»   » ಗೋಲ್ಡನ್ ಕ್ವೀನ್ ಮದುವೆಗೆ ನೀವೂ ಬರ್ತಿರಾ ಅಲ್ವಾ?

ಗೋಲ್ಡನ್ ಕ್ವೀನ್ ಮದುವೆಗೆ ನೀವೂ ಬರ್ತಿರಾ ಅಲ್ವಾ?

Written by: ಸುನಿ ಗೌಡ
Subscribe to Filmibeat Kannada

ಚಂದನವನದಲ್ಲಿ ಇಲ್ಲಿಯವರೆಗೆ ಗೀತೆ ರಚನೆಕಾರ ಕವಿರಾಜ್ ಎಂದು ಖ್ಯಾತಿ ಗಳಿಸಿದ್ದ ಕವಿರಾಜ್ ಅವರು ಇದೇ ಮೊದಲ ಬಾರಿಗೆ ನಿರ್ದೇಶಕರ ಸ್ಥಾನ ಪಡೆದುಕೊಂಡು 'ಮದುವೆಯ ಮಮತೆಯ ಕರೆಯೋಲೆ' ಎಂಬ ವಿಭಿನ್ನ ಪಕ್ಕಾ ಕಾಮಿಡಿ ಫ್ಯಾಮಿಲಿ ಎಂರ್ಟಟೈನರ್ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದಾರೆ.

ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ನಾಳೆ (ಜನವರಿ 8) ರಾಜ್ಯಾದ್ಯಂತ ಸುಮಾರು 100 ರಿಂದ 150 ಚಿತ್ರಮಂದಿರಗಳಲ್ಲಿ ಕವಿರಾಜ್ ಅವರ ಮದುವೆ ನಡೆಯಲಿದೆ. ಚಿತ್ರದಲ್ಲಿ ಸ್ಯಾಂಡಲ್ ವುಡ್ ಗೆ ಹೊಸ ಪ್ರತಿಭೆ ಸೂರಜ್ ಗೌಡ ಮತ್ತು ಬೇಬಿ ಡಾಲ್ ಅಮೂಲ್ಯ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಲಿದ್ದಾರೆ.[ಕಿಚ್ಚನಿಗೆ 'ಮದುವೆಯ ಕರೆಯೋಲೆ' ನೀಡಲು ಅರಮನೆಗೆ ಬಂದ ಅಮೂಲ್ಯ]

ಇನ್ನು ಈ ಚಿತ್ರದ ಬಗ್ಗೆ, ಶೂಟಿಂಗ್ ಸ್ಪಾಟ್ ನಲ್ಲಿ ಆದ ಅನುಭವ ಮತ್ತು ಚೊಚ್ಚಲ ನಿರ್ದೇಶಕರ ಜೊತೆಗಿನ ಕೆಲಸದ ಅನುಭವಗಳನ್ನು ಚಿತ್ರದ ನಾಯಕಿ ನಟಿ ಅಮೂಲ್ಯಾ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ನಟಿ ಅಮೂಲ್ಯ ಅವರೊಂದಿಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿರುವ ಎಕ್ಸ್ ಕ್ಲ್ಯೂಸಿವ್ ಸಂದರ್ಶನ ಇಲ್ಲಿದೆ ನೋಡಿ...

* ನಿಮಗೆ ಕವಿರಾಜ್ ಅವರ ಸಿನಿಮಾದಲ್ಲೇ ನಟಿಸಬೇಕು ಅಂತ ಯಾಕನ್ನಿಸಿತು?[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

- ಫಸ್ಟ್ ನನಗೆ ಇಷ್ಟ ಆಗಿದ್ದು ಅವರ ಕಥೆ ಜೊತೆಗೆ ವಿಶೇಷವಾಗಿ ಅವರು ನನಗೆ ಆತ್ಮೀಯವಾಗಿ ಕೊಟ್ಟ ಆಮಂತ್ರಣ. ಅಂದ್ರೆ ಅವರು ನನ್ನನ್ನು ಅಪ್ರೋಚ್ ಮಾಡಿದ ರೀತಿ ನನಗೆ ತುಂಬಾ ಇಷ್ಟ ಆಯ್ತು. ಸುಮಾರು 6-7 ತಿಂಗಳುಗಳಿಂದ ಮಾತಾಡ್ಬೇಕು, ಸಿನಿಮಾ ಬಗ್ಗೆ ಮಾತಾಡ್ಬೇಕು ಅಂತ ಹೇಳ್ತಾನೇ ಇದ್ರು. ಮತ್ತೆ ನನಗೂ ಗೊತ್ತಿತ್ತು ಒಂದೀನಾ ಬಂದೇ ಬರ್ತಾರೆ ಅಂತ. ಆಮೇಲೆ ಬಂದು ಕಥೆ ಕೇಳಿದ್ಮೇಲೆ ನನಗೆ ಇಷ್ಟ ಆಗಿದ್ದು, ಇಲ್ಲಿ ಹೆಚ್ಚಾಗಿ ನನ್ನ ಪರ್ಫಾಮೆನ್ಸ್ ಓರಿಯೆಂಟೆಡ್ ಕ್ಯಾರೆಕ್ಟರ್ ಇರೋದ್ರಿಂದ 'ಎಸ್ ಐ ಹ್ಯಾವ್ ಟು ಡೂ ಇಟ್'.[ಬೇಬಿ ಡಾಲ್ ಅಮೂಲ್ಯಗೆ ಮದುವೆ ಆಯ್ತು.!]

ಯಾಕೆಂದ್ರೆ ಯಾರೂ ಕೂಡ ಅಮೂಲ್ಯ ಬುಲೆಟ್ ಓಡಿಸಿದ್ರೆ ಹೇಗಿರಬಹುದು? ಅಂತ ಬಹುಶಃ ಇಮ್ಯಾಜೀನ್ ಮಾಡ್ಕೊಂಡಿರಲ್ಲ. ಇದು ಎಲ್ಲಾ ನನಗೆ ಸಿಕ್ಕ ಒಂದು ಅವಕಾಶ ಅಂತಾನೇ ಹೇಳಬಹುದು. ಯಾಕೆಂದ್ರೆ, ನನ್ನ ಅಭಿನಯ ತೋರಿಸಲು ಇದೊಂದು ಉತ್ತಮ ಅವಕಾಶ ಅಂತ ಅನ್ನಿಸಿತ್ತು.

ಮತ್ತೆ ಈ ಥರ ಒಂದು ಪಾತ್ರ ಸಿಗೋದು ತುಂಬಾನೇ ಕಷ್ಟ ಇದೆ. ಇನ್ನು ತುಂಬಾ ಜನ ನಟ-ನಟಿಯರಿಗೆ ಒಂದು ಬ್ರ್ಯಾಂಡ್ ಅಂತ ಇರುತ್ತೆ, ಅವರು ಅದಕ್ಕೆ ಮಾತ್ರ ಸೀಮಿತವಾಗಿ ಇರ್ತಾರೆ. ಆದ್ರೆ ನನಗೆ ವಿಭಿನ್ನ ಪಾತ್ರ ಮಾಡುವ ಅವಕಾಶ ದೊರಕಿದ್ದಕ್ಕೆ ತುಂಬಾ ಖುಷಿ ಇದೆ.

ಒಂದು ಗಂಡುಬೀರಿ ಪಾತ್ರ ಇರಬಹುದು ಮತ್ತು ಒಂದು ಸೀನ್ ನಲ್ಲಿ ಕುಡ್ಕೊಂಡು ಅಣ್ಣಮ್ಮನ ಮುಂದೆ ಸ್ಟೆಪ್ ಹಾಕ್ಕೋಂಡು ಡಾನ್ಸ್ ಮಾಡೋದು ಆಗಿರಬಹುದು. ಇವೆಲ್ಲಾ ದೃಶ್ಯಗಳು ಈ ಸಿನಿಮಾದಲ್ಲಿ ಇರೋದ್ರಿಂದ ನಾನು ಬಹಳ ಎಕ್ಸೈಟ್ ಆಗಿ ಈ ಚಿತ್ರವನ್ನು ಒಪ್ಪಿಕೊಂಡೆ.

* ಹೊಸ ಹೀರೋ ಸೂರಜ್ ಅವರ ಜೊತೆ ನಿಮ್ಮ ಅಭಿನಯ, ಅನುಭವ ಹೇಗಿತ್ತು?

- ಸೂರಜ್ ಅವರು ಒಳ್ಳೆಯ ಮನುಷ್ಯ, ತುಂಬಾ ಆತ್ಮವಿಶ್ವಾಸ ಇರುವ ವ್ಯಕ್ತಿ. ಒಂದು ಗುರಿ ಇಟ್ಕೊಂಡು ಚಿತ್ರರಂಗಕ್ಕೆ ಬಂದವರು. ನನಗಾದ್ರೆ, ನಾನು ಹೀರೋಯಿನ್ ಆಗ್ಲೇಬೇಕು ಅಂತ ಗುರಿ ಏನು ಇರ್ಲಿಲ್ಲ. ಹಾಗಾಗಿ ಸೂರಜ್ ಅವ್ರಿಗೆ ನಾನು ತುಂಬಾ ಹಾರ್ಡ್ ವರ್ಕ್ ಮಾಡ್ಬೇಕು ಅಂತ ಇಂಟ್ರೆಸ್ಟ್ ಇದೆ. ಸೋ ಅವರು ತುಂಬಾ ಟ್ಯಾಲೆಂಟೆಡ್ ಗೈ, ಅವರ ಫಸ್ಟ್ ಸಿನಿಮಾನೇ ಒಂದು ದೊಡ್ಡ ಬ್ಯಾನರ್ ನಲ್ಲಿ ಮೂಡಿಬರುತ್ತಿದೆ ಅದು ಅವರಿಗೆ ಒಂದೊಳ್ಳೆ ಶುಭ ಹಾರೈಕೆ. ನಾನೂ ಅವರೊಂದಿಗೆ ನಟಿಸಿ ತುಂಬಾ ಖುಷಿಯಾಗಿದ್ದೇನೆ.

* ಚೊಚ್ಚಲ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸಿನಿಮಾ ರಿಲೀಸ್ ಆಗ್ತಾ ಇದೆ. ಹೇಗೆ ಫೀಲ್ ಆಗ್ತಿದೆ?

- ತುಂಬಾ ಖುಷಿ ಆಗ್ತಿದೆ, ಜೊತೆಗೆ ಈ ಸಿನಿಮಾದ ಬಗ್ಗೆ ತುಂಬಾ ಕಾನ್ಫಿಡೆಂಟ್ ಇದೆ. ಯಾಕೆಂದ್ರೆ ಸಿನಿಮಾ ಫುಲ್ ಫ್ರೆಶ್ ಆಗಿದೆ. ಜೊತೆಗೆ ಈ ಸಿನಿಮಾದಲ್ಲಿ ಬರೋವಂತಹ ಎಲ್ಲಾ ಸೀನ್ ಗಳು ಫ್ರೆಶ್ ಆಗಿರುತ್ತೆ. ಜೊತೆಗೆ ಈ ಸಿನಿಮಾ ಅಂದಾಗ ಜನಗಳಿಗೂ ತುಂಬಾ ನಿರೀಕ್ಷೆ ಇದೆ, ಯಾಕೆಂದರೆ ತೂಗುದೀಪ ಪ್ರೊಡಕ್ಷನ್ಸ್ ನ ನಾಲ್ಕನೇ ಸಿನಿಮಾ. ಜೊತೆಗೆ ನಾನು ಕೂಡ ತುಂಬಾ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದೀನಿ. ಮಾತ್ರವಲ್ಲದೇ ನಾವೂ ಜನರ ಆಸೆಯನ್ನು ಪೂರೈಸಿದ್ದೇವೆ ಅಂದುಕೊಂಡಿದ್ದೇನೆ.

    English summary
    Kannada Movie 'Maduveya Mamatheya Kareyole' releasing this week (January 8th). Kannada Actress Amoolya spoke to Filmibeat. Actress Amoolya Shared her experience about 'Maduveya Mamatheya Kareyole' movie shooting. Here is the Exclusive Interview. The movie is directed by debudent Kaviraj. Watch the video here.
    Please Wait while comments are loading...

    Kannada Photos

    Go to : More Photos