twitter
    For Quick Alerts
    ALLOW NOTIFICATIONS  
    For Daily Alerts

    'ಹ್ಯಾಪಿ ನ್ಯೂ ಇಯರ್'ಗೆ ಐದು ಕಥೆ ಏಕೆ?: ಸಂದರ್ಶನದಲ್ಲಿ ಬಿಚ್ಚಿಟ್ಟರು ಪನ್ನಗಾಭರಣ

    By Suneel
    |

    ಸ್ಯಾಂಡಲ್ ವುಡ್ ನಲ್ಲಿ ಹೊಸ ಪರ್ವಕಾಲ ಶುರುವಾಗಿದೆ. ದಿನದಿಂದ ದಿನಕ್ಕೆ ವಿಭಿನ್ನ ಆಯಾಮದ ಚಿತ್ರಗಳು, ಪ್ರಯೋಗಾತ್ಮಕ ಚಿತ್ರಗಳು ಮೂಡಿಬರುತ್ತಿವೆ. ಈಗ ಅದೇ ಸಾಲಿನ ಚಿತ್ರಗಳಲ್ಲಿ ಮೇ 5 ರಂದು ಬಿಡುಗಡೆ ಆಗಲಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರವು ಇದೆ.[ಮೇ 5 ಕ್ಕೆ ಸ್ಯಾಂಡಲ್ ವುಡ್ ನಲ್ಲಿ 'ಹ್ಯಾಪಿ ನ್ಯೂ ಇಯರ್']

    ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಪುತ್ರ ಪನ್ನಗಾಭರಣ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರ 'ಹ್ಯಾಪಿ ನ್ಯೂ ಇಯರ್'. ತಾರಾಬಳಗ, ಟ್ರೈಲರ್, ಸಂಗೀತ ಹೀಗೆ ಹಲವು ಅಂಶಗಳಿಂದ ಚಂದನವನದಲ್ಲಿ ಸಿನಿ ಪ್ರಿಯರ ಕುತೂಹಲ ಕೆರಳಿಸಿರುವ 'ಹ್ಯಾಪಿ ನ್ಯೂ ಇಯರ್' ಅಕ್ಷರಶಃ ಸ್ಯಾಂಡಲ್ ವುಡ್ ನಲ್ಲಿ ಹೊಸ ವರ್ಷದ ಆಚರಣೆ ಮಾಡುವ ಭರವಸೆ ಮೂಡಿಸಿದೆ.

    ಚಿತ್ರ ತಾರಾಬಳಗ ಮತ್ತು ಐದು ಕಥೆಗಳ ಹೊರತಾಗಿಯೂ ಹಲವು ವಿಶೇಷತೆಗಳನ್ನು ಹೊಂದಿದೆ. ಆ ವಿಶೇಷತೆಗಳು ಏನು ಎಂಬುದನ್ನು ಚೊಚ್ಚಲ ನಿರ್ದೇಶಕ ಪನ್ನಗಾಭರಣ ರವರೇ ನಿಮ್ಮ ಕನ್ನಡ ಫಿಲ್ಮಿಬೀಟ್ ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅಲ್ಲದೇ ತಾವು ನಿರ್ದೇಶನ ಕ್ಷೇತ್ರಕ್ಕೆ ಬಂದ ಬಗೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ ಓದಿರಿ...

    ಸಂದರ್ಶನ: ಸುನೀಲ್, ಬಿಂಡಹಳ್ಳಿ

    'ಹ್ಯಾಪಿ ನ್ಯೂ ಇಯರ್' ಮೊದಲ ನಿರ್ದೇಶನದ ಚಿತ್ರ. ಇದಕ್ಕೂ ಮೊದಲು ನೀವು ತೊಡಗಿಕೊಂಡಿದ್ದು?

    'ಹ್ಯಾಪಿ ನ್ಯೂ ಇಯರ್' ಮೊದಲ ನಿರ್ದೇಶನದ ಚಿತ್ರ. ಇದಕ್ಕೂ ಮೊದಲು ನೀವು ತೊಡಗಿಕೊಂಡಿದ್ದು?

    - ತಂದೆಯವರ ಜೊತೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಮತ್ತು ಸ್ಕ್ರಿಪ್ಟ್ ರೈಟರ್ ಆಗಿ ವರ್ಕ್ ಮಾಡುತ್ತಿದ್ದೆ. ಅಲ್ಲದೇ ನ್ಯೂಯಾರ್ಕ್ ಫಿಲ್ಮ್ ಆಕಾಡೆಮಿಯಲ್ಲಿ ಮಾಸ್ಟರ್ ಇನ್ ಫಿಲ್ಮ್ ಮೇಕಿಂಗ್ ಕೋರ್ಸ್ ಮಗಿಸಿದೆ. ಬಾಂಬೆಯಲ್ಲಿ 6 ತಿಂಗಳ ಕಾಲ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡಿದ್ದೆ. ಬೆಂಗಳೂರಿನಲ್ಲೂ ಹಲವು ದಿನಗಳಕಾಲ ಜಾಹೀರಾತು ನಿರ್ಮಾಣದಲ್ಲಿ ತೊಡಗಿದ್ದೆ. ಥಿಯೇಟರ್ ನಲ್ಲಿ 20 ವರ್ಷದಿಂದ ವರ್ಕ್ ಮಾಡಿದಿನಿ. ಈಗ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದೇನೆ.

    ಚಿತ್ರ ನಿರ್ದೇಶನಕ್ಕೆ ಸ್ಫೂರ್ತಿ ಯಾರು?

    ಚಿತ್ರ ನಿರ್ದೇಶನಕ್ಕೆ ಸ್ಫೂರ್ತಿ ಯಾರು?

    - ಮನೆಯಲ್ಲಿ ತಂದೆ ನೋಡಿಕೊಂಡೇ ಬೆಳೆದಿದ್ದು. ಅವರೇ ಸ್ಫೂರ್ತಿ. ಯಾಕಂದ್ರೆ ಅವರು ನಿರ್ದೇಶನ ಮಾಡಿರುವ ಪ್ರತಿಯೊಂದು ಸಿನಿಮಾಗಳು ಬೇರೆ ಬೇರೆ ಜಾನರ್ ಚಿತ್ರಗಳು. ಡ್ರಾಮಾ, ರೊಮ್ಯಾಂಟಿಕ್, ಥ್ರಿಲ್ಲರ್ ಹೀಗೆ ಬೇರೆ ಬೇರೆ ಜಾನರ್ ಚಿತ್ರಗಳನ್ನು ಮಾಡಿ ಗೆದ್ದವರು ಅವರು. ಆದ್ದರಿಂದ ಅವರೇ ನನಗೆ ಸ್ಫೂರ್ತಿ.

    ಒಂದೇ ಚಿತ್ರದಲ್ಲಿ ಐದು ಕಥೆಗಳಿವೆ? ಈ ರೀತಿ ಸಿನಿಮಾ ಮಾಡಬೇಕು ಎಂಬ ಅಲೋಚನೆ ಬಂದಿದ್ದು ಹೇಗೆ?

    ಒಂದೇ ಚಿತ್ರದಲ್ಲಿ ಐದು ಕಥೆಗಳಿವೆ? ಈ ರೀತಿ ಸಿನಿಮಾ ಮಾಡಬೇಕು ಎಂಬ ಅಲೋಚನೆ ಬಂದಿದ್ದು ಹೇಗೆ?

    - ನನಗೆ ಆಂಥಾಲಜಿ ಸಿನಿಮಾ(ಹಲವು ಕಥೆಗಳಿರುವ ಒಂದೇ ಸಿನಿಮಾ) ಮಾಡಬೇಕು ಅನ್ನೋದು ತುಂಬಾ ಇಷ್ಟ. ಈ ಹಿಂದೆ ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ರವರು 'ಕಥಾ ಸಂಗಮ' ಚಿತ್ರವನ್ನು ಅದೇ ರೀತಿ ಮಾಡಿದ್ರು. ಇಂಗ್ಲೀಷ್ ನಲ್ಲಿ 'ಡ್ರೀಮ್ಸ್' ಅನ್ನೋ ಸಿನಿಮಾ ಒಂದು ಸಹ ಆಂಥಾಲಜಿ ಕಾಂನ್ಸೆಪ್ಟ್ ನಲ್ಲಿಯೇ ಬಂದಿದೆ. ಇಂತಹ ಸಿನಿಮಾಗಳನ್ನು ಮಾಡೋದು ದೊಡ್ಡ ಚಾಲೆಂಜ್. ಯಾಕಂದ್ರೆ ದೊಡ್ಡ ತಾರಾ ಬಳಗ ಇರುತ್ತೆ. ಕಡಿಮೆ ಸಮಯದಲ್ಲಿ ಎಲ್ಲಾ ಕಥೆಗಳಿಗೂ ಜಸ್ಟಿಫೀಕೇಶನ್ ಕೊಡಬೇಕು. ಆದ್ದರಿಂದ ಚಾಲೆಂಜಿಂಗ್ ಸಿನಿಮಾ ಮಾಡಬೇಕು ಅಂದುಕೊಂಡೆ.

    'ಹ್ಯಾಪಿ ನ್ಯೂ ಇಯರ್' ವಿಶೇಷತೆ?

    'ಹ್ಯಾಪಿ ನ್ಯೂ ಇಯರ್' ವಿಶೇಷತೆ?

    - ಐದು ಕಥೆಗಳಿರೋದೆ ಒಂದು ವಿಶೇಷತೆ. ಐದು ಕಥೆಗಳಿಗೂ ವಿಭಿನ್ನ ಕ್ಲೈಮ್ಯಾಕ್ಸ್ ಇದೆ. ಅನಿವಾರ್ಯ ದೃಶ್ಯಗಳಲ್ಲಿ ಬೇರೆ ಕಥೆಯವರು ಇನ್ನೊಂದು ಕಥೆಯ ಪಾತ್ರದಾರಿಗಳ ಜೊತೆ ಸೇರುತ್ತಾರೆ ಅಷ್ಟೇ.

    'ಹ್ಯಾಪಿ ನ್ಯೂ ಇಯರ್' ಚಿತ್ರ ನಿರ್ದೇಶನದಲ್ಲಿ ನಿಮಗೆ ಸವಾಲು ಎನಿಸಿದ್ದು?

    'ಹ್ಯಾಪಿ ನ್ಯೂ ಇಯರ್' ಚಿತ್ರ ನಿರ್ದೇಶನದಲ್ಲಿ ನಿಮಗೆ ಸವಾಲು ಎನಿಸಿದ್ದು?

    -ಸವಾಲು ಅಂತ ಹೇಳೋಕೆ ಆಗಲ್ಲ. ಯಾಕಂದ್ರೆ ಡೈರೆಕ್ಷನ್ ಕೋರ್ಸ್ ಮುಗಿಸಿ ಬಂದ ಮೇಲೆ ಈ ಸಿನಿಮಾ ಮಾಡಬೇಕು ಅಂತ ಸುಮಾರು 8 ವರ್ಷಗಳಿಂದ ಪ್ರಿಪೇರ್ ಆಗಿದ್ದೆ. ಸಿನಿಮಾ ಮಾಡೋಕೆ ಮುಂದಾದಾಗ ಯಾವುದೇ ತೊಂದರೆ ಆಗದೇ ಸ್ಟಾರ್ ಕಾಸ್ಟ್, ಸಂಗೀತ ನಿರ್ದೇಶಕರು ಎಲ್ಲರೂ ಇಷ್ಟ ಪಟ್ಟು ಸೇರಿಕೊಂಡರು. ಹಾಗಾಗಿ ಯಾವುದೇ ಸವಾಲು ಎದುರಾಗಲಿಲ್ಲ.

    'ಹ್ಯಾಪಿ ನ್ಯೂ ಇಯರ್' ಚಿತ್ರದಿಂದ ಏನನ್ನು ಹೇಳೋಕೆ ಹೊರಟಿದ್ದೀರಾ?

    'ಹ್ಯಾಪಿ ನ್ಯೂ ಇಯರ್' ಚಿತ್ರದಿಂದ ಏನನ್ನು ಹೇಳೋಕೆ ಹೊರಟಿದ್ದೀರಾ?

    - ಪ್ರೀತಿಯ ಬೇರೆ ಬೇರೆ ವಿಭಾಗಗಳನ್ನು(ಮನಸ್ಥಿತಿ) ಮುಟ್ಟಲು ಪ್ರಯತ್ನಿಸಿದ್ದೇವೆ. ಇನ್ನೊಂದು ಏನಪ್ಪಾ ಅಂದ್ರೆ ಇವತ್ತು ನಾವು ಬದುಕಿರೋದೆ ಒಂದು ಭರವಸೆ ಇಂದ. ನಾಳೆ ಏನಾದ್ರು ಆಗಬಹುದೆನೋ. ಹೊಸದೇನಾದ್ರು ಸಿಗಬಹುದು ಅನ್ನೋ ಭರವಸೆ ಎಲ್ಲರಿಗೂ ಇದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹಿಮ್ಮಡಿಗೊಳಿಸಿದ್ದೇವೆ. ಹೋಪ್ ಇಟ್ಟುಕೊಳ್ಳುವುದೇ 'ಹ್ಯಾಪಿ ನ್ಯೂ ಇಯರ್'.

    'ಹ್ಯಾಪಿ ನ್ಯೂ ಇಯರ್' ಸಿನಿಮಾನ ಏಕೆ ನೋಡ್ಬೇಕು?

    'ಹ್ಯಾಪಿ ನ್ಯೂ ಇಯರ್' ಸಿನಿಮಾನ ಏಕೆ ನೋಡ್ಬೇಕು?

    - ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್. ಕೆಲವೊಂದು ಸಿನಿಮಾಗಳನ್ನ ನೋಡೋಕೆ ತಂದೆ-ತಾಯಿ ಜೊತೆ ಹೋಗಬಹುದಾ?, ಮಗುನಾ ಕರೆದುಕೊಂಡು ಹೋಗಬಹುದಾ? ಅನ್ನೋ ಹಲವು ಪ್ರಶ್ನೆಗಳು ಬರುತ್ತವೆ. ಆದ್ರೆ 'ಹ್ಯಾಪಿ ನ್ಯೂ ಇಯರ್' ಚಿತ್ರ ನೋಡಲು ಈ ಯಾವುದೇ ಪ್ರಶ್ನೆ ಕಾಡುವುದಿಲ್ಲ. ಈಗ ಹಾಲಿಡೇ ಇರುವುದರಿಂದ ಸಂಪೂರ್ಣ ಕುಟುಂಬದವರು ಒಟ್ಟಿಗೆ ಕುಳಿತು ಸಿನಿಮಾ ನೋಡಬಹುದು. 'ಹ್ಯಾಪಿ ನ್ಯೂ ಇಯರ್' ನ ಯಾವಾಗ ಬೇಕಾದ್ರು ಆಚರಿಸಬಹುದು ಅನ್ನೋದನ್ನ ಸಿನಿಮಾದಲ್ಲಿ ಹೇಳಿದ್ದೇವೆ. ಅದ್ ಹೇಗೆ ಅಂತ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ.

    'ಹ್ಯಾಪಿ ನ್ಯೂ ಇಯರ್' ಅನ್ನೋ ಪದ ನಿಮ್ಮ ಕಿವಿಗೆ ಬಿದ್ರೆ ನೆನಪಾಗುವುದು...

    'ಹ್ಯಾಪಿ ನ್ಯೂ ಇಯರ್' ಅನ್ನೋ ಪದ ನಿಮ್ಮ ಕಿವಿಗೆ ಬಿದ್ರೆ ನೆನಪಾಗುವುದು...

    - ನನಗೆ ನೆನಪಾಗುವುದು ನನ್ನ ಸಿನಿಮಾ... ಹ್ಯಾಪಿ ನ್ಯೂ ಇಯರ್ ಕೇಳಿದ ತಕ್ಷಣ ನನಗೆ ಒಂದು ಹೋಪ್(ಭರವಸೆ) ಕ್ರಿಯೇಟ್ ಆಗುತ್ತೆ. ಹೊಸ ವರ್ಷ ಬರುತ್ತಿದೆ. ನನ್ನ ಜೀವನದಲ್ಲಿ ಹೊಸದೇನೋ ಬರುತ್ತೇ... ಹೊಸದೇನೋ ಆಗುತ್ತೆ ಅನ್ನೋದು ಕಾಡುತ್ತದೆ. ಒಬ್ಬ ಮನುಷ್ಯ ಅವನಲ್ಲಿ ಯಾವಾಗ ಹೊಸದೇನಾದ್ರು ಕಂಡುಕೊಳ್ಳುತ್ತಾನೋ.. ಆವಾಗ ಅವನಿಗೆ ಒಂದು ಹೊಸ ವರ್ಷ ಶುರುವಾಗುತ್ತೆ. ಹೊಸ ದಿನ ಶುರುವಾಗುತ್ತೆ.

    ಸಿನಿಮಾದ ತೀರಾ ಸ್ಪೆಷಾಲಿಟಿ ಅಂದ್ರೆ...

    ಸಿನಿಮಾದ ತೀರಾ ಸ್ಪೆಷಾಲಿಟಿ ಅಂದ್ರೆ...

    - ಐದರ ನಂಟು. ಐದು ಕಥೆಗಳು.. ಐದು ಹೀರೋಯಿನ್, ಐದು ನಟರು.. ಐವರು ರೈಟರ್ ಬರೆದಿರುವ ಸಿನಿಮಾ...5 ನೇ ತಾರೀಖು 5 ನೇ ತಿಂಗಳು(ಮೇ) ರಿಲೀಸ್ ಆಗುತ್ತಿದೆ. ಅದೇ ಒಂದು ದೊಡ್ಡ ಸ್ಪೆಷಾಲಿಟಿ.

    English summary
    Kannada Movie 'Happy New Year' director Pannaga Bharana interview.
    Saturday, May 6, 2017, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X