»   » 'ವಾಸ್ಕೋಡಿಗಾಮ' ಕಿಶೋರ್ ಜೊತೆ ಚಿಟ್ ಚಾಟ್

'ವಾಸ್ಕೋಡಿಗಾಮ' ಕಿಶೋರ್ ಜೊತೆ ಚಿಟ್ ಚಾಟ್

Written by: ಸುನೀತಾ ಗೌಡ
Subscribe to Filmibeat Kannada

ಕನ್ನಡದ ಪ್ರತಿಭಾವಂತ ನಟರಲ್ಲಿ ಕಿಶೋರ್ ಸಹ ಒಬ್ಬರು. ಅವರೊಬ್ಬ ಅಪ್ಪಟ ಕಲಾವಿದ. 'ಕಂಠಿ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟ ಅವರು, ಆಕಾಶ್, ಕಲ್ಲರಳಿ ಹೂವಾಗಿ, ದುನಿಯಾ, ಕಬಡ್ಡಿ, ಕಳ್ಳರ ಸಂತೆ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದಾರೆ.

ಇದೀಗ ಸದ್ಯಕ್ಕೆ 'ವಾಸ್ಕೋಡಿಗಾಮ' ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಕಿಶೋರ್ ಅವರು ಎಷ್ಟೇ ಬಿಜಿಯಾಗಿದ್ದರೂ ಕೊಂಚ ಬಿಡುವು ಮಾಡಿಕೊಂಡು ನಮ್ಮ ಒನ್ಇಂಡಿಯಾ ಕನ್ನಡ ಫಿಲ್ಮಿಬೀಟ್ ಜೊತೆ ಮಾತಿಗೆ ಸಿಕ್ಕಾಗ ಹೊಸ ಚಿತ್ರದ ಬಗ್ಗೆ ಹಾಗು ಚಿತ್ರದಲ್ಲಿ ತಮಗಾದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟ ಕಿಶೋರ್ ಅವರ ಜೊತೆ ಕನ್ನಡ ಫಿಲ್ಮಿಬೀಟ್ ನಡೆಸಿದ ಚಿಟ್ ಚಾಟ್ ನ ಆಯ್ದ ಭಾಗ ಇಲ್ಲಿದೆ ನೋಡಿ.

* 'ವಾಸ್ಕೋಡಿಗಾಮ' ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಏನು ಹೇಳುತ್ತಿರಾ?

- ಫಸ್ಟ್ ಟೈಮ್ ಕಾಮಿಡಿ ಟ್ರೈ ಮಾಡಿದ್ದೀವಿ, ಜೊತೆಗೆ ನನ್ನನ್ನು ಸೇರಿಸಿಕೊಂಡು ನಿರ್ದೇಶಕರು ಕಾಮಿಡಿ ಮಾಡೋಕೆ ಹೊರಟಿದ್ದಾರೆ. ಕಾಮಿಡಿ, ಎಂರ್ಟಟೈನ್, ಜೊತೆಗೆ ಸ್ವಲ್ಪ ಸೀರಿಯಸ್ ಆಗಿರೋ ವಿಚಾರಗಳನ್ನು ಹೇಳ್ತಾ ಇದ್ದೀವಿ.

* ರಿಯಲ್ ಲೈಫ್ ನಲ್ಲಿ ಕಾಲೇಜು ಲೆಕ್ಚರ್ ಆಗಿದ್ರಲ್ವಾ, ಇದೀಗ ಚಿತ್ರದಲ್ಲೂ ಅದೇ ಪಾತ್ರ, ಅಲ್ಲಿಗೂ ಇಲ್ಲಿಗೂ ವ್ಯತ್ಯಾಸ ಹೇಗಿದೆ?

- ಆಕ್ಚುವಲಿ ನಾನು ಅಲ್ಲಿಯೂ ಇದೆ ತರ ಲೆಕ್ಚರರ್ ಆಗಿದ್ದೆ, ಚಿತ್ರದಲ್ಲೂ ಅದೇ ತರ ಪಾತ್ರ ನಿರ್ವಹಿಸುತ್ತಿದ್ದೇನೆ. ನಾನು ನಂಬಿ, ಇಷ್ಟಪಟ್ಟು ಮಾಡುತ್ತಿರುವ ಪಾತ್ರ, ಆದ್ರಿಂದ ನಿಜ ಜೀವನಕ್ಕಿಂತ ಸಿನಿಮಾದಲ್ಲಿ ಸ್ವಲ್ಪ ಎಕ್ಸ್ಟ್ರಾ ಎಮೋಷನಲ್ ಹಾಗೂ ನಟನೆಯನ್ನು ಮಾಡಬೇಕಾಗುತ್ತದೆ. ಹೆಚ್ಚುಕಡಿಮೆ ನನ್ನ ನಿಜ ಜೀವನಕ್ಕೆ ತೀರಾ ಹತ್ತಿರವಾದ ಪಾತ್ರ ಅಂತಾನೇ ಹೇಳಬಹುದು. [ಒನ್ಇಂಡಿಯಾ ಜೊತೆ ನಟ ಕಿಶೋರ್ ಮಾತುಕತೆ]

* ಸಾಮಾನ್ಯವಾಗಿ ಕಾಲೇಜುಗಳಲ್ಲಿ ಲೆಕ್ಚರ್ ಗಳು ತುಂಬಾ ಸ್ಟ್ರಿಕ್ಟ್ ಅನ್ನೋದು ಎಲ್ಲರ ಭಾವನೆ ಆದರೆ ನಿಮ್ಮ 'ವಾಸ್ಕೋಡಿಗಾಮ' ಚಿತ್ರದಲ್ಲಿ ನಿಮ್ಮ ಪಾತ್ರ ಕಾಮಿಡಿಯಾಗಿದೆ ಇದಕ್ಕೇನಂತೀರಾ?

- 'ವಾಸ್ಕೋಡಿಗಾಮ' ಚಿತ್ರದ ಟ್ಯಾಗ್ ಲೈನ್ ಇರೋದೇ 'ಏನೇ ಮಾಡಿ ಇಷ್ಟಪಟ್ಟು ಮಾಡಿ ಕಷ್ಟಪಟ್ಟು ಮಾಡಬೇಡಿ' ಅಂತ ಸೋ ಕಾಲೇಜುಗಳಲ್ಲಿ ಕಲಿಕೆ ಅನ್ನೋದು ಬಲವಂತವಾಗಿ ಆಗಬಾರದು ಬದಲಾಗಿ ಅದು ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ತುಂಬುವಂತಿರಬೇಕು, ಒಟ್ನಲ್ಲಿ ಏನೇನೋ ಮಾಡ್ಕೊಂಡು ಕಾಲೇಜು ಹುಡುಗ್ರನ್ನ ಎಂರ್ಟಟೈನ್ ಮಾಡೋದು ನಾಯಕನ ಮುಖ್ಯ ಉದ್ದೇಶ ಆಗಿರುತ್ತೆ.

ಒಂದಷ್ಟು ಹುಚ್ಚುತನ, ಒಂದಷ್ಟು ಫನ್ನಿ ವಿಷಯಗಳು, ಒಂದಷ್ಟು ವೆರೈಟಿ, ಸ್ವಲ್ಪ ಕಮರ್ಷಿಯಲ್, ಹೀಗೆ ಕೆಲವಾರು ಶಾಟ್ ಗಳು ಚಿತ್ರದಲ್ಲಿವೆ.

* ಈ ಸಿನಿಮಾ ಮೂಲಕ ನೀವು ಏನು ಹೇಳೋಕೆ ಹೊರಟಿದ್ದೀರಾ?

ಈ ಸಿನಿಮಾ ಮೂಲಕ ಅಂದ್ರೆ, ಪ್ರಸ್ತುತ ಈಗಿನ ಶಿಕ್ಷಣ ಪದ್ದತಿ, ಅದರಲ್ಲಿ ಇರೋ ಕೆಲಸಗಾರರು ಹಾಗೂ ಹಿಂದಿನ ಕಾಲದವರಿಗಿಂತ ಈಗಿನ ಕಾಲದವರು ಹೇಗೆ ವರ್ತಿಸುತ್ತಾರೆ, ಜೊತೆಗೆ ಈಗಿನ ಶಿಕ್ಷಣ ಪದ್ದತಿ ಮುಂದಿನ ಜನರೇಷನ್ ಗೆ ಹೇಗೆ ಸ್ಪೂರ್ತಿದಾಯಕ, 'ಇಂದಿನ ಮಕ್ಕಳೆ ನಾಳಿನ ಪ್ರಜೆಗಳು' ಅನ್ನುವಂತೆ ಸುಮ್ಮನೆ ನಿರುದ್ಯೋಗಿಗಳಾಗಿ, ಬಲವಂತವಾಗಿ ದುಡ್ಡು ಸಂಪಾದನೆಗೋಸ್ಕರ ಯಾವುದೋ ಕೆಲಸ ಮಾಡಿ ಕೆಟ್ಟ ದಾರಿ ಹಿಡಿಯುವ ಬದಲು ಅವರಿಗೆ ಇಷ್ಟ ಬಂದ ಬದುಕು ನಿರ್ವಹಿಸಲಿ, ಕಡೇ ತನಕ ಅತೃಪ್ತರಾಗಿ ಸಾಯೋದಕ್ಕಿಂತ ಕೆಲವು ಕಾಲ ಸಂತೃಪ್ತರಾಗಿ ಬದುಕಲಿ.

ಒಟ್ನಲ್ಲಿ ಏನಾದರೂ ಮಾಡಿ ಅದರಲ್ಲಿ ಸಂತೋಷ ಕಾಣಿ. ಅನ್ನೋದನ್ನ ಈ ಚಿತ್ರದ ಮೂಲಕ ಹೇಳ್ತಾ ಇದ್ದೀವಿ.

* ಈ ಸಿನಿಮಾದಲ್ಲಿ ವಿದ್ಯಾರ್ಥಿಗಳಿಗೆ ಏನಾದರೂ ಸಂದೇಶ ಇದೆಯಾ?

ಮೆಸೇಜ್ ಅಂತ ಹೇಳೋಕೆ ಬರಲ್ಲ, ಸಿನಿಮಾ ಅಂತ ಅಂದಾಗ ಅದಕ್ಕೆ ಅದರದೇ ಆದ ಒಂದು ನೋಟ ಇರುತ್ತೆ, ಡೈರೆಕ್ಟರ್ ನೋಟ, ಸ್ಕ್ರಿಪ್ಟ್ ರೈಟರ್ ನೋಟ ಅಂತ, ಹಾಗಾಗಿ ಈ ಚಿತ್ರದಲ್ಲಿ ಮೆಸೇಜ್ ಅಂತ ಏನು ಹೇಳೋಕೆ ಆಗಲ್ಲ, ಬದಲಾಗಿ ಥಿಯೇಟರ್ ನಿಂದ ಸಿನಿಮಾ ನೋಡಿ ಹೊರಗಡೆ ಹೋಗುವಾಗ ಪ್ರೇಕ್ಷಕರು ಯೋಚನೆ ಮಾಡಬೇಕು. ಸೋ ಖಂಡಿತ ಜನರನ್ನು ಚಿಂತನೆಗೆ ಹಚ್ಚುವಂತಹ ಸಿನಿಮಾ ಇದಾಗುತ್ತೆ. ಜೊತೆಗೆ ಇದೊಂದು ಪಕ್ಕಾ ಕಮರ್ಷಿಯಲ್ ಆಗಿ ಮಾಡಿರುವ ಚಿತ್ರ.

* ಸಾಮಾನ್ಯವಾಗಿ ಕಾಲೇಜುಗಳಲ್ಲಿ ಹಾಜರಾತಿ ಬೇಕೇ ಬೇಕು, ಆದರೆ ನಿಮ್ಮ ಚಿತ್ರದಲ್ಲಿ ಅದು ಮುಖ್ಯ ಅಲ್ಲ ಅಂತ ತೋರಿಸಿದ್ದೀರಾ, ಯಾಕೆ ಹಾಗೆ?

- ಹೋ ಅದು ಆರಂಭದಲ್ಲಿ ಟೈಟಲ್ ಟ್ರ್ಯಾಕ್ ನಲ್ಲಿ ಬರುವ ವಿಚಾರ. ಅದು ನಾಯಕನ ಫಿಲಾಸಫಿ, ಬಲವಂತವಾಗಿ ಯಾರನ್ನು ಕ್ಲಾಸ್ ರೂಮಲ್ಲಿ ಹಿಡಿದಿಟ್ಟು ಕೂರಿಸಲು ಆಗೋದಿಲ್ಲ, ಕೆಲವು ವಿದ್ಯಾರ್ಥಿಗಳು ಕೇವಲ ಹಾಜರಿಗೋಸ್ಕರ ಕ್ಲಾಸ್ ಗೆ ಬರ್ತಾರೆ. ಅದು ನನಗೆ ಗೊತ್ತಿರುವ ವಿಚಾರ. ಸೋ ಈ ಚಿತ್ರದಲ್ಲೂ ಅದನ್ನೇ ತೋರಿಸಿದ್ದೀವಿ ಒಟ್ನಲ್ಲಿ ಇಷ್ಟಪಟ್ಟು ಮಾಡಿ, ಕಷ್ಟಪಡಬೇಡಿ.

English summary
Kannada films most acclaimed actor Kishore spoke to Filmibeat. Here is the interview. His best known films include Duniya, Akash, Raakshasa, Polladhavan, Happy, Huli, 'Ulidavaru Kandanthe', 'Vascodigama',
Please Wait while comments are loading...

Kannada Photos

Go to : More Photos