twitter
    For Quick Alerts
    ALLOW NOTIFICATIONS  
    For Daily Alerts

    ಎಕ್ಸ್ ಕ್ಲೂಸಿವ್: 'ಬಿಗ್ ಬಾಸ್ ಕನ್ನಡ-4' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಂದರ್ಶನ

    By ಭರತ್‌ ಕುಮಾರ್‌
    |

    ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಾಲ್ಕನೇ ಆವೃತ್ತಿ ಶುರು ಆಗಲು ಇನ್ನೂ ನಾಲ್ಕೇ ದಿನಗಳು ಬಾಕಿ. ಅಕ್ಟೋಬರ್ 9, 2016 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-4'ಗೆ ಅದ್ಧೂರಿ ಚಾಲನೆ ಸಿಗಲಿದೆ.

    ಈ ಬಾರಿ 'ಬಿಗ್' ಮನೆಯೊಳಗೆ ಯಾರ್ಯಾರು ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ ಎಂಬ ಚರ್ಚೆ ಎಲ್ಲೆಡೆ ಜೋರಾಗಿರುವಾಗಲೇ, 'ಬಿಗ್ ಬಾಸ್ ಕನ್ನಡ-4' ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಾವು 'ಬಿಗ್ ಬಾಸ್' ಕಾರ್ಯಕ್ರಮದ ಡೈರೆಕ್ಟರ್ ಪರಮೇಶ್ವರ ಗುಂಡ್ಕಲ್ ರವರನ್ನ ಸಂದರ್ಶನ ಮಾಡಿದ್ವಿ.

    ಪರಮೇಶ್ವರ್ ಗುಂಡ್ಕಲ್ ಜೊತೆ ನಾವು ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಓದಿರಿ....

    ಸಂದರ್ಶನ - ಭರತ್‌ ಕುಮಾರ್‌

    * 'ಬಿಗ್‌ಬಾಸ್‌' ಕನ್ನಡ ಆವೃತ್ತಿಯ ಮೂರೂ ಸೀಸನ್ ಗಳು ಯಶಸ್ವಿಯಾಗಿ ಮುಗಿಸಿ, ಈಗ ನಾಲ್ಕನೆ ಆವೃತ್ತಿಗೆ ಕಾಲಿಡ್ತಿದ್ದೀರಾ. ನಿಮ್ಮ ಫೀಲಿಂಗ್...

    * 'ಬಿಗ್‌ಬಾಸ್‌' ಕನ್ನಡ ಆವೃತ್ತಿಯ ಮೂರೂ ಸೀಸನ್ ಗಳು ಯಶಸ್ವಿಯಾಗಿ ಮುಗಿಸಿ, ಈಗ ನಾಲ್ಕನೆ ಆವೃತ್ತಿಗೆ ಕಾಲಿಡ್ತಿದ್ದೀರಾ. ನಿಮ್ಮ ಫೀಲಿಂಗ್...

    - 'ಬಿಗ್‌ ಬಾಸ್‌' ಬರ್ತಿದೆ ಅಂದ್ರೆ ಏನೋ ಒಂಥರಾ ಸೆಳೆತ. ನಿಮ್ಮ ತರಹನೇ ನಾವು ಕೂಡ ತುಂಬಾ ಎಕ್ಸೈಟ್ ಆಗಿದ್ದೀವಿ. ಈ ಸೀಸನ್ನಲ್ಲಿ ಯಾವ ತರಹದ ವ್ಯಕ್ತಿಗಳನ್ನ ನೋಡಬಹುದು ಅಂತ ನಾವು ನಿಮ್ಮ ತರಹನೇ ಕಾಯ್ತಿದ್ದೀವಿ [ಬಿಗ್ ಬಾಸ್ ಕನ್ನಡ 4: 5 ಮಂದಿ ಸ್ಪರ್ಧಿಗಳ ಹೆಸರು ಬಹಿರಂಗ!]

    'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಶೇಷತೆಗಳೇನು?

    'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಶೇಷತೆಗಳೇನು?

    ಈ ಕಾರ್ಯಕ್ರಮದಲ್ಲಿ ಎಂತಹ ದೊಡ್ಡ ವ್ಯಕ್ತಿಗಳಿದ್ದಾರೆ ಅನ್ನೋದಕ್ಕಿಂತ ಎಂತಹ ವ್ಯಕ್ತಿತ್ವಗಳಿವೆ ಅಂತ ತೋರಿಸುವ ಪ್ರಯತ್ನ. ಎಲ್ಲರಿಗೂ ಗೊತ್ತಿರೋ 15 ಮುಖಗಳ, ಗೊತ್ತಿಲ್ಲದೇ ಇರುವ ಮುಖಗಳನ್ನ ಪರಿಚಯ ಮಾಡೋ ಆಶಯ ನಮ್ಮದು. ನಾವು ಕೊಡುವ ಸವಾಲುಗಳನ್ನ ಎದುರಿಸುತ್ತಾ ಅವರು ಹೇಗೆ ನಡೆದುಕೊಳ್ತಾರೆ ಅನ್ನೋದು ಇಂಟ್ರೆಸ್ಟಿಂಗ್ ಆಗಿರುತ್ತೆ. ಹೊಸ ಸೀಸನ್, ಹೊಸ ಸ್ವರ್ಧಿಗಳು ಜೊತೆ ಹೊಸ ಬಗೆಯ ಟಾಸ್ಕ್ ಗಳು ಇರುತ್ತೆ. ['ಬಿಗ್ ಬಾಸ್ ಕನ್ನಡ-4'ಕ್ಕೆ ಮುಹೂರ್ತ ಫಿಕ್ಸ್: ಶುರು ಯಾವಾಗ?]

    'ಬಿಗ್‌ ಬಾಸ್‌' ಮನೆಯ ಇಂಟೀರಿಯರ್ ಡಿಸೈನ್ ಬದಲಾಗಿದ್ಯಾ?

    'ಬಿಗ್‌ ಬಾಸ್‌' ಮನೆಯ ಇಂಟೀರಿಯರ್ ಡಿಸೈನ್ ಬದಲಾಗಿದ್ಯಾ?

    ಮನೆಯನ್ನ ಬದಲಾಯಿಸೋ ಆಸೆಯಿಲ್ಲ. ಕಳೆದ ಬಾರಿಗಿಂತ ಈ ಭಾರಿ ಹೊಸತಾಗಿದೆ. ಹೊಸತರಹ ವಿನ್ಯಾಸವಾಗಿದೆ. ಸಾಮಾನ್ಯವಾಗಿ ಬೆಡ್‌ ರೂಮ್‌, ಕ್ಯಾಪ್ಟನ್‌ ರೂಮ್‌, ವಸ್ತು ಸಂಗ್ರಹ ಉಗ್ರಾಣ, ಅಡುಗೆ ಮನೆ, ಹಾಲ್‌, ಗಾರ್ಡನ್‌, ಸ್ವಿಮಿಂಗ್ ಪೂಲ್, ಜಿಮ್‌, ಹೀಗೆ ಒಂದು ಮನೆಗೆ ಬೇಕಾದ ಎಲ್ಲಾ ವಸ್ತುಗಳು ಬಿಗ್‌ ಬಾಸ್‌ ಮನೆಯಲ್ಲಿರುತ್ತೆ.

    ಯಾವ ಯಾವ ಕ್ಷೇತ್ರದ ಜನರನ್ನ ಈ ಬಾರಿ ನಾವು 'ಬಿಗ್‌ ಬಾಸ್‌' ಮನೆಯಲ್ಲಿ ನೋಡಬಹುದು?

    ಯಾವ ಯಾವ ಕ್ಷೇತ್ರದ ಜನರನ್ನ ಈ ಬಾರಿ ನಾವು 'ಬಿಗ್‌ ಬಾಸ್‌' ಮನೆಯಲ್ಲಿ ನೋಡಬಹುದು?

    ಇದು ಟಿವಿ ಕಾರ್ಯಕ್ರಮ ಆಗಿರೋದ್ರಿಂದ ಸಾಮಾನ್ಯವಾಗಿ ಟಿವಿ ತಾರೆಯರು ತುಂಬಾ ಜನ ಇರ್ತಾರೆ. ಸಿನಿಮಾ ತಾರೆಗಳು ಇದ್ದೇ ಇರ್ತಾರೆ. ಒಬ್ಬ ಕ್ರೀಡಾಪಟು, ಒಬ್ಬ ಗಾಯಕ, ಒಬ್ಬ ರಾಜಕೀಯ ವ್ಯಕ್ತಿ, ಒಬ್ಬ ಪತ್ರಕರ್ತ ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಇರ್ತಾರೆ. ಆದ್ರೆ, ಹೆಸ್ರು ಹೇಳೋಕೆ ಆಗಲ್ಲ. ಅದನ್ನೆಲ್ಲಾ ನೀವು ಅಕ್ಟೋಬರ್‌ 9 ರಂದೇ ಬಿಗ್‌ಬಾಸ್‌ ವೇದಿಕೆಯಲ್ಲೇ ನೋಡಬೇಕಿದೆ. ['ನಾವ್ ಹೋಗಲ್ಲ ಸ್ವಾಮಿ': 'ಬಿಗ್ ಬಾಸ್' ಮನೆಯ ರೂಲ್ಸ್ ಇರುವುದೇ ಹೀಗೆ.!]

    ಬಿಗ್‌ಬಾಸ್‌ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಕಿಚ್ಚ ಸುದೀಪ್‌. ಈ ಬಾರಿ ಸುದೀಪ್‌ ಜೊತೆ ಬಿಗ್‌ಬಾಸ್‌ ಕಥೆ ಹೇಗಿರುತ್ತೆ?

    ಬಿಗ್‌ಬಾಸ್‌ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಕಿಚ್ಚ ಸುದೀಪ್‌. ಈ ಬಾರಿ ಸುದೀಪ್‌ ಜೊತೆ ಬಿಗ್‌ಬಾಸ್‌ ಕಥೆ ಹೇಗಿರುತ್ತೆ?

    ಯೆಸ್, ಸುದೀಪ್‌ ಅವರ ವಾಯ್ಸ್‌, ಸುದೀಪ್‌ ಅವರ ಮಾತಿನ ಶೈಲಿ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಈ ಕಾರ್ಯಕ್ರಮ ನಡೆಸಿಕೊಡುವವರಿಗೆ ಒಂದು ಗತ್ತು ಬೇಕು, ಒಂದು ರೀತಿಯ ಗಾಂಭೀರ್ಯ ಬೇಕು, ಹಾಗಂತ ತುಂಬಾ ಬೋರ್‌ ಎನಿಸಿಬಾರದು. ಅಲ್ಲೊಂದು ತಮಾಷೆಯನ್ನ ತರೋದು ಗೊತ್ತಿರಬೇಕು. ಜೊತೆಗೆ ನಿಷ್ಪಕ್ಷಪಾತವಾಗಿ ನಡೆಸಿಕೊಡಬೇಕು. ಇಷ್ಟೆಲ್ಲಾ ಪ್ರತಿಭೆ, ಶಕ್ತಿ ಸುದೀಪ್‌ ಅವರಿಗಿದೆ. ಮೂರು ಸೀಸನ್ ‌ನಲ್ಲೂ ಕಿಚ್ಚ ಸುದೀಪ್ ತಮ್ಮ ಜವಾಬ್ದಾರಿಯನ್ನ ಚೆನ್ನಾಗಿ ನಿರ್ವಹಸಿದ್ದಾರೆ. ಈ ಬಾರಿ ಕೂಡ ಹಾಗೇ ನಡೆಯಲಿದೆ. ['ಬಿಗ್ ಬಾಸ್ ಕನ್ನಡ-4' ಅಡ್ಡದಿಂದ ಬಂದಿರುವ 'ಬಿಗ್' ಬ್ರೇಕಿಂಗ್ ನ್ಯೂಸ್ ಇದೇ..]

    ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಈ ಬಾರಿ ಟಿ.ಆರ್‌.ಪಿ ಎಷ್ಟರ ಮಟ್ಟಿಗೆ ಚಾಲೆಂಜಿಂಗ್ ಎನಿಸಿರಬಹುದು ? ಯಾಕಂದ್ರೆ, ಬೇರೆ ಬೇರೆ ರಿಯಾಲಿಟಿ ಶೋಗಳೂ ಕೂಡ ನಡೆಯುತ್ತಿದೆ. ಆ ಕಾರ್ಯಕ್ರಮಗಳ ರೇಟಿಂಗ್‌ ಕೂಡ ತುಂಬಾ ಚೆನ್ನಾಗಿದೆ.

    ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಈ ಬಾರಿ ಟಿ.ಆರ್‌.ಪಿ ಎಷ್ಟರ ಮಟ್ಟಿಗೆ ಚಾಲೆಂಜಿಂಗ್ ಎನಿಸಿರಬಹುದು ? ಯಾಕಂದ್ರೆ, ಬೇರೆ ಬೇರೆ ರಿಯಾಲಿಟಿ ಶೋಗಳೂ ಕೂಡ ನಡೆಯುತ್ತಿದೆ. ಆ ಕಾರ್ಯಕ್ರಮಗಳ ರೇಟಿಂಗ್‌ ಕೂಡ ತುಂಬಾ ಚೆನ್ನಾಗಿದೆ.

    ರೇಟಿಂಗ್‌ ಬಗ್ಗೆ ನಾವಾಗಲಿ, ನಮ್ಮ ತಂಡವಾಗಲಿ ತಲೆಕೆಡಿಸಿಕೊಂಡಿಲ್ಲ. ನಿಷ್ಪಕ್ಷಪಾತವಾಗಿ ಪ್ರಮಾಣಿಕವಾಗಿ ಈ ಕಾರ್ಯಕ್ರಮವನ್ನ ಜನರ ಮುಂದೆ ಇಡೋದೊಂದೆ ನಮ್ಮ ಉದ್ದೇಶ. ಒಂದು ಸಣ್ಣ ಮಟ್ಟದ ದ್ವಂದ್ವವಿದೆ. ಯಾಕಂದ್ರೆ ಗ್ರಾಮೀಣ ಪ್ರದೇಶದ ವೀಕ್ಷಕರು ಹೆಚ್ಚಿದ್ರೆ ರೇಟಿಂಗ್‌ ಹೆಚ್ಚಾಗುತ್ತೆ. ಬಿಗ್‌ಬಾಸ್‌ ಹೆಚ್ಚಾಗಿ ನಗರವಾಸಿಗಳು ನೋಡುವಂತಹ ಕಾರ್ಯಕ್ರಮ. ಸೋ ಹೀಗಾಗಿ ರೇಟಿಂಗ್‌ ನಮ್ಮ ಕೈಯಲ್ಲಿಲ್ಲ.

    ಬಿಗ್‌ಬಾಸ್‌ ಕಾರ್ಯಕ್ರಮ ಎಷ್ಟು ಖ್ಯಾತಿ ಪಡೆದಿದಿಯೋ ಅಷ್ಟೇ ಟೀಕೆಗಳನ್ನ ಎದುರಿಸ್ತಿದೆ. ಇದು ಸ್ಕ್ರಿಪ್ಟೆಡ್ ಶೋ. ವಿನ್ನರ್ ಯಾರು ಅಂತಾ ಮೊದಲೆ ಡಿಸೈಡ್ ಆಗಿರುತ್ತೆ ಅಂತೆಲ್ಲಾ.? ನಿಮ್ಮ ಕಾಮೆಂಟ್ಸ್ ಪ್ಲೀಸ್...

    ಬಿಗ್‌ಬಾಸ್‌ ಕಾರ್ಯಕ್ರಮ ಎಷ್ಟು ಖ್ಯಾತಿ ಪಡೆದಿದಿಯೋ ಅಷ್ಟೇ ಟೀಕೆಗಳನ್ನ ಎದುರಿಸ್ತಿದೆ. ಇದು ಸ್ಕ್ರಿಪ್ಟೆಡ್ ಶೋ. ವಿನ್ನರ್ ಯಾರು ಅಂತಾ ಮೊದಲೆ ಡಿಸೈಡ್ ಆಗಿರುತ್ತೆ ಅಂತೆಲ್ಲಾ.? ನಿಮ್ಮ ಕಾಮೆಂಟ್ಸ್ ಪ್ಲೀಸ್...

    ಪ್ರತಿ ಸಲನೂ ಈ ಪ್ರೆಶ್ನೆ ಉದ್ಭವವಾಗುತ್ತೆ. ನೀವು ನಂಬಿ ಅಥವಾ ಬಿಡಿ ಇದು ಯಾವುದೇ ರೀತಿಯ ಇದು ಸ್ಕ್ರಿಪ್ಟ್‌ ಅಲ್ಲ ಅಥವಾ ಫಿಕ್ಸ್ ಅಂತೂ ಅಲ್ಲವೇ ಅಲ್ಲಾ. ಇದು ವಿವಾದಾತ್ಮಕ ಬಿಗ್‌ಬಾಸ್‌ ಅಲ್ಲ ಇದು ಭಾವನೆಗಳ ಬಿಗ್‌ಬಾಸ್‌. ವಿನ್ನರ್ ಯಾರು ಆಗ್ಬೇಕು ಅಂತಾ ದ್ವಂದ್ವ ಇದ್ದೇ ಇರುತ್ತೆ. ಬೆಂಗಳೂರಿನ ಜನರಿಗೆ ಒಂದು ಅಭಿಪ್ರಾಯ ಇದ್ರೆ, ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಅಭಿಪ್ರಾಯ ಇರುತ್ತೆ. ಹೀಗಾಗಿ, ಇದನ್ನ ನಾವು ನಿರ್ಧಾರ ಮಾಡಲ್ಲ. ವಿನ್ನರ್ ಯಾರು ಅಂತಾ ಡಿಸೈಡ್ ಮಾಡೋಕೆ ಜನರ ಮತ ತುಂಬಾ ಮುಖ್ಯವಾಗಿರುತ್ತೆ.

    English summary
    'Bigg Boss Kannada 4' director Parameshwar Gundkal has revealed the specialties of this season of 'Bigg Boss'. Here is an Interview with Parameshwar Gundkal. Take a look
    Wednesday, October 5, 2016, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X