ಅರ್ಥ ಅಗಿಲ್ಲಾಂದ್ರೆ, ಅರ್ಥ ಮಾಡಿಕೊಳ್ಳಲು ಜನ ಪದೇ ಪದೇ ತಿರುಗಾ-ತಿರುಗಾ ತಲೆ ಕೆಳಗಾಗಿ ನೋಡುತ್ತಿದ್ದರು. ಆವಾಗಲೇ ಜನ ಅರ್ಥ ಮಾಡಿಕೊಳ್ತಾ ಇದ್ರು ಅಂದ್ರೆ, ಈಗಿನ ಪ್ರೇಕ್ಷಕರು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲಾ ಅಂತಾ ಸ್ವಲ್ಪ ಟ್ವಿಸ್ಟ್ ಕೊಟ್ಟು ಮೂವಿ ಮಾಡಿದೆ.

    ಯಾಕಂದ್ರೆ ತುಂಬಾ ಈಸೀ ವೇನಲ್ಲಿ ಸಿನೆಮಾ ಮಾಡಿದ್ರೆ ಆ ಸಿನೆಮಾಕ್ಕೆ ಜಾಸ್ತಿ ವ್ಯಾಲ್ಯೂ ಇರಲ್ಲಾ. ಸೋ ನಾನು ಅದರ ಬಗ್ಗೆ ಯೋಚನೆ ಮಾಡದೇ ಸಿನೆಮಾ ಮಾಡಿದೆ.

    Filmfare winner Rakshit Shetty chit chat with Filmibeat Kannada Part 2

    * ಇವಾಗ ಸದ್ಯಕ್ಕೆ ಯಾವುದಾದ್ರೂ ಸಿನೆಮಾ ಡೈರೆಕ್ಟ್ ಮಾಡುವ ಪ್ಲಾನ್ ಏನಾದ್ರೂ ಇದೆಯಾ?
    - ಇವಾಗ ಸದ್ಯಕ್ಕೆ ಒಂದು ಸ್ಕ್ರಿಪ್ಟ್ ರೆಡಿ ಮಾಡ್ತಾ ಇದ್ದೀನಿ 'ಸಬ್ಜೆಕ್ಟ್ ಮಾಲ್ಗುಡಿ' ಅಂತ. ನೋಡಬೇಕು ಮುಂದೇನಾಗುತ್ತೆ, ಮೋಸ್ಟಲೀ ಮುಂದಿನ ವರ್ಷ ಶುರು ಮಾಡಬೇಕು ಅಂದುಕೊಂಡಿದ್ದೀನೆ. ಅದೇ ಮುಂದಿನ ಡೈರೆಕ್ಚನ್ ಅಂದುಕೊಳ್ತಿನಿ.

    * ತುಂಬಾ ಕಡಿಮೆ ಸಮಯದಲ್ಲಿ ಸಿನೆಮಾ ಮಾಡಿ ಪ್ರಶಸ್ತಿ ಗೆದ್ದಿದ್ದೀರಿ. ಇದಕ್ಕೆ ನಿಮ್ಮ ಫ್ಯಾಮಿಲಿ ಪ್ರತಿಕ್ರಿಯೆ ಹೇಗಿತ್ತು?
    - ಫ್ಯಾಮಿಲಿಗೆ ಮೊದ-ಮೊದಲು ಸ್ವಲ್ಪ ನನ್ನ ಬಗ್ಗೆ ಭಯ ಇತ್ತು. ಆದ್ರೆ ನನಗೆ ಯಾವುದಕ್ಕೂ ಅವರು ಅಡ್ಡಿ ಮಾಡಲಿಲ್ಲ ಅದು ಮಾಡಬೇಡ ಇದು ಮಾಡಬೇಡ ಅಂತ. ತುಂಬಾ ಸಪೋರ್ಟ್ ಮಾಡಿದ್ದಾರೆ.

    * ಕೊನೆದಾಗಿ ಸ್ಯಾಂಡಲ್ ವುಡ್ ಬಗ್ಗೆ ನೀವು ಕಂಡಂತೆ.
    - ನನಗಂತೂ ತುಂಬಾ ಸಪೋರ್ಟ್ ಮಾಡಿದೆ. ಒಳ್ಳೆ ಸಿನೆಮಾಗಳಲ್ಲಿ ಆಕ್ಟ್ ಮಾಡೋಕೆ ಅವಕಾಶ ಮಾಡಿಕೊಟ್ಟಿದೆ. ನನ್ನ ಪ್ರಕಾರ ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಬರೀ ಒಂದೇ ಥರದಾ ಸಿನೆಮಾಗಳಿಗೆ ಜಾಸ್ತಿ ಸ್ಟಿಕ್ ಆನ್, ಆಗಿ ಬಿಡ್ತಾರೆ. ಬೇರೆ ಥರದಾ ಯೋಚನೆಗಳನ್ನು ಮಾಡುವುದು ಸ್ವಲ್ಪ ಕಡಿಮೆ. ಅದು ತಪ್ಪೂಂತಾ ನಾನು ಹೇಳ್ತಾ ಇಲ್ಲಾ. ಈಗ 'ಉಳಿದವರು ಕಂಡಂತೆ' ಸಿನೆಮಾ ಬಂದಾಗ ಥಿಯೇಟರ್ ಗೆ ಬರದೇ ಇರುವವರೆಲ್ಲಾ ಬಂದು ಸಿನೆಮಾ ನೋಡಿದ್ರೂ. ಇದೀಗ ವರ್ಷಕ್ಕೆ ಒಂದು ಇಂಥ ಸಿನೆಮಾ ಬಂದಿದೆ. ಇನ್ನೂ ಇದೇ ಥರದಾ ಸಿನೆಮಾಗಳು ಹೆಚ್ಚು-ಹೆಚ್ಚು ಬಂದಾಗ ಅಡಿಯನ್ಸ್ ಕೂಡಾ ಜಾಸ್ತಿ ಆಗುತ್ತಾರೆ, ವಾಪಸ್ ಬರುತ್ತಾರೆ ಅಂತ ಅಂದುಕೊಂಡಿದ್ದೀನೆ.

    English summary
    62 Filmfare Best Director Award winner Rakshit Shetty chit chat with Filmibeat Kannada. He shared upcoming projects and experience of Filmfare winning movement.
    Sunday, July 5, 2015, 17:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X