twitter
    For Quick Alerts
    ALLOW NOTIFICATIONS  
    For Daily Alerts

    'ಫಿಲ್ಮಿಬೀಟ್ ಕನ್ನಡ ವಿಶೇಷ'; 'ಅತ್ಯುತ್ತಮ ಪೋಷಕ ನಟಿ' ಪೂಜಾ ಸಂದರ್ಶನ

    By Harshitha
    |

    ರಾಷ್ಟ್ರ ಪ್ರಶಸ್ತಿಯಿಂದ ಹಿಡಿದು ರಾಜ್ಯ ಪ್ರಶಸ್ತಿಯವರೆಗೂ ಕನ್ನಡ ನೆಲದ 'ತಿಥಿ' ಸಿನಿಮಾ ಸದ್ದು ಮಾಡಿದೆ. ಇದೇ 'ತಿಥಿ' ಸಿನಿಮಾದಲ್ಲಿ ನಟಿಸಿರುವ 'ಕಾವೇರಿ' ಪಾತ್ರಧಾರಿ ಪೂಜಾ.ಎಸ್.ಎಂ, ತಮ್ಮ ಮೊದಲ ಚಿತ್ರದಲ್ಲಿಯೇ ಬೆರಗು ಮೂಡಿಸುವಷ್ಟು ಪರಿಣಾಮಕಾರಿಯಾಗಿ ನಟಿಸಿ ರಾಜ್ಯ ಸರ್ಕಾರದ ಪ್ರತಿಷ್ಠಿತ 'ಅತ್ಯುತ್ತಮ ಪೋಷಕ ನಟಿ' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

    ಚೊಚ್ಚಲ ಪ್ರಯತ್ನದಲ್ಲಿಯೇ ರಾಜ್ಯ ಪ್ರಶಸ್ತಿ ಪಡೆದಿರುವ ಪೂಜಾ.ಎಸ್.ಎಂ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕಿದ್ದರು. ಪೂಜಾ.ಎಸ್.ಎಂ ಜೊತೆಗೆ ನಾವು ನಡೆಸಿದ ಚುಟುಕು ಸಂದರ್ಶನ ಇಲ್ಲಿದೆ...

    interview-with-best-actress-for-supporting-role-pooja-of-thithi-fame

    * Congratulations ಪೂಜಾ...
    ಥ್ಯಾಂಕ್ಯು. ತುಂಬಾ ಖುಷಿ ಆಗ್ತಿದೆ. ಇದು ನನ್ನ ಮೊದಲ ಸಿನಿಮಾ. ತುಂಬಾ ಕಷ್ಟ ಪಟ್ಟು ಸಿನಿಮಾ ಮಾಡಿದ್ವಿ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. [2015 ರಾಜ್ಯ ಪ್ರಶಸ್ತಿ; ವಿಜಯ್ ರಾಘವೇಂದ್ರ ಮತ್ತು ಮಾಲಾಶ್ರೀ 'ಬೆಸ್ಟ್'.!]

    * 'ತಿಥಿ' ಚಿತ್ರ ಬಗ್ಗೆ ನಿಮಗೆ ಇದ್ದ ನಿರೀಕ್ಷೆ...
    'ತಿಥಿ' ಚಿತ್ರದ ಬಗ್ಗೆ ಇಡೀ ತಂಡ ಯಾವುದೇ ನಿರೀಕ್ಷೆ ಇಟ್ಕೊಂಡಿರ್ಲಿಲ್ಲ. ಒಳ್ಳೆ ಸಬ್ಜೆಕ್ಟ್ ಇತ್ತು. ಅದನ್ನ ಚೆನ್ನಾಗಿ ಮಾಡ್ಬೇಕು ಅಂತಷ್ಟೇ ಎಲ್ಲರಿಗೂ ಇದದ್ದು. ಪ್ರಶಸ್ತಿಗಳ ಬಗ್ಗೆ ಯಾವುದೇ ಎಕ್ಸ್ ಪೆಕ್ಟೇಷನ್ಸ್ ಇರ್ಲಿಲ್ಲ.

    * ನಿಮ್ಮ ಹಿನ್ನಲೆ...
    ನಾನು ಉತ್ತರ ಕರ್ನಾಟಕದ ಹುಡುಗಿ. ರಾಣೆಬೆನ್ನೂರು ನನ್ನ ಊರು. ಮೂರು ವರ್ಷದಿಂದ ನಾನು ಮೈಸೂರಿನಲ್ಲಿ ಇದ್ದೇನೆ. ಯುವರಾಜ ಕಾಲೇಜ್ ನಲ್ಲಿ ಬಿ.ಸಿ.ಎ ಮಾಡ್ತಿದ್ದೀನಿ. ಈಗ ಎಕ್ಸಾಂ ಮುಗೀತು. ರಜಾ ಅಂತ ಊರಿಗೆ ಬಂದಿದ್ದೇನೆ.

    interview-with-best-actress-for-supporting-role-pooja-of-thithi-fame

    * 'ತಿಥಿ' ಚಿತ್ರದಲ್ಲೂ ನೀವು ಉತ್ತರ ಕರ್ನಾಟಕ ಹುಡುಗಿ. ನಟನೆ ಸುಲಭ ಆಯ್ತಾ?
    'ತಿಥಿ' ಸಿನಿಮಾಗೆ ಆಡಿಷನ್ ಮಾಡಿದಾಗ, ನನ್ನ ಉತ್ತರ ಕರ್ನಾಟಕದ ಭಾಷೆ ಚೆನ್ನಾಗಿತ್ತು. ಸಿನಿಮಾ ಶೂಟಿಂಗ್ ಶುರು ಆದಾಗ, ನಾನು ಸೆಕೆಂಡ್ ಇಯರ್ ಓದುತ್ತಿದ್ದೆ. ಅಷ್ಟೊತ್ತಿಗೆ ಮೈಸೂರು ಭಾಷೆಯ ಪ್ರಭಾವ ನನ್ನ ಮೇಲೆ ಜಾಸ್ತಿ ಆಯ್ತು. ಆಗ ನನಗೆ ಈರೇಗೌಡ ಸರ್ ನನಗೆ ಚೆನ್ನಾಗಿ ಹೇಳಿಕೊಟ್ಟರು. ಕಷ್ಟ ಅಂತ ಏನೂ ಆಗ್ಲಿಲ್ಲ. ನಟನೆ ಚೆನ್ನಾಗಿ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಇತ್ತು.

    * 'ತಿಥಿ' ಚಿತ್ರಕ್ಕೆ ನಿಮಗೆ ಅವಕಾಶ ಸಿಕ್ಕಿದ್ದು ಹೇಗೆ?
    ನಾನು ಮೊದಲು ಸೀರಿಯಲ್ ಒಂದರ ಆಡಿಷನ್ ನಲ್ಲಿ ಭಾಗವಹಿಸಿದ್ದೆ. ಅಲ್ಲಿಂದ 'ತಿಥಿ' ಚಿತ್ರದ ಬಗ್ಗೆ ಗೊತ್ತಾಯ್ತು. ಆಡಿಷನ್ ನಲ್ಲಿ ಭಾಗವಹಿಸಿದೆ. ನನ್ನನ್ನೇ ಸೆಲೆಕ್ಟ್ ಮಾಡಿದರು. [ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ತಿಥಿ' ಸಿನಿಮಾ ಈ ವಾರ ತೆರೆಗೆ]

    * ಶೂಟಿಂಗ್ ಮಧ್ಯೆ ನಿಮ್ಮ ಓದಿಗೆ ತೊಂದರೆ ಆಗ್ಲಿಲ್ವಾ?
    ಇಲ್ಲ. ಇಂಪಾರ್ಟೆಂಟ್ ಕ್ಲಾಸ್ ಇತ್ತು ಅಂದ್ರೆ, ಕಾಲೇಜ್ ಗೆ ಕಳುಹಿಸ್ತಾಯಿದ್ರು. ಓದಿಗೆ ನನಗೆ ಸ್ವಲ್ಪನೂ ಪ್ರಾಬ್ಲಂ ಆಗಿಲ್ಲ. ಎಕ್ಸಾಂ ನಡೆಯುವಾಗ ಶೂಟಿಂಗ್ ಮಾಡಲಿಲ್ಲ. ನಿಜ ಹೇಳ್ಬೇಕಂದ್ರೆ, ನನಗೆ ಎರಡು ಬಾರಿ ಆಕ್ಸಿಡೆಂಟ್ ಆಗಿತ್ತು. ಆದರೂ, ಪಾತ್ರಕ್ಕೆ ನಾನೇ ಬೇಕು ಅಂತ 'ತಿಥಿ' ಚಿತ್ರತಂಡ ನನಗಾಗಿ ವೇಯ್ಟ್ ಮಾಡಿದರು. ಪಾತ್ರಕ್ಕಾಗಿ ನಾನೂ ತಯಾರಿ ಮಾಡಿಕೊಂಡಿದ್ದೆ. 18-20 ಕೆ.ಜಿ ತೂಕ ಇಳಿಸಿದ್ದೆ. ಕೂದಲು ಕಟ್ ಮಾಡಿಸಿರ್ಲಿಲ್ಲ.

    * ಮುಂದೆ ಓದು ಹಾಗೂ ಸಿನಿಮಾ...ನಿಮ್ಮ ಆಯ್ಕೆ ಯಾವುದು?
    ಪೋಸ್ಟ್ ಗ್ರ್ಯಾಡ್ಜ್ಯುಯೇಷನ್ ಗೆ ನಾನು ಸಿ.ಇ.ಟಿ ಎಕ್ಸಾಂ ಬರೆಯುತ್ತಿದ್ದೇನೆ. ಸಿನಿಮಾದಲ್ಲೂ ನನ್ನ ಕೆರಿಯರ್ ಬಿಲ್ಡ್ ಮಾಡಿಕೊಳ್ಳಬೇಕು ಎಂಬ ಆಸೆ ಇದೆ. ಒಳ್ಳೆ ಅವಕಾಶ ಸಿಕ್ಕರೆ ಖಂಡಿತ ಸಿನಿಮಾ ಮಾಡುತ್ತೇನೆ.

    ಸಂದರ್ಶನ : ಹರ್ಷಿತಾ ರಾಕೇಶ್

    English summary
    Kannada Actress Pooja of 'Thithi' fame expressed her pleasure over winning 'Best Actress for Supporting Role' Award for her debut performance in an interview with Filmibeat Kannada.
    Thursday, May 19, 2016, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X