»   » ಹಾಲಿವುಡ್ ಸಿನಿಮಾ ಹಾಡಿಗೆ ಸಾಹಿತ್ಯ ಬರೆದ ಕರ್ನಾಟಕದ ಪ್ರಶಾಂತ್

ಹಾಲಿವುಡ್ ಸಿನಿಮಾ ಹಾಡಿಗೆ ಸಾಹಿತ್ಯ ಬರೆದ ಕರ್ನಾಟಕದ ಪ್ರಶಾಂತ್

Posted by:
Subscribe to Filmibeat Kannada

ಟ್ರೈಲರ್ ಮೂಲಕವೇ ಸಿನಿ ಪ್ರಿಯರನ್ನು ಜಾದು ಪ್ರಪಂಚಕ್ಕೆ ಕರೆದೊಯ್ದಿದ್ದ ಹಾಲಿವುಡ್ ಸಿನಿಮಾ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರ ಭಾರತದಲ್ಲಿ ಇಂಗ್ಲೀಷ್ ಮತ್ತು ಹಿಂದಿ ಅವತರಣಿಕೆಯಲ್ಲಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.[ಟ್ರೈಲರ್: ಜಾದು ಪ್ರಪಂಚಕ್ಕೆ ಕರೆದೊಯ್ಯುವ 'ಬ್ಯೂಟಿ ಅಂಡ್ ದಿ ಬೀಸ್ಟ್']

'ಹ್ಯಾರಿ ಪಾಟ್ಟರ್' ಖ್ಯಾತಿಯ ಎಮ್ಮಾ ವ್ಯಾಟ್ಸನ್ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿ ಅಭಿನಯಿಸಿದ್ದು, ಲೈವ್ ಆಕ್ಷನ್ ಮತ್ತು ಕ್ಲಾಸಿಕ್ ಎನಿಮೇಟೆಡ್ ಇರುವ ಚಿತ್ರ ಮಾರ್ಚ್ 17 ರಂದು ಭಾರತದಲ್ಲೂ ಬಿಡುಗಡೆ ಆಗಿದೆ. ಹಿಂದಿ ಅವತರಣಿಕೆಯಲ್ಲಿ ರಿಲೀಸ್ ಆಗಿರುವ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದ ಹಾಡುಗಳಿಗೆ ಬೆಳಗಾವಿಯ ಪ್ರಶಾಂತ್ ಎಂಬುವವರು ಸಾಹಿತ್ಯ ಬರೆದಿದ್ದಾರೆ. ಯಾರು ಈ ಪ್ರಶಾಂತ್ ಅಂತೀರಾ? ಹಾಗಿದ್ರೆ ಮುಂದೆ ಓದಿ...

ಹಾಲಿವುಡ್ ಚಿತ್ರಕ್ಕೆ ಹಾಡು ಬರೆದಿರುವ ಪ್ರಶಾಂತ್ ಇಂಗೊಳೆ ಜೊತೆ ನಿಮ್ಮ ಫಿಲ್ಮಿಬೀಟ್ ನಡೆಸಿರುವ ಸಂದರ್ಶನ ಇಲ್ಲಿದೆ.

ಸಂದರ್ಶನ: ಸುನೀಲ್ ಬಿಂಡಹಳ್ಳಿ

ಓದುಗರಿಗೆ ನಿಮ್ಮ ಪರಿಚಯ...

ಓದುಗರಿಗೆ ನಿಮ್ಮ ಪರಿಚಯ...

-ನನ್ನ ಹುಟ್ಟೂರು ಬೆಳಗಾಂ. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಮಗಿಸಿದ್ದು ಬೆಳಗಾಂನಲ್ಲೇ. ನಂತರ ಪಿಯುಸಿ, ಕಾಮರ್ಸ್ ಅಂಡ್ ಗ್ರ್ಯಾಜುಯೇಷನ್ ಮುಗಿಸಿದ್ದು ಪುಣೆಯಲ್ಲಿ. ಹೋಟೆಲ್ ಮ್ಯಾನೇಜ್ಮೆಂಟ್ ಸಹ ಮುಗಿಸಿದೆ. ಕಾರಣ ನನಗೆ ಕುಕ್ಕಿಂಗ್ ನಲ್ಲಿ ತುಂಬಾ ಇಂಟರೆಸ್ಟ್ ಇತ್ತು. ಈಗ ಗೀತೆ ರಚನೆಕಾರ.

ಗೀತೆ ರಚನೆಕಾರನಾಗುವ ಆಸಕ್ತಿ ಬಂದಿದ್ದು ಹೇಗೆ?

ಗೀತೆ ರಚನೆಕಾರನಾಗುವ ಆಸಕ್ತಿ ಬಂದಿದ್ದು ಹೇಗೆ?

-ಅಕ್ಚುಲಿ ನಾನು ಒಳ್ಳೆ ಬರಹಗಾರ ಅಂತ ನನಗೆ ಗೊತ್ತಾಗಿದ್ದು, ಹೋಟೆಲ್ ಮ್ಯಾನೇಜ್ಮೆಂಟ್ ಮುಗಿಸಿ ಫಸ್ಟ್ ಜಾಬ್ ಮಾಡುವ ಸಂದರ್ಭದಲ್ಲಿ. ಆ ನಂತರ ಗೀತೆಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡೆ.

ಹೋಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ನಂತರವು ಗೀತೆ ರಚನೆ ಕಡೆ ಒಲವು ಏಕೆ?

ಹೋಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ನಂತರವು ಗೀತೆ ರಚನೆ ಕಡೆ ಒಲವು ಏಕೆ?

-ನಮಗೆ ಯಾವಾಗ ಸಂಪೂರ್ಣವಾಗಿ ನಾನು ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಹೆಚ್ಚು ಸೃಜನಶೀಲನಾಗಿದ್ದೇನೆ ಅನಿಸುತ್ತದೋ, ಆಗ ಅದನ್ನೇ ವೃತ್ತಿಯಾಗಿ, ಪ್ಯಾಶನ್ ಆಗಿ ಸ್ವೀಕರಿಸಿದರೆ ಒಳ್ಳೆಯದು.

ಸಿನಿಮಾಗಾಗಿ ಗೀತೆ ರಚನೆ ಆರಂಭಿಸಿದ್ದು ಯಾವಾಗ? ಬಿಗ್ ಬ್ರೇಕ್ ನೀಡಿದ ಸಿನಿಮಾ?

ಸಿನಿಮಾಗಾಗಿ ಗೀತೆ ರಚನೆ ಆರಂಭಿಸಿದ್ದು ಯಾವಾಗ? ಬಿಗ್ ಬ್ರೇಕ್ ನೀಡಿದ ಸಿನಿಮಾ?

-2001 ರಲ್ಲಿ. ಆದರೆ ನನಗೆ ನನ್ನ ಗೀತೆ ರಚನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು 'ಪೈಸಾ ಹೈ ಪವರ್' ಚಿತ್ರದಿಂದ. ನಂತರ 'ಪಾರ್ಟಿ ಆನ್ ಮೈಂಡ್' ಎಂಬ 'ರೇಸ್-2' ಚಿತ್ರದ ಹಾಡಿಗೆ.

'ಬ್ಯೂಟಿ ಅಂಡ್ ದಿ ಬೀಸ್ಟ್' ಹಿಂದಿ ಚಿತ್ರಕ್ಕೆ ಹಾಡು ಬರೆಯಲು ಅವಕಾಶ ಬಂದಿದ್ದು ಹೇಗೆ?

'ಬ್ಯೂಟಿ ಅಂಡ್ ದಿ ಬೀಸ್ಟ್' ಹಿಂದಿ ಚಿತ್ರಕ್ಕೆ ಹಾಡು ಬರೆಯಲು ಅವಕಾಶ ಬಂದಿದ್ದು ಹೇಗೆ?

-ಫಸ್ಟ್ ಆಫ್ ಆಲ್ ನನ್ನ ಖ್ಯಾತಿಗೆ ಕಾರಣವಾದ, ನಾನು ಈ ಹಿಂದೆ ಸಾಹಿತ್ಯ ಬರೆದಿರುವ ಸಿನಿಮಾಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಕಾರಣ ಈ ಸಿನಿಮಾಗಳ ಪ್ರಖ್ಯಾತಿಯಿಂದಲೇ 'ಬ್ಯೂಟಿ ಅಂಡ್ ದಿ ಬೀಸ್ಟ್' ಹಿಂದಿ ಡಬ್ಬಿಂಗ್ ಚಿತ್ರತಂಡ ನನಗೆ ಕರೆ ಮಾಡಿ ಮೂರು ಹಾಡುಗಳನ್ನು ಬರೆಯಲು ಅವಕಾಶ ನೀಡಿದ್ದು.

'ಬ್ಯೂಟಿ ಅಂಡ್ ದಿ ಬೀಸ್ಟ್' ಹಾಡು ಬರೆದ ಅನುಭವದ ಬಗ್ಗೆ ಹೇಳಿ?

'ಬ್ಯೂಟಿ ಅಂಡ್ ದಿ ಬೀಸ್ಟ್' ಹಾಡು ಬರೆದ ಅನುಭವದ ಬಗ್ಗೆ ಹೇಳಿ?

-ಒಂದು ಹಾಲಿವುಡ್ ಸಿನಿಮಾಗೆ ಹಿಂದಿ ಸಾಹಿತ್ಯ ಬರೆಯೋದು ಸ್ವಲ್ಪ ಕಷ್ಟಾನೆ. ಆದ್ರೂ ಫನ್ ಆಗಿತ್ತು. ನಾನು ಈ ಚಿತ್ರಕ್ಕೆ ಮೂರು ಹಾಡುಗಳನ್ನು ಬರೆದಿದ್ದೇನೆ. ಎಂಜಾಯ್ ಮಾಡಿದ್ದೇನೆ,

ಒಟ್ಟಾರೆ ಎಷ್ಟು ಸಿನಿಮಾಗಳಿಗೆ ಹಾಡು ಬರೆದಿದ್ದೀರಿ?

ಒಟ್ಟಾರೆ ಎಷ್ಟು ಸಿನಿಮಾಗಳಿಗೆ ಹಾಡು ಬರೆದಿದ್ದೀರಿ?

-ನಾನು ಈವರೆಗೆ 13 ಬಾಲಿವುಡ್ ಚಿತ್ರಗಳಿಗೆ ಸಾಹಿತ್ಯ ಬರೆದಿದ್ದೇನೆ. ಅವುಗಳಲ್ಲಿ 'ಬಾಜಿರಾವ್ ಮಸ್ತಾನಿ', 'ರೇಸ್-2', 'ಮೇರಿಕೋಮ್', 'ಅನಾರ್ಕಲಿ ಆಫ್ ಆರಾ', 'ಆ ದೇಖೆ ಜರಾ', 'ಡ್ಯಾಡಿ ಕೂಲ್', 'ಮುಂಬೈ ಮಸ್ತ್ ಕಲಂದರ್', 'ವಾಕ್ ಅವೇ', 'ಸೊಚ್ ಲೊ', 'ಲವ್ ಯು ಸೋನಿಯೋ' ಪ್ರಮುಖವಾದವು. ಜೊತೆಗೆ 'ಬ್ಯೂಟಿ ಅಂಡ್ ದಿ ಬೀಸ್ಟ್'.

ಎಷ್ಟು ಭಾಷೆಗಳಲ್ಲಿ ಮಾತನಾಡುತ್ತೀರಿ?

ಎಷ್ಟು ಭಾಷೆಗಳಲ್ಲಿ ಮಾತನಾಡುತ್ತೀರಿ?

-ನಾಲ್ಕು. ನನ್ನ ಮಾತೃ ಭಾಷೆ ಮರಾಠಿ. ಹಿಂದಿ, ಇಂಗ್ಲೀಷ್, ಕನ್ನಡ ಮಾತನಾಡುತ್ತೇನೆ, ಓದುತ್ತೇನೆ.

ನಿಮ್ಮ ಗೀತೆ ರಚನೆಯ ಮುಂದಿನ ಚಿತ್ರಗಳು?

ನಿಮ್ಮ ಗೀತೆ ರಚನೆಯ ಮುಂದಿನ ಚಿತ್ರಗಳು?

-ಡ್ಯಾಡಿ. ಇದು ಅರುಣ್ ಗಾವ್ಳಿ ಜೀವನಾಧಾರಿತ ಹಿಂದಿ ಸಿನಿಮಾ. ಈ ಚಿತ್ರಕ್ಕೆ ಸಾಜಿದ್ ವಾಜಿದ್ ಸಂಗೀತ ಸಂಯೋಜನೆ ಇದೆ.

ಆಕ್ಟಿಂಗ್ ಮಾಡೋ ಆಸೆ?

ಆಕ್ಟಿಂಗ್ ಮಾಡೋ ಆಸೆ?

-ಖಂಡಿತ ಇಲ್ಲ. ಬಟ್ ಡೈರೆಕ್ಟ್ ಮಾಡೋ ಆಸೆ ಇದೆ. ನಾನೇ ನಾಲ್ಕು ಸ್ಕ್ರಿಪ್ಟ್ ಗಳನ್ನು ಬರೆದಿಟ್ಟುಕೊಂಡಿದ್ದೇನೆ.

English summary
Karnatakan Prashant Ingole written songs for Hollywood Film 'Beauty and the Beast'. Here is Belagavi Prashant Ingole interview.
Please Wait while comments are loading...

Kannada Photos

Go to : More Photos